ಉಡುಪಿ ಲಾಕ್‌ಡೌನ್ ಕ್ರಮಗಳಿಗೆ ಕೇಂದ್ರದಿಂದಲೂ ಶಹಭಾಷ್..!

By Kannadaprabha News  |  First Published Apr 16, 2020, 8:09 AM IST

ತಂತಮ್ಮ ಜಿಲ್ಲೆಗಳಲ್ಲಿ ಶತಾಯಗತಾಯ ಕೊರೋನಾ ವೈರಸ್‌ ಹರಡದಂತೆ ತಡೆಯುವುದು ಜಿಲ್ಲಾಧಿಕಾರಿ ಅವರಿಗೆ ಈಗ ಎಲ್ಲಕ್ಕಿಂತ ಮೊದಲ ಕರ್ತವ್ಯ ಆಗಿಬಿಟ್ಟಿದೆ. ಜೊತೆಗೆ ಅದರ ಸೈಡ್‌ ಎಫೆಕ್ಟ್ ಎಂಬಂತೆ ಉದ್ಯೋಗ ಕಳೆದುಕೊಂಡು ಬೀದಿಗೆ ಬಿದ್ದ ಕಾರ್ಮಿಕರು, ಮಾರುಕಟ್ಟೆಮುಚ್ಚಿದ್ದರಿಂದ ಕಂಗಾಲಾದ ರೈತರನ್ನು ಕಾಪಾಡುವುದು ಅವರ ಆದ್ಯ ಜವಾಬ್ದಾರಿಯೂ ಆಗಿದೆ. ಉಡುಪಿ ಜಿಲ್ಲಾಧಿಕಾರಿ ಜಗದೀಶ್‌ ಅವರು ಈ ಎರಡನ್ನೂ ಅತ್ಯಂತ ಕುಶಲತೆಯಿಂದ ನಿಭಾಯಿಸಿದ್ದಾರೆ.


ಉಡುಪಿ(ಏ.16): ಕಾರ್ಮಿಕರೇ, ನೀವು ನಮ್ಮ ಮನೆಯ ಸದಸ್ಯರಿದ್ದಂತೆ, ನಮ್ಮ ಮನೆಯ ಸದಸ್ಯರು ಉಪವಾಸ ಇರುವುದಕ್ಕೆ ನಾವು ಬಿಡ್ತೇವಾ, ಎಷ್ಟೇ ಕಷ್ಟಆದ್ರೂ ಆವರಿಗೆ ಊಟ ಹಾಕಿಯೇ ಹಾಕುತ್ತೇವೆ ತಾನೇ, ಹಾಗಿರುವಾರ ನಿಮಗೆ ಉಪವಾಸ ಇರುವುದಕ್ಕೆ ಬಿಡ್ತೆವಾ, ಈಗ ಉಡುಪಿ ಬಿಟ್ಟು ಹೋಗುವ ಯೋಚನೆ ಇದ್ರೆ ಬಿಟ್ಟು ಬಿಡಿ, ನಿಮಗೆ ಮೂರು ಹೊತ್ತಿನ ಊಟಕ್ಕೆ ಮತ್ತು ಉಳಿದುಕೊಳ್ಳುವುದಕ್ಕೆ ವ್ಯವಸ್ಥೆ ಮಾಡಿದ್ದೇವೆ, ನಮ್ಮ ಜೊತೆ ಆರಾಮಾಗಿರಿ. ಇದು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್‌ ಅವರು, ಉಡುಪಿ ಬಿಟ್ಟು ವಾಪಾಸು ಹೊರಟ ವಲಸೆ ಕಾರ್ಮಿಕರಿಗೆ ಹೇಳಿದ ಮಾತು.

ಕೇಂದ್ರ ಸರ್ಕಾರದ ಆರೋಗ್ಯ ಇಲಾಖೆಯ ಜಂಟಿ ಕಾರ್ಯದರ್ಶಿ ಲವ ಅಗರ್ವಾಲ್‌ ಅವರು ದೆಹಲಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಉಡುಪಿ ಜಿಲ್ಲೆಯ ಕೊರೋನಾ ನಿಯಂತ್ರಣದ ಬಗ್ಗೆ ಶ್ಲಾಘಿಸಿದ್ದಾರೆ.

ಸತತ 11ನೇ ದಿನವೂ ದಕ್ಷಿಣ ಕನ್ನಡ ಕೊರೋನಾ ಮುಕ್ತ

ಕಳೆದ 2 ವಾರಗಳಲ್ಲಿ ಉಡುಪಿ ಜಿಲ್ಲೆಯಲ್ಲಿ ಯಾವುದೇ ಹೊಸ ಪ್ರಕರಣಗಳು ದಾಖಲಾಗಿಲ್ಲ ಎಂಬುದನ್ನು ಅವರು ಒತ್ತಿ ಹೇಳಿದ್ದಾರೆ. ಇದರ ಶ್ರೇಯಸ್ಸು ಜಿಲ್ಲೆಯಲ್ಲಿ ಕೊರೋನಾ ಹರಡದಂತೆ ಕಠಿಣ ಕ್ರಮಗಳನ್ನು ಕೈಗೊಂಡ ಜಿಲ್ಲಾಧಿಕಾರಿ ಅವರೇ ಕಾರಣ. ಆದರೆ, ಜಿಲ್ಲಾಧಿಕಾರಿ ಅವರು ಲಾಕ್‌ಡೌನ್‌ ಅನ್ನು ಅಚ್ಚುಕಟ್ಟಾಗಿ ಪಾಲಿಸಿದ ಜನರೇ ಕಾರಣ ಎಂದು ವಿಧೇಯರಾಗಿ ಹೇಳುತ್ತಾರೆ.

ತಂತಮ್ಮ ಜಿಲ್ಲೆಗಳಲ್ಲಿ ಶತಾಯಗತಾಯ ಕೊರೋನಾ ವೈರಸ್‌ ಹರಡದಂತೆ ತಡೆಯುವುದು ಜಿಲ್ಲಾಧಿಕಾರಿ ಅವರಿಗೆ ಈಗ ಎಲ್ಲಕ್ಕಿಂತ ಮೊದಲ ಕರ್ತವ್ಯ ಆಗಿಬಿಟ್ಟಿದೆ. ಜೊತೆಗೆ ಅದರ ಸೈಡ್‌ ಎಫೆಕ್ಟ್ ಎಂಬಂತೆ ಉದ್ಯೋಗ ಕಳೆದುಕೊಂಡು ಬೀದಿಗೆ ಬಿದ್ದ ಕಾರ್ಮಿಕರು, ಮಾರುಕಟ್ಟೆಮುಚ್ಚಿದ್ದರಿಂದ ಕಂಗಾಲಾದ ರೈತರನ್ನು ಕಾಪಾಡುವುದು ಅವರ ಆದ್ಯ ಜವಾಬ್ದಾರಿಯೂ ಆಗಿದೆ. ಉಡುಪಿ ಜಿಲ್ಲಾಧಿಕಾರಿ ಜಗದೀಶ್‌ ಅವರು ಈ ಎರಡನ್ನೂ ಅತ್ಯಂತ ಕುಶಲತೆಯಿಂದ ನಿಭಾಯಿಸಿದ್ದಾರೆ.

ಲಾಕ್‌ಡೌನ್‌ ಘೋಷಣೆಯಿಂದ ಗಾಬರಿಗೊಳಗಾದ ಜಿಲ್ಲೆಯ ಸಾವಿರಾರು ವಲಸೆ ಕಾರ್ಮಿಕರು ಸಿಕ್ಕಸಿಕ್ಕ ವಾಹನ ಹತ್ತಿ ತಮ್ಮ ಜಿಲ್ಲೆಗಳಿಗೆ ವಾಪಾಸು ಹೊರಟರು. ಆದರೆ, ಪೊಲೀಸರು ಅವರನ್ನು ಗಡಿಯಲ್ಲಿ ತಡೆದಾಗ ಅವರು ಇನ್ನಷ್ಟುಆತಂಕಕ್ಕೊಳಗಾದರು. ಆಗ ಅವರ ಸಹಾಯಕ್ಕೆ ಧಾವಿಸಿದವರು ಉಡುಪಿಯ ಜಿಲ್ಲಾಧಿಕಾರಿ ಜಗದೀಶ್‌. ಗಡಿಯಲ್ಲಿ ಸಿಕ್ಕಿ ಹಾಕಿಕೊಂಡ ಕಾರ್ಮಿಕರನ್ನು ಹಿಂದಕ್ಕೆ ಕರೆಯಿಸಿ, ಅಲ್ಲಲ್ಲಿ ಗಂಜಿ ಕೇಂದ್ರಗಳನ್ನು ತೆರೆದು, ಇಲ್ಲಿ ಉಳಿಯಲು ಅವಕಾಶ ಮಾಡಿಕೊಟ್ಟರು.

ಈ ವಾರದಿಂದಲೇ ಮನೆ ಬಾಗಿಲಿಗೆ ಮದ್ಯ, ಪೋನ್ ನಲ್ಲಿ ಆರ್ಡರ್ ಮಾಡಿದರಾಯ್ತು!

Tap to resize

Latest Videos

ಜಿಲ್ಲೆಯಲ್ಲಿ ಇಂದು 4800ಕ್ಕೂ ಅಧಿಕ ಮಂದಿ ವಲಸೆ ಕಾರ್ಮಿಕರು ಜಿಲ್ಲಾಡಳಿತದ ಆಶ್ರಯ ಕೇಂದ್ರಗಳಲ್ಲಿದ್ದಾರೆ. ಅವರಿಗೆ ಜಿಲ್ಲೆಯ ದೊಡ್ಡ ದೇವಾಲಯಗಳಿಂದ ಉಪಹಾರ, ಊಟದ ವ್ಯವಸ್ಥೆಗಳನ್ನು ಜಿಲ್ಲಾಧಿಕಾರಿ ಅವರೇ ಮಾಡಿದ್ದಾರೆ.

ಉಳ್ಳವರಿಂದ ಇಲ್ಲದವರಿಗೆ:

undefined

ಇನ್ನು ಜಿಲ್ಲೆಯಲ್ಲಿ ಗ್ರಾಮೀಣ ಭಾಗಗಳಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಸುಮಾರು 4 ಸಾವಿರಕ್ಕೂ ಅಧಿಕ ಕುಟುಂಬಗಳಿಗೆ ಆಹಾರದ ಕಿಟ್‌ಗಳನ್ನು ತಹಸೀಲ್ದಾರ್‌ ಮೂಲಕ ತಲುಪಿಸಿದ್ದಾರೆ. ಅದಕ್ಕಾಗಿ ಸರ್ಕಾರದ ಅನುದಾನ ಕಾಯದೇ ಜಿಲ್ಲೆಯಲ್ಲಿ ಉಳ್ಳವರಿಂದ ಸಹಾಯ ಕೇಳಿದರು. ಅವರ ಮನವಿಗೆ ಭರಪೂರ ಸಹಾಯ ಹರಿದು ಬಂತು. ಇಸ್ಫೋಸಿಸ್‌ ಫೌಂಡೇಶನ್‌ನ ಸುಧಾಮೂರ್ತಿಯವರಂತೂ 90 ಲಕ್ಷ ರು.ಗಳ ಸಾಮಗ್ರಿಗಳನ್ನು ಕಳುಹಿಸಿದರು. ಈಗ ಲಾಕ್‌ಡೌನ್‌ ಮುಂದುವರಿದರೂ ಕಾರ್ಮಿಕರನ್ನು ಕೈಬಿಡುವುದಿಲ್ಲ ಎನ್ನುತ್ತಾರೆ ಜಿ.ಜಗದೀಶ್‌.

ರೈತರ ಕಷ್ಟಕ್ಕೆ ಮಿಡಿದ ಡಿಸಿ

ಇನ್ನು ಜಿಲ್ಲೆಯ ರೈತರು ಇನ್ನೇನು ತಾವು ಬೆಳೆದ ಬೆಳೆಗಳಿಗೆ ಬೆಲೆ ಇಲ್ಲದೆ ನಾಶ ಮಾಡಬೇಕು ಎನ್ನುವಾಗ ಅವರಿಗೂ ಜಿಲ್ಲಾಧಿಕಾರಿ ಸಹಾಯಹಸ್ತ ಚಾಚಿದರು. ಇಲ್ಲಿ ಬೆಳೆದು ಮಾಗಿದ ಸಾವಿರಾರು ಮೆಟ್ರಿಕ್‌ ಟನ್‌ ಅನಾನಸು, ಕಲ್ಲಂಗಡಿ, ಪಪ್ಪಾಯ, ಸೌತೆ, ಬಾಳೆಯನ್ನು ತೋಟದಿಂದ ಮಾರುಕಟ್ಟೆಗೆ ಸಾಗಿಸಲು ವಾಹನಗಳನ್ನು ನಿಗದಿಗೊಳಿಸಿದರು. ಹೊರ ಜಿಲ್ಲೆಗೆ ಸಾಗಿಸಲು ಅನುಮತಿ ನೀಡಿದರು. ಈಗ ವ್ಯಾಪಾರಿಗಳು ರೈತರ ಗದ್ದೆಗಳಿಗೆ ಹೋಗಿ ಹಣ್ಣು ತರಕಾರಿ ಖರೀದಿಸುತ್ತಿದ್ದಾರೆ. ರೈತರು ಸಂಕಷ್ಟದಿಂದ ಪಾರಾಗಿದ್ದಾರೆ.

ರಾಜ್ಯಕ್ಕೆ ಮಾದರಿ ಪ್ರಯೋಗ

20 - 25 ಸಾವಿರ ಮಂದಿಗೆ ಆಧಾರವಾಗಿರುವ ಮೀನುಗಾರಿಕೆ ಉದ್ಯಮವನ್ನು ಸಂಪೂರ್ಣ ಬಂದ್‌ ಮಾಡಿಸಿದ್ದು ಜಿಲ್ಲಾಧಿಕಾರಿ ತೆಗೆದುಕೊಂಡ ಅತ್ಯಂತ ಕಠಿಣ ನಿರ್ಧಾರ. ಮಲ್ಪೆ ಬಂದರಿನಲ್ಲಿ ಪ್ರತಿದಿನ 5 ಸಾವಿರ ಮಂದಿ ವ್ಯವಹಾರ ನಡೆಸುತ್ತಾರೆ. ಅದು ಕೊರೋನಾ ವೈರಸ್‌ ಹರಡುವುದಕ್ಕೆ ಮುಕ್ತ ಆಹ್ವಾನವಾಗಿತ್ತು. ಸ್ವತಃ ಅಲ್ಲಿಗೆ ತೆರಳಿದ ಜಿಲ್ಲಾಧಿಕಾರಿ ಬಂದರನ್ನು ಖಾಲಿ ಮಾಡಿಸಿದರು. ಇದರಿಂದ ಮೀನುಗಾರರು ತೀವ್ರ ಆರ್ಥಿಕ ನಷ್ಟಕ್ಕೊಳಗಾದರು. ಅದಕ್ಕೂ ಮಣಿದ ಜಿಲ್ಲಾಧಿಕಾರಿ ಸಾಮಾಜಿಕ ಅಂತರದಲ್ಲಿ ಸಾಂಪ್ರದಾಯಿಕ ಮೀನುಗಾರಿಕೆಗೆ ಅವಕಾಶ ನೀಡಿದ್ದಾರೆ. ಜಿಲ್ಲಾಧಿಕಾರಿ ಅವರ ಈ ಯಶಸ್ವಿ ಪ್ರಯೋಗವನ್ನು ಗಮನಿಸಿ ರಾಜ್ಯ ಮೀನುಗಾರಿಕಾ ಇಲಾಖೆ ಉಳಿದ ಜಿಲ್ಲೆಗೂ ಇದನ್ನು ವಿಸ್ತರಿಸಿತು.

ಜಗದೀಶ್‌ ತೆಗೆದುಕೊಂಡ ಜಿಲ್ಲೆಯ ಗಡಿಗಳನ್ನು ಸೀಲ್‌ ಮಾಡುವ ಗಟ್ಟಿನಿರ್ಧಾರ, ದಾನಿಗಳ ಸಹಾಯ ಪಡೆಯುವ ಪ್ರಯೋಗ, ಎಲ್ಲಾ ಖಾಸಗಿ ಆಸ್ಪತ್ರೆಗಳು ಕಟ್ಟುನಿಟ್ಟಾಗಿ ತೆರೆಯುವಂತೆ ಮಾಡಿದ ಆದೇಶ, ಆಹಾರ ಕೊರತೆ ನೀಗಿಸಲು ಅಕ್ಕಿಮಿಲ್ಲು - ಎಣ್ಣೆ ಮಿಲ್ಲುಗಳನ್ನು ತೆರೆಸಿದ್ದು ಇತ್ಯಾದಿ ಅವರ ಯಶಸ್ಸಿಗೆ ಕಾರಣವಾಗಿವೆ. ಇದೇ ಕಾರಣಕ್ಕೆ ಅವರು ಕಾರ್ಮಿಕರ, ಜನಸಾಮಾನ್ಯರ ಮನಸ್ಸನ್ನು ಗೆದ್ದಿದ್ದಾರೆ, ಸೋಶಿಯಲ್‌ ಮೀಡಿಯಾದಲ್ಲಂತೂ ಬಹುಶ್ಲಾಘನೆಗೊಳಗಾಗಿದ್ದಾರೆ.

ಮನೆ  ಕೊಳಾಯಿ ತಿರುಗಿಸಿದ್ರೆ 3 ಗಂಟೆ ಕಾಲ ನೀರಿನ ಬದಲು ಎಣ್ಣೆ! ನನಸಾದ ಕನಸು

ಬಡತನದ ಹಿನ್ನೆಲೆಯಿಂದ ಬಂದ ನನಗೆ ಬಡವರ ಕಾರ್ಮಿಕರ ಕಷ್ಟಗಳು ಚೆನ್ನಾಗಿ ತಿಳಿದಿವೆ. ಆದ್ದರಿಂದ ಈ ಹುದ್ದೆಗೆ ಬಂದು ಅವರ ಕಷ್ಟಸ್ಪಂದಿಸದಿದ್ದರೇ ನಾನು ಜಿಲ್ಲಾಧಿಕಾರಿ ಅಗಿರುವುದಕ್ಕೆ ಅರ್ಥವೇ ಇರುವುದಿಲ್ಲ. ತನ್ನ ಪತ್ನಿ ಮಕ್ಕಳು ಶಾಲೆಗೆ ರಜೆ ಸಿಕ್ಕಿದ್ದರಿಂದ ನನ್ನ ತಂದೆತಾಯಿ ಊರಿಗೆ ಹೋಗಿದ್ದಾರೆ. ಆದ್ದರಿಂದ ನಾನು ಈಗ ಮನೆಯಲ್ಲಿ ಏಕಾಂಗಿ, ಮನೆಯ ಯಾವುದೇ ಹೊಣೆ ಇಲ್ಲದೇ ಪೂರ್ಣವಾಗಿ ಕೊರೋನಾ ನಿಯಂತ್ರಣದಲ್ಲಿ ತೊಡಗಿಕೊಂಡಿದ್ದೇನೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್‌ ತಿಳಿಸಿದ್ದಾರೆ.

-ಸುಭಾ​ಶ್ಚಂದ್ರ ಎಸ್‌.​ವಾ​ಗ್ಳೆ

click me!