
ಬೆಂಗಳೂರು(ಡಿ.17): ರಾಜ್ಯದಲ್ಲಿ ಮಳೆ ಪ್ರಮಾಣ ಕಡಿಮೆಯಾಗ್ತಿದ್ದಂತೆ ಶೀತಗಾಳಿಯ ಭೀತಿ ಶುರುವಾಗಿದೆ. ಹೌದು, ರಾಜ್ಯದ ಹಲವು ಜಿಲ್ಲೆಗಳಲ್ಲಿ ಶೀತಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಕಳೆದ 24 ಗಂಟೆಯಲ್ಲಿ ಬೀದರ್‌ನಲ್ಲಿ ಕನಿಷ್ಠ ತಾಪಮಾನ 7.5 ಡಿ.ಸೆ ದಾಖಲಾಗಿದೆ. ಡಿಸೆಂಬರ್ 17ರಿಂದ ಬೀದರ್‌ನಲ್ಲಿ 7 ಡಿಗ್ರಿ ಸೆಲ್ಸಿಯಸ್‌ಗೆ ತಾಪಮಾನ ಕುಸಿಯುವ ಸಾಧ್ಯತೆ ಇದೆ. ಇನ್ನು ಡಿ 17 ರಿಂದ ನಾಲ್ಕು ದಿನಗಳ ಕಾಲ ಬೀದರ್, ಕಲ್ಬುರ್ಗಿ, ವಿಜಯನಗರ, ಬಾಗಲಕೋಟೆ, ರಾಯಚೂರು, ಯಾದಗಿರಿ ಜಿಲ್ಲೆಯಲ್ಲಿ ಶೀತಗಾಳಿ ಬೀಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಚಳಿ ಹೆಚ್ಚಾದಂತೆ ಕಾಡ್ಬಹುದು ಖಿನ್ನತೆ, ಲಕ್ಷಣ ತಿಳಿದಿದ್ರೆ ಚಿಕಿತ್ಸೆ ಸುಲಭ
ಅಲ್ಲದೆ ಉತ್ತರ ಒಳನಾಡಿನ ಹಲವೆಡೆ ಕನಿಷ್ಠ ತಾಪಮಾನ ದಾಖಲಾಗುವ ಸಾಧ್ಯತೆ ಇದೆ. ಬಂಗಾಳ ಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದ ಪರಿಣಾಮ ವಾತಾವರಣದಲ್ಲಿ ಬದಲಾವಣೆಯಾಗಿದ್ದೇ ಈ ವರ್ಷದ ಕನಿಷ್ಠ ಚಳಿಗೆ ಕಾರಣ ಎಂದು ತಿಳಿದು ಬಂದಿದೆ.
ಜೊತೆಗೆ ಡಿಸೆಂಬರ್ 19 ರಿಂದ ಮತ್ತೆ ರಾಜ್ಯದ ಬೆಂಗಳೂರು ಸೇರಿದಂತೆ ಹಲವೆಡೆ ಮಳೆಯಾಗಲಿದೆ. 19 ರಿಂದ ಮೂರು ದಿನಗಳ ಕಾಲ ಮಳೆ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
7 ರಾಜ್ಯಗಳಲ್ಲಿ ಚಳಿಗಾಳಿಯ ಎಚ್ಚರಿಕೆ, ಡಿಸೆಂಬರ್ 17 ರಿಂದ ಚಳಿ ಹೆಚ್ಚಳ
ಮಂಗಳವಾರದಿಂದ ಚಳಿಗಾಳಿ ಎಚ್ಚರಿಕೆ ನೀಡಲಾಗಿದೆ. ನಾಳೆಯಿಂದ ತಾಪಮಾನ ಇನ್ನಷ್ಟು ಕುಸಿಯುವುದರಿಂದ ಚಳಿ ಹೆಚ್ಚಾಗುತ್ತದೆ. ರಾಜ್ಯದಲ್ಲಿ ಮಾತ್ರವಲ್ಲದೆ ದೇಶದ 7 ರಾಜ್ಯಗಳಲ್ಲಿ ಚಳಿಗಾಳಿ ಎಚ್ಚರಿಕೆ ನೀಡಲಾಗಿದೆ. ಹಿಮಾವೃತ ಗಾಳಿಯಿಂದ ಕೊರೆಯುವ ಚಳಿ ಕ್ರಮೇಣ ಹೆಚ್ಚುತ್ತಿದೆ
ರಾಜ್ಯದ ಗಂಗಾ ಬಯಲು ಪ್ರದೇಶಗಳಲ್ಲಿ, ಪಂಜಾಬ್, ಜಮ್ಮು ಮತ್ತು ಕಾಶ್ಮೀರ, ಮಹಾರಾಷ್ಟ್ರದ ಕೆಲವು ಭಾಗಗಳಲ್ಲಿ ಹಾಗೂ ಉತ್ತರಾಖಂಡ, ಹರಿಯಾಣ, ಉತ್ತರ ಪ್ರದೇಶ ಮತ್ತು ರಾಜಸ್ಥಾನದಲ್ಲಿ ತಾಪಮಾನ ಕುಸಿಯಲಿದೆ. ಬಯಲು ಪ್ರದೇಶಗಳನ್ನು ಹೊರತುಪಡಿಸಿ ದೇಶದ ಹಲವು ಭಾಗಗಳಲ್ಲಿ ಬೆಳಿಗ್ಗೆ ದಟ್ಟವಾದ ಮಂಜಿನಿಂದಾಗಿ ಗೋಚರತೆ 50-200 ಮೀಟರ್‌ಗಳಷ್ಟಿದೆ.
ಚಳಿಗಾಲದಲ್ಲಿ ಶೀತ, ಜ್ವರ ಬಾರದಿರಲು ತಿನ್ನಬಾರದ ಹಣ್ಣುಗಳಿವು
ದೇಶದ ವಿವಿಧ ಭಾಗಗಳಲ್ಲಿ ದಟ್ಟವಾದ ಮಂಜು ಕವಿದಿದೆ. ದೇಶದ ಪರ್ವತ ಪ್ರದೇಶಗಳಲ್ಲಿ ತಾಪಮಾನ ಮೈನಸ್ 4-8 ಡಿಗ್ರಿಗಳ ನಡುವೆ ಇದೆ. ಆದರೆ, 17ರ ನಂತರ ತಾಪಮಾನ ಇನ್ನಷ್ಟು ಕುಸಿಯಬಹುದು ಎಂದು ವರದಿಯಾಗಿದೆ
ರಾಜ್ಯಾದ್ಯಂತ ಚಳಿಯ ಪ್ರಭಾವ ಕ್ರಮೇಣ ಹೆಚ್ಚುತ್ತಿದೆ. ಭಾನುವಾರ ಕೋಲ್ಕತ್ತಾದಲ್ಲಿ ತಾಪಮಾನ 12 ಡಿಗ್ರಿ ಇತ್ತು. ಆದರೆ ನಾಳೆಯಿಂದ ಚಳಿಗಾಳಿ ಎಚ್ಚರಿಕೆ ನೀಡಲಾಗಿದೆ. ಆದಾಗ್ಯೂ, ಬಂಗಾಳಕೊಲ್ಲಿಯಲ್ಲಿ ಕಡಿಮೆ ಒತ್ತಡದಿಂದಾಗಿ, ಎರಡು ಅಥವಾ ಮೂರು ದಿನಗಳ ನಂತರ ತಾಪಮಾನ ಸ್ವಲ್ಪ ಹೆಚ್ಚಾಗಬಹುದು.
ಕರ್ನಾಟಕದ ಕೆಲ ಭಾಗಗಳಲ್ಲಿಯೂ ಚಳಿಯ ವಾತಾವರಣ ಆರಂಭವಾಗಿದೆ. ಮಳೆಯ ಪ್ರಮಾಣ ಕಡಿಮೆ ಆಗಿದ್ದು, ಚಳಿ ಆರಂಭವಾಗಿದೆ. ಬೆಂಗಳೂರಿನಲ್ಲೂ ಚಳಿಯ ಜೊತೆಗೆ ಬಿಸಿಲಿನ ವಾತಾವರಣವಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ