ರೆಬಲ್ ಸ್ಟಾರ್ ಜಿಲ್ಲೆಯ ರೆಬಲ್ ನಾಯಕರಿಗೆ ಬಿಜೆಪಿ ಗಾಳ?

First Published Jul 12, 2018, 1:58 PM IST
Highlights

ಮತ್ತೆ ರಾಜ್ಯದಲ್ಲಿ ಆಪರೇಷನ್ ಕಮಲ ಆರಂಭವಾಗಲಿದೆಯೇ? ಹೀಗೊಂದು ಪ್ರಶ್ನೆ ರಾಜಕೀಯ ಬೆಳವಣಿಗೆ ನೋಡಿದರೆ ಕಾಡುತ್ತಿದೆ. ಜೆಡಿಎಸ್ ನಿಂದ ರೆಬಲ್ ಆಗಿ ಕಾಂಗ್ರೆಸ್ ಸೇರಿ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಹೀನಾಯವಾಗಿ ಸೋತಿದ್ದ ಇಬ್ಬರು ಪ್ರಮುಖ ಮುಖಂಡರಿಗೆ ಬಿಜೆಪಿ ಗಾಳ ಹಾಕಿದೆ.

ಮಂಡ್ಯ[ಜು.12]  ಹಳೆ ಮೈಸೂರು ಭಾಗದಲ್ಲಿ ಈ ರಾಜಕೀಯ ಬೆಳವಣಿಗೆ ಹೊಸ ಸ್ಥಿತ್ಯಂತರಕ್ಕೆ ಕಾರಣವಾದರೂ ಆಗಬಹುದು. ರೆಬಲ್ ನಾಯಕರಿಗೆ ಬಿಜೆಪಿಯಿಂದ  ಆಫರ್ ನೀಡಿದ್ದು  ಮಾಜಿ ಸಚಿವ ಚಲುವರಾಯಸ್ವಾಮಿ ಮಾಜಿ ರಮೇಶ್ ಬಾಬು ಬಂಡಿಸಿದ್ದೇಗೌಡ ಗೆ ಬಿಜೆಪಿ ಗಾಳ ಹಾಕಿದೆ.

ಜೆಡಿಎಸ್ ನಲ್ಲಿದ್ದಾಗ ರಾಜ್ಯಸಭಾ ಚುನಾವಣಾ ಸಂದರ್ಭ ಅಡ್ಡಮತದಾನ ಮಾಡಿ ಕಾಂಗ್ರೆಸ್ ಗೆ ಬಂದಿದ್ದ ರೆಬಲ್ ನಾಯಕರನ್ನು ಸೆಳೆಯಲು ಸೆಳೆಯಲು ಬಿಜೆಪಿ ಕಸರತ್ತು ಮಾಡಿದೆ.

ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರ್ಕಾರ ಬಂದ ಮೇಲೆ ಕಾಂಗ್ರೆಸ್ ನಲ್ಲಿ ಈ ಇಬ್ಬರು ನಾಯಕರನ್ನು ಮೂಲೆಗುಂಪು ಮಾಡಲಾಗಿದೆ. ಇವರಿಗೆ ಆಪ್ತ  ಎಂದು ಗುರುತಿಸಿಕೊಂಡಿದ್ಜದ ಜಮೀರ್ ಅಹ್ಮದ್ ಖಾನ್ ರಿಂದಲೂ ನಾಯಕರು ಅಂತರ ಕಾಯ್ದುಕೊಂಡಿದ್ದಾರೆ.

ಜಮೀರ್ ಅಹ್ಮದ್ ಎಚ್ಡಿಕೆ ಜೊತೆ ಮತ್ತೆ ಹತ್ತಿರವಾಗಿರೋದಕ್ಕೆ ಇಬ್ಬರು ನಾಯಕರ ಅಸಮಾಧನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದ್ದು  ಇತ್ತೀಚೆಗೆ ನಡೆದ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಗಳ ಸಭೆಗೂ ಉಭಯ ನಾಯಕರು ಗೈರಾಗಿದ್ದರು.  ಬಿಜೆಪಿಗೆ ಸರಿಯಾದ ನೆಲೆ ಇಲ್ಲದ ಮಂಡ್ಯ ಜಿಲ್ಲೆಯಲ್ಲಿ ಒಬ್ಬ ಪ್ರಭಾವಿ ಒಕ್ಕಲಿಗ ನಾಯಕನನ್ನು ಬೆಳೆಸಲು ರಾಜ್ಯ ಬಿಜೆಪಿ ನಾಯಕರು ಮುಂದಾಗಿರುವುದು ಇದಕ್ಕೆ ಕಾರಣ.

ಯಾವ ಆಫರ್ ನೀಡ್ತಾರೆ?
ಇಬ್ಬರು ಪಕ್ಷಕ್ಕೆ ಬಂದ್ರೆ ಒಬ್ಬರಿಗೆ ಸಂಸತ್ ಟಿಕೆಟ್ ಮತ್ತೊಬ್ಬರಿಗೆ ಎಂಎಲ್ಸಿ‌ ಹುದ್ದೆ ನೀಡುವ ಬಗ್ಗೆಯೂ ಬಿಜೆಪಿಯಲ್ಲಿ ಮಾತುಕತೆ ನಡೆದಿದೆ.  ಜೆಡಿಎಸ್, ಕಾಂಗ್ರೆಸ್ ಮಂಡ್ಯದಲ್ಲಿ ಮೈತ್ರಿ ಅಭ್ಯರ್ಥಿಯನ್ನು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಣಕ್ಕಿಳಿಸಲು ಯೋಜನೆ ರೂಪಿಸಿರುವುದಕ್ಕೆ ತಕ್ಕ ಉತ್ತರ  ನೀಡಲು ಬಿಜೆಪಿ ಹೊಸ ತಂತ್ರಕ್ಕೆ ಮುಂದಾಗಿದೆ.

click me!