ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್ ಹೆದ್ದಾರಿಗೆ ಕಾವೇರಿ ಹೆಸರಿಡುವುದು ಸೂಕ್ತ. ಈಗಿರುವ ಅನೇಕ ಎಕ್ಸಪ್ರೆಸ್ ಹೆದ್ದಾರಿಗಳಿಗೆ ನದಿಗಳ ಹೆಸರನ್ನೇ ಇಡಲಾಗಿದೆ ಎಂದು ಸಂಸದ ಪ್ರತಾಪ ಸಿಂಹ ಹೇಳಿದರು.
ಮೈಸೂರು : ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್ ಹೆದ್ದಾರಿಗೆ ಕಾವೇರಿ ಹೆಸರಿಡುವುದು ಸೂಕ್ತ. ಈಗಿರುವ ಅನೇಕ ಎಕ್ಸಪ್ರೆಸ್ ಹೆದ್ದಾರಿಗಳಿಗೆ ನದಿಗಳ ಹೆಸರನ್ನೇ ಇಡಲಾಗಿದೆ ಎಂದು ಸಂಸದ ಪ್ರತಾಪ ಸಿಂಹ ಹೇಳಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತರ ಪ್ರದೇಶದಲ್ಲಿ ಗಂಗಾ ಎಕ್ಸ್‌ಪ್ರೆಸ್ ಮತ್ತು ಯಮುನಾ ಎಕ್ಸ್‌ಪ್ರೆಸ್ ಇದೆ. ಮಧ್ಯಪ್ರದೇಶದಲ್ಲಿ ಎಕ್ಸ್‌ಪ್ರೆಸ್ ಇದೆ. ಅಲ್ಲದೇ,, ಮಂಡ್ಯ ಮತ್ತು ಬೆಂಗಳೂರು ನಗರದ ಜನತೆಗೆ ಜೀವನಾಡಿ ಕಾವೇರಿ. ಆದ್ದರಿಂದ ಕಾವೇರಿ ಹೆಸರಿಡುವುದು ಒಳ್ಳೆಯದು ಎಂದರು.
undefined
ರಾಷ್ಟ್ರೀಯ ಹೆದ್ದಾರಿಗಳಿಗೆ ವ್ಯಕ್ತಿಗಳ ಹೆಸರಿಡುವ ಪದ್ಧತಿ ಇಲ್ಲ. ನಾವು ಈಗಾಗಲೇ ಮೈಸೂರು ವಿಮಾನ ನಿಲ್ದಾಣಕ್ಕೆ ನಾನೇ ಮೊದಲಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರು ಸೂಚಿಸಿದೆ. ಮುಂದೆ ಅದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾದಾಗ ಪ್ರಖ್ಯಾತವಾಗಲಿದೆ. ರೈಲ್ವೆ ನಿಲ್ದಾಣಕ್ಕೆ ಚಾಮರಾಜ ಒಡೆಯರ್ ಹೆಸರು ಸೂಚಿಸಲಾಗುತ್ತಿದೆ ಎಂದು ಹೇಳಿದರು.
ಮಾಜಿ ಸಿಎಂ ಎಸ್.ಎಂ. ಕೃಷ್ಣ ಅವರ ಬಗ್ಗೆ ಅಪಾರ ಗೌರವವಿದೆ. ನನಗೆ ಅವರು ಎಂದಿಗೂ ಆದರ್ಶ ವ್ಯಕ್ತಿ. ಅವರ ಸಲಹೆ ಗೌರವಿಸುತ್ತೇನೆ. ಆದರೆ, ವ್ಯಕ್ತಿಗತ ಹೆಸರಿಡಲು ಅವಕಾಶ ಇಲ್ಲದೆ ಇರುವುದರಿಂದ ಏಕ ತೀರ್ಮಾನದಿಂದ ಕಾವೇರಿ ತಾಯಿ ಹೆಸರಿಡಲು ಕೋರುತ್ತೇನೆ ಎಂದರು.
ನಾವು ಮೈಸೂರು-ಬೆಂಗಳೂರು ರಸ್ತೆಯನ್ನು ಅಪಘಾತ ಮುಕ್ತ ರಸ್ತೆಯನ್ನಾಗಿ ಅಭಿವೃದ್ಧಿಪಡಿಸಲಾಗಿದೆ. ಫೆಬ್ರವರಿ ಅಂತ್ಯದೊಳಗೆ ಪೂರ್ಣಗೊಳಿಸಿ, ಮಾಚ್‌ರ್ ಮೊದಲ ಅಥವಾ ಎರಡನೇ ವಾರದಲ್ಲಿ ಉದ್ಘಾಟಿಸಲಾಗುವುದು. ರಾಷ್ಟ್ರೀಯ ಹೆದ್ದಾರಿ ಕುರಿತು ತಜ್ಞರಲ್ಲದವರೂ ಹೇಳಿಕೆ ನೀಡುತ್ತಿದ್ದಾರೆ ಎಂಬುದನ್ನು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದೆ. ಅವರು ಜನವರಿಯಲ್ಲಿ ಬರುವುದಾಗಿ ತಿಳಿಸಿದ್ದರು. ಅದರಂತೆ ಗುರುವಾರ ಆಗಮಿಸಿ ಕಾಮಗಾರಿ ಪರಿಶೀಲಿಸಿದ್ದಾರೆ ಎಂದರು.
ಅವರು ಅನುಭವವನ್ನು ಹಂಚಿಕೊಳ್ಳುವ ಅವಕಾಶ ನನಗೆ ಲಭ್ಯವಾಯಿತು. ಮಾಗಡಿ ರಸ್ತೆ ಬಳಿಯಿಂದ ಆರಂಭವಾದ ವೈಮಾನಿಕ ಸಮೀಕ್ಷೆಯು ಕೊಲಂಬಿಯಾ ಏಷ್ಯಾ ಆಸ್ಪತ್ರೆ ಬಳಿವರೆಗೂ ಬಂದು ಮತ್ತೆ ರಸ್ತೆಯ ಮತ್ತೊಂದು ಬದಿಯನ್ನು ಪರಿಶೀಲಿಸಿಕೊಂಡು ರಾಮನಗರ ಬಳಿ ರಸ್ತೆಯಲ್ಲಿಯೇ ಹೆಲಿಕಾಪ್ಟರ್ ಇಳಿಸಿದೆವು. ಕಾಮಗಾರಿ ಬಹುತೇಕ ಪೂರ್ಣವಾಗಿದೆ. ಹೆದ್ದಾರಿ ಕಾಮಗಾರಿ ಫೆಬ್ರವರಿ ಅಂತ್ಯದೊಳಗೆ ಪೂರ್ಣಗೊಳ್ಳಲಿದೆ. ಸವೀರ್‍ಸ್ ರಸ್ತೆ ಕಾಮಗಾರಿಯು ಮುಂದುವರೆಯುತ್ತದೆ ಎಂದರು.
ಇದರ ಜೊತೆಗೆ ಸ್ವದೇಶಿ ಉತ್ಪನ್ನಗಳಿಗೆ ಮಾರುಕಟ್ಟೆಒದಗಿಸುವುದು, ತುರ್ತು ಸೇವೆ, ತಂಗುದಾಣ ನಿರ್ಮಾಣವು ಹಂತ ಹಂತವಾಗಿ ನಡೆಯುತ್ತದೆ. ಸವೀರ್‍ಸ್ ರಸ್ತೆ ಕಾಮಗಾರಿ ಮುಗಿಯುವವರೆಗೆ ಮಾತ್ರ ಬೈಕ್ ಮತ್ತು ತ್ರಿಚಕ್ರ ವಾಹನಗಳಿಗೆ ಹೆದ್ದಾರಿಯಲ್ಲಿ ಸಂಚರಿಸಲು ಅವಕಾಶ ಕಲ್ಪಿಸುತ್ತೇವೆ. ಸವೀರ್‍ಸ್ ರಸ್ತೆ ಪೂರ್ಣಗೊಂಡ ಬಳಿಕ ಅಪಘಾತ ಮುಕ್ತ ರಸ್ತೆಯನ್ನಾಗಿಸುವ ಉದ್ದೇಶದಿಂದ ಬೈಕ್ ಮತ್ತು ತ್ರಿಚಕ್ರ ವಾಹನಗಳು ಸವೀರ್‍ಸ್ ರಸ್ತೆಯನ್ನು ಬಳಸಿಕೊಳ್ಳುವಂತೆ ಸೂಚಿಸಲಾಗುವುದು. ಇದರಿಂದ ಅವರಿಗೆ ಟೋಲ್ ಸಮಸ್ಯೆಯೂ ತಪ್ಪಲಿದೆ ಎಂದರು.
ಪ್ರಸಾದ ಯೋಜನೆ:
ಮೈಸೂರಿನ ಚಾಮುಂಡಿಬೆಟ್ಟವನ್ನು ಪ್ರಸಾದ ಯೋಜನೆ ವ್ಯಾಪ್ತಿಗೆ ತರಲಾಗಿದೆ. ಇದರಿಂದ .50 ಕೋಟಿ ಲಭ್ಯವಾಗಲಿದ್ದು, ಭಕ್ತರಿಗೆ ಅಗತ್ಯವಿರುವ ಸೌಲಭ್ಯ ಕಲ್ಪಿಸಲಾಗುವುದು. ಅಂತೆಯೇ ಸ್ವದೇಶಿ ದರ್ಶನ್ ಯೋಜನೆಗೆ ಮೈಸೂರು ಆಯ್ಕೆಯಾಗಿದೆ. ಈ ಸಂಬಂಧ ನಾನು ಮುಖ್ಯಮಂತ್ರಿಗಳಲ್ಲಿ ಮತ್ತು ಕೇಂದ್ರ ಸಚಿವರಲ್ಲಿ ಮನವಿ ಮಾಡಿದ್ದೆ. ರಾಜ್ಯದಿಂದ ಮೈಸೂರು, ಹಂಪಿ ಸೇರಿ ಐದು ಹೆಸರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶಿಫಾರಸ್ಸು ಮಾಡಿದ್ದರು. ಆ ಪೈಕಿ ಮೈಸೂರು ಮತ್ತು ಹಂಪಿ ಆಯ್ಕೆಯಾಗಿದೆ. ಈ ಯೋಜನೆಯಿಂದಾಗಿ ವರ್ಷಪೂರ್ತಿ ವಸ್ತು ಪ್ರದರ್ಶನ ಆಯೋಜಿಸಿ, ಸ್ಥಳೀಯ ಉತ್ಪನ್ನಗಳ ಪ್ರದರ್ಶನ ಮತ್ತು ಮಾರುಕಟ್ಟೆಸೌಲಭ್ಯ ಕಲ್ಪಿಸಲು ನೆರವಾಗಲಿದೆ ಎಂದು ಅವರು ವಿವರಿಸಿದರು.
ಬಿಜೆಪಿ ಬ್ರೋಕರ್ ಜನತಾ ಪಾರ್ಟಿ ಎಂದಿರುವ ಪ್ರಿಯಾಂಕ ಖರ್ಗೆ ಯಾರು ಅಂತ ನನಗೆ ಗೊತ್ತಿಲ್ಲ. ಮಂಡ್ಯ ಸಂಸದೆ ಸುಮಲತಾ ಅವರು ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿರುವುದೂ ಗೊತ್ತಿಲ್ಲ.
- ಪ್ರತಾಪ ಸಿಂಹ, ಸಂಸದರು