ಗೋ ಹತ್ಯೆ, ಮತಾಂತರ ನಿಷೇಧ ಕಾಯ್ದೆ ವಾಪಸ್‌ ಪಡೆದರೆ ವಿಧಾನಸೌಧಕ್ಕೆ ಮುತ್ತಿಗೆ: ಮಠಾಧೀಶರ ಎಚ್ಚರಿಕೆ

By Kannadaprabha NewsFirst Published Jul 5, 2023, 10:45 PM IST
Highlights

ಗೋಹತ್ಯೆ ನಿಷೇಧ ಕಾಯ್ದೆ ಹಿಂಪಡೆಯಬಾರದು, ಗೋಹತ್ಯೆ ನಿಷೇಧ ಕಾಯ್ದೆ ವಾಪಾಸು ಪಡೆಯುವುದು ಸುಸಂಸ್ಕೃತ ಸಮಾಜಕ್ಕೆ ಅಪಮಾನ ಮಾಡಿದ ಹಾಗೆ, ಆದಾಗ್ಯೂ ವಾಪಸ್‌ ಪಡೆದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ ಮಠಾಧೀಶರು. 

ಕಲಬುರಗಿ(ಜು.05):  ಕಾಂಗ್ರೆಸ್‌ ಸರ್ಕಾರದಿಂದ ಗೋಹತ್ಯೆ ಹಾಗೂ ಮತಾಂತರ ನಿಷೇಧ ಕಾಯ್ದೆಗಳನ್ನು ಹಿಂಪಡೆಯುವ ವಿಚಾರದಲ್ಲಿ ವ್ಯಗ್ರರಾಗಿರುವ ಕಲಬುರಗಿ ಜಿಲ್ಲೆಯ ವಿವಿಧ ಮಠಗಳ ಮಠಾಧೀಶರು ಈ ಕಾಯ್ದೆಗಳನ್ನು ವಾಪಸು ತೆಗೆದುಕೊಂಡರೆ ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿ ಸರ್ಕಾರದ ವಿರುದ್ಧ ಗುಡುಗಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಠಾಧೀಶರು, ಗೋಹತ್ಯೆ ನಿಷೇಧ ಕಾಯ್ದೆ ಹಿಂಪಡೆಯಬಾರದು, ಗೋಹತ್ಯೆ ನಿಷೇಧ ಕಾಯ್ದೆ ವಾಪಾಸು ಪಡೆಯುವುದು ಸುಸಂಸ್ಕೃತ ಸಮಾಜಕ್ಕೆ ಅಪಮಾನ ಮಾಡಿದ ಹಾಗೆ, ಆದಾಗ್ಯೂ ವಾಪಸ್‌ ಪಡೆದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಚಿಂಚೋಳಿಗೆ ನಾನೇ ಸಿಎಂ, ಮಿನಿಸ್ಟರ್‌: ಬಿಜೆಪಿ ಶಾಸಕ ಡಾ. ಜಾಧವ ಗುಡುಗು

ಶಾಂತಲಿಂಗೇಶ್ವರ ಸಂಸ್ಥಾನ ಮಠದ ಸಾಂತಲಿಂಗೇಶ್ವರ ಶರೀಗಳು, ಸುಗೆಶ್ವರ ಸಂಸ್ಥಾನ ಮಠ ವೀರಭದ್ರ ಶ್ರೀಗಳು, ಮಾಶಾಳ ಸಿದ್ಧಲಿಂಗೇಶ್ವರ ಸಂಸ್ಥಾನ ಹಿರೇಮಠದ ಕೇದಾರ ಶ್ರೀಗಳು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಗೋಹತ್ಯೆ ನಿಷೇಧ ಕಾಯ್ದೆ ವಾಪಸ್‌ ಪಡೆದಲ್ಲಿ ಸರ್ಕಾರದ ವಿರುದ್ಧ ಉಗ್ರ ಹೋರಾಟ ಶುರು ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಗೋ ಹತ್ಯೆ ಮತ್ತು ಮತಾಂತರ ನಿಷೇಧ ಕಾಯ್ದೆಯನ್ನು ಬಿಜೆಪಿ ಆಡಳಿತದಲ್ಲಿ ಜಾರಿಗೆ ತಂದಿದ್ದು, ರಾಜ್ಯದಲ್ಲಿರುವ ಕಾಂಗ್ರೆಸ್‌ ಬಂದಾಕ್ಷಣ ಈ ಕಾನೂನು ತೆಗೆದುಹಾಕುತ್ತಿರೋದಕ್ಕೆ ಮಠಾಧೀಶರೆಲ್ಲರೂ ತೀವ್ರ ವಿರೋಧಿಸುವುದಾಗಿ ಹೇಳಿದರು.
ನಂತರ ಸಿದ್ಧಲಿಂಗೇಶ್ವರ ಸಂಸ್ಥಾನದ ಕೇದಾರ ಶೀಗಳು ಮಾತನಾಡಿ, ನಾವು ಯಾವ ಸರ್ಕಾರದ ವಿರುದ್ಧ ಅಥವಾ ಪರವಾಗಿಯೂ ಇಲ್ಲ. ಆದರೆ ಗೋ ಹತ್ಯೆ ಮತ್ತು ಮತಾಂತರ ಕಾಯ್ದೆಯ ಕುರಿತು ತೆಗೆದುಕೊಳ್ಳುತ್ತಿರುವ ನಿರ್ಧಾರಗಳನ್ನು ಈ ಸರ್ಕಾರ ಕೂಡಲೇ ಕೈಬಿಡಬೇಕು ಇಂದು, ಐದು ಜನ ಮಾತ್ರ ಶ್ರೀಗಳು ಬಂದಿದ್ದು, ಮುಂಬರುವ ದಿನಗಳಲ್ಲಿ ಐದು ಸಾವಿರ ಶ್ರೀಗಳು ಸೇರಿ ವಿಧಾನಸೌಧಯನ್ನು ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದರು.

ಯುವ ನಿಧಿ ಯೋಜನೆಗೆ ಬಜೆಟ್‌ನಲ್ಲಿ 2500 ಕೋಟಿ ಬೇಕು: ಸಚಿವ ಶರಣ ಪ್ರಕಾಶ್‌ ಪಾಟೀಲ್‌

ಸುದ್ದಿಗೋಷ್ಠಿಯಲ್ಲಿ ಲಿಂಗರಾಜ ಅಪ್ಪ , ಚರಲಿಂಗ ಮಹಾಸ್ವಾಮಿಗಳು, ರಾಚೋಟೇಶ್ವರ ಶಿವಾಚಾರ್ಯರು, ಸಿದ್ದರಾಮ ಶ್ರೀಗಳು, ಶಂಕರ ಚೋಕಾ, ಲಕ್ಷೀಕಾಂತ ಸ್ವಾದಿ ಇದ್ದರು.

ಜೀವನ ಪರ‍್ಯಂತ ಹಾಲು ಉಣಿಸುವ ತಾಯಿ ಗೋ ಮಾತೆ, ಜನ್ಮನೀಡಿದ ತಾಯಿ ಒಂದೆರಡು ವರ್ಷ ಅಷ್ಟೆ. ಗೋವುಗಳ ಸಂರಕ್ಷಣೆ ಮಾಡುವುದು ನಾವೆಲ್ಲರ ಕರ್ತವ್ಯವಾಗಿದೆ. ಎಲ್ಲಾ ಸಮಾಜದವರ ಬಗ್ಗೆ ನಮಗೆ ಗೌರವವಿದೆ. ಆದರೆ, ನಮ್ಮ ಸಮಾಜದ ಪರಂಪರೆಯನ್ನು ನಾವು ಉಳಿಸಿ ಬೆಳೆಸಬೇಕಾಗಿದೆ. ಸ್ವ ಇಚ್ಚೆಯಿಂದ ಮತಾಂತರವಾದರೆ ನಮಗೆ ತಕಾರರು ಇಲ್ಲ. ಆದರೆ ಒತ್ತಾಯ ಪೂರ್ವವಾಗಿ ಮತಾಂತರ ಮಾಡುವುದು ಸರಿಯಿಲ್ಲ. ಆಸೆ ಆಮಿಷಕ್ಕೆ ಒಳಗಾಗಿ ಮತಾಂತರವಾದರೆ ಅದಕ್ಕೆ ನಮ್ಮ ವಿರೋಧವಿದೆ ಅಂತ ಮಹಾಲಕ್ಷ್ಮಿ ಶಕ್ತಿ ಪೀಠ ಶ್ರೀನಿವಾಸ ಸರಡಗಿ ಡಾ. ಅಪ್ಪಾರಾವ ದೇವಿ ಮುತ್ಯಾ ತಿಳಿಸಿದ್ದಾರೆ. 

click me!