ಕೋವಿಡ್ -19 ತಡೆಗಟ್ಟಲು ಲಾಕ್ ಡೌನ್ ಜಾರಿಯಾದ ನಂತರ ಮುಂದಿನ ಜೀವನ ಹಾಗೂ ಉದ್ಯೋಗದ ಬಗ್ಗೆ ಚಿಂತಿಸುತ್ತಿರುವ ಕಾರ್ಮಿಕರಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ನೋಂದಣಿ ಮಾಡಿಕೊಳ್ಳುವ ಮೂಲಕ ವಿನೂತನ ಪ್ರಯತ್ನಕ್ಕೆ ಮುಂದಾಗಿದೆ.
ರಾಮನಗರ(ಮೇ 14): ಕೋವಿಡ್ -19 ತಡೆಗಟ್ಟಲು ಲಾಕ್ ಡೌನ್ ಜಾರಿಯಾದ ನಂತರ ಮುಂದಿನ ಜೀವನ ಹಾಗೂ ಉದ್ಯೋಗದ ಬಗ್ಗೆ ಚಿಂತಿಸುತ್ತಿರುವ ಕಾರ್ಮಿಕರಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ನೋಂದಣಿ ಮಾಡಿಕೊಳ್ಳುವ ಮೂಲಕ ವಿನೂತನ ಪ್ರಯತ್ನಕ್ಕೆ ಮುಂದಾಗಿದೆ.
ಉದ್ಯೋಗದಾತರು ಹಾಗೂ ಕಾರ್ಮಿಕರ ನಡುವೆ ಮಾಹಿತಿ ವಿನಿಮಯ ಮಾಡಿ ಉದ್ಯೋಗವನ್ನು ಕಲ್ಪಿಸಲು ಜಿಲ್ಲಾಡಳಿತ ಕೈಗಾರಿಕೆಗಳು, ಕಾರ್ಮಿಕರು ಹಾಗೂ ಜಿಲ್ಲೆಯಲ್ಲಿರುವ ವಲಸೆ ಕಾರ್ಮಿಕರನ್ನು ನೋಂದಣಿ ಮಾಡಿಕೊಳ್ಳಲು ಮುಂದಾಗಿದೆ.
undefined
ನೋಂದಣಿಗೆ ವೆಬ್‌ಸೈಟ್
ಜಿಲ್ಲೆಯಲ್ಲಿರುವ ಕಾರ್ಮಿಕರು ಹಾಗೂ ಬೇರೆ ರಾಜ್ಯ ಹಾಗೂ ಜಿಲ್ಲೆಗೆ ತೆರಳದೆ ಇಲ್ಲೇ ಉಳಿದಿರುವ ವಲಸೆ ಕಾರ್ಮಿಕರು https://sites.google.com/view/covid-19-ramanagara/home,ವೆಬ್ ಸೈಟ್ ನಲ್ಲಿ ನೋಂದಣಿ ಮಾಡಿಕೊಳ್ಳಬಹುದು. ಮಾಹಿತಿಯನ್ನು ಸಂಗ್ರಹಿಸಿ ಅವಶ್ಯಕತೆ ಇರುವ ವಿಭಾಗಗಳಲ್ಲಿ ಕಾರ್ಮಿಕರಿಗೆ ಕೆಲಸ ಪಡೆಯಲು ಅನುಕೂಲ ಮಾಡಿಕೊಡಲಾಗುತ್ತದೆ.
ಬೀದರ್‌ನಲ್ಲಿನ ಬಿಹಾರಿಗಳಿಗೆ ಕಲಬುರಗಿಯಿಂದ ಶೀಘ್ರ ರೈಲು
ಜಿಲ್ಲೆಯಲ್ಲಿ ಕೈಗಾರಿಕೆಗಳು ಕಾರ್ಯಾರಂಭವಾಗಿದ್ದು, ಲಾಕ್ ಡೌನ್ ಅವಧಿಯಲ್ಲಿ ಕಾರ್ಮಿಕರು ತಮ್ಮ ಜಿಲ್ಲೆ ಹಾಗೂ ರಾಜ್ಯಗಳಿಗೆ ಹಿಂದಿರುಗಿರುವುದರಿಂದ ಅವರಿಗೂ ಸಹ ಕಾರ್ಮಿಕರ ಕೊರತೆ ಉಂಟಾಗಿರಬಹುದು. ಕೈಗಾರಿಕೆಗಳು ಸಹ ನೋಂದಣಿ ಮಾಡಿಕೊಂಡು ತಮಗೆ ಬೇಕಿರುವ ಕಾರ್ಮಿಕರ ವಿವರವನ್ನು ಪಡೆಯಬಹುದಾಗಿದೆ.
ಊರಿಗೆ ಹಿಂತಿರುಗುತ್ತಿರುವ ಕಾರ್ಮಿಕರು
ಕೊರೋನಾ ಲಾಕ್ ಡೌನ್ ಹಿನ್ನಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಕಾರ್ಮಿಕರು ತಮ್ಮ ಊರುಗಳಿಗೆ ಹಿಂದಿರುಗುತ್ತಿದ್ದಾರೆ. ಕಳೆದ ವಾರವಷ್ಟೇ 360 ಅಂತರ ಜಿಲ್ಲಾ ಕಾರ್ಮಿಕರಿಗೆ ಬಸ್ ಸೌಕರ್ಯ ಕಲ್ಪಿಸಿ ಕಳುಹಿಸಿಕೊಡಲಾಗಿದ್ದು, ಇನ್ನೂ ಅನೇಕರು ಊರುಗಳಿಗೆ ತೆರಳಲು ಬಯಸುತ್ತಿದ್ದಾರೆ. ಅಲ್ಲದೆ, ಉತ್ತರ ಪ್ರದೇಶ, ತಮಿಳುನಾಡು, ಆಂಧ್ರಪ್ರದೇಶ, ಗುಜರಾತ್ ಸೇರಿದಂತೆ ವಿವಿಧ ರಾಜ್ಯಗಳಿಗೆ ಸೇರಿರುವ ಕಾರ್ಮಿಕರು ಸಹ ವಾಪಸ್ಸಾಗಲು ಹಾತೊರೆಯುತ್ತಿದ್ದಾರೆ. ಆದರೆ, ಆನ್ ಲೈನ್ ನಲ್ಲಿ ನೋಂದಣಿ ಆದವರನ್ನು ಮಾತ್ರ ಅವರವರ ರಾಜ್ಯಗಳಿಂದ ಅನುಮತಿ ದೊರೆತ ನಂತರವಷ್ಟೇ ಕಳುಹಿಸಿಕೊಡಲಾಗುತ್ತಿದೆ.
ಜಿಲ್ಲೆಯಲ್ಲೇ ಜೀವನೋಪಾಯ:
ಜಿಲ್ಲಾ ವ್ಯಾಪ್ತಿಯಲ್ಲಿ ಹೊರ ರಾಜ್ಯ/ ಜಿಲ್ಲೆಗಳಿಂದ ಬಂದು ರಾಮನಗರ ಜಿಲ್ಲೆಯಲ್ಲಿ ದುಡಿಯುತ್ತಿರುವ ವಲಸೆ ಕಾರ್ಮಿಕರು, ಕಟ್ಟಡ ಕಾರ್ಮಿಕರು ಹಾಗೂ ಇತರೆ ಕಾರ್ಮಿಕರು ತಮ್ಮ ಸ್ವಂತ ಊರು ಅಥವಾ ಮೂಲ ಸ್ಥಳಗಳಿಗೆ ತೆರಳದೆ ಪ್ರಸ್ತುತ ಇರುವ ಸ್ಥಳದಲ್ಲಿಯೇ ಇದ್ದುಕೊಂಡು ದಿನನಿತ್ಯದ ಕರ್ತವ್ಯಗಳನ್ನು ನಿರ್ವಹಿಸಿಕೊಂಡು ಜೀವನೋಪಯವನ್ನು ಕಂಡುಕೊಳ್ಳುವಂತೆ ಜಿಲ್ಲಾಡಳಿತ ಕೋರಿದೆ.
ಲಾಕ್ ಡೌನ್ ವಿಧಿಸುವ ಮುಂಚಿನಿಂದಲೂ ವಿವಿಧ ರಾಜ್ಯ ಹಾಗೂ ವಿವಿಧ ಜಿಲ್ಲೆಗಳಿಂದ ದುಡಿಯುವ ಉದ್ದೇಶ ಇಟ್ಟುಕೊಂಡು ವಲಸೆ ಕಾರ್ಮಿಕರು, ಕಟ್ಟಡ ಕಾರ್ಮಿಕರು ಮತ್ತು ಇತರೆ ಕಾರ್ಮಿಕರು ರಾಮನಗರ ಜಿಲ್ಲೆಗೆ ಬಂದು ವಾಸಿಸುತ್ತಿದ್ದಾರೆ. ಆದರೆ , ಈ ಲಾಕ್ ಡೌನ್ ಅವಧಿಯಲ್ಲಿ ಹಲವು ಕೈಗಾರಿಕೆಗಳು, ಕಟ್ಟಡ ನಿರ್ಮಾಣ ಕಾಮಗಾರಿಗಳು ಹಾಗೂ ಇತರೆ ಕಾರ್ಯಗಳು ಸ್ಥಗಿತಗೊಂಡು ದುಡಿಯುವ ವರ್ಗಕ್ಕೆ ದುಡಿಮೆ ಇಲ್ಲದಂತಾಗಿತ್ತು.
ಕಾಮಗಾರಿಗಳು ಪುನರ್ ಆರಂಭ
ಈಗ ಕೇಂದ್ರ ಗೃಹ ಮಂತ್ರಾಲಯವು ಹಾಗೂ ಘನ ಸರ್ಕಾರವು ಇಂತಹ ವಲಸೆ ಕಾರ್ಮಿಕರಿಗೆ, ಕಟ್ಟಡ ಕಾರ್ಮಿಕರಿಗೆ ಮತ್ತು ಇತರೆ ಕಾರ್ಮಿಕರಿಗೆ ಕೆಲಸ ಮಾಡುವಂತಹ ಸನ್ನಿವೇಶ ಕಲ್ಪಿಸಿಕೊಟ್ಟಿದೆ. ಕೈಗಾರಿಕೆಗಳು, ನಿರ್ಮಾಣ ಹಂತದ ಕಟ್ಟಡ ಕಾಮಗಾರಿಗಳು ಪುನರ್ ಪ್ರಾರಂಭಗೊಂಡಿವೆ.
ಈ ಹಿಂದೆ ಕಾರ್ಯನಿರ್ವಹಿಸುತ್ತಿದ್ದ ವಲಸೆ ಕಾರ್ಮಿಕರು, ಕಟ್ಟಡ ಕಾರ್ಮಿಕರು ಹಾಗೂ ಇತರೇ ಕಾರ್ಮಿಕರು ಧೃತ್ತಿಗೆಡದೆ ಅಥವಾ ಆತಂಕಕ್ಕೆ ಒಳಗಾಗದೆ ತಮ್ಮ ಸ್ವಂತ ಜಿಲ್ಲೆಗಳಿಗೆ/ ಮೂಲ ಸ್ಥಳಗಳಿಗೆ ತೆರಳದೆ ಈಗ ಎಲ್ಲಿ ವಾಸಿಸುತ್ತಿದ್ದಿರೆಯೋ ಅಲ್ಲಿಯೇ ವಾಸಿಸಿ ತಾವು ಎಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಿರೋ ಅಂತಹ ಸ್ಥಳಗಳಲ್ಲಿ/ಕಾರ್ಖಾನೆ/ಕೆಲಸದ ಸ್ಥಳಗಳಲ್ಲಿ ಕರ್ತವ್ಯ ನಿರ್ವಹಿಸುವಂತೆ ಜಿಲ್ಲಾಡಳಿತ ಮನವಿ ಮಾಡಿದೆ.
ಕಾರ್ಮಿಕರ ಜೊತೆ ಸಲಿಕೆ, ಗುದ್ದಲಿ ಹಿಡಿದು ಕೆಲಸ ಮಾಡಿದ IAS ಅಧಿಕಾರಿ..!
ರಾಮನಗರ ಜಿಲ್ಲೆಯಲ್ಲಿ ಕೈಗಾರಿಕೆಗಳು, ಕಾರ್ಮಿಕರು ಹಾಗೂ ವಲಸೆ ಕಾರ್ಮಿಕ ನೋಂದಣಿ ಪ್ರಾರಂಭಿಸಿರುವ ವೆಬ್ ಸೈಟ್ ಗೆ ಚಾಲನೆ ನೀಡಲಾಗಿದೆ. ಕಾರ್ಖಾನೆಗಳ ಆಡಳಿತ ಮಂಡಳಿಯೊಂದಿಗೂ ಚರ್ಚೆ ನಡೆಸಲಾಗಿದೆ. ಜಿಲ್ಲೆಯಲ್ಲಿ ಇಂದಿನ ತುರ್ತು ಅವಧಿಯಲ್ಲಿ ಕಾರ್ಮಿಕರಿಗೆ ಉದ್ಯೋಗ ಒದಗಿಸಲು ಪ್ರಯತ್ನಿಸಲಾಗುತ್ತಿದೆ. ಕಾರ್ಮಿಕರು ವೆಬ್ ಸೈಟ್ ನಲ್ಲಿ ತಮ್ಮ ಹೆಸರು ನೋಂದಣಿ ಮಾಡಿಕೊಂಡು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಂ.ಎಸ್ .ಅರ್ಚನಾ ತಿಳಿಸಿದ್ದಾರೆ.
ಕೊರೋನಾ ಲಾಕ್ ಡೌನ್ ನಿಂದಾಗಿ ಕೈಗಾರಿಕೆಗಳು ಹಾಗೂ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈಗ ಕಾರ್ಖಾನೆಗಳು ಉಳಿಯಬೇಕು, ಕಾರ್ಮಿಕರಿಗೂ ತೊಂದರೆ ಆಗದಂತೆ ಕಾರ್ಯನಿರ್ವಹಣೆ ಮಾಡುವುದು ಅತ್ಯಗತ್ಯವಾಗಿದೆ. ಕಂಪನಿಗಳಲ್ಲಿ ಕಾರ್ಮಿಕರ ಕೊರತೆ ಉಂಟಾದರೆ ಹಾಗೂ ಅವಶ್ಯಕತೆಯಿರುವ ಕಾರ್ಮಿಕರಿಗೆ ಕಂಪನಿಗಳಲ್ಲಿ ಉದ್ಯೋಗ ಅವಕಾಶ ಕಲ್ಪಿಸಲು ನೋಂದಣಿ ಪ್ರಕ್ರಿಯೆ ಸಹಕಾರಿಯಾಗಲಿದೆ. ವೇತನ ಪಾವತಿ, ಉದ್ಯೋಗದಿಂದ ವಜಾದಂತಹ ಪ್ರಕರಣಗಳ ದೂರು ಬಂದರು ಬಗೆಹರಿಸಲಾಗುತ್ತದೆ ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ ಶೇಖರ್ ಎಸ್ .ಗಡದ್ ಹೇಳಿದ್ದಾರೆ.