'ಎನ್‌ಕೌಂಟರ್‌ನಿಂದ ಅತ್ಯಾಚಾರಿಗಳ ಕನಸಲ್ಲೂ ಹೆದರಿಕೆ ಹುಟ್ಟುತ್ತೆ'

By Suvarna NewsFirst Published Dec 6, 2019, 3:08 PM IST
Highlights

ಅತ್ಯಾಚಾರ ಮಾಡಿದ ಆರೋಪಿಗಳನ್ನು ಎನ್‌ಕೌಂಟರ್ ಮಾಡಿದ್ದು ಸರಿಯಾದ ನಿರ್ಧಾರವಾಗಿದೆ ಎಂದ ಪ್ರಮೋದ್ ಮುತಾಲಿಕ| ಈ ಬಗ್ಗೆ ಮಾನವ ಹಕ್ಕುಗಳ‌ ಉಲ್ಲಂಘನೆ ಅಂತಾ ಜಾಸ್ತಿ ಒತ್ತು ಕೊಡಬಾರದು| ದೇಶಾದ್ಯಂತ ಸಂಭ್ರಮಾಚರಣೆ|

ಧಾರವಾಡ(ಡಿ.06): ಪಶು ವೈದ್ಯೆ ಅತ್ಯಾಚಾರ ಪ್ರಕರಣ ಆರೋಪಿಗಳನ್ನು ಹೈದರಾಬಾದ್ ಪೊಲೀಸರು ಎನ್‌ಕೌಂಟರ್ ಮಾಡಿದ್ದು ಸ್ವಾಗತಾರ್ಹವಾಗಿದೆ ಎಂದು ಶ್ರೀರಾಮಸೇನೆ ಸ್ಥಾಪಕ ಪ್ರಮೋದ ಮುತಾಲಿಕ ಅವರು ಹೇಳಿದ್ದಾರೆ.
ಶುಕ್ರವಾರ ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಅತ್ಯಾಚಾರ ಮಾಡಿದ ಆರೋಪಿಗಳನ್ನು ಎನ್‌ಕೌಂಟರ್ ಮಾಡಿದ್ದು ಸರಿಯಾದ ನಿರ್ಧಾರವಾಗಿದೆ. ಈ ಬಗ್ಗೆ ಮಾನವ ಹಕ್ಕುಗಳ‌ ಉಲ್ಲಂಘನೆ ಅಂತಾ ಜಾಸ್ತಿ ಒತ್ತು ಕೊಡಬಾರದು ಎಂದು ಹೇಳಿದ್ದಾರೆ. 

ಹೈದರಾಬಾದ್ ರಾಕ್ಷಸರಿಗೆ ಕನ್ನಡಿಗನಿಂದ ಎನ್‌ಕೌಂಟರ್!

ಪೊಲೀಸ್ ಅಧಿಕಾರಿಗಳು ಮಾಡಿರುವ ಕೆಲಸ ಒಳ್ಳೆಯದಾಗಿದೆ. ಈ ಎನ್‌ಕೌಂಟರ್‌ನಿಂದ ಅತ್ಯಾಚಾರಿಗಳಿಗೆ ಕನಸಿನಲ್ಲಿ ಯೂ ಹೆದರಿಕೆ ಹುಟ್ಟುವಂತೆ ಆಗಿದೆ. ಈ ಬಗ್ಗೆ ನ್ಯಾಯಾಲಯಗಳು ಸೂಕ್ಷ್ಮವಾಗಿ ಅತ್ಯಾಚಾರ ಪ್ರಕರಣಗಳನ್ನು ‌ನೋಡಬೇಕು ಎಂದು ತಿಳಿಸಿದ್ದಾರೆ. 

ವೈದ್ಯೆ ರೇಪ್, ಕೊಲೆ ಪ್ರಕರಣ: ನಾಲ್ವರೂ ಆರೋಪಿಗಳು ಪೊಲೀಸ್ ಎನ್‌ಕೌಂಟರ್‌ಗೆ ಬಲಿ!

ಕಾಮುಕರನ್ನು ಎನ್‌ಕೌಂಟರ್ ಮಾಡಿದ್ದರಿಂದ ದೇಶಾದ್ಯಂತ ಸಂಭ್ರಮಾಚರಣೆ ನಡೆಯುತ್ತಿದೆ. ಹೈದರಾಬಾದ್ ಪೊಲೀಸರ ಕಾರ್ಯಕ್ಕೆ ದೇಶದ ಜನತೆ ಸಲಾಂ ಹೊಡೆದಿದ್ದಾರೆ. 

ಹೈದರಾಬಾದ್ ಪಶು ವೈದ್ಯೆ ಮೇಲಿನ ರೇಪ್ ಹಾಗೂ ಕೊಲೆ ಪ್ರಕರಣ ಮಹತ್ವದ ತಿರುವು ಪಡೆದಿದೆ. ಪ್ರಕರಣದ ನಾಲ್ವರೂ ಆರೋಪಿಗಳು ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾಗಿದ್ದಾರೆ. ಮಹಜರು ಮಾಡಲು ಆರೋಪಿಗಳನ್ನು ಘಟನಾ ಸ್ಥಳಕ್ಕೆ ಕರೆದೊಯ್ದಾಗ ಆರೋಪಿಗಳು ತಪ್ಪಿಸಲು ಯತ್ನಿಸಿದ್ದು, ಈ ವೇಳೆ ಬೇರೆ ವಿಧಿ ಇಲ್ಲದ ಪೊಲೀಸರು ಆರೋಪಿಗಳನ್ನು ಎನ್‌ಕೌಂಟರ್ ಮಾಡಿದ್ದಾರೆ. 
 

click me!