ನನ್ನ ಪತ್ನಿ ಶ್ವೇತಾಳಿಗೆ ಹಣದ ಆಮಿಷ ತೋರಿಸಿ ನೆರಳೇಕುಪ್ಪೆ ನವೀನ್ ಅವರ ವಿರುದ್ಧ ಷಡ್ಯಂತ್ರ ರೂಪಿಸಿ ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ಸುಳ್ಳು ದೂರು ದಾಖಲಿಸಲಾಗಿದೆ ಎಂದು ಮುತ್ತೂರು ಗ್ರಾಮದ ಮಹೇಶ್ ಆರೊಪಿಸಿದರು.
ಪಿರಿಯಾಪಟ್ಟಣ (aಅ.17): ನನ್ನ ಪತ್ನಿ ಶ್ವೇತಾಳಿಗೆ ಹಣದ ಆಮಿಷ ತೋರಿಸಿ ನೆರಳೇಕುಪ್ಪೆ ನವೀನ್ ಅವರ ವಿರುದ್ಧ ಷಡ್ಯಂತ್ರ ರೂಪಿಸಿ ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ಸುಳ್ಳು ದೂರು ದಾಖಲಿಸಲಾಗಿದೆ ಎಂದು ಮುತ್ತೂರು ಗ್ರಾಮದ ಮಹೇಶ್ ಆರೊಪಿಸಿದರು.
ಪಟ್ಟಣದಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಅ. 13 ರಂದು ಪಟ್ಟಣದ ಪೊಲೀಸ್ ಠಾಣೆ (Police Station) ಮುಂಭಾಗ ನನ್ನ ಪತ್ನಿ ನಿಂತಿದ್ದ ವೇಳೆ ಇಲ್ಲಿಗೆ ಏಕೆ ಬಂದಿದ್ದೀಯಾ ಎಂದು ನಾನು ಪ್ರಶ್ನಿಸಿದೆ. ನೇರಳೆ ಕುಪ್ಪೆ ನವೀನ್ ವಿರುದ್ಧ ಸುಳ್ಳು ದೂರು (Complaint ) ನೀಡಿದರೆ ಕೆಲವರು . 50,000 ನೀಡುವುದಾಗಿ ತಿಳಿಸಿದ್ದಾರೆ. ಈಗಾಗಲೇ . 10 ಸಾವಿರ ಮುಂಗಡ ಪಡೆದುಕೊಂಡಿದ್ದೇನೆ ಎಂದು ಹೇಳಿದರು.
undefined
ಸಮಾಜದಲ್ಲಿ ರಾಜಕೀಯವಾಗಿ ಬೆಳೆಯುತ್ತಿರುವ ನೇರಳ ಕುಪ್ಪೆ ನವೀನ್ ವಿರುದ್ಧ ಷಡ್ಯಂತ್ರ ರೂಪಿಸಲು ನಿನಗೆ ತಿಳಿಸಿದ್ದು ಯಾರು ಎಂದು ಕೇಳಿದಾಗ ನನ್ನ ಮಾತನ್ನು ಕೇಳದೆ ಸುಳ್ಳು ದೂರು ನೀಡಿದ್ದಾರೆ. ಈ ಸಂಬಂಧ ಹುಣಸೂರು ಡಿವೈಎಸ್ಪಿ ಅವರಿಗೆ ದೂರು ನೀಡಿ ಪ್ರಕರಣದ ಸತ್ಯ ಬಯಲು ಮಾಡುವಂತೆ ಕೋರಲಾಗಿದೆ ಎಂದರು.
ನೇರಳೆಕುಪ್ಪೆ ನವೀನ್ ಮಾತನಾಡಿ, ಹಂದಿ ಜೋಗಿ ಕಾಲೊನಿಯಲ್ಲಿನ ಆಸ್ತಿ ಕಬಳಿಸುತ್ತಿರುವವರ ವಿರುದ್ಧ ನಾನು ಹೋರಾಟ ಮಾಡಿರುವುದನ್ನು ಸಹಿಸದ ಕೆಲವರು ರಾಜಕೀಯವಾಗಿ ನನ್ನನ್ನು ತುಳಿಯುವ ಉದ್ದೇಶದಿಂದ ಸುಳ್ಳು ದೂರು ಕೊಡಿಸಿ ಎಫ್‌ಐಆರ್ ದಾಖಲಿಸಿದ್ದಾರೆ. ನಿಷ್ಪಕ್ಷಪಾತ ತನಿಖೆ ನಡೆಸಿದರೆ ಸತ್ಯ ಹೊರಬರಲಿದೆ. ನನ್ನ ರಾಜಕೀಯ ಬೆಳವಣಿಗೆ ಸಹಿಸದೆ ಕೆಲವರು ವ್ಯವಸ್ಥಿತವಾಗಿ ನಡೆಸುತ್ತಿರುವ ಷಡ್ಯಂತ್ರ ಪಿತೂರಿ ಮಾಡುತ್ತಿದ್ದಾರೋ ಅವರ ಹೆಸರನ್ನು ಶೀಘ್ರ ಬಹಿರಂಗಪಡಿಸುತ್ತೇನೆ ಎಂದು ಹೇಳಿದರು.
ಈ ವೇಳೆ ದೂರುದಾರ ಮಹಿಳೆಯ ಅತ್ತೆ ಪದ್ಮ, ಭಾವ ಮಂಜು, ವಾರಗಿತ್ತಿ ಹೇಮಾ ಅವರು ನೇರಳಕುಪ್ಪೆ ನವೀನ್ ವಿರುದ್ಧ ಶ್ವೇತ ಸುಳ್ಳು ದೂರು ದಾಖಲಿಸಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಸಂಗೊಳ್ಳಿ ರಾಯಣ್ಣ ಯುವ ಘರ್ಜನೆ ಸಂಘಟನೆ ತಾಲೂಕು ಅಧ್ಯಕ್ಷ ರೇಣು ಕುಮಾರ್, ಉತ್ತೇನಹಳ್ಳಿ ನವೀನ್, ಹಂದಿ ಜೋಗಿ ಕಾಲೊನಿ ನಿವಾಸಿ ನಾಗಮಣಿ, ವೆಂಕಟೇಶ್, ಯೋಗೇಶ್ ಮೊದಲಾದವರು ಇದ್ದರು.
ಏನಿದು ಕೇಸ್ : ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪದ ಮೇಲೆ ಬಿಜೆಪಿ ಮುಖಂಡ ಹಾಗೂ ಸಂಗೊಳ್ಳಿ ರಾಯಣ್ಣ ಯುವ ಘರ್ಜನೆ ರಾಜ್ಯ ಉಪಾಧ್ಯಕ್ಷ ನವೀನ್ ವಿರುದ್ಧ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಲೂಕಿನ ಮಹಿಳೆಯೊಬ್ಬರು ದೂರು ನೀಡಿದ್ದು, ಆಕೆಯ ಸಂಬಂಧಿಕರಾಗಿರುವ ನೇರಳೆಕುಪ್ಪೆ ನವೀನ್ ಮಹಿಳೆಯ ಪತಿಗೆ ಅವರ ಮನೆಯಲ್ಲೆ ಮದ್ಯ ಪಾನ ಮಾಡಿಸಿ ಅವರು ಎಚ್ಚರ ತಪ್ಪಿದ ನಂತರ ಅಸಭ್ಯವಾಗಿ ವರ್ತಿಸಿದ್ದಲ್ಲದೆ, ಅತ್ಯಾಚಾರಕ್ಕೆ ಯತ್ನಿಸಿದ್ದಾನೆ, ಅ. 7ರಂದು ಮುತ್ತೂರು ಗ್ರಾಮದಲ್ಲಿ ದೂರು ನೀಡಿರುವ ಮಹಿಳೆಯ ಮನೆಯಲ್ಲೇ ಘಟನೆ ನಡೆದಿದ್ದು, ಈ ವಿಚಾರವನ್ನು ಆಕೆ ತನ್ನ ಪತಿಗೆ ತಿಳಿಸಿದಾಗ ನೇರಳೆ ಕುಪ್ಪೆ ನವೀನ್ ನಮ್ಮ ಸಂಬಂಧಿಕರಾಗಿರುವುದರಿಂದ ನ್ಯಾಯಕ್ಕೆ ಸೇರಿಸಿ ಮಾತನಾಡೋಣ ಎಂದು ನನ್ನ ಪತಿ ಸಮಾಧಾನಪಡಿಸಿದ್ದು, ಯಾವುದೇ ಕ್ರಮ ಕೈಗೊಳ್ಳದ ಕಾರಣ ಪೊಲೀಸ್ ಠಾಣೆಗೆ ತಡವಾಗಿ ದೂರು ನೀಡಿರುವುದಾಗಿ ಮಹಿಳೆ ತಿಳಿಸಿದ್ದಾರೆ.
ನನ್ನ ಪತ್ನಿ ಶ್ವೇತಾಳಿಗೆ ಹಣದ ಆಮಿಷ ತೋರಿಸಿ ನೆರಳೇಕುಪ್ಪೆ ನವೀನ್ ಅವರ ವಿರುದ್ಧ ಷಡ್ಯಂತ್ರ
ಷಡ್ಯಂತ್ರ ರೂಪಿಸಿ ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ಸುಳ್ಳು ದೂರು ದಾಖಲಿಸಲಾಗಿದೆ
ಸಮಾಜದಲ್ಲಿ ರಾಜಕೀಯವಾಗಿ ಬೆಳೆಯುತ್ತಿರುವ ನೇರಳ ಕುಪ್ಪೆ ನವೀನ್ ವಿರುದ್ಧ ಷಡ್ಯಂತ್ರ