ಹೊಳೆನರಸೀಪುರ, ಟಿ. ನರಸೀಪುರ ಎರಡೇಕೆ, ಒಂದನ್ನು ತಲಕಾಡಾಗಿಸಿ

By Web DeskFirst Published 8, Sep 2018, 8:31 PM IST
Highlights

ಎರಡು ಕಡೆ ನರಸೀಪುರ ಎಂದು ಹೆಸರಿದೆ. ಆದ್ದರಿಂದ ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದ ಹೆಸರನ್ನು ಉಳಿಸಿಕೊಂಡು ಟಿ. ನರಸೀಪುರ ವಿಧಾನಸಭಾ ಕ್ಷೇತ್ರದ ಹೆಸರನ್ನು ಬದಲಿಸುವುದು ಸೂಕ್ತವಲ್ಲವೇ?

ತಲಕಾಡು ವಿಧಾನಸಭಾ ಕ್ಷೇತ್ರ ಎಂದಾಗಲಿ ರಾಜ್ಯದ ಹಾಸನ ಜಿಲ್ಲೆಯಲ್ಲಿ ಹೊಳೆನರಸೀಪುರ ವಿಧಾನಸಭಾ ಕ್ಷೇತ್ರವಿದೆ. ಅದೇ ರೀತಿಯಲ್ಲಿ ಮೈಸೂರು ಜಿಲ್ಲೆಯಲ್ಲಿ ಟಿ. ನರಸೀಪುರ ವಿಧಾನಸಭಾ ಕ್ಷೇತ್ರವಿದೆ. ಎರಡು ಕಡೆ ನರಸೀಪುರ ಎಂದು ಹೆಸರಿದೆ. ಆದ್ದರಿಂದ ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದ ಹೆಸರನ್ನು ಉಳಿಸಿಕೊಂಡು ಟಿ. ನರಸೀಪುರ ವಿಧಾನಸಭಾ ಕ್ಷೇತ್ರದ ಹೆಸರನ್ನು ಬದಲಿಸುವುದು ಸೂಕ್ತವಲ್ಲವೇ?

ರಾಜ್ಯ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ವಿಧಾನಸಭಾ ಕ್ಷೇತ್ರದ ಹೆಸರು ಮೇಲುಕೋಟೆ ವಿಧಾನಸಭಾ ಕ್ಷೇತ್ರ, ಪಾಂಡವಪುರ ತಾಲೂಕು ಎಂದು ಚಾಲ್ತಿಯಲ್ಲಿರುವುದು ನಮಗೆಲ್ಲಾ ತಿಳಿದಿದೆ. ಇಲ್ಲಿ ತಾಲೂಕಿನ ಹೆಸರನ್ನು ಹೆಸರಿಸದೆ ರಾಜ್ಯದ ಅತ್ಯಂತ ಪವಿತ್ರವಾದ ಧಾರ್ಮಿಕವಾದ, ಮೇಲುಕೋಟೆ ಹೆಸರನ್ನು ನಾಮಕರಣ ಮಾಡಿ ಬಳಕೆಯಾಗುತ್ತಾ ಇರುವುದು ಅತ್ಯಂತ ಸಂತಸದ ಸಂಗತಿ, ಸೂಕ್ತವಾದ ವಿಚಾರ. 

ಆದ್ದರಿಂದ ರಾಜ್ಯ ಸರ್ಕಾರ, ಚುನಾವಣಾ ಆಯೋಗ, ಜನಪ್ರತಿನಿಧಿಗಳು, ಟಿ. ನರಸೀಪುರ ವಿಧಾನಸಭಾ ಕ್ಷೇತ್ರವನ್ನು ತಲಕಾಡು ವಿಧಾನಸಭಾ ಕ್ಷೇತ್ರ, ಟಿ. ನರಸೀಪುರ ತಾಲೂಕು ಎಂದು ನಾಮಕರಣ ಮಾಡಲು ಪ್ರಯತ್ನಿಸುವರೆಂದು ಮುಂದಾಗುವರೆಂದು ಆಶಿಸೋಣವೇ?

-  ಶ್ವೇತ್ರಾದ್ರೀಶ ತಲಕಾಡು

Last Updated 9, Sep 2018, 8:52 PM IST