ಚಿಕ್ಕಮಗಳೂರು: ಸಂಪೂರ್ಣ ಗುಂಡಿಮಯವಾದ ರಾಜ್ಯ ಹೆದ್ದಾರಿ, ಸರ್ಕಾರಕ್ಕೆ ವಾಹನ ಸವಾರರ ಹಿಡಿಶಾಪ..!

By Girish Goudar  |  First Published Jun 6, 2024, 8:15 PM IST

ಕಳಸ ಕುದುರೆಮುಖ ಮಾರ್ಗವಾಗಿ ಮಂಗಳೂರಿಗೆ ತಲುಪವ ತನಕ ಬರೊಬ್ಬರಿ 45ಕಿಲೋ ಮೀಟರ್ ನಷ್ಟು ರೋಡ್ ಗುಂಡಿಮಯವಾಗಿದೆ. ರಸ್ತೆಯಲ್ಲಿ ದೊಡ್ಡ ದೊಡ್ಡ ಗುಂಡಿಗಳು ಬಿದ್ದಿರುವ ಕಾರಣ ವಾಹನ ಸವಾರರು ಗುಂಡಿ ತಪ್ಪಿಸಲು ಹೋಗಿ ಪ್ರಾಣಕ್ಕೆ ಕುತ್ತನ್ನು ತಂದುಕೊಂಡಿದ್ದಾರೆ. ಇಲ್ಲಿ ಹೋಗೋ ವಾಹನಗಳಿಗೆ ಸಮಯವೂ ನಿಗದಿಯಾಗಿದೆ. 45 ಕಿಲೋಮೀಟರ್ 1.30 ನಿಮಿಷ ಟೈಂ ಕೊಡ್ತಾರೆ ಅದ್ರೆ ಅಷ್ಟರಲ್ಲಿ ಹೋಗೋಕೆ ಸಾಧ್ಯವೇ ಇಲ್ಲ ಅಂತಿದ್ದಾರೆ ಪ್ರಯಾಣಿಕರು. 
 


ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು(ಜೂ.06):  ಕಾಫಿನಾಡು ಚಿಕ್ಕಮಗಳೂರಿನ ಕಳಸ ತಾಲೂಕಿನ ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿ ಬರುವ ರಾಜ್ಯ ಹೆದ್ದಾರಿ ರಸ್ತೆಯ ಮಾರ್ಗದಲ್ಲಿ ಸಂಚಾರಿಸುವ ವಾಹನ ಸವಾರರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. 

Latest Videos

undefined

45 ಕಿಲೋ ಮೀಟರ್ ಪಯಾಣ, ದಟ್ಟ ಕಾನನದ ನಡುವೆ ವಾಹನ ಸವಾರರು, ಪ್ರಯಾಣಿಕರು ಸಂಚಾರಿಸುವ ರಾಜ್ಯ ಹೆದ್ದಾರಿ. ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿ ಬರುವ ಕಾರಣ ವಾಹನ ಸವಾರರಿಗೆ ಇಲ್ಲಿ ಸಮಯವನ್ನು ನಿಗದಿ ಮಾಡಲಾಗಿದೆ. 45 ಕಿಲೋ ಮೀಟರ್ ಸಂಚರಿಸಲು 1.30 ನಿಮಿಷ ಸಮಯ ನಿಗದಿ ಮಾಡಲಾಗಿದೆ. ಆ ಸಮಯದಲ್ಲಿಯೇ ಸಾಗಬೇಕು ಅಂತ ಹೊರಟ್ರೆ ವಾಹನ ಸವಾರರು ಪರದಾಟ ನಡೆಸುವ ದುಸ್ಥಿತಿ ಎದುರಾಗಿದೆ. ಕಳೆದ ಒಂದು ವರ್ಷದಿಂದ ರಸ್ತೆ ಸಂಪೂರ್ಣವಾಗಿ ಗುಂಡಿಮಯವಾಗಿದ್ದು ವಾಹನ ಸವಾರರು ಸರ್ಕಾರಕ್ಕೆ ಹಿಡಿಶಾಪ ಹಾಕಿ ಸಂಚಾರಿಸುತ್ತಿದ್ದಾರೆ. 

ವಿಧಾನಪರಿಷತ್ ಸ್ಥಾನ: ಜೈ ಶ್ರೀರಾಮ್ ಘೋಷಣೆ ಕೂಗುತ್ತಾ ದತ್ತಾತ್ರೇಯ ದರ್ಶನ ಪಡೆದ ಸಿ.ಟಿ.ರವಿ

ದಕ್ಷಿಣ ಕನ್ನಡ ಜಿಲ್ಲೆಯ ಸಂಪರ್ಕ ಸೇತುವೆ : 

ಈ ಮಾರ್ಗ ದಕ್ಷಿಣ ಕನ್ನಡ ಜಿಲ್ಲೆಯ ಸಂಪರ್ಕ ಸೇತುವೆ ಆಗಿದೆ. ಕಳಸ ಕುದುರೆಮುಖ ಮಾರ್ಗವಾಗಿ ಮಂಗಳೂರಿಗೆ ತಲುಪವ ತನಕ ಬರೊಬ್ಬರಿ 45ಕಿಲೋ ಮೀಟರ್ ನಷ್ಟು ರೋಡ್ ಗುಂಡಿಮಯವಾಗಿದೆ. ರಸ್ತೆಯಲ್ಲಿ ದೊಡ್ಡ ದೊಡ್ಡ ಗುಂಡಿಗಳು ಬಿದ್ದಿರುವ ಕಾರಣ ವಾಹನ ಸವಾರರು ಗುಂಡಿ ತಪ್ಪಿಸಲು ಹೋಗಿ ಪ್ರಾಣಕ್ಕೆ ಕುತ್ತನ್ನು ತಂದುಕೊಂಡಿದ್ದಾರೆ. ಇಲ್ಲಿ ಹೋಗೋ ವಾಹನಗಳಿಗೆ ಸಮಯವೂ ನಿಗದಿಯಾಗಿದೆ. 45 ಕಿಲೋಮೀಟರ್ 1.30 ನಿಮಿಷ ಟೈಂ ಕೊಡ್ತಾರೆ ಅದ್ರೆ ಅಷ್ಟರಲ್ಲಿ ಹೋಗೋಕೆ ಸಾಧ್ಯವೇ ಇಲ್ಲ ಅಂತಿದ್ದಾರೆ ಪ್ರಯಾಣಿಕರು. 

ರಸ್ತೆ ಸಂಪೂರ್ಣ ಗುಂಡಿಮಯ, ವಾಹನ ಸವಾರರ ಪರದಾಟ  

ಇನ್ನೂ ಕಳಸ ತಾಲೂಕಿನ  ಚಿಕ್ಕಮಗಳೂರು ಜಿಲ್ಲೆಯಲ್ಲಿ ಇದ್ದರೂ ಇಲ್ಲಿನ ಜನರು ಅವಲಂಭಿತವಾಗಿರೋದು ದಕ್ಷಿಣ ಕನ್ನಡ ಉಡುಪಿಯನ್ನೇ. ಕುದುರೆಮುಖ ಘಾಟೆ ಇಳಿದ್ರೆ ಮಾತ್ರ ಎಲ್ಲವೂ ಲಭ್ಯ. ಎಮೆರ್ಜಿನ್ಸ್ ಕಾಯಿಲೆ ಬಂದ್ರೂ ದಕ್ಷಿಣ ಕನ್ನಡ ಉಡುಪಿಯನ್ನೇ ನಂಬಿಕೊಂಡಿರೋದು. ಈಗ ಕುದುರೆಮುಖ ಘಾಟ್ ರಸ್ತೆಯಂತೂ ಹಾಳಾಗಿರೋದ್ರಿಂದ ನಿತ್ಯ ಪರದಾಡುವಂತಾಗಿದೆ. ಬಸ್ ಗಳಲ್ಲಿ ಹೋಗೋಕು ಕಷ್ಟ ಎನಿಸಿದೆ. 

ಆರ್‌ಎಸ್‌ಎಸ್‌ ಸಂಘಟನೆ ದೇಶ ಕಟ್ಟುವ, ಪಕ್ಷ ಬೆಳೆಸುವುದನ್ನು ಕಲಿಸಿದೆ: ಡಾ.ಧನಂಜಯ ಸರ್ಜಿ

ಗುಂಡಿ ರಸ್ತೆಗಳಲ್ಲಿ ಹೋಗ್ತಾನೇ ಜನಪ್ರತಿನಿಧಿಗಳಿಗೆ ಹಿಡಿಶಾಪವೇ ಹಾಕ್ತಿದ್ದಾರೆ. ಇದಲ್ಲದೆ ನಕ್ಸಲ್ ಚಟುವಟಿಕೆ ಇದ್ದಾಗ ಇಲ್ಲಿರೋ ಗ್ರಾಮಗಳು ರಸ್ತೆಗಳು ಅಭಿವೃದ್ದಿ ಕಂಡ್ವು. ಆದ್ರೆ ಇತ್ತೀಚಿನ ದಿನಗಳಲ್ಲಿ ಕಾಡಂಚಿನ ಗ್ರಾಮಗಳನ್ನ ಕೇಳೋರು ಇಲ್ಲ. ಮುಂದೇ ಈ ರೀತಿ ಚಟುವಟಿಕೆಗಳು ಮತ್ತೆ ಅಭಿವೃದ್ದಿ ಹೆಸ್ರಲ್ಲಿ ಹುಟ್ಟುಕೊಂಡ್ರೆ ಯಾರು ಹೊಣೆ ಅಂತಾನೂ ಪ್ರಶ್ನಿಸ್ತಾ ಇದ್ದಾರೆ. ಅಲ್ಲದೆ ರಾಜ್ಯ ಹೆದ್ದಾರಿಯನ್ನ ಸರಿಪಡಿಸಿ ಇಲ್ಲದಿದ್ರೆ ಹೋರಾಟ ನಿಶ್ಚಿತ ಎನ್ನುವ ಎಚ್ಚರಿಕೆಯ್ನು ಸ್ಥಳೀಯರು, ವಾಹನ ಸವಾರರು ಸರ್ಕಾರಕ್ಕೆ ನೀಡಿದ್ದಾರೆ.  

ಒಟ್ಟಾರೆ ಆ 45 ಕಿಲೋ ಮೀಟರ್ ಪಯಣವಂತೂ ವಾಹನ ಸವಾರರಿಗೆ ಕಣ್ಣೀರು ತರಿಸುತ್ತಿದೆ. ಮೊದ್ಲೇ ದಟ್ಟ ಕಾನಾನ, ವನ್ಯಮೃಗಳ ತಾಣವಾಗಿರುವ ಈ ರಸ್ತೆಯಲ್ಲೇ ತುರ್ತು ಕಾರ್ಯ ಸೇರಿದಂತೆ ನಿತ್ಯ ಸಂಚರಿಸುವ ವಾಹನ ಸವಾರರು ಪರದಾಟ ನಡೆಸುವ ಸ್ಥಿತಿ ನಿರ್ಮಾಣವಾಗಿದೆ. 

click me!