ಬ್ರಿಗೇಡ್ ಗೇಟ್ ವೇ ಅಪಾರ್ಟ್ ಮೆಂಟ್ ಮೇಲೆ ಬೃಹತ್ ಸೌರ ವಿದ್ಯುತ್ ಸ್ಥಾವರ

By Suvarna News  |  First Published Oct 10, 2021, 11:15 AM IST
  • ಬ್ರಿಗೇಡ್ ಗೇಟ್ ವೇ ಆಪಾರ್ಟ್ ಮೆಂಟ್ ನಿವಾಸಿಗಳ ಸಂಘವು ಗ್ರೀನ್ ಇನಿಶಿಯೇಟಿವ್ ಯೋಜನೆಯಡಿಯಲ್ಲಿ  ಕ್ರಾಂತಿಕಾರಕ ಕಾರ್ಯಕ್ಕೆ ಮುನ್ನುಡಿ
  •  ಬ್ರಿಗೇಡ್ ಗೇಟ್ ವೇ ಆಪಾರ್ಟ್ ಮೆಂಟ್ ನ ಮೇಲ್ಛಾವಣಿಯಲ್ಲಿ ರೆನ್ ಎಕ್ಸೆಲ್ ಇಕೊಟೆಕ್ ಸಂಸ್ಥೆಯು ನಿರ್ಮಾಣ ಮಾಡಿರುವ ಬೃಹತ್ ಸೌರ ವಿದ್ಯುತ್ ಸ್ಥಾವರ 

ಬೆಂಗಳೂರು (ಅ.10):  ಬೆಂಗಳೂರಿನ (Bengaluru)ಯಶವಂತಪುರದಲ್ಲಿರುವ (Yashavantapura) ಬ್ರಿಗೇಡ್ ಗೇಟ್ ವೇ ಅಪಾರ್ಟ್ ಮೆಂಟ್ (Apartment) ನಿವಾಸಿಗಳ ಸಂಘವು ಗ್ರೀನ್ ಇನಿಶಿಯೇಟಿವ್ಯೋ (Green Initiative)ಯೋಜನೆಯಡಿಯಲ್ಲಿ  ಕ್ರಾಂತಿಕಾರಕ ಕಾರ್ಯಕ್ಕೆ ಮುನ್ನುಡಿ ಬರೆದಿದೆ.  ಬೆಂಗಳೂರಿನಲ್ಲಿ ಮೊಟ್ಟ ಮೊದಲ ಬಾರಿ ಬ್ರಿಗೇಡ್ ಗೇಟ್ ವೇ ಆಪಾರ್ಟ್ (Brigade gate way Apartment) ಮೆಂಟ್ ನ ಮೇಲ್ಛಾವಣಿಯಲ್ಲಿ ರೆನ್ ಎಕ್ಸೆಲ್ ಇಕೊಟೆಕ್ ಸಂಸ್ಥೆಯು ನಿರ್ಮಾಣ ಮಾಡಿರುವ ಬೃಹತ್ ಸೌರ ವಿದ್ಯುತ್ ಸ್ಥಾವರನ್ನು (solar power plant)  ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಉನ್ನತ ಶಿಕ್ಷಣ ಸಚಿವರಾದ ಡಾ. ಸಿ.ಎನ್. ಅಶ್ವತ್ಥ್ ನಾರಾಯಣ (Dr CN Ashwath Narayan) ಅವರು ಉದ್ಘಾಟಿಸಿದರು.

ಈ ವೇಳೆ ಮಾತನಾಡಿದ ಅವರು,  ಸಮಾಜಕ್ಕೆ ಒಳ್ಳೆ ಸಂದೇಶ ಕೊಡುವ ಕೆಲಸ ಬ್ರಿಗೇಡ್ ಗೇಟ್ ವೇ ಜನ ಮಾಡಿಕೊಂಡು ಬಂದಿದ್ದಾರೆ. ಪ್ರಕೃತಿಯನ್ನು ಕಾಪಾಡುವುದು, ನೀರನ್ನು ರೀಸೈಕಲ್ , ಕಸವನ್ನು (Garbage) ರೀಸೈಕಲ್ ಮಾಡುತ್ತಿದ್ದಾರೆ. ಅದಲ್ಲದೆ ಕರೆಂಟ್ ಉತ್ಪಾದನೆ ಕೂಡ ಸ್ವಯಂ ಪ್ರಯತ್ನ ಮಾಡುತ್ತಿದ್ದಾರೆ. ಭಾರತದಲ್ಲಿ (India) ಅತಿ ಹೆಚ್ಚು ಕರೆಂಟ್ (Electricity) ಉತ್ಪಾದನೆ ಮಾಡುತ್ತಿರುವ ಅಪಾರ್ಟ್ ಮೆಂಟ್ ಇದು. ಇಲ್ಲಿ 354.4 ಕಿಲೊ ವ್ಯಾಟ್ ಕರೆಂಟ್ ಉತ್ಪಾದನೆ ಮಾಡುತ್ತಿದ್ದಾರೆ ಎಂದು ಅಪಾರ್ಟ್ ಮೇಂಟ್ ಜನರ ಕಾರ್ಯವನ್ನು ಶ್ಲಾಘಿಸಿದರು. 

Tap to resize

Latest Videos

ರಾಜ್ಯದಲ್ಲಿ 30 ಸಾವಿರ ವಿದ್ಯಾರ್ಥಿಗಳಿಗೆ ಅಪ್ರೆಂಟಿಸ್‌ಷಿಪ್ ಗುರಿ

ಬಳಿಕ ರೆನ್ಎಕ್ಸ್‌ಸೋಲ್ ಇಕೋಟೆಕ್‌ ಸಂಸ್ಥೆಯ ( RenXSol-Ecotech) ಮಾಲೀಕರು ಹಾಗೂ ಮ್ಯಾನೇಜಿಂಗ್‌ ಡೈರೆಕ್ಟರ್‌ ಶ್ರೀನಿವಾಸ್ ಕುಮಾರ್, ಬ್ರಿಗೇಡ್ ಗೇಟ್ ವೇ ಅಪಾರ್ಟ್ ಮೆಂಟ್ ಮಾಲೀಕರ ಸಂಘದ ಈ ನವೀನ ಮತ್ತು ಸುಸ್ಥಿರ ಅಭಿವೃದ್ಧಿ ಉಪಕ್ರಮದ ಕುರಿತು ಪ್ರತಿಕ್ರಿಯಿಸಿದರು. "ಹಸಿರು ಮೂಲಸೌಕರ್ಯವನ್ನು ನಿರ್ಮಿಸಲು ಅಪಾರ್ಟ್‌ಮೆಂಟ್‌ ಸಂಘದ ಜೊತೆ ಪಾಲುದಾರಿಕೆ ಹೊಂದಿದ್ದಕ್ಕೆ ತಮಗೆ ಸಂತೋಷವಾಗಿದೆ ಮತ್ತು ಈ ಪ್ರಕ್ರಿಯೆಯಲ್ಲಿ ಬೆಂಗಳೂರು ಅಥವಾ ಭಾರತದಲ್ಲಿ ಅಪಾರ್ಟ್‌ಮೆಂಟ್ ಛಾವಣಿಯ ಮೇಲ್ಭಾಗದ ಜಾಗ ಅಥವಾ ವಸತಿ ಮೇಲ್ಛಾವಣಿಯ ಜಾಗವನ್ನು ಹೇಗೆ ಸೋಲಾರ್‌ ಶಕ್ತಿಯ ಉತ್ಪಾದನೆಗೆ ಉಪಯೋಗಿಸಬಹುದು ಎನ್ನುವುದನ್ನು ಸಾಬೀತು ಮಾಡಿದಂತಾಗಿದೆ ಎಂದಿದ್ದಾರೆ. ಹೀಗೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಇಂಧನ  ಉತ್ಪದನೆ ಮಾಡುವ ಮೂಲಕ ನಾವು ನೇರವಾಗಿ ಸರ್ಕಾರಕ್ಕೆ ಸಹಾಯ ಮಾಡಬಹುದಾಗಿದೆ. ಭವಿಷ್ಯದಲ್ಲಿ ಸೌರವಿದ್ಯುತ್‌ (Solar Power) ನಮ್ಮ ಏಕೈಕ ನವೀಕರಿಸಬಹುದಾದ ಶಕ್ತಿ ಮೂಲವಾದ ಕಾರಣ ಸಾಧ್ಯವಾದಷ್ಟು ನಾವು ನಮ್ಮ ಸಂಪನ್ಮೂಲಗಳನ್ನು ಬಳಸಿಕೊಳ್ಳುವತ್ತ ಚಿಂತಿಸಬೇಕು ಎಂದಿದ್ದಾರೆ. 

undefined

ಒಂದು ಅಂದಾಜಿನ ಪ್ರಕಾರ ಬ್ರಿಗೇಡ್ ಗೇಟ್ ವೇ ರೂಫ್ ಟಾಪ್ ಪವರ್ ಪ್ಲಾಂಟ್‌ನಲ್ಲಿ ಉತ್ಪತ್ತಿಯಾಗುವ ನವೀಕರಿಸಬಹುದಾದ ವಿದ್ಯುತ್ ಅಂದಾಜು ವಾರ್ಷಿಕ ಉತ್ಪಾದನೆಗೆ 4.78 ಲಕ್ಷ ಯೂನಿಟ್ಗಳು. ಅಂದರೆ ಪ್ರಸ್ತುತ ಅಂದಾಜು ಬಳಕೆಯ ಶೇ.69%ವರೆಗೆ ಇಂಧನ ಉಳಿಸಲು ಮತ್ತು ವಾರ್ಷಿಕವಾಗಿ 530 ಟನ್‌ಗಳಷ್ಟು ಇಂಗಾಲದ ಹೊರಸೂಸುವಿಕೆಯನ್ನು ತಗ್ಗಿಸಲು ಇದು ಸಹಾಯ ಮಾಡುತ್ತದೆ ಎನ್ನುತ್ತಾರೆ ಬ್ರಿಗೇಡ್ ಗೇಟ್ ವೇ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ಅಧ್ಯಕ್ಷ ಮಹೇಶ್ ಕುಮಾರ್ ಎನ್ ಎಲ್.

ಆಧುನಿಕ ತಾಂತ್ರಿಕತೆಯ ವೇಗದಲ್ಲಿ ನಾಗಾಲೋಟದಿಂದ ಚಲಿಸುತ್ತಿರುವ ವಿಶ್ವದರ್ಜೆಯ ನಗರಿ ಬೆಂಗಳೂರಿನಲ್ಲಿ ಈ ಬಗೆಯ ಸುಸ್ಥಿರ ಅಭಿವೃದ್ಧಿಯ ಪರಿಕ್ರಮಗಳು ನಿಜಕ್ಕೂ ಶ್ಲಾಘನೀಯವೆಂದು ವರ್ಣಿಸಲಾಗುತ್ತಿದೆ. ಈ ರೀತಿಯ ಪ್ರಕೃತಿ ಪ್ರಣೀತ ಅಭಿವೃದ್ಧಿ ಭವಿಷ್ಯದ ದೃಷ್ಟಿಕೋನದಲ್ಲಿ ಹೆಚ್ಚಿನ ಮಹತ್ವ ಗಳಿಸಿಕೊಂಡಿದೆ.  

ಉತ್ತರ ಕರ್ನಾಟಕದಲ್ಲಿ ಉದ್ಯಮ ಸ್ಥಾಪಿಸ ಬನ್ನಿ: ಸಚಿವ ಅಶ್ವತ್ಥ ನಾರಾಯಣ

ಕೋವಿಡ್ (Covid) ಲಾಕ್‌ಡೌನ್‌ಗಳ ಹೊರತಾಗಿಯೂ 45-75 ದಿನಗಳ ದಾಖಲೆಯ ಅವಧಿಯಲ್ಲಿ ಪೂರ್ಣಗೊಳಿಸಿ, 9, ಸೆಪ್ಟೆಂಬರ್, 2021ರಂದೇ ಕಾರ್ಯಾರಂಭ ಮಾಡಿದೆ. 1255 ಅಪಾರ್ಟ್‌ಮೆಂಟ್‌ಗಳನ್ನು ಒಳಗೊಂಡ 13ಕ್ಕೂ ಹೆಚ್ಚು ವಸತಿ ಗೋಪುರಗಳಿರುವ ಬ್ರಿಗೇಡ್ ಗೇಟ್‌ವೇ ಅಪಾರ್ಟ್‌ಮೆಂಟ್‌ಗಳ ಈ ಸೋಲಾರ್ ಮೇಲ್ಛಾವಣಿಯ ಸ್ಥಾಪನೆ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಕಾರ್ಯಗತಗೊಳಿಸಿರುವ ಒಂದು ಬೃಹತ್‌ ಸೋಲಾರ್‌ ಪ್ಲಾಂಟ್‌ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. 

400Wp, 72 ಸೆಲ್‌ಗಳು, Enphase-USA ನಿರ್ಮಿತ ಸೋಲಾರ್‌ ಮೈಕ್ರೋ ಇನ್ವರ್ಟರ್‌ಗಳ ಜೊತೆ ಮೊನೊ PERC ಕ್ರಿಸ್ಟಲಿನ್ ಟೆಕ್ನಾಲಜಿ ಸೋಲಾರ್‌ ಪ್ಯಾನಲ್‌ಗಳು REC-ಸಿಂಗಾಪುರ್ ನಲ್ಲಿ ತಯಾರಿಸಲಾದ 354.4 kW ಮೇಲ್ಛಾವಣಿಯ ಸೌರ ವಿದ್ಯುತ್ ಸ್ಥಾವರ ವ್ಯವಸ್ಥೆಯ ವಿಶೇಷವಾಗಿದೆ. ಇದರಲ್ಲಿ ಪ್ರತಿ ಸೋಲಾರ್‌ ಪ್ಯಾನಲ್‌ನಲ್ಲಿ ಒಂದು ಮೈಕ್ರೋ ಇನ್ವರ್ಟರ್‌ ಅಳವಡಿಸಲಾಗಿದೆ. ಹೀಗಾಗಿ ಅತ್ಯುತ್ತಮ ಸೌರಶಕ್ತಿ ಉತ್ಪಾದನೆಗೆ ಪ್ರತ್ಯೇಕವಾಗಿ ಸೋಲಾರ್ ಪ್ಯಾನಲ್‌ನ ಹಿಂದೆ ಎಸಿ ಔಟ್ ಪುಟ್ ಒದಗಿಸುತ್ತದೆ. ತನ್ಮೂಲಕ ಡಿಸಿ ವೋಲ್ಟೇಜ್ ಅನ್ನು ಪ್ಯಾನಲ್ ಮಟ್ಟಕ್ಕೆ ಮಾತ್ರ ಕಡಿಮೆ ಮಾಡುತ್ತದೆ. ಜಾಗತಿಕವಾಗಿ ಚಾಲ್ತಿಯಲ್ಲಿರುವ ವಿವಿಧ ಇನ್ವರ್ಟರ್ ತಂತ್ರಜ್ಞಾನಗಳಲ್ಲೇ ಇದು ಹೆಚ್ಚಿನ ಸುರಕ್ಷತೆಯನ್ನು ಒದಗಿಸುತ್ತದೆ ಎನ್ನಲಾಗುತ್ತಿದೆ. ಇದನ್ನು ವಸತಿ ಜಾಗಗಳಲ್ಲಿ ಅಳವಡಿಸಬಹುದಾದ ಉನ್ನತ ಮಟ್ಟದ ಅಗ್ನಿಶಾಮಕ ಸುರಕ್ಷತೆಯನ್ನು ಇದು ಹೊಂದಿದೆ ಎಂದು ಪ್ರಶಂಸಿಸಲಾಗಿದೆ. ನೆಟ್ ಮೀಟರಿಂಗ್ ಸೋಲಾರ್ ಪಾಲಿಸಿಯ ಅಡಿಯಲ್ಲಿ ಕೆಇಆರ್‌ಸಿ ಮತ್ತು ಬೆಸ್ಕಾಂ ಮಾರ್ಗಸೂಚಿಗಳ ಪ್ರಕಾರ ಇದನ್ನು ಬೈ ಡೈರೆಕ್ಷನಲ್ ಮೀಟರಿಂಗ್ ಮೂಲಕ ಸ್ಥಳಾಂತರಿಸಲಾಗಿದೆ. ಕರ್ನಾಟಕ ಸರ್ಕಾರ ಮತ್ತು ಬೆಸ್ಕಾಂ ಹಸಿರು ಶಕ್ತಿ ಮತ್ತು ಸೌರಶಕ್ತಿ ಬಳಕೆಯನ್ನು ಉತ್ತೇಜಿಸುವಲ್ಲಿ ಈ ತಂತ್ರಜ್ಞಾನ ಮುಂಚೂಣಿಯಲ್ಲಿದೆ. 

ಈ ಬೃಹತ್ ಹಸಿರು ಶಕ್ತಿ ಉಪಕ್ರಮ ವಿದ್ಯುತ್ ಬಿಲ್ ಉಳಿತಾಯದ ಜೊತೆಗೆ ಮುಂದಿನ ಪೀಳಿಗೆಯ ಮಕ್ಕಳ ಭವಿಷ್ಯವನ್ನು ರಕ್ಷಿಸಲು ಸಹಾಯ ಮಾಡುತ್ತದೆ. ಇದು ಪರೋಕ್ಷವಾಗಿ "ಇಂಧನ ಉಳಿತಾಯ, ನವೀಕರಿಸಬಹುದಾದ ಇಂಧನ ಉತ್ಪಾದಿನೆ" ಪರಿಕಲ್ಪನೆಯನ್ನು ಜಾರಿಗೆ ತಂದಿದೆ. ಆ ಮೂಲಕ ಉಳಿತಾಯದ ಶಕ್ತಿಯ ಉದ್ಯಮದ ಅಗತ್ಯವಿರುವ ಇತರ ಪ್ರದೇಶಗಳಲ್ಲಿ ಅಥವಾ ರೈತರು ಅಥವಾ ಇತರ ವಸತಿ ನಿವಾಸಗಳಲ್ಲಿ ಇಂಧನ ಉತ್ಪಾದನೆಗೆ ಬಳಸಲು ಅನುವು ಮಾಡಿಕೊಡುತ್ತದೆ ಎನ್ನಲಾಗುತ್ತಿದೆ. 

ಇಂದು, ಭಾರತ ಮತ್ತು ಅದರ ಸೌರಶಕ್ತಿ ಅವಕಾಶಗಳು ಸಂಪೂರ್ಣ ತಾಂತ್ರಿಕ ಸಾಮರ್ಥ್ಯ, ವಿಶ್ವಾಸಾರ್ಹತೆ ಹೊಂದಿವೆ. ಅನನ್ಯ ಸೌರವಿನ್ಯಾಸ, ಅತ್ಯುತ್ತಮ ಎಂಜಿನಿಯರಿಂಗ್ ಕೌಶಲ್ಯ ಮತ್ತು ಪರಿಪೂರ್ಣ ತರಬೇತಿ ಪಡೆದ ಮಾನವ ಸಂಪನ್ಮೂಲ ವಿಶ್ವದಲ್ಲೇ ಅತ್ಯುತ್ತಮವಾದ ಸೋಲಾರ್ ಪರಿಹಾರಗಳನ್ನು ಒದಗಿಸಲು ಮತ್ತು ದೀರ್ಘಾವಧಿಯ ಬಳಕೆಗಾಗಿ ಸ್ಪರ್ಧಿಸಲು ಸಮರ್ಥವಾಗಿದೆ. ಎಸ್ಕಾಂನ ಎಲ್ಲಾ ಗ್ರಾಹಕರಿಗೆ ಗ್ರಿಡ್ ಪವರ್ ಬಳಸಿ ವರ್ಷದಲ್ಲಿ ಕನಿಷ್ಠ 300 ದಿನಗಳವರೆಗೆ ಸೌರ ವಿದ್ಯುತ್ ಮೂಲಕ ತಮ್ಮ ದಿನದ ವಿದ್ಯುತ್ ಬಳಕೆಯಲ್ಲಿ ಭಾರೀ ಉಳಿತಾಯ ಗಳಿಸಿ ಮತ್ತು ಪ್ರಯೋಜನ ಪಡೆದುಕೊಳ್ಳುವ ಅವಕಾಶವಿದೆ. ಇನ್ನು ಡೀಸೆಲ್ ಜನರೇಟರ್‌ಗಳನ್ನು ಬಳಸುವ ಗ್ರಾಹಕರು ಸಹ ಸೌರಶಕ್ತಿ ಅಳವಡಿಸಿಕೊಂಡು ಉಳಿತಾಯದ ಜೊತೆ ಹೆಚ್ಚು ಲಾಭ ಪಡೆದುಕೊಳ್ಳಬಹುದು. ಈಗಾಗಲೆ ಅಸ್ತಿತ್ವದಲ್ಲಿರುವ ಗ್ರಿಡ್ ಅಥವಾ ಡೀಸೆಲ್ ಜೆನ್‌ಸೆಟ್‌ಗಳೊಂದಿಗೆ ಸೌರಶಕ್ತಿ ಸಂಯೋಜನೆಯ ಸಿಂಕ್ರೊನೈಸೇಷನ್‌ ನಿಂದ ಕನಿಷ್ಠ 0.99 ಪ್ಲಸ್ ಅಧಿಕ ವಿದ್ಯುತ್ ಉಳಿಕೆ ಸಾಧ್ಯವಿದೆ  

click me!