ಕುಡಿದ ಮತ್ತಲ್ಲಿ ಘೋರ ಕೃತ್ಯ : ಗರ್ಭಿಣಿ ಪತ್ನಿ, ಎರಡು ಮಕ್ಕಳು, ತಾಯಿಯ ಭೀಕರ ಕೊಲೆ

By Kannadaprabha News  |  First Published Apr 30, 2021, 2:38 PM IST

ವ್ಯಕ್ತಿಯೋರ್ವ ಕುಡಿದ ಮತ್ತಿನಲ್ಲಿ ಮಕ್ಕಳು ತುಂಬು ಗರ್ಭಿಣಿ ಪತ್ನಿ ತಾಯಿಯನ್ನು ಭೀಕರವಾಗಿ ಹತ್ಯೆ ಮಾಡಿದ ಘಟನೆ ನಡೆದಿದೆ. ಪತ್ನಿ ಶೀಲ ಶಂಕಿಸಿ ಈ ದುಷ್ಕೃತ್ಯ ಎಸಗಿದ್ದಾನೆ. 


 ಸರಗೂರು (ಏ.30):  ಕುಡಿದ ಅಮಲಿನಲ್ಲಿ ವ್ಯಕ್ತಿಯೊಬ್ಬ ಪತ್ನಿಯ ಶೀಲ ಶಂಕಿಸಿ ತುಂಬು ಗರ್ಭಿಣಿ ತನ್ನ ಪತ್ನಿ, ತಾಯಿ ಹಾಗೂ ಇಬ್ಬರು ಮಕ್ಕಳನ್ನು ಕಬ್ಬಿಣದ ರಾಡ್‌ನಿಂದ ಹೊಡೆದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಸರಗೂರು ತಾಲೂಕಿನ ಚಾಮೇಗೌಡನಹುಂಡಿ ಗ್ರಾಮದಲ್ಲಿ ಬುಧವಾರ ತಡರಾತ್ರಿ ನಡೆದಿದೆ. ತಾಲೂಕಿನ ಚಾಮೇಗೌಡನ ಹುಂಡಿ ಗ್ರಾಮದ ಮಣಿಕಂಠ ಸ್ವಾಮಿ (35) ಎಂಬಾತ ಈ ಅಮಾನವೀಯ ಕೃತ್ಯವನ್ನೆಸಗಿದ್ದಾನೆ.

ಶೀಲ ಶಂಕಿಸಿ ಮಣಿಕಂಠ ಸ್ವಾಮಿ ಆಗಾಗ್ಗೆ ಮನೆಯಲ್ಲಿ ಪತ್ನಿಯೊಂದಿಗೆ ಜಗಳವಾಡುತ್ತಿದ್ದ, ಈ ವಿಚಾರವಾಗಿ ತಡರಾತ್ರಿಯೂ ಸಣ್ಣಪುಟ್ಟಮಾತುಕತೆ ನಡೆದಿದ್ದು, ಕುಡಿದ ಅಮಲಿನಲ್ಲಿ ಮಧ್ಯರಾತ್ರಿ ಪತ್ನಿ ಗಂಗಾ (28), ತನ್ನ ತಾಯಿ ಕೆಂಪಾಲಮ್ಮ (60) ಹಾಗೂ ಇಬ್ಬರು ಪುಟ್ಟಮಕ್ಕಳಾದ ಸಾಮ್ರಾಟ್‌ (3) ರೋಹಿತ್‌ (2) ತಲೆಗೆ ರಾಡ್‌ನಿಂದ ಹೊಡೆಯುವ ಮೂಲಕ ಬರ್ಬರವಾಗಿ ಹತ್ಯೆ ಮಾಡಿದ್ದಾನೆ.

Latest Videos

undefined

ಬಾಗಲಕೋಟೆ; ಅನುಮಾನದ ಹುಳ, ಪತ್ನಿ ಮೇಲಿನ ಸಂಶಯ ಮಾಡಿಸಿದ ಕೊಲೆ

ಅಲ್ಲದೇ ಆರೋಪಿಯ ಪತ್ನಿಯು ತುಂಬು ಗರ್ಭಿಣಿಯಾಗಿದ್ದು, ಇಂದು ಅಥವಾ ನಾಳೆ ಹೆರಿಗೆಯಾಗುವ ಸೂಚನೆ ವೈದ್ಯರು ನೀಡಿದ್ದರು. ಹೆಗ್ಗನೂರಿನವರಾಗಿದ್ದ ಗಂಗ ಕಳೆದ 7 ವರ್ಷಗಳ ಹಿಂದೆ ಮಣಿಕಂಠ ಸ್ವಾಮಿಯನ್ನು ವಿವಾಹವಾಗಿದ್ದರು. ಎರಡು ದಿನಗಳ ಹಿಂದೆ ಹೆರಿಗೆ ಸಲುವಾಗಿ ತಮ್ಮ ಮಗಳನ್ನು ಹೆಗ್ಗನೂರಿನ ನಿವಾಸಕ್ಕೆ ಕರೆದೊಯ್ಯಲು ಗಂಗಳಾ ತಂದೆ ಮತ್ತು ತಾಯಿ ಮನೆಗೆ ಬಂದು ಒತ್ತಾಯಿಸಿದ್ದರೂ ಸಹ ಮಣಿಕಂಠ ಸ್ವಾಮಿ ಕಳುಹಿಸಿಲು ಒಪ್ಪಲಿಲ್ಲ ಎನ್ನಲಾಗಿದೆ.

ಕೊಲೆ ಮಾಡಿದ ಬಳಿಕ ಆರೋಪಿ ತನ್ನ ಮೂರು ಚಕ್ರದ ವಾಹನದೊಂದಿಗೆ ಪರಾರಿಯಾಗಿದ್ದ. ಘಟನೆ ನಡೆದ ಕೆಲ ಗಂಟೆಗಳಲ್ಲೆ ಸರಗೂರು ಠಾಣಾ ಪೊಲೀಸರು ಚುರುಕಿನ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.

ಸದ್ಯ ಈ ಘಟನೆ ಕುರಿತು ಮೃತ ಗಂಗಾಳ ಸಹೋದರ ಲೋಕೇಶ್‌ ದೂರು ನೀಡಿದ್ದು, ದೂರಿನ ಆಧಾರದ ಮೇಲೆ ಪ್ರಕರಣವನ್ನು ದಾಖಲಿಸಲಾಗಿದೆ. ಮೃತದೇಹಗಳನ್ನು ಎಚ್‌.ಡಿ. ಕೋಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಯಿತು.

ಸ್ಥಳಕ್ಕೆ ದಕ್ಷಿಣ ವಲಯ ಪೊಲೀಸ್‌ ಮಹಾ ನಿರೀಕ್ಷಕ ಪ್ರವೀಣ್‌ ಮಧುಕರ್‌ ಪವಾರ್‌, ಹೆಚ್ಚುವರಿ ಎಸ್ಪಿ ಶಿವಕುಮಾರ್‌, ಹುಣಸೂರು ವಿಭಾಗದ ಡಿವೈಎಸ್‌ಪಿ ರವಿಪ್ರಸಾದ್‌, ಸಿಪಿಐ ಆನಂದ್‌, ರಾಜೇಂದ್ರ, ಎಸ್‌ಐಗಳಾದ ಜಯಪ್ರಕಾಶ್‌, ದಿವ್ಯ, ಶ್ವಾನದಳದ ಪ್ರಸನ್ನ, ಅಂಬರೀಶ್‌ ಬೆರಳಚ್ಚು ತಜ್ಞರಾದ ಗುರುಪ್ರಸಾದ್‌, ಹರೀಶ್‌, ಸತೀಶ್‌ ಇದ್ದರು.

ಘಟನಾ ಸ್ಥಳದಲ್ಲಿ ಗ್ರಾಮಸ್ಥರು, ಅಕ್ಕಪಕ್ಕದ ಗ್ರಾಮದವರು ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದರು. ಘಟನೆಯಿಂದ ಈ ಗ್ರಾಮದಲ್ಲಿ ದುಃಖಕರವಾದ ವಾತಾವರಣವಿತ್ತು.

ಮುಖಂಡರಾದ ಶಂಭುಲಿಂಗ ನಾಯಕ, ಪುರದಕಟ್ಟೆಬಸವರಾಜು, ಗ್ರಾಪಂ ಅಧ್ಯಕ್ಷರು ಹಾಗೂ ಸದಸ್ಯರು ಇದ್ದರು.

click me!