ಫೇಸ್‌ಬುಕ್ ಲೈವ್ ನಲ್ಲಿ ಸಪ್ತಪದಿ ತುಳಿದ ಪ್ರೇಮಿಗಳು!

Aug 11, 2018, 9:53 PM IST

ತುಮಕೂರು(ಆಸ11): ಫೇಸ್‌ಬುಕ್ ಲೈವ್ ಮಾಡಿಕೊಂಡು ಪ್ರೇಮಿಗಳು ಸಪ್ತಪದಿ ತುಳಿದ ಘಟನೆ ಜಿಲ್ಲೆಯ ಮಧುಗಿರಿಯಲ್ಲಿ ನಡೆದಿದೆ. ಇಲ್ಲಿನ ಮಧುಗಿರಿ ಪಟ್ಟಣ ನಿವಾಸಿಗಳಾದ ಕಿರಣ್ ಹಾಗೂ ಅಂಜನಾ  ವಿವಾಹವಾದ ಜೋಡಿಗಳು.

ಪ್ರೇಮ ವಿವಾಹಕ್ಕೆ ಹುಡುಗಿ ಮನೆಯವರ ವಿರೋಧ ಇದ್ದ ಹಿನ್ನೆಲೆಯಲ್ಲಿ ಮನೆಯಿಂದ ಓಡಿ ಹೋಗಿ ಈ ಜೋಡಿ ವಿವಾಹವಾಗಿದೆ. ಅಲ್ಲದೇ ಮದುವೆಯಾಗುವ ದೃಶ್ಯವನ್ನು ಫೇಸ್ ಬುಕ್‌ನಲ್ಲಿ ಲೈವ್ ಮಾಡಿದ ಜೋಡಿ, ನಾವಿಬ್ಬರು ಒಪ್ಪಿ‌ ಮದುವೆಯಾಗಿದ್ದೇವೆ, ನಮ್ಮನ್ನು ದೂರ ಮಾಡಿದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ತಿಳಿಸಿದೆ.

ಈ ಕುರಿತು ಹೆಚ್ಚಿನ ಮಾಹಿತಿಗೆ ಈ ವಿಡಿಯೋ ನೋಡಿ...