ಪ್ರಜ್ವಲ್‌ ರೇವಣ್ಣನದ್ದು ಅತಿರೇಕದ ಹೇಯ ಕೃತ್ಯ: ಸಚಿವ ಎಂ.ಬಿ.ಪಾಟೀಲ್

By Kannadaprabha NewsFirst Published May 8, 2024, 9:43 AM IST
Highlights

ಪ್ರಜ್ವಲ್‌ನದ್ದು ಅತಿರೇಕದ ಹೇಯ ಕೃತ್ಯವಾಗಿದ್ದು, ಕಾನೂನು ಪ್ರಕಾರ ಆತನಿಗೆ ಕಠಿಣ ಶಿಕ್ಷೆ ಆಗಲಿದೆ ಎಂದು ಸಚಿವ ಎಂ.ಬಿ.ಪಾಟೀಲ್ ಹೇಳಿದರು.

ವಿಜಯಪುರ (ಮೇ.08): ಪ್ರಜ್ವಲ್‌ನದ್ದು ಅತಿರೇಕದ ಹೇಯ ಕೃತ್ಯವಾಗಿದ್ದು, ಕಾನೂನು ಪ್ರಕಾರ ಆತನಿಗೆ ಕಠಿಣ ಶಿಕ್ಷೆ ಆಗಲಿದೆ ಎಂದು ಸಚಿವ ಎಂ.ಬಿ.ಪಾಟೀಲ್ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾನೂನಿಗೆ ಪ್ರಜ್ವಲ್ ಹಾಜರಾಗಬೇಕು. ಕಾನೂನಿಗೆ ತಲೆಬಾಗಲೇಬೇಕು. ಈ ಪ್ರಕರಣದಿಂದ ಬಿಜೆಪಿಗೆ ಹಿನ್ನಡೆ ಆಗಲಿದ್ದು, ಹೆಣ್ಣುಮಕ್ಕಳು, ತಾಯಂದಿರು ವಿರೋಧವಾಗಿದ್ದಾರೆ ಎಂದರು.

ಪ್ರಜ್ವಲ್ ಸರೆಂಡರ್ ಆಗದೇ ಇರೋದಕ್ಕೆ ರಾಜ್ಯ ಸರ್ಕಾರದ ನಿರ್ಲಕ್ಷ್ಯ ಕಾರಣ ಎಂಬ ಪ್ರಧಾನಿ ಆರೋಪದ ಕುರಿತು ಮಾತನಾಡಿದ ಅವರು, ಕೇಂದ್ರ ನೋಟಿಸ್ ಕೊಡಬೇಕಿತ್ತು? ಲುಕ್‌ಔಟ್, ರೆಡ್ ಕಾರ್ನರ್ ನೋಟಿಸ್ ಕೊಡಬೇಕಿತ್ತು. ವಿದೇಶಾಂಗ ಸಚಿವರು ರಾಜ್ಯ ಸರ್ಕಾರದಲ್ಲಿ ಇರ್ತಾರಾ? ವಿಜಯ ಮಲ್ಯಗೆ ರಾಜ್ಯ ಸರ್ಕಾರ ನೋಟಿಸ್ ಕೊಡ್ತಾರಾ? ಪ್ರಕರಣ ಡೈವರ್ಟ್ ಮಾಡಲು ಹಾಗೇ ಹೇಳುತ್ತಿದ್ದಾರೆ ಎಂದು ದೂರಿದರು.

ಸಲ್ಮಾನ್‌ ಖಾನ್‌ ಮನೆಗೆ ಶೂಟೌಟ್: ಶೂಟರ್‌ಗಳಿಗೆ ಹಣ ನೀಡಿದ ಐದನೇ ಆರೋಪಿ ಬಂಧನ

ಪೆನ್‌ಡ್ರೈವ್ ಪ್ರಕರಣದಲ್ಲಿ ಡಿಸಿಎಂ ಡಿಕೆಶಿ ಕಾರಣ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಲು ನಿರಾಕರಿಸಿದ ಅವರು, ಅದಕ್ಕೆ ಡಿ.ಕೆ.ಶಿವಕುಮಾರ ಸ್ಪಷ್ಟನೆ ಕೊಡುತ್ತಾರೆ. ಎಂ.ಬಿ.ಪಾಟೀಲ್ ಅವರು ಸ್ಪಷ್ಟನೆ ಕೊಡಬೇಕಾ ಎಂದು ಪ್ರಶ್ನಿಸಿದರು. ಜಿಲ್ಲೆಯಲ್ಲಿ 6 ಜನ ಕಾಂಗ್ರೆಸ್ ಶಾಸಕರು ಇದ್ದೇವೆ. ಕಾಂಗ್ರೆಸ್ ಅಭ್ಯರ್ಥಿ ಗೆದ್ದೆಗೆಲ್ತಾರೆ. ಅಚ್ಚೇ ದಿನ್ ಬಂದಿಲ್ಲ. ಕಾಂಗ್ರೆಸ್‌ನಿಂದ ಅಚ್ಚೇ ದಿನ್ ಬರಲಿವೆ ಎಂದು ಜನ ಕಾಂಗ್ರೆಸ್‌ಗೆ ಮತ ಹಾಕುತ್ತಿದ್ದಾರೆ ಎಂದರು.

ಮತದಾನದ ಮೇಲೆ ಪರಿಣಾಮ ಬೀರುತ್ತೆ: ರೇವಣ್ಣ ವಿಷಯದಲ್ಲಿ ಕಾನೂನು ತನ್ನದೆಯಾದ ಕ್ರಮ ಕೈಗೊಳ್ಳುತ್ತದೆ. ಎಸ್‌ಐಟಿ ಇದೆ ನಾವು ಏನು ಮಾತನಾಡಬಾರದು. ಸತ್ಯ, ಅಸತ್ಯ ಹೊರಗೆ ಬರುತ್ತದೆ ಎಂದು ಸಚಿವ ಎಂ.ಬಿ.ಪಾಟೀಲ್ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಡಿ ಹಿಂದೆ ಕಾಂಗ್ರೆಸ್ ನಾಯಕರು ಇದ್ದಾರೆ ಎಂಬ ಆರೋಪ ವಿಚಾರಕ್ಕೆ ಮಾತನಾಡಿ, ಕಾಂಗ್ರೆಸ್ ನಾಯಕರು ಮಾಡೋಕೆ ಹೇಳಿದ್ರಾ?. ಇದು ಅತ್ಯಂತ ಹೀನ ಪ್ರಕರಣ, ಪ್ರಜ್ವಲ್ ಕೇಸ್ ಅತಿರೇಕವಾಯಿತು. ರಾಜ್ಯದಲ್ಲಿ ಹೆಚ್ಚಾಗುತ್ತಿರುವ ರಾಜಕಾರಣಿಗಳ ಹನಿಟ್ರಾಪ್ ಪ್ರಕರಣಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, ಹನಿಟ್ರ್ಯಾಪ್ ಕೀಳುತನ, ಆದರೆ, ಪ್ರಜ್ವಲ್ ಕೇಸ್ ಬೇರೆ. ಟ್ರ್ಯಾಪ್ ಸಿಡಿ ಬಿಡುಗಡೆಯಿಂದ ಜನರು ವಿಶ್ವಾಸ ಕಳೆದುಕೊಳ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಜ್ವಲ್ ಪ್ರಕರಣ ಮತದಾನದ ಮೇಲೆ ಪ್ರಭಾವ ಬೀರಲ್ಲ ಎಂದು ಬಿಜೆಪಿ-ಜೆಡಿಎಸ್ ನಾಯಕರ ಹೇಳಿಕೆ ವಿಚಾರಕ್ಕೆ ಕುಟುಗಿದ ಅವರು, ಪ್ರಜ್ವಲ್ ಪ್ರಕರಣ ಮತದಾನಕ್ಕೆ ಯಾಕೆ ಸಂಬಂಧ ಪಡಲ್ಲ. ಸಂಬಂಧ ಇರುತ್ತದೆ. ಮತದಾನದ ಮೇಲೆ ಸ್ವಲ್ಪ ಎಫೆಕ್ಟ್ ಆಗುತ್ತದೆ. ನಾವು ಇಂಥ ಕೆಲಸ ಮಾಡಿ ಅಂತ ಹೇಳೋಕೆ ಸಾಧ್ಯವಿಲ್ಲ. ಮತದಾನದ ಮೇಲೆ ಪ್ರಭಾವ ಬೀರೇ ಬೀರುತ್ತದೆ. ಮಹಿಳೆಯರು ಜೆಡಿಎಸ್ ಅಂದರೆ ಅಸಹ್ಯ ಪಡುತ್ತಿದ್ದಾರೆ. ಇದು ಪರಿಣಾಮ ಬೀರುತ್ತದೆ ಎಂದರು.

ಮತ ಪ್ರಮಾಣ ಘೋಷಣೆಯಲ್ಲಿ ವ್ಯತ್ಯಾಸ: ಮಲ್ಲಿಕಾರ್ಜುನ ಖರ್ಗೆ ಆಕ್ಷೇಪ

ಪ್ರಜ್ವಲ್ ಕೃತ್ಯ ಸೈಕೋ ಕೃತ್ಯ: ಇದಕ್ಕೆ ಸೈಕೋ ಎನ್ನುತ್ತಾರೆ. ಇಂಥ ಕೃತ್ಯ ಮಾಡಲು ತಂದೆ-ತಾಯಿ ಕೂಡ ಹೇಳಿರಲ್ಲ. ಪ್ರಜ್ವಲ್ ಮಾಡಿದ್ದು ಸತ್ಯ ಆಯ್ತು ಅಂದ್ರೆ ಇದೊಂದು ಹೇಯ ಕೃತ್ಯ. ಇದಕ್ಕೆ ಸೈಕೋ ಎನ್ನುತ್ತಾರೆ ಎಂದರು. ಪ್ರಜ್ವಲ್ ರೇವಣ್ಣ ಎಲ್ಲಿಯೇ ಇದ್ದರೂ ಹಿಡಿದು ತರುವುದು ಖಚಿತ. ಲೋಕಸಭೆ ಚುನಾವಣೆಯ ನಂತರ ಬಿಜೆಪಿ-ಜೆಡಿಎಸ್ ಸೇರಿ ಸರಕಾರ ರಚನೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅವರೇನು ಸರಕಾರ ಮಾಡುತ್ತಾರೆ. 135 ಶಾಸಕರು ಕಾಂಗ್ರೆಸ್‌ನವರು ಇದ್ದೇವೆ. ಪ್ರಜ್ವಲ್ ಪ್ರಕರಣದ ನಂತರ ಕೆಲವರು ಜೆಡಿಎಸ್‌ನ ತೊರೆದು ಕಾಂಗ್ರೆಸ್ ನತ್ತ ಬರಲಿದ್ದಾರೆ. ಹೀಗಿದ್ದಾಗ ಬಿಜೆಪಿ ಅವರು ಯಾರನ್ನು ತೆಗೆದುಕೊಂಡು ಸರಕಾರ ಮಾಡುತ್ತಾರೆ. ಇದೆಲ್ಲ ಆಗಲಾರದು, ಇದು ಅಸಾಧ್ಯ ಎಂದರು.

click me!