ಧಾರವಾಡ ನಗರದ ಕೃಷಿ ಇಲಾಖೆಯ ಜಂಟಿ ನಿರ್ದೇಶಕರ ಕಚೇರಿಯಲ್ಲಿನ ಮತಗಟ್ಟೆ ನಂ.180ರಲ್ಲಿ 20 ನಿಮಿಷ ಮತದಾರರನ್ನು ನಿಲ್ಲಿಸಿ ಊಟದ ವಿರಾಮ ನೀಡಿದ್ದು, ಇದೀಗ ಚರ್ಚೆಯ ವಿಷಯವಾಗಿದೆ.
ಧಾರವಾಡ(ಮೇ.08): ತಾಂತ್ರಿಕ ಕಾರಣ ಹೊರತುಪಡಿಸಿ ಯಾವುದೇ ಕಾರಣಕ್ಕೂ ಮತದಾನ ಪ್ರಕ್ರಿಯೆ ನಿಲ್ಲಿಸುವಂತಿಲ್ಲ ಎಂಬ ಚುನಾವಣಾ ಆಯೋಗದ ನಿಯಮ ಇದ್ದರೂ ಇಲ್ಲಿಯ ಮತಗಟ್ಟೆಯ ಸಿಬ್ಬಂದಿ ಊಟ ಮಾಡುವುದಕ್ಕಾಗಿ ಕೆಲ ಹೊತ್ತು ಮತದಾನ ನಿಲ್ಲಿಸಿ ಯಡವಟ್ಟು ಮಾಡಿಕೊಂಡಿದ್ದಾರೆ.
ನಗರದ ಕೃಷಿ ಇಲಾಖೆಯ ಜಂಟಿ ನಿರ್ದೇಶಕರ ಕಚೇರಿಯಲ್ಲಿನ ಮತಗಟ್ಟೆ ನಂ.180ರಲ್ಲಿ 20 ನಿಮಿಷ ಮತದಾರರನ್ನು ನಿಲ್ಲಿಸಿ ಊಟದ ವಿರಾಮ ನೀಡಿದ್ದು, ಇದೀಗ ಚರ್ಚೆಯ ವಿಷಯವಾಗಿದೆ.
Santosh Lad Interview: ಈ ಬಾರಿ ಪ್ರಹ್ಲಾದ ಜೋಶಿ ಗೆಲ್ತಾರಾ? ಈ ಬಗ್ಗೆ ಸಂತೋಷ್ ಲಾಡ್ ಹೇಳಿದ್ದೇನು ?
ಮಧ್ಯಾಹ್ನ 1.30ರ ಸುಮಾರಿಗೆ ಮತಗಟ್ಟೆಯ ಬಾಗಿಲು ಹಾಕಿಕೊಂಡು ಸಿಬ್ಬಂದಿ ಊಟ ಮಾಡಿದ್ದು, ಮತದಾನಕ್ಕೆ ಬಂದ ಮತದಾರರು ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾ ಚುನಾವಣಾಧಿಕಾರಿ ದಿವ್ಯಪ್ರಭು ತಿಳಿಸಿದ್ದಾರೆ.