Published : Mar 27, 2026, 07:31 AM ISTUpdated : Mar 27, 2026, 10:51 PM IST

Karnataka Latest News Live: ರೊಮಾನ್ಸ್​, ಕಿಸ್​, ಸ್ಕಿನ್​ ಷೋ ಬ್ಯಾನ್​ - Amrthadhaare ಜೈ ಭಾವಿ ಪತ್ನಿ ನಟಿ ರಾಧಾ ಭಗವತಿ ಹೇಳಿದ್ದೇನು

ಸಾರಾಂಶ

ಬೆಂಗಳೂರು: ರಾಜ್ಯದಲ್ಲಿ ವಿವಿಧ ಕಾರ್ಮಿಕ ಕಾಯ್ದೆಗಳಡಿ ನೋಂದಣಿಯಾಗಿರುವ ಉದ್ದಿಮೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ನೌಕರರಿಗೆ ಅವರ ಋತುಚಕ್ರದ ಸಮಯದಲ್ಲಿ ಮಾಸಿಕ ಒಂದು ದಿನದ ವೇತನಸಹಿತ ರಜೆ ನೀಡುವ ಸಂಬಂಧ ರಾಜ್ಯ ಸರ್ಕಾರದ ಹೊರಡಿಸಿರುವ ಅಧಿಸೂಚನೆ ಪ್ರಶ್ನಿಸಿ 17 ಮಹಿಳೆಯರೇ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

Radha and Ranav

10:51 PM (IST) Mar 27

ರೊಮಾನ್ಸ್​, ಕಿಸ್​, ಸ್ಕಿನ್​ ಷೋ ಬ್ಯಾನ್​ - Amrthadhaare ಜೈ ಭಾವಿ ಪತ್ನಿ ನಟಿ ರಾಧಾ ಭಗವತಿ ಹೇಳಿದ್ದೇನು

'ಅಮೃತಧಾರೆ' ಖ್ಯಾತಿಯ ರಾಣವ್ ಗೌಡ ಅವರನ್ನು ವರಿಸಲಿರುವ 'ಭಾರ್ಗವಿ ಎಲ್ಎಲ್​ಬಿ' ನಟಿ ರಾಧಾ ಭಗವತಿ, ತಮ್ಮ ಸಿನಿಮಾ ವೃತ್ತಿಜೀವನದ ಬಗ್ಗೆ ಮಾತನಾಡಿದ್ದಾರೆ. ಮದುವೆಯ ನಂತರ ಸಿನಿಮಾಗಳಲ್ಲಿ ರೊಮ್ಯಾನ್ಸ್, ಕಿಸ್ಸಿಂಗ್ ದೃಶ್ಯಗಳಲ್ಲಿ ನಟಿಸುವ ಬಗ್ಗೆ ಪ್ರಶ್ನೆ ಎದುರಾದಾಗ ನಟಿ ಹೇಳಿದ್ದೇನು?

Read Full Story

10:42 PM (IST) Mar 27

ಪತಿಯ ಸಾವಿನ ನೋವಲ್ಲೂ ಶಾಲೆಗೆ ಹಾಜರಾದ ಶಿಕ್ಷಕಿ - ವೈಯಕ್ತಿಕ ದುಃಖ ಬದಿಗಿಟ್ಟು ವಿದ್ಯಾರ್ಥಿಗಳಿಗೆ ಗಣಿತ ಪಾಠ

ಮೈಸೂರಿನ ಶಿಕ್ಷಕಿ ಜ್ಯೋತಿ ಅವರು, ಪತಿಯ ನಿಧನದ ದುಃಖದ ನಡುವೆಯೂ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಗಣಿತ ಪರೀಕ್ಷಾ ಸಿದ್ಧತೆಗಾಗಿ ಶಾಲೆಗೆ ಹಾಜರಾಗಿದ್ದಾರೆ. ತಮ್ಮ ವೈಯಕ್ತಿಕ ನೋವಿಗಿಂತ ವಿದ್ಯಾರ್ಥಿಗಳ ಭವಿಷ್ಯಕ್ಕೆ ಆದ್ಯತೆ ನೀಡಿದ ಅವರ ಈ ಕರ್ತವ್ಯನಿಷ್ಠೆಯು ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ.

Read Full Story

08:04 PM (IST) Mar 27

ಡಾಕ್ಟರ್​ ಪತ್ನಿಯಾಗಿ ಸಪ್ತಪದಿ ತುಳಿದ Puttakkana Makkalu ಸಂಜನಾ ಬುರ್ಲಿ - ಮದ್ವೆಯ ಅಪರೂಪದ​ ಫೋಟೋಸ್​ ಇಲ್ಲಿವೆ

ಪುಟ್ಟಕ್ಕನ ಮಕ್ಕಳು ಧಾರಾವಾಹಿ ಖ್ಯಾತಿಯ ನಟಿ ಸಂಜನಾ ಬುರ್ಲಿ ಅವರು ವೈದ್ಯರಾದ ಸಮರ್ಥ ಚೆನ್ನಗಿರಿ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ತಮ್ಮ ಮದುವೆಯ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಅವರ ಪತಿ ಹಾಗೂ ವೃತ್ತಿ ಜೀವನದ ಬಗ್ಗೆ ಈ ಲೇಖನ ಮಾಹಿತಿ ನೀಡುತ್ತದೆ.
Read Full Story

06:36 PM (IST) Mar 27

ಮಗಳಿಗೆ ಗಂಭೀರ ಕಾಯಿಲೆ! ಮಗುವಿನ ಈಗಿನ ಸ್ಥಿತಿ ಬಗ್ಗೆ ನಟ ವರುಣ್ ಧವನ್ ಹೇಳಿದ್ದೇನು?

ನನ್ನ ಮಗಳಿಗೆ ಡೆವಲಪ್‌ಮೆಂಟಲ್ ಡಿಸ್ಪ್ಲಾಸಿಯಾ ಆಫ್ ದಿ ಹಿಪ್ ಇತ್ತು. ಇದರಲ್ಲಿ ಸೊಂಟದ ಮೂಳೆ ಜಾರಿಕೊಳ್ಳುತ್ತದೆ. ಒಂದು ಕಾಲು ಉದ್ದ, ಇನ್ನೊಂದು ಗಿಡ್ಡ ಆಗಿ ನಡಿಗೆಯಲ್ಲಿ ವ್ಯತ್ಯಾಸವಾಗುತ್ತದೆ ಎಂದು ವರುಣ್ ಹೇಳಿದ್ದಾರೆ.

Read Full Story

06:31 PM (IST) Mar 27

ಐಷಾರಾಮಿ ಲ್ಯಾಂಬೋರ್ಗಿನಿಯನ್ನು ಫೇಕ್‌ ನಂಬರ್‌ ಪ್ಲೇಟ್‌ ಹಾಕಿ ಓಡಿಸ್ತಿದ್ದ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ!

ಬೆಂಗಳೂರಿನ ಅನಿಲ್ ಕುಂಬ್ಳೆ ವೃತ್ತದಲ್ಲಿ ಲ್ಯಾಂಬೋರ್ಗಿನಿ ಕಾರನ್ನು ಅಪಾಯಕಾರಿಯಾಗಿ ಡ್ರಿಫ್ಟಿಂಗ್ ಮಾಡಿದ್ದ ಮುತ್ತಪ್ಪ ರೈ ಪುತ್ರ ರಿಕಿ ರೈ ವಿರುದ್ಧ ಪ್ರಕರಣ ದಾಖಲಾಗಿದೆ. ತನಿಖೆ ವೇಳೆ, ಸಂಚಾರ ದಂಡ ತಪ್ಪಿಸಲು ಗುಜರಾತ್ ಮೂಲದ ಕಾರಿಗೆ ನಕಲಿ ನಂಬರ್ ಪ್ಲೇಟ್ ಬಳಸಿರುವುದು ಪತ್ತೆಯಾಗಿದೆ.

Read Full Story

05:49 PM (IST) Mar 27

ಸೋಶಿಯಲ್‌ ಮೀಡಿಯಾದಲ್ಲಿ ರಾಜ್‌ ಬಿ ಶೆಟ್ಟಿ, ರುಕ್ಷ್ಮಿಣಿ ವಸಂತ್‌ ಅನ್‌ಫಾಲೋ ಮಾಡಿದ ರಿಷಬ್‌ ಶೆಟ್ಟಿ

'ಕಾಂತಾರ' ಖ್ಯಾತಿಯ ರಿಷಬ್ ಶೆಟ್ಟಿ ಅವರು ಹೊಂಬಾಳೆ ಫಿಲ್ಮ್ಸ್ ನಂತರ ತಮ್ಮ ಆಪ್ತ ಗೆಳೆಯ ರಾಜ್ ಬಿ. ಶೆಟ್ಟಿ ಮತ್ತು ನಟಿ ರುಕ್ಮಿಣಿ ವಸಂತ್ ಅವರನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಅನ್‌ಫಾಲೋ ಮಾಡಿರುವುದು ಚಿತ್ರರಂಗದಲ್ಲಿ ಚರ್ಚೆಗೆ ಗ್ರಾಸವಾಗಿದೆ. 

Read Full Story

05:16 PM (IST) Mar 27

ಕೇರಳ ಬಸ್‌ನಲ್ಲಿ ದಾಖಲೆಯಿಲ್ಲದ 62.5 ಲಕ್ಷ ನಗದು ಹಣ ಸಾಗಿಸುತ್ತಿದ್ದ ಕನ್ನಡಿಗ ತ್ರಿಶೂರಿನಲ್ಲಿ ಬಂಧನ!

ಕೇರಳ ವಿಧಾನಸಭಾ ಚುನಾವಣೆಗೂ ಮುನ್ನ ನಡೆದ ವಾಹನ ತಪಾಸಣೆ ವೇಳೆ, KSRTC ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಕರ್ನಾಟಕದ ವ್ಯಕ್ತಿಯೊಬ್ಬರನ್ನು 62.5 ಲಕ್ಷ ರೂ. ನಗದಿನೊಂದಿಗೆ ಬಂಧಿಸಲಾಗಿದೆ. ಆಸ್ತಿ ವ್ಯವಹಾರಕ್ಕಾಗಿ ಹಣ ಸಾಗಿಸುತ್ತಿರುವುದಾಗಿ ಹೇಳಿಕೆ ನೀಡಿದ್ದರೂ, ಸೂಕ್ತ ದಾಖಲೆಗಳಿಲ್ಲದ ಕಾರಣ ಅಬಕಾರಿ ದಳವು ಹಣವನ್ನು ವಶಪಡಿಸಿಕೊಂಡು ಆದಾಯ ತೆರಿಗೆ ಇಲಾಖೆಗೆ ಹಸ್ತಾಂತರಿಸಿದೆ.
Read Full Story

04:50 PM (IST) Mar 27

ಕತೆ ಕಳ್ಳತನ.. ಸಾಕ್ಷಿ ಇದ್ದರೆ ಮಾತ್ರ ಪ್ರಕರಣವೇ? ಕಥೆಗಳನ್ನು ಹೇಗೆ ಕಾಪಾಡಿಕೊಳ್ಳಬೇಕು?

ಕಥೆಗಾರನಿಗೆ ತನ್ನ ಕಥೆಯ ಬಗ್ಗೆ ಎಷ್ಟು ಗೌರವ ಇರುತ್ತೆ ಅನ್ನೋದು ಮುಖ್ಯ ಅಂಶ. ನನಗೆ ಎಷ್ಟೋ ಜನ ಇನ್‌ಸ್ಟಾಗ್ರಾಂನಂಥ ಕಡೆಗಳಲ್ಲಿ ಕಥೆ ಕಳಿಸುತ್ತಾರೆ. ಛೇ, ತಮ್ಮ ಕಥೆಯ ಬಗ್ಗೆ ಕಿಂಚಿತ್‌ ಗೌರವವೂ ಇಲ್ಲವಲ್ಲ ಅನಿಸುತ್ತದೆ.

Read Full Story

04:40 PM (IST) Mar 27

ದಾವಣಗೆರೆ ಉಪ ಚುನಾವಣೆಯಲ್ಲಿ ಬಂಡಾಯ ಶಮನ - ಸಾದಿಕ್ ಪೈಲ್ವಾನ್ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ

ದಾವಣಗೆರೆ ಉಪ ಚುನಾವಣೆಯಲ್ಲಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಸಾದಿಕ್ ಪೈಲ್ವಾನ್, ಕಾಂಗ್ರೆಸ್ ಹಿರಿಯ ನಾಯಕರ ಸಂಧಾನದ ಬಳಿಕ ಚುನಾವಣಾ ಕಣದಿಂದ ಹಿಂದೆ ಸರಿದಿದ್ದಾರೆ. ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ನಡೆದ ಮಾತುಕತೆ ಯಶಸ್ವಿಯಾಗಿದ್ದು, ಯಾವುದೇ ಷರತ್ತುಗಳಿಲ್ಲದೆ ಪಕ್ಷದ ಅಧಿಕೃತ ಅಭ್ಯರ್ಥಿಗೆ ಬೆಂಬಲ ನೀಡುವುದಾಗಿ ಪೈಲ್ವಾನ್ ಘೋಷಿಸಿದ್ದಾರೆ.
Read Full Story

04:35 PM (IST) Mar 27

3 ತಿಂಗಳು, 58 ಸಿನಿಮಾಗಳು, 1 ಹಿಟ್ - ಓಟಿಟಿ, ಸ್ಯಾಟಲೈಟ್‌ ಕುಸಿತ, ಸಂಕಷ್ಟದಲ್ಲೇ ಕನ್ನಡ ಚಿತ್ರರಂಗ

ನಿರ್ಮಾಪಕರು ಸೋತು ಸುಣ್ಣವಾಗುತ್ತಿದ್ದಾರೆ. ಗೆಲುವಿಗೆ ತತ್ವಾರ ಉಂಟಾಗಿದೆ. ಈ ಎಲ್ಲಾ ಸಮಸ್ಯೆಗಲಿಗೂ ತಾತ್ವಿಕ ಪರಿಹಾರ ಕಂಡುಕೊಳ್ಳಲು ಸಂಬಂಧ ಪಟ್ಟವರು ಯಾರೂ ಮುಂದಾಗದೇ ಇರುವುದಕ್ಕೆ ಸುದೀರ್ಘ ನಿಟ್ಟುಸಿರು.

Read Full Story

04:28 PM (IST) Mar 27

ಅನಂತ್‌ ಅಂಬಾನಿಯ ವಂತರಾಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳ ಭೇಟಿ - ಕಿಡಿಕಿಡಿಯಾದ ಸಚಿವ ಈಶ್ವರ್‌ ಖಂಡ್ರೆಯಿಂದ ತನಿಖೆಗೆ ಆದೇಶ

ಗುಜರಾತ್‌ನ 'ವಂತಾರಾ' ವನ್ಯಜೀವಿ ಕೇಂದ್ರಕ್ಕೆ ಕರ್ನಾಟಕದ ಅರಣ್ಯಾಧಿಕಾರಿಗಳು ಭೇಟಿ ನೀಡುತ್ತಿರುವುದಕ್ಕೆ ಅರಣ್ಯ ಸಚಿವ ಈಶ್ವರ ಖಂಡ್ರೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಭೇಟಿಗಳ ಬಗ್ಗೆ 7 ದಿನಗಳಲ್ಲಿ ವರದಿ ನೀಡಲು ಆದೇಶಿಸಿದೆ.

Read Full Story

04:12 PM (IST) Mar 27

ಚಿತ್ರದುರ್ಗ - ಹಳೆ ವೈಷಮ್ಯ ರಾಜಿಗೆ ಒಪ್ಪದ ಯುವಕನನ್ನು ಕಲ್ಲು ಎತ್ತಿ ಹಾಕಿ ಮುಗಿಸಿದ ಮುದುಕಪ್ಪ!

ಚಿತ್ರದುರ್ಗ ತಾಲೂಕಿನ ಭೀಮಸಮುದ್ರ ಕ್ಯಾಂಪ್ ಗ್ರಾಮದಲ್ಲಿ ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಕಾಂತರಾಜ್ ಎಂಬ ವ್ಯಕ್ತಿಯನ್ನು ಕಲ್ಲಿನಿಂದ ಹೊಡೆದು ಹತ್ಯೆ ಮಾಡಲಾಗಿದೆ. ರಾಜಿಗೆ ಒಪ್ಪದಿದ್ದಕ್ಕೆ ಈ ಕೃತ್ಯ ನಡೆದಿದ್ದು, ಪೊಲೀಸರು ಆರೋಪಿ ನರಸಿಂಹಪ್ಪನನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.
Read Full Story

03:36 PM (IST) Mar 27

ದಕ್ಷಿಣ ಮಧ್ಯ ರೈಲ್ವೆ ಭರ್ಜರಿ ನೇಮಕಾತಿ, ಬರೋಬ್ಬರಿ 2801 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ!

ದಕ್ಷಿಣ ಮಧ್ಯ ರೈಲ್ವೆಯು 2801 ಅಪ್ರೆಂಟಿಸ್ ಹುದ್ದೆಗಳ ಭರ್ತಿಗಾಗಿ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಎಸ್‌ಎಸ್‌ಎಲ್‌ಸಿ, ಪಿಯುಸಿ, ಮತ್ತು ಐಟಿಐ ವಿದ್ಯಾರ್ಹತೆ ಹೊಂದಿರುವ ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
Read Full Story

03:13 PM (IST) Mar 27

ನಂಬಲು ಸಾಧ್ಯವಾಗುತ್ತಿಲ್ಲ, ಮದುವೆಯಾಗಿ ಆಗಲೇ ಒಂದು ತಿಂಗಳು.. - ಆಪ್ತ ಗೆಳತಿಯರಿಗೆ ಧನ್ಯವಾದ ಅರ್ಪಿಸಿದ ರಶ್ಮಿಕಾ-ವಿಜಯ್ ಜೋಡಿ!

ಇದು ನಂಬಲಾಗದ ಸಂಗತಿ! ಆದರೆ ಈ ಪಯಣದಲ್ಲಿ ನನ್ನ ಗೆಳತಿಯರು ನನಗೆ 'ರಕ್ಷಾ ಕವಚ'ದಂತೆ ನಿಂತರು. ಮದುವೆಯಾಗಬೇಕು ಎಂದು ನಿರ್ಧರಿಸಿದ ಕ್ಷಣದಿಂದ ಇಂದಿನವರೆಗೆ ಅವರ ಸಾಥ್ ಅದ್ಭುತ. ಈ ಪ್ರೀತಿ ಶಾಶ್ವತವಾದದ್ದು," ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ.

Read Full Story

02:01 PM (IST) Mar 27

ಪದ್ಮಶ್ರೀ ಹರೇಕಳ ಹಾಜಬ್ಬ ಸೇರಿ ಮೂರು ಕ್ಷೇತ್ರದ, ಮೂವರು ದಿಗ್ಗಜರಿಗೆ ಮಂಗಳೂರು ವಿವಿ ಗೌರವ ಡಾಕ್ಟರೇಟ್

ಮಂಗಳೂರು ವಿಶ್ವವಿದ್ಯಾಲಯವು ತನ್ನ 44ನೇ ಘಟಿಕೋತ್ಸವದಲ್ಲಿ ಮೂವರು ಗಣ್ಯರಿಗೆ ಗೌರವ ಡಾಕ್ಟರೇಟ್ ಘೋಷಿಸಿದೆ. ಶಿಕ್ಷಣ ಸೇವೆಗಾಗಿ ಪದ್ಮಶ್ರೀ ಹರೇಕಳ ಹಾಜಬ್ಬ, ಯಕ್ಷಗಾನ ಕ್ಷೇತ್ರಕ್ಕೆ ಸೂರಿಕುಮೇರು ಗೋವಿಂದ ಭಟ್ (ಮರಣೋತ್ತರ) ಮತ್ತು ದೈವ ನರ್ತನ ,ಶಿಕ್ಷಣಕ್ಕಾಗಿ ಡಾ. ರವೀಶ್ ಪಡುಮಲೆ ಈ ಗೌರವಕ್ಕೆ ಆಯ್ಕೆಯಾಗಿದ್ದಾರೆ. ಈ ಸಾಧಕರನ್ನು ಗೌರವಿಸುವ ಮೂಲಕ ವಿವಿಯು ಶಿಕ್ಷಣ, ಸಂಸ್ಕೃತಿ ಮತ್ತು ಸಮಾಜ ಸೇವೆಯ ಮಹತ್ವವನ್ನು ಎತ್ತಿ ಹಿಡಿದಿದೆ.

Read Full Story

01:39 PM (IST) Mar 27

'ಯಾಕಪ್ಪ ಹೊಡೆಯುತ್ತಿದ್ದೀರಿ...' ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ಮಾಡುತ್ತಿದ್ದವರ ಮೇಲೆ ಸ್ಥಳೀಯ ಪುಂಡರು ಹಲ್ಲೆ!

ಹಾಸನ ಜಿಲ್ಲೆಯ ಸಕಲೇಶಪುರದ ಬೆಟ್ಟದ ಭೈರವೇಶ್ವರ ದೇಗುಲದ ಬಳಿ ಪ್ರೀ-ವೆಡ್ಡಿಂಗ್ ಶೂಟಿಂಗ್ ಮಾಡುತ್ತಿದ್ದ ಫೋಟೋಗ್ರಾಫರ್‌ಗಳ ಮೇಲೆ ಸ್ಥಳೀಯ ಯುವಕರು ಹಲ್ಲೆ ನಡೆಸಿದ್ದಾರೆ. ಈ ವಿಚಾರವಾಗಿ ಮಾತಿನ ಚಕಮಕಿ ನಡೆದು, ಗಲಾಟೆ ತಾರಕಕ್ಕೇರಿದ್ದು, ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
Read Full Story

12:48 PM (IST) Mar 27

SSLC ಹಿಂದಿ ಪರೀಕ್ಷೆ ದಿನಾಂಕ ಮುಂದೂಡಿಕೆ ಬೆನ್ನಲ್ಲೇ ಹಿಂದಿ ಪರೀಕ್ಷೆ ವಿರುದ್ಧ ಕನ್ನಡ ಪರ ಸಂಘಟನೆಗಳ ಆಕ್ರೋಶ

ಮಹಾವೀರ ಜಯಂತಿಯ ಕಾರಣದಿಂದಾಗಿ, ಮಾರ್ಚ್ 30ರಂದು ನಡೆಯಬೇಕಿದ್ದ ಎಸ್‌ಎಸ್‌ಎಲ್‌ಸಿ ಹಿಂದಿ ಪರೀಕ್ಷೆಯನ್ನು ಮಾರ್ಚ್ 31ಕ್ಕೆ ಮುಂದೂಡಲಾಗಿದೆ. ಇದೇ ವೇಳೆ, ತ್ರಿಭಾಷಾ ಸೂತ್ರವನ್ನು ವಿರೋಧಿಸಿ ಹಿಂದಿ ಪರೀಕ್ಷೆಯನ್ನು ರದ್ದುಗೊಳಿಸಬೇಕೆಂದು ಕನ್ನಡ ಪರ ಸಂಘಟನೆಗಳು ಸರ್ಕಾರವನ್ನು ಒತ್ತಾಯಿಸಿವೆ, ಇದು ಹೊಸ ವಿವಾದಕ್ಕೆ ಕಾರಣವಾಗಿದೆ.
Read Full Story

12:11 PM (IST) Mar 27

ತಾನು ಆರ್ಡರ್ ಮಾಡಿದ ಪೊಂಗಲ್‌ಗೆ ಹೆಚ್ಚು ಬೆಲೆ ಚಾರ್ಜ್ ಮಾಡಿದ್ದಕ್ಕೆ ಸ್ವಿಗ್ಗಿ ವಿರುದ್ಧ ಮಾಜಿ ಸಂಸದೆ ಸುಮಲತಾ ಆಕ್ರೋಶ

ಮಾಜಿ ಸಂಸದೆ ಸುಮಲತಾ ಅಂಬರೀಶ್ ಅವರು ಸ್ವಿಗ್ಗಿಯಲ್ಲಿ ಆರ್ಡರ್ ಮಾಡಿದ ₹115ರ ಪೊಂಗಲ್‌ಗೆ ₹273 ಪಾವತಿಸಿದ್ದನ್ನು ಪ್ರಶ್ನಿಸಿದ್ದಾರೆ. ಆಹಾರದ ಮೂಲ ಬೆಲೆಗಿಂತ ಡೆಲಿವರಿ ಹಾಗೂ ಇತರೆ ಶುಲ್ಕಗಳು ಹೆಚ್ಚಿರುವುದರ ವಿರುದ್ಧ ಅವರು ಅಸಮಾಧಾನ ವ್ಯಕ್ತಪಡಿಸಿದ್ದು, ಇದು ಆನ್‌ಲೈನ್ ಆಹಾರ ವಿತರಣಾ ವೇದಿಕೆಗಳ ಶುಲ್ಕ ವ್ಯವಸ್ಥೆಯ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿದೆ.
Read Full Story

12:01 PM (IST) Mar 27

5 ದಿನಗಳ ಹಿಂದಷ್ಟೇ ಮಗುವಿಗೆ ಜನ್ಮ ನೀಡಿದ್ದ ಬಾಣಂತಿ ಆಸ್ಪತ್ರೆ ಮೇಲಿಂದ ಬಿದ್ದು ಸಾವು

newly mother died: ರಾಯಚೂರು ಜಿಲ್ಲೆಯ ಮಾನ್ವಿಯ ಖಾಸಗಿ ಆಸ್ಪತ್ರೆಯ ಮೇಲಿಂದ ಬಿದ್ದು 22 ವರ್ಷದ ಬಾಣಂತಿ ವಾಸವಿ ಸಾವನ್ನಪ್ಪಿದ್ದಾರೆ. ಅನಾರೋಗ್ಯಪೀಡಿತ ಮಗುವಿಗೆ ಹಾಲುಣಿಸಲು ಬಂದಿದ್ದ ಅವರ ಸಾವು ಅನುಮಾನಾಸ್ಪದವಾಗಿದ್ದು, ಆಸ್ಪತ್ರೆ ಆಡಳಿತದ ನಡೆ ಬಗ್ಗೆ ಸಂಬಂಧಿಕರು ಸಂಶಯ ವ್ಯಕ್ತಪಡಿಸಿದ್ದಾರೆ.

Read Full Story

11:44 AM (IST) Mar 27

Lockdown Rumours - ದೇಶದಲ್ಲಿ ಮತ್ತೆ ಲಾಕ್‌ಡೌನ್? ಸುಳ್ಳು ಸುದ್ದಿಗೆ ಕಿವಿಗೊಡಬೇಡಿ ಎಂದ ಕೇಂದ್ರ ಸರ್ಕಾರ

ದೇಶದಲ್ಲಿ ಮತ್ತೆ ಲಾಕ್‌ಡೌನ್ ಜಾರಿಯಾಗಲಿದೆ ಎಂಬ ವದಂತಿಗಳನ್ನು ಕೇಂದ್ರ ಸರ್ಕಾರ ತಳ್ಳಿಹಾಕಿದೆ. ಪಶ್ಚಿಮ ಏಷ್ಯಾ ಯುದ್ಧದ ಕುರಿತ ಪ್ರಧಾನಿ ಮೋದಿಯವರ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದ್ದು, ಯಾವುದೇ 'ಎನರ್ಜಿ ಲಾಕ್‌ಡೌನ್' ಇರುವುದಿಲ್ಲ, ಅಗತ್ಯ ವಸ್ತುಗಳ ಪೂರೈಕೆ ಸುಗಮವಾಗಿದೆ ಎಂದು ಸ್ಪಷ್ಟಪಡಿಸಿದೆ.

Read Full Story

11:26 AM (IST) Mar 27

ತುಮಕೂರು - ಸರಕಾರಿ ನೌಕರಿ ನಕಲಿ ಆದೇಶ ಪತ್ರ ತಯಾರಿಕಾ ಜಾಲ ಪತ್ತೆ, ಪ್ರಭಾವಿ ಸಚಿವರೊಬ್ಬರಿಗೆ ಸೇರಿದ ಆಪ್ತನ ಕೃತ್ಯ!

ತುಮಕೂರಿನಲ್ಲಿ ಸರ್ಕಾರಿ ಉದ್ಯೋಗದ ಆಮಿಷವೊಡ್ಡಿ, ಅರಣ್ಯ ಇಲಾಖೆಯ ನಕಲಿ ನೇಮಕಾತಿ ಆದೇಶ ನೀಡಿ ಲಕ್ಷಾಂತರ ರೂಪಾಯಿ ವಂಚಿಸುತ್ತಿದ್ದ ಜಾಲವನ್ನು ಅಧಿಕಾರಿಗಳು ಬಯಲಿಗೆಳೆದಿದ್ದಾರೆ. ರಾಜಕಾರಣಿಯೊಬ್ಬರ ಆಪ್ತನ ತೋಟದ ಶೆಡ್‌ನಲ್ಲಿ ಈ ವಂಚನೆ ನಡೆಯುತ್ತಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
Read Full Story

11:24 AM (IST) Mar 27

ಯಾದಗಿರಿ - ರಸ್ತೆಬದಿ ನವಜಾತ ಗಂಡು ಶಿಶು ಶವಪತ್ತೆ - ತಡರಾತ್ರಿ ಎಸೆದು ಹೋಗಿರುವ ಶಂಕೆ

ಯಾದಗಿರಿ ಜಿಲ್ಲೆಯ ಗುರಮಿಠಕಲ್ ಪಟ್ಟಣದಲ್ಲಿ ರಸ್ತೆ ಬದಿ ನವಜಾತ ಗಂಡು ಶಿಶುವಿನ ಶವ ಪತ್ತೆಯಾಗಿದೆ. ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಸಾಮಾಜಿಕ ಕಳಂಕಕ್ಕೆ ಅಂಜಿ ಮಗುವನ್ನು ಎಸೆದಿರಬಹುದು ಎಂದು ಶಂಕಿಸಲಾಗಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.
Read Full Story

10:59 AM (IST) Mar 27

ಮಂಡ್ಯ ಕುರುಬರ ಸಂಘದ ಅಧ್ಯಕ್ಷನಿಗೆ ಮಸಿ ಬಳಿದಿದ್ಯಾಕೆ? ಏನಿದು ವಿವಾದ?

ಅವಧಿ ಮುಗಿದರೂ ರಾಜೀನಾಮೆ ನೀಡದ ಮಂಡ್ಯ ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಎಂ.ಸುರೇಶ್ ಅವರಿಗೆ ಸದಸ್ಯರು ಘೇರಾವ್ ಹಾಕಿ ಪ್ರತಿಭಟಿಸಿದರು. ಈ ವೇಳೆ ಮಾತಿಗೆ ಜಗ್ಗದ ಅಧ್ಯಕ್ಷರ ಮೈಮೇಲೆ ಕಪ್ಪು ಮಸಿ ಎರಚಿ ಆಕ್ರೋಶ ವ್ಯಕ್ತಪಡಿಸಿದ್ದು, ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.
Read Full Story

10:42 AM (IST) Mar 27

Rama Navami 2026 - ಯಾರು ಆ ಪುರುಷ? ಸ್ವತಃ ಶ್ರೀರಾಮನನ್ನೇ ಕಾಡಿತ್ತು ಈ ಪ್ರಶ್ನೆ!

ವಾಲ್ಮೀಕಿಯ 'ಕೋ ನ್ವಸ್ಮಿನ್' ಎಂಬ ಪ್ರಶ್ನೆಯಿಂದ ಪ್ರಾರಂಭಿಸಿ, ರಾಮಾಯಣದ ಆದರ್ಶ ಪುರುಷನ ಹುಡುಕಾಟವನ್ನು ಈ ಲೇಖನವು ವಿವರಿಸುತ್ತದೆ. ರಾಮನ ಸಂಕೀರ್ಣ ವ್ಯಕ್ತಿತ್ವ, ಸ್ವತಃ ರಾಮನೇ 'ತಾನು ಯಾರು?' ಎಂದು ಕೇಳಿದ ಸಂದರ್ಭ ಮತ್ತು ಅಂತಿಮವಾಗಿ ರಾಮನೇ ಪರಿಪೂರ್ಣ ಮಾನವನೆಂಬ ಸತ್ಯ ಎಂಬುದನ್ನು ಇದು ಚರ್ಚಿಸುತ್ತದೆ.

Read Full Story

10:40 AM (IST) Mar 27

ಬಾಗಲಕೋಟೆ ರಂಗೇರಿದ ಕಣ - 12.37 ಲಕ್ಷ ರೂ ನಗದು ಜಪ್ತಿ, ಶ್ರೀರಾಮುಲು ಭರ್ಜರಿ ಪ್ರಚಾರ!

ಬಾಗಲಕೋಟೆ ಉಪ ಚುನಾವಣೆ ಹಿನ್ನೆಲೆಯಲ್ಲಿ, ನೀತಿ ಸಂಹಿತೆ ಜಾರಿಯಲ್ಲಿದ್ದು, ಧನ್ನೂರು ಚೆಕ್ ಪೋಸ್ಟ್‌ನಲ್ಲಿ ದಾಖಲೆ ಇಲ್ಲದ ₹12.37 ಲಕ್ಷ ನಗದನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಮತ್ತೊಂದೆಡೆ, ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಪರವಾಗಿ ಮಾಜಿ ಸಚಿವ ಶ್ರೀರಾಮುಲು ಭರ್ಜರಿ ಪ್ರಚಾರ ನಡೆಸಿದ್ದಾರೆ.
Read Full Story

10:16 AM (IST) Mar 27

GBA New logo - ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಹೊಸ ಲೋಗೊ ರೆಡಿ, ವಿಶೇಷತೆಗಳೇನು?

ಗ್ರೇಟರ್ ಬೆಂಗಳೂರು ಪ್ರಾಧಿಕಾರವು (GBA) ತನ್ನ ಹೊಸ ಲಾಂಛನವನ್ನು ಅನಾವರಣಗೊಳಿಸಲು ಸಜ್ಜಾಗಿದೆ. ಈ ಹೊಸ ಲೋಗೋದಲ್ಲಿ ಪಾರಂಪರಿಕ ಕೆಂಪೆಗೌಡ ಗೋಪುರದ ಜೊತೆಗೆ ಖಡ್ಗ ಹಿಡಿದ ಕೆಂಪೆಗೌಡರ ಚಿತ್ರಣವಿದ್ದು, ಮುಂಬರುವ ಬಜೆಟ್ ಪುಸ್ತಕದ ಮೇಲೆ ಇದು ಮುದ್ರಣಗೊಳ್ಳಲಿದೆ.

Read Full Story

09:56 AM (IST) Mar 27

ಎಲ್ಲರಿಗೂ ಮಧುಮೇಹ ಚಿಕಿತ್ಸೆ ಲಭ್ಯತೆ ಸವಾಲಿನ ಕೆಲಸ - ಡಾ.ಬಂಸಿ

ಮಧುಮೇಹ(ಟೈಪ್-1) ಚಿಕಿತ್ಸೆಯು ವೈದ್ಯಕೀಯ ತಂತ್ರಜ್ಞಾನದಲ್ಲಿ ಮಹತ್ತರ ಪ್ರಗತಿ ಸಾಧಿಸಿದ್ದರೂ, ಎಲ್ಲಾ ವರ್ಗದ ಜನರಿಗೆ ಈ ಸೇವೆಗಳು ಸಮಾನವಾಗಿ ಲಭ್ಯವಾಗುವಂತೆ ಮಾಡುವುದು ಒಂದು ದೊಡ್ಡ ಸವಾಲಾಗಿದೆ

Read Full Story

09:56 AM (IST) Mar 27

ಬೆಂಗಳೂರು - ಗೂಗಲ್ ಮ್ಯಾಪ್ ಅವಾಂತರ, ನಿಂತಿದ್ದ ಕಾರಿಗೆ ಲೋಡ್‌ ತುಂಬಿದ ಲಾರಿ ಗುದ್ದಿ ನಿದ್ದೆಯಲ್ಲಿದ್ದ ಯುವಕ ಸಜೀವ ದಹನ!

ಬೆಂಗಳೂರಿನ ಕುರುಬರಹಳ್ಳಿಯಲ್ಲಿ ಗೂಗಲ್ ಮ್ಯಾಪ್ ಅನುಸರಿಸಿ ಬಂದ ಓವರ್‌ಲೋಡ್ ಲಾರಿಯೊಂದು ನಿಯಂತ್ರಣ ತಪ್ಪಿ ನಿಂತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ. ಈ ಭೀಕರ ಅಪಘಾತದಲ್ಲಿ ಕಾರಿನಲ್ಲೇ ಮಲಗಿದ್ದ 23 ವರ್ಷದ ಕ್ಯಾಬ್ ಚಾಲಕ ಸಜೀವ ದಹನವಾಗಿ ದಾರುಣವಾಗಿ ಸಾವನ್ನಪ್ಪಿದ್ದಾನೆ. ಈ ಘಟನೆಯು ನಿಷೇಧಿತ ಮಾರ್ಗಗಳಲ್ಲಿ ಭಾರೀ ವಾಹನಗಳ ಸಂಚಾರದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
Read Full Story

09:53 AM (IST) Mar 27

ಎಲ್ಲರಿಗೂ ಮಧುಮೇಹ ಚಿಕಿತ್ಸೆ ಲಭ್ಯತೆ ಸವಾಲಿನ ಕೆಲಸ - ಡಾ.ಬಂಸಿ

ಮಧುಮೇಹ(ಟೈಪ್-1) ಚಿಕಿತ್ಸೆಯು ವೈದ್ಯಕೀಯ ತಂತ್ರಜ್ಞಾನದಲ್ಲಿ ಮಹತ್ತರ ಪ್ರಗತಿ ಸಾಧಿಸಿದ್ದರೂ, ಎಲ್ಲಾ ವರ್ಗದ ಜನರಿಗೆ ಈ ಸೇವೆಗಳು ಸಮಾನವಾಗಿ ಲಭ್ಯವಾಗುವಂತೆ ಮಾಡುವುದು ಒಂದು ದೊಡ್ಡ ಸವಾಲಾಗಿದೆ

Read Full Story

08:48 AM (IST) Mar 27

ಉದ್ಘಾಟನೆಯಾಗದ ಲಿಫ್ಟ್ - ಫ್ಲಾಟ್ ಫಾರ್ಮಿಂದ ಹೊರಗೆ ಬರಲು ಪಡಬಾರದ ಕಷ್ಟಪಟ್ಟ ಕಾಲಿಲ್ಲದ ಯುವಕ

disabled person struggles at station: ಕೊಪ್ಪಳ ರೈಲ್ವೆ ನಿಲ್ದಾಣದಲ್ಲಿ ಹೊಸದಾಗಿ ನಿರ್ಮಿಸಲಾದ ಎಸ್ಕಲೇಟರ್ ಮತ್ತು ಲಿಫ್ಟ್ ಉದ್ಘಾಟನೆಯಾಗದ ಕಾರಣ, ಚಿಕಿತ್ಸೆಗಾಗಿ ಬಂದ ವಿಶೇಷಚೇತನ ವ್ಯಕ್ತಿಯೊಬ್ಬರು ಮೆಟ್ಟಿಲುಗಳ ಮೇಲೆ ತೆವಳುತ್ತಾ ಸಾಗಬೇಕಾದ ದಯನೀಯ ಸ್ಥಿತಿ ನಿರ್ಮಾಣವಾಗಿತ್ತು.

Read Full Story

08:46 AM (IST) Mar 27

Karnataka By Election 2026 - ಬಾಗಲಕೋಟೆಗೆ ಸತೀಶ್‌, ದಾವಣಗೆರೆಗೆ ಲಕ್ಷ್ಮಿ ಉಸ್ತುವಾರಿ, ಎರಡೂ ಕ್ಷೇತ್ರಗಳಿಗೆ ಸ್ಟಾರ್ ಪ್ರಚಾರಕರಾಗಿ ಲಕ್ಷ್ಮಣ್ ಸವದಿ!

Karnataka By Elections ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಲು ಕಾಂಗ್ರೆಸ್, ಬೆಳಗಾವಿಯ ಪ್ರಭಾವಿ ನಾಯಕರಾದ ಸತೀಶ್ ಜಾರಕಿಹೊಳಿ, ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಲಕ್ಷ್ಮಣ ಸವದಿಗೆ ಮಹತ್ವದ ಜವಾಬ್ದಾರಿ ನೀಡಿದೆ.

Read Full Story

08:28 AM (IST) Mar 27

ಉತ್ತರ ಕೊಡಲು ಡಿಸಿಎಂಗೆ ತಾಕತ್‌ ಇಲ್ಲ - ಮುನಿರತ್ನ, ನಿನ್ನಂತಹ ಪುಡಿ ರೌಡಿಗೆ ನಾನು ಹೆದರಲ್ಲ ಎಂದ ಡಿಕೆಶಿ !

ಬೆಂಗಳೂರು ನಗರ ಅಭಿವೃದ್ಧಿ ಚರ್ಚೆಯ ವೇಳೆ ವಿಧಾನಸಭೆಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್‌ ಮತ್ತು  ಮುನಿರತ್ನ ನಡುವೆ ತೀವ್ರ ವಾಗ್ವಾದ ನಡೆಯಿತು. 'ತಾಕತ್ ಇಲ್ಲ' ಎಂಬ ಮುನಿರತ್ನರ ಸವಾಲಿಗೆ ಕೆರಳಿದ ಡಿಕೆಶಿ, ಅವರನ್ನು 'ಪುಡಿ ರೌಡಿ, ರೇ ಪಿಸ್ಟ್‌' ಎಂದು ನಿಂದಿಸಿದ್ದು ಕೋಲಾಹಲಕ್ಕೆ ಕಾರಣವಾಯಿತು. 

Read Full Story

08:09 AM (IST) Mar 27

ಶಾಲೆಗಳಲ್ಲಿ ವಂದೇ ಮಾತರಂ ಕಡ್ಡಾಯ ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ - ಏ.9ಕ್ಕೆ ವಿಚಾರಣೆ | ಏನಿದು ಪ್ರಕರಣ?

ಶಾಲೆಗಳಲ್ಲಿ 'ವಂದೇ ಮಾತರಂ' ಗೀತೆಯನ್ನು ಕಡ್ಡಾಯವಾಗಿ ಹಾಡಬೇಕೆಂಬ ಕೇಂದ್ರ ಸರ್ಕಾರದ ಮಾರ್ಗಸೂಚಿಯನ್ನು ಅಸಾಂವಿಧಾನಿಕ ಎಂದು ಘೋಷಿಸುವಂತೆ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆ.. ಇದೇ ರೀತಿಯ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿರುವ ಹಿನ್ನೆಲೆ ಹೈಕೋರ್ಟ್ ವಿಚಾರಣೆಯನ್ನು ಏಪ್ರಿಲ್ 9ಕ್ಕೆ ಮುಂದೂಡಿದೆ.

Read Full Story

07:59 AM (IST) Mar 27

ಮಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ರೌಡಿಶೀಟರ್ ಕೊಲೆ - ಮಾರಕಾಸ್ತ್ರಗಳಿಂದ ಕಡಿದು ಟಾಬ್ಲೆಟ್ ಆರಿಫ್ ಹತ್ಯೆ

Tablet Arif murder case: ಮಂಗಳೂರು ಹೊರವಲಯದ ತೊಕ್ಕೊಟ್ಟು ಫ್ಲೈಓವರ್‌ನಲ್ಲಿ ರೌಡಿಶೀಟರ್ ಆರಿಫ್ ಯಾನೆ ಟಾಬ್ಲೆಟ್ ಆರಿಫ್‌ನನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ಬೈಕ್‌ನಲ್ಲಿ ಹೋಗುತ್ತಿದ್ದ ಆರಿಫ್‌ಗೆ ಕಾರ್‌ನಿಂದ ಡಿಕ್ಕಿ ಹೊಡೆದು, ಮಾರಕಾಸ್ತ್ರಗಳಿಂದ ಕಡಿದು ಹತ್ಯೆ ಮಾಡಲಾಗಿದೆ.

Read Full Story

07:53 AM (IST) Mar 27

ದಾವಣಗೆರೆಯಲ್ಲಿ ಕಾಂಗ್ರೆಸ್‌ಗೆ ಬಂಡಾಯ ಬಿಸಿ

ಏ.9ರಂದು ನಡೆಯಲಿರುವ ದಾವಣಗೆರೆ ದಕ್ಷಿಣ ಕ್ಷೇತ್ರದ ಉಪ ಚುನಾವಣೆಗೆ ನಾಮಪತ್ರ ಹಿಂಪಡೆಯಲು ಗುರುವಾರ ಕೊನೆಯ ದಿನವಾಗಿದ್ದು, ಅಲ್ಪಸಂಖ್ಯಾತರು ಸೇರಿ 11 ಪಕ್ಷೇತರರು ನಾಮಪತ್ರ ಹಿಂಪಡೆದಿದ್ದಾರೆ. ಅಂತಿಮವಾಗಿ 31 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

Read Full Story

07:51 AM (IST) Mar 27

ಮುಡಾ ಕೇಸಲ್ಲಿ ಬಿ ರಿಪೋರ್ಟ್‌ ಪ್ರಶ್ನಿಸಿ ಅರ್ಜಿ - ಸಿಎಂ, ಲೋಕಾಯುಕ್ತಕ್ಕೆ ನೋಟಿಸ್‌

ಮುಡಾ ಸೈಟ್‌ ಅಕ್ರಮ ಹಂಚಿಕೆ ಆರೋಪ ಸಂಬಂಧ ಸಿಎಂ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತ ಪೊಲೀಸರು ಸಲ್ಲಿಸಿದ್ದ 'ಬಿ' ರಿಪೋರ್ಟ್‌ ಅನ್ನು ಜನಪ್ರತಿನಿಧಿಗಳ ಕೋರ್ಟ್‌ ಅಂಗೀಕರಿಸಿತ್ತು. ಈ ಕ್ರಮ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ಹಿನ್ನೆಲೆ, ಹೈಕೋರ್ಟ್‌ ಇದೀಗ ಸಿಎಂ ಸಿದ್ದರಾಮಯ್ಯಗೆ ನೋಟೀಸ್ ನೀಡಿದೆ.

Read Full Story

More Trending News