ಇಂದು ಯುಗಾದಿ ಹಬ್ಬದ ಸಂಭ್ರಮ. ರಾಜ್ಯದೆಲ್ಲೆಡೆ ಹಬ್ಬದ ವಾತಾವರಣ ಕಳೆಗೆಟ್ಟಿದೆ. ಬೆಂಗಳೂರಿನಲ್ಲಿ ಹಬ್ಬದ ಖರೀದಿ ಜೋರಾಗಿ ನಡೆಯುತ್ತಿದೆ. ಕೆಆರ್ ಮಾರುಕಟ್ಟೆಯಲ್ಲಿ ಕಿಕ್ಕಿರಿದು ಜನ ತುಂಬಿದ್ದಾರೆ. ಹೂವು,ಹಣ್ಣು, ಮಾವಿನ ಸೊಪ್ಪು, ಬೇವಿನಸೊಪ್ಪು ಖರೀದಿಸಲು ಜನರು ಮುಗಿಬಿದ್ದಿದ್ದಾರೆ. ಮಧ್ಯರಾತ್ರಿಯಿಂದಲೇ ಕೆ.ಆರ್ ಮಾರ್ಕೆಟ್ ನಲ್ಲಿ ವ್ಯಾಪಾರ ಆರಂಭಗೊಂಡಿದೆ. ಮತ್ತೊಂದೆಡೆ ರಾಜ್ಯದಲ್ಲಿ ರಾಜಕೀಯ ರಂಗು ಪಡೆದುಕೊಂಡಿದೆ. ಒಂದೆಡೆ ಉಪ ಚುನಾವಣೆ ಕಾವು ಏರತೊಡಗಿದರೆ ಮತ್ತೊಂದೆಡೆ ಮಂಡ್ಯದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ನಡುವಿನ ಮೈತ್ರಿ ಬಿಕ್ಕಟ್ಟು ತೀವ್ರಗೊಳ್ಳುತ್ತಿದೆ.

11:58 PM (IST) Mar 19
11:43 PM (IST) Mar 19
11:17 PM (IST) Mar 19
ಎರಡೂ ಕ್ಷೇತ್ರಗಳಲ್ಲಿ ಯಾವುದೇ ಬಂಡಾಯ ಇಲ್ಲ.ಬಾಗಲಕೋಟೆ ಹಾಗೂ ದಾವಣಗೆರೆ ಉಪ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಗೆಲುವು ಸಾಧಿಸಲಿದೆ ಎಂದು ಸಂಸದ ಗೋವಿಂದ ಕಾರಜೋಳ ವಿಶ್ವಾಸ ವ್ಯಕ್ತಪಡಿಸಿದರು.
11:16 PM (IST) Mar 19
ಇರಾನ್-ಅಮೆರಿಕಾ-ಇಸ್ರೇಲ್ ನಡುವಿನ ಸಂಘರ್ಷ ತೀವ್ರಗೊಂಡಿದ್ದು, ಅಮೆರಿಕದ ಎಫ್-35 ಫೈಟರ್ ಜೆಟ್ ಮೇಲೆ ಇರಾನ್ ದಾಳಿ ನಡೆಸಿದೆ ಎನ್ನಲಾಗಿದೆ. ಅಲ್ಲದೇ ತನ್ನ ಮೂಲಸೌಕರ್ಯಗಳ ಮೇಲೆ ಮತ್ತೊಮ್ಮೆ ದಾಳಿಯಾದರೆ ಸಂಯಮ ತೋರುವುದಿಲ್ಲ ಎಂದು ಇರಾನ್ ತನ್ನ ಶತ್ರುರಾಷ್ಟ್ರಗಳಾದ ಅಮೆರಿಕಾ ಹಾಗೂ ಇಸ್ರೇಲ್‌ಗೆ ಎಚ್ಚರಿಸಿದೆ.
11:02 PM (IST) Mar 19
10:33 PM (IST) Mar 19
ಬೆಂಗಳೂರಿನ ಯಶವಂತಪುರದಲ್ಲಿ, ಮನೆ ಮಾಲೀಕರು ಆಸ್ತಿ ಮಾರಾಟದ ನಂತರ ಯುವತಿಯೊಬ್ಬರಿಗೆ ನೀಡಬೇಕಿದ್ದ ₹70,000 ಸೆಕ್ಯೂರಿಟಿ ಡೆಪಾಸಿಟ್‌ನಲ್ಲಿ ₹52,000 ಕಡಿತಗೊಳಿಸಿ ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ. ತಮಗಾದ ಅನ್ಯಾಯದ ಬಗ್ಗೆ ಯುವತಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ವಿಡಿಯೋ ವೈರಲ್ ಆಗಿದೆ.
09:58 PM (IST) Mar 19
09:31 PM (IST) Mar 19
09:03 PM (IST) Mar 19
08:48 PM (IST) Mar 19
ಸರ್ಕಾರಿ ನೌಕರರ ವರ್ಗಾವಣೆಯಲ್ಲಿ ಮುಖ್ಯಮಂತ್ರಿಗಳ ಕಚೇರಿಯ ನೇರ ಹಸ್ತಕ್ಷೇಪಕ್ಕೆ ಕರ್ನಾಟಕ ಹೈಕೋರ್ಟ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ವರ್ಗಾವಣೆ ವಿಚಾರಗಳನ್ನು ಆಯಾ ಇಲಾಖೆಗಳಿಗೆ ಬಿಡಬೇಕು ಮತ್ತು ಸಿಎಂ ಇಂತಹ ಸಣ್ಣ ವಿಚಾರಗಳಲ್ಲಿ ಸಮಯ ವ್ಯಯಿಸಬಾರದು ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
08:46 PM (IST) Mar 19
ಮಾನವ-ಆನೆ ಸಂಘರ್ಷ ನಿಯಂತ್ರಣಕ್ಕೆ ತೋಡಲಾಗಿರುವ ಆನೆ ಕಂದಕ ಮತ್ತು ಅಳವಡಿಸಿರುವ ತೂಗು ಸೌರಬೇಲಿಯ ಸಮರ್ಪಕ ನಿರ್ವಹಣೆ ಮಾಡುವಂತೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಸ್ಪಷ್ಟ ಸೂಚನೆ ನೀಡಿದ್ದಾರೆ.
08:23 PM (IST) Mar 19
08:21 PM (IST) Mar 19
08:05 PM (IST) Mar 19
07:40 PM (IST) Mar 19
ಕೆಡಿ ಚಿತ್ರದ 'ಸೆರಗ ಸರ್ಸೆ' ಹಾಡಿನ ಅಶ್ಲೀಲ ಸಾಹಿತ್ಯದ ವಿವಾದ ಭುಗಿಲೆದ್ದಿದೆ. ನಿರ್ದೇಶಕ ಪ್ರೇಮ್ ಕ್ಷಮೆಯಾಚಿಸಿದ್ದರೆ, ನಟಿ ನೋರಾ ಫತೇಹಿ ಸಾಹಿತ್ಯದ ಅರ್ಥ ತಿಳಿದಿರಲಿಲ್ಲ ಎಂದಿದ್ದಾರೆ. ಈ ನಡುವೆ, ಗಾಯಕಿ ಐಶ್ವರ್ಯಾ ರಂಗರಾಜನ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯನ್ನೇ ಡಿಲೀಟ್ ಮಾಡಿದ್ದಾರೆ.
07:37 PM (IST) Mar 19
ಪ್ರಸಕ್ತ ವರ್ಷದಲ್ಲಿ ರಾಜ್ಯದ ಐದು ಸಾವಿರ ಅಂಗನವಾಡಿ ಕೇಂದ್ರಗಳಲ್ಲಿ ಸರ್ಕಾರಿ ಮಾಂಟೆಸ್ಸರಿ (ಎಲ್‌ಕೆಜಿ-ಯುಕೆಜಿ) ಆರಂಭಿಸಲು ತೀರ್ಮಾನಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದ್ದಾರೆ.
07:20 PM (IST) Mar 19
06:34 PM (IST) Mar 19
ಕನ್ನಡ, ತಮಿಳು, ತೆಲುಗು, ಮಲಯಾಳಂ ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿರುವ ಹಿರಿಯನಟಿ ಊರ್ವಶಿ ಅವರಿಗೆ ವಿಪರೀತ ಕುಡಿಯುವ ಅಭ್ಯಾಸವಿತ್ತು ಎಂದು ನಟ ಹಾಗೂ ಪತ್ರಕರ್ತ ಬಯಿಲ್ವಾನ್ ರಂಗನಾಥನ್ ಸ್ಫೋಟಕ ಹೇಳಿಕೆಯೊಂದನ್ನು ನೀಡಿದ್ದಾರೆ.
06:29 PM (IST) Mar 19
ಬಹುತೇಕ ಕನ್ನಡ ಧಾರಾವಾಹಿಗಳು ಮಹಿಳಾ ಪ್ರಧಾನವಾಗಿದ್ದು, ಇದರಲ್ಲಿನ ನಾಯಕ ಪಾತ್ರಗಳನ್ನು ಪೆದ್ದು ಮತ್ತು ಮುಗ್ಧರೆಂದು ಚಿತ್ರಿಸಲಾಗುತ್ತದೆ. ಬ್ರಹ್ಮಗಂಟು, ಅಣ್ಣಯ್ಯ, ನಾ ನಿನ್ನ ಬಿಡಲಾರೆ ಸೀರಿಯಲ್ಗಳ ನಾಯಕರು ವಿಲನ್ಗಳ ಅಸಲಿಯತ್ತನ್ನು ತಿಳಿಯದೇ ಇರುವುದು ಪ್ರೇಕ್ಷಕರನ್ನು ಕೆರಳಿಸಿದೆ.
06:14 PM (IST) Mar 19
ಧಾರವಾಡದ ಅಮ್ಮಿನಬಾವಿ ಗ್ರಾಮದಲ್ಲಿ ಯುಗಾದಿ ಹಬ್ಬದ ದಿನ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಅಣ್ಣನೇ ತನ್ನ ತಂಗಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ಜಮೀನಿನಲ್ಲಿ ಪಾಲು ಕೇಳಿದ್ದಕ್ಕೆ ಶುರುವಾದ ಜಗಳವು ಕೊಲೆಯಲ್ಲಿ ಅಂತ್ಯಗೊಂಡಿದ್ದು, ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
05:47 PM (IST) Mar 19
ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ, ಈಗ ಭ್ರಷ್ಟಾಚಾರದಲ್ಲೇ ಮುಳುಗಿದ್ದು ದೇವಸ್ಥಾನದ ಹುಂಡಿ ಹಣವನ್ನೂ ಲೂಟಿ ಮಾಡುವ ದರಿದ್ರ ಸ್ಥಿತಿಗೆ ತಲುಪಿದೆ ಎಂದು ಮಾಜಿ ಸಚಿವ, ಜೆಡಿಎಸ್ ಕಾರ್ಯಾಧ್ಯಕ್ಷ ಸಾ.ರಾ.ಮಹೇಶ್ ಆರೋಪಿಸಿದರು.
05:45 PM (IST) Mar 19
ಖ್ಯಾತ ನಟ ಪ್ರಭುದೇವ ಅವರು ಮುಂಬೈನಲ್ಲಿದ್ದ ತಮ್ಮ ಎರಡು ಅಪಾರ್ಟ್‌ಮೆಂಟ್‌ಗಳನ್ನು ₹14.80 ಕೋಟಿಗೆ ಮಾರಾಟ ಮಾಡಿದ್ದಾರೆ. 2012ರಲ್ಲಿ ₹14.45 ಕೋಟಿಗೆ ಖರೀದಿಸಿದ್ದ ಈ ಆಸ್ತಿಯ ಮೇಲೆ ಸುಮಾರು ಒಂದು ದಶಕದ ನಂತರ ಕೇವಲ ₹35 ಲಕ್ಷ ಲಾಭ ಗಳಿಸಿದ್ದು, ರಿಯಲ್ ಎಸ್ಟೇಟ್ ಹೂಡಿಕೆ ಮುಖವನ್ನು ತೋರಿಸುತ್ತದೆ.
05:44 PM (IST) Mar 19
05:37 PM (IST) Mar 19
ನಟ ರಣವೀರ್ ಸಿಂಗ್ 'ಧುರಂಧರ್: ದಿ ರಿವೆಂಜ್' ಚಿತ್ರದಿಂದಾಗಿ ಸಖತ್ ಸುದ್ದಿಯಲ್ಲಿದ್ದಾರೆ. ರಣವೀರ್ ಸಿಂಗ್ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದಾಗ ಸಾರಾ ಅರ್ಜುನ್‌ಗೆ ಎಷ್ಟು ವಯಸ್ಸಾಗಿತ್ತು ಗೊತ್ತಾ?
05:13 PM (IST) Mar 19
'ಕೆಡಿ' ಚಿತ್ರದ 'ಸೆರಗು ಸರ್ಸೆ' ಹಾಡಿನ ಅಶ್ಲೀಲ ಸಾಹಿತ್ಯದ ವಿವಾದದಿಂದಾಗಿ ಅದನ್ನು ಯೂಟ್ಯೂಬ್‌ನಿಂದ ತೆಗೆದುಹಾಕಲಾಗಿದೆ. ಈ ಬಗ್ಗೆ ನಟಿ ನೋರಾ ಫತೇಹಿ ನೀಡಿದ ಹೇಳಿಕೆ ಮತ್ತು ನಂತರದ ಯು-ಟರ್ನ್ ನಿರ್ದೇಶಕ ಪ್ರೇಮ್ ಅವರಿಗೆ ತೀವ್ರ ಬೇಸರ ತರಿಸಿದೆ.
05:02 PM (IST) Mar 19
ನೋರಾ ಫತೇಹಿ ಅವರ ಹಾಗೆ ಸ್ಲಿಮ್ ಮತ್ತು ಫಿಟ್ ಆಗಿರೋ ದೇಹ ನಿಮ್ಮದಾಗಬೇಕಾ? ಹಾಗಿದ್ರೆ ಅವರ ಫಿಟ್ನೆಸ್ ಸೀಕ್ರೆಟ್ ಏನು ಅಂತ ತಿಳ್ಕೊಳ್ಳಿ. ಬೆಲ್ಲಿ ಡ್ಯಾನ್ಸ್, ಪಿಲಾಟೆಸ್, ಸ್ಟ್ರೆಂತ್ ಟ್ರೈನಿಂಗ್ ಹಾಗೂ ಬ್ಯಾಲೆನ್ಸ್ಡ್ ಡಯಟ್ ಮೂಲಕ ಅವರು ಹೇಗೆ ಫಿಟ್ ಆಗಿರ್ತಾರೆ ಅನ್ನೋದರ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ.
04:48 PM (IST) Mar 19
ಕಳೆದ ಮೂರು ವರ್ಷಗಳಿಂದ ನಿರಂತರವಾಗಿ ವಿವಿಧ ಬಗೆಯ ಹೊಸ ಬಸ್ ಖರೀದಿ ಮಾಡುತ್ತಿದ್ದು, ಕಳೆದ ವರ್ಷ ಬಜೆಟ್‌ನಲ್ಲಿ ಘೋಷಿಸಿರುವ ಎರಡು ಸಾವಿರ ಬಸ್ ಸೇರಿದಂತೆ ಈ ವರ್ಷ ಒಂದು ಸಾವಿರ ಬಸ್‌ಗಳನ್ನು ಖರೀದಿಸಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.
04:31 PM (IST) Mar 19
ಟೈಲರಿಂಗ್ ಮಾಡುತ್ತಿದ್ದ ನಾನು ಕಾಸ್ಟ್ಯೂಮ್ ಡಿಸೈನರ್ ಆದೆ. ವಸ್ತ್ರ ವಿನ್ಯಾಸಕ್ಕೆ ಬಂದವಳು ಮುಂದೆ ನಟನೆಯನ್ನೂ ಮಾಡಿದೆ. ಇಲ್ಲಿವರೆಗೂ ನೂರಾರು ಧಾರಾವಾಹಿಗಳಲ್ಲಿ ನಟಿಸಿದ್ದೇನೆ ಎಂದರು ಪದ್ಮಲತಾ ಗುಂಡೂರಾವ್.
04:07 PM (IST) Mar 19
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ತಂಗಿ ಜವರಮ್ಮ (88) ಅವರು ವಯೋಸಹಜ ಕಾಯಿಲೆಯಿಂದ ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಸಹೋದರಿಯ ನಿಧನಕ್ಕೆ ದೇವೇಗೌಡರು ಭಾವುಕರಾಗಿದ್ದು, ಅವರ ಅಂತ್ಯಕ್ರಿಯೆ ಸ್ವಗ್ರಾಮ ಬಸವನಾಯಕನಹಳ್ಳಿಯಲ್ಲಿ ನಡೆಯಲಿದೆ.
03:54 PM (IST) Mar 19
ಐಶ್ವರ್ಯಾ ಅನಂತ ಕುಮಾರ್, ಕಾಂಗ್ರೆಸ್ ಹೈಕಮಾಂಡ್ ಕರ್ನಾಟಕವನ್ನು 'ಕ್ಯಾಶ್ ಕೌ' ಆಗಿ ಬಳಸಿಕೊಂಡು ಪಂಚ ರಾಜ್ಯಗಳ ಚುನಾವಣೆಗೆ ಹಣ ಸಂಗ್ರಹಿಸುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ರಾಜ್ಯ ಸಾಲದ ಸುಳಿಯಲ್ಲಿರುವಾಗ ಹೈಕಮಾಂಡ್‌ಗೆ ಹಣ ನೀಡುವುದೇಕೆ ಎಂದು ಡಿಕೆಶಿಗೆ ನೇರವಾಗಿ ಪ್ರಶ್ನಿಸಿದ್ದಾರೆ.
02:07 PM (IST) Mar 19
ಬಸವನಗೌಡ ಪಾಟೀಲ್ ಯತ್ನಾಳ್ ಅವರು ಯಡಿಯೂರಪ್ಪ ಮತ್ತು ವಿಜಯೇಂದ್ರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ದಾವಣಗೆರೆಯಲ್ಲಿ ಶಾಮನೂರು ಕುಟುಂಬದೊಂದಿಗೆ ಬಿಜೆಪಿ ನಾಯಕರು ಹೊಂದಾಣಿಕೆ ಮಾಡಿಕೊಂಡಿದ್ದು, ಕೊನೆ ಕ್ಷಣದಲ್ಲಿ ಅಭ್ಯರ್ಥಿ ಬದಲಾದರೂ ಅಚ್ಚರಿಯಿಲ್ಲ ಎಂದು ಅವರು ಅನುಮಾನ ವ್ಯಕ್ತಪಡಿಸಿದ್ದಾರೆ.
01:53 PM (IST) Mar 19
12:37 PM (IST) Mar 19
ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಹವಾಮಾನಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಪೋತದಾರ ಸೇರಿದಂತೆ ಹವಾಮಾನ ತಜ್ಞರು ಆಲಿಕಲ್ಲು ಮಳೆ ಹವಾಮಾನ ವೈಪರೀತ್ಯದ ಪರಿಣಾಮಗಳಲ್ಲಿ ಒಂದು ಎನ್ನುತ್ತಾರೆ.
12:07 PM (IST) Mar 19
12:07 PM (IST) Mar 19
Love Mocktail 3 Review: ಲವ್ ಮಾಕ್ಟೇಲ್ ಸಿನಿಮಾ ಹಿಟ್ ಆಗಿತ್ತು. 2ನೇ ಪಾರ್ಟ್ ಕೂಡ ರೆಡಿ ಆಗಿ ರಿಲೀಸ್ ಆಗಿತ್ತು, 3ನೇ ಪಾರ್ಟ್ ಕೂಡ ರಿಲೀಸ್ ಆಗಿದೆ. ಎರಡು ಪಾರ್ಟ್‌ಗಳಲ್ಲಿದ್ದ ಮನರಂಜನೆ, ಎಮೋಶನಲ್, ಆಕ್ಷನ್, ಲವ್‌ಸ್ಟೋರಿ ಪಾರ್ಟ್ 3ರಲ್ಲಿ ಇದೆ ಎಂದು ಡಾರ್ಲಿಂಗ್ ಕೃಷ್ಣ ಹೇಳಿದ್ದರು.
11:58 AM (IST) Mar 19
ಜಗದ್ಗುರು ಶಿವಾನಂದ ಮಠ ಸ್ವಾಮೀಜಿ, ರಾಯಚೂರು ಮುಖ್ಯ ಶಿಕ್ಷಕ ದೇವೇಂದ್ರಪ್ಪ ದುರಂತ ಅಂತ್ಯ, ಬೆಳಗ್ಗೆಯಿಂದ ಸಂಜೆ ವರೆಗೆ ಶಿಕ್ಷಕ ವೃತ್ತಿ,ಸಂಜೆಯಿಂದ ರಾತ್ರಿ ವರೆಗೆ ಸ್ವಾಮೀಜಿಯಾಗಿ ಪ್ರವಚನ ನೀಡುತಿದದ್ದ ದೇವೇಂದ್ರಪ್ಪ ಆತ್ಮ**ತ್ಯೆ ಮಾಡಿಕೊಂಡಿದ್ದಾರೆ.
11:38 AM (IST) Mar 19
ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನಲ್ಲಿ ಕಾಡಾನೆಗಳ ಹಾವಳಿ ತೀವ್ರಗೊಂಡಿದ್ದು, ಬೆಳೆ ನಾಶವಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಇದರ ನಡುವೆಯೇ, ಆನೆಗಳು ತಮ್ಮ ಮರಿಗಳನ್ನು ಕಾಳಜಿಯಿಂದ ನೋಡಿಕೊಳ್ಳುತ್ತಿರುವ ಅಪರೂಪದ ದೃಶ್ಯ ಡ್ರೋನ್‌ನಲ್ಲಿ ಸೆರೆಯಾಗಿದೆ.
11:34 AM (IST) Mar 19
11:02 AM (IST) Mar 19
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಶ್ರೀನಿವಾಸ ದಾಸಕರಿಯಪ್ಪ ಆಯ್ಕೆಯಾಗಿದ್ದಾರೆ. ಯುಗಾದಿ ಹಬ್ಬಕ್ಕೆ ಹೂವು ಖರೀದಿಸಲು ಮಾರುಕಟ್ಟೆಗೆ ಹೋಗಿದ್ದಾಗ ಅವರಿಗೆ ಈ ಸುದ್ದಿ ತಿಳಿದಿದ್ದು, ತಂದೆಯನ್ನು ನೆನೆದು ಭಾವುಕರಾದರು.
10:49 AM (IST) Mar 19
ಡಿಜೆ ಹಳ್ಳಿ ಅಪ್ರಾಪ್ತೆ ಕೊಲೆ ಕೇಸ್ ಸ್ಫೋಟಕ ಮಾಹಿತಿ, ಆರೋಪಿ ಶಬೀಲ್ ಕೌರ್ಯಕ್ಕೆ ಬೆಚ್ಚಿ ಬಿದ್ದ ಬೆಂಗಳೂರು, ಅಪ್ರಾಪ್ತೆಯನ್ನು ಪಾಳು ಬಿದ್ದ ಮನೆಗೆ ಕರೆಯಿಸಿ ಅತೀ ಭೀಕರವಾಗಿ ಕೊಲೆ ಮಾಡಿದ ಘಟನೆ ಬಹಿರಂಗವಾಗಿದೆ.