ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಕಾನೂನು ಸೌಲಭ್ಯಗಳು ತಲುಪುವಂತೆ ಕಾನೂನು ಪ್ರಾಧಿಕಾರವು ಕಾರ್ಯಾಗಾರಗಳನ್ನು ಇನ್ನಷ್ಟುಹೆಚ್ಚಿಸುವ ಮೂಲಕ ಸಾಮಾಜಿಕ ನ್ಯಾಯ ಎತ್ತಿ ಹಿಡಿಯಬೇಕೆಂದು ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯ ಹಾಗೂ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಪ್ರಧಾನ ಪೋಷಕ ನ್ಯಾಯಮೂರ್ತಿ ಪ್ರಸನ್ನ ವಿ. ವರಾಳೆ ಹೇಳಿದರು.
ಕೋಲಾರ (ಜ.09 ): ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಕಾನೂನು ಸೌಲಭ್ಯಗಳು ತಲುಪುವಂತೆ ಕಾನೂನು ಪ್ರಾಧಿಕಾರವು ಕಾರ್ಯಾಗಾರಗಳನ್ನು ಇನ್ನಷ್ಟುಹೆಚ್ಚಿಸುವ ಮೂಲಕ ಸಾಮಾಜಿಕ ನ್ಯಾಯ ಎತ್ತಿ ಹಿಡಿಯಬೇಕೆಂದು ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯ ಹಾಗೂ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಪ್ರಧಾನ ಪೋಷಕ ನ್ಯಾಯಮೂರ್ತಿ ಪ್ರಸನ್ನ ವಿ. ವರಾಳೆ ಹೇಳಿದರು.
ನಗರದ ಹೊರವಲಯದ ಜಿಲ್ಲಾಡಳಿತ ಭವನದಲ್ಲಿ ಸೇವೆಗಳ ಮಹಾ ಶಿಬಿರವನ್ನು ಉದ್ದಾಟಿಸಿ ಮಾತನಾಡಿದರು. ಕಠಿಣವಾದ ಕಾನೂನು ಜಾರಿ ಮಾಡಿದರೂ ಸಹ ಯರ ಮೇಲಿನ ದೌರ್ಜನ್ಯಗಳು ದಿನೇ, ದಿನೇ ಹೆಚ್ಚಾಗುತ್ತಿರುವುದು ಕಳವಳಕಾರಿಯಾಗಿದೆ. ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ಪರಿಹಾರ ನೀಡುವ ಜೊತೆಗೆ ಆರೋಪಿಗೆ ಶಿಕ್ಷೆಯಾಗುವಂತೆ ಮಾಡಬೇಕು ಎಂದರು.
undefined
ಸ್ತ್ರೀ-ಪುರುಷರಿಗೆ ಸಮಾನ ಹಕ್ಕು
ಹಿರಿಯ ನಾಗರಿಕರಿಗೆ ಪೂರಕವಾದ ಸೌಲಭ್ಯಗಳನ್ನು ಕಲ್ಪಿಸಬೇಕು, ಮಹಿಳೆಯರಿಗೂ ಪುರುಷರಷ್ಟೇ ಹಕ್ಕುಗಳಿವೆ. ಇಬ್ಬರಿಗೂ ಸಮಾನವಾದ ಗೌರವದ ಸ್ಥಾನಮಾನ ನೀಡುವಂತಾಗ ಬೇಕು, ಮಹಿಳೆಯರು ಕಾನೂನುಗಳ ಅರಿವು ಪಡೆದಾಗ ಸಮಾಜದ ಸಾಮಾಜಿಕ ನ್ಯಾಯ ಪಡೆಯಲು ಪೂರಕವಾಗಲಿದೆ ಎಂದರು.
ಬುದ್ದನ ಸಂದೇಶ ಅಂಬೇಡ್ಕರ್ ತಮ್ಮ ಸಂವಿಧಾನದಲ್ಲಿ ಅಳವಡಿಸಿದ್ದಾರೆ. ಸಂವಿಧಾನದ ಕಾನೂನುಗಳಷ್ಟೆಬುದ್ದನ ಸಂದೇಶನಗಳು ಮೌಲ್ಯಯುತವಾಗಿವೆ. ಬುದ್ದನ ಸಮಾನತೆ ಮತ್ತು ಮಾನವೀಯತೆ ಒಳಗೊಂಡಿರುವುದನ್ನು ಪ್ರತಿಯೊಬ್ಬರು ಅಳವಡಿಸಿ ಕೊಳ್ಳುವಂತಾಗ ಬೇಕೆಂದರು.
ದೌರ್ಜನ್ಯಗಳು ಕಡಿಮೆಯಾಗುತ್ತಿಲ್ಲ
ಉಚ್ಚನ್ಯಾಯಲಯದ ನ್ಯಾಯಾಮೂರ್ತಿ ಬಿ.ವೀರಪ್ಪ ಮಾತನಾಡಿ, ರಾಜ್ಯದಲ್ಲಿ ಪ್ರಥಮಭಾರಿಗೆ ಕಾನೂನು ಸೇವೆಗಳ ಮಹಾ ಶಿಬಿರದಲ್ಲಿ ಪ್ರಪ್ರಥಮವಾಗಿ ಪೋಷಕ ನ್ಯಾಯಾಮೂರ್ತಿ ಪ್ರಸನ್ನ ಬಿ.ವಾರಳೆ ಭಾಗವಹಿಸುತ್ತಿರುವ ಹಿನ್ನಲೆಯಲ್ಲಿ ಕೋಲಾರ ಜಿಲ್ಲೆಯಲ್ಲಿ ಶಿಬಿರ ಆಯೋಜಿಸಿರುವುದು ಹೆಮ್ಮೆಯ ವಿಷಯ. ಕಾನೂನು ಪ್ರಾದಿಕಾರವು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಕೊಡಿಸುವ ಕಾವಲುಗಾರನಾಗಿ ಕಾರ್ಯನಿರ್ವಹಿಸಬೇಕು, ಕಾನೂನು ಎಷ್ಟೇ ಕಠಿಣವಾಗಿ ಜಾರಿ ಮಾಡುತ್ತಿದ್ದರೂ ಸಹ ಮಕ್ಕಳ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯಗಳು ನಿಯಂತ್ರಣಕ್ಕೆ ಬಾರದಿರುವುದು ವಿಷಾದÜನಿಯ ಸಂಗತಿ ಎಂದರು.
ಮಹಿಳೆಯರ ಮೇಲಿನ ಅತ್ಯಾಚಾರ, ವೃದ್ದ ಪೋಷಕರ ಮೇಲೆ ಮಕ್ಕಳ ದೌರ್ಜನ್ಯ, ತಿರಸ್ಕಾರಗಳು, ಅಸೀಡ್, ವರದಕ್ಷಿಣೆ ಮುಂತಾದ ಪಿಡುಗು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಕಾನೂನು ಅರಿವು ಕಾರ್ಯಕ್ರಮ ಹೆಚ್ಚಾಗಿ ರೂಪಿಸಬೇಕಾಗಿರುವುದು ಅಗತ್ಯವಾಗಿದೆ. ಕಾನೂನು ಅರಿವು ನೆರವು ಜೊತೆಗೆ ತಮ್ಮದೆ ಆದ ಕೊಡುಗೆ ಸಮಾಜಕ್ಕೆ ನೀಡುವಂತೆ ಆದಾಗ ಮಾತ್ರ ಕಾರ್ಯಗಾರಗಳ ಶ್ರಮವು ಸಾರ್ಥಕವಾಗಲಿದೆ ಎಂದು ಅಭಿಪ್ರಾಯಪಟ್ಟರು.
ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಾಮೂರ್ತಿ ಮೊಹಮೊದ್ ನವಾಜ್ ಮಾತನಾಡಿ, ಸರ್ಕಾರದ ಯೋಜನೆ ಸಮಾಜದಲ್ಲಿನ ದುರ್ಬಲ ವರ್ಗದ ಅಸಹಾಯಕರಾದ ಆರ್ಹ ಫಲಾನುಭವಿಗಳಿಗೆ ಕಾನೂನು ಚೌಕಟ್ಟಿನಲ್ಲಿ ವಿತರಿಸುವಂತಾಗಬೇಕು, ಈ ಸಂಬಂಧವಾಗಿ ಪ್ರತಿಯೊಬ್ಬರನ್ನು ಸಾಕ್ಷರತವಂತಾಗಿಸಬೇಕು ಎಂದರು.
ನ್ಯಾ¿åಮೂರ್ತಿ ಕೆ.ಸೋಮಶೇಖರ್, ಜಿಲ್ಲಾಧಿಕಾರಿ ವೆಂಕಟ್‌ರಾಜಾ, ನ್ಯಾಯಾಮೂರ್ತಿಗಳಾದ ಶುಕ್ಲಾಕ್ಷಪಾಲನ್, ಜಿ.ನರೇಂದ್ರ, ಮಹಾ ವಿಲೇಖನಾಧಿಕಾರಿ ಮುರಳೀಧರ್ ಪೂ, ಸದಸ್ಯ ಕಾರ್ಯದರ್ಶಿ ಜೈಶಂಕರ್, ಜಿಪಂ ಸಿಇಒ ಯುಕೇಶ್ ಕುಮಾರ್, ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸುನೀಲ್ ಎಸ್.ಹೊಸಮುನಿ, ಜಿಲ್ಲಾ ರಕ್ಷಣಾಧಿಕಾರಿಗಳಾದ ಡಿ.ದೇವರಾಜ್ ಧರಣಿದೇವಿ ಇದ್ದರು.
25 ಮೀಸಲು ಕಡ್ಡಾಯ
ಬೆಂಗಳೂರು (ಜ.7) : ಬೆಂಗಳೂರು ವಿವಿಯ ಕ್ಯಾಂಪಸ್‌ನಲ್ಲಿರುವ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು) ನಿಯಮಾನುಸಾರ ಕರ್ನಾಟಕದ ವಿದ್ಯಾರ್ಥಿಗಳಿಗೆ ಸ್ಥಳೀಯ ಮೀಸಲಾತಿಯಡಿ ಶೇ.25ರಷ್ಟುಸೀಟುಗಳನ್ನು ಕಡ್ಡಾಯವಾಗಿ ನೀಡುವಂತೆ ಉನ್ನತ ಶಿಕ್ಷಣ ಸಚಿವ ಡಾ ಸಿ.ಎನ್.ಅಶ್ವತ್ಥ ನಾರಾಯಣ ಅವರು ಕೂಡ ವಿವಿಯ ಕುಲಪತಿ ಅವರಿಗೆ ಪತ್ರ ಬರೆದಿದ್ದಾರೆ.
ಇತರೆ ರಾಜ್ಯಗಳ ರಾಷ್ಟ್ರೀಯ ಕಾನೂನು ವಿವಿ(National Law University)ಗಳಲ್ಲಿರುವಂತೆ ರಾಜ್ಯದ ಎನ್‌ಎಲ್‌ಎಸ್‌ಐಯು((NLASIU)ನಲ್ಲಿ ಸ್ಥಳೀಯ ಮೀಸಲಾತಿ(Reservation) ನಿಯಮ ಜಾರಿಗೊಳಿಸಿ ಎರಡು ವರ್ಷ ಕಳೆದರೂ ಅದನ್ನು ಪಾಲಿಸದೆ ರಾಜ್ಯದ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ(JC Madhuswamy) ಇತ್ತೀಚೆಗಷ್ಟೆವಿಶ್ವವಿದ್ಯಾಲಯಕ್ಕೆ ಪತ್ರ ಬರೆದಿದ್ದರು. ಇದರ ಬೆನ್ನಲ್ಲೇ ಸಚಿವ ಅಶ್ವತ್ಥ ನಾರಾಯಣ(Dr CN Ashwath Narayana) ಕೂಡ ಪತ್ರ ಬರೆದಿದ್ದು, ನ್ಯಾಷನಲ… ಲಾ ಸ್ಕೂಲ… ಯೂನಿವರ್ಸಿಟಿಯಲ್ಲಿ ಕಳೆದ ಎರಡು ವರ್ಷಗಳಿಂದ ಶೇ.25ರ ಸ್ಥಳೀಯ ಮೀಸಲಾತಿ ಕೊಡುತ್ತಿಲ್ಲ. ಬದಲಿಗೆ ಅಖಿಲ ಭಾರತ ಕೋಟಾದಡಿ ಮೆರಿಟ್ ಮೇಲೆ ಆಯ್ಕೆಯಾದ ರಾಜ್ಯದ ವಿದ್ಯಾರ್ಥಿಗಳನ್ನೇ ಈ ಮೀಸಲಾತಿ ವ್ಯಾಪ್ತಿಗೆ ತರುತ್ತಿರುವುದು ಸರ್ಕಾರದ ನಿಯಮಗಳ ಉಲ್ಲಂಘನೆಯಾಗಿದೆ. ಇದು ಸಹಜ ನ್ಯಾಯದ ತತ್ವಕ್ಕೆ ವಿರುದ್ಧವಾಗಿದೆ ಎಂದು ಅವರು ತಮ್ಮ ಪತ್ರದಲ್ಲಿ ಹೇಳಿದ್ದಾರೆ.
ಹೈದರಾಬಾದ್, ಕೋಲ್ಕತ್ತಾ, ತಿರುಚಿನಾಪಳ್ಳಿ, ವಿಶಾಖಪಟ್ಟಣ, ರಾಯ… ಪುರ ಮುಂತಾದ ಕಡೆಗಳಲ್ಲಿ ಇರುವ ಕಾನೂನು ವಿವಿಗಳಲ್ಲಿ ಸ್ಥಳೀಯ ವಿದ್ಯಾರ್ಥಿಗಳ ಮೀಸಲಾತಿಯನ್ನು ಅನುಸರಿಸಲಾಗುತ್ತಿದೆ. ಇದರಂತೆ ಇಲ್ಲಿನ ನ್ಯಾಷನಲ್ ಲಾ ಸ್ಕೂಲ್ ಕೂಡ 2020ರಲ್ಲಿ ಜಾರಿಗೆ ತಂದಿರುವ ತಿದ್ದುಪಡಿ ನಿಯಮಕ್ಕೆ ಬದ್ಧವಾಗಿ ನಡೆದುಕೊಳ್ಳಬೇಕು ಎಂದು ಸಚಿವರು ಪತ್ರದಲ್ಲಿ ನಿರ್ದೇಶಿಸಿದ್ದಾರೆ.