ವಿದ್ಯುತ್‌ ಸರಿಪಡಿಸುವ ನೆಪದಲ್ಲಿ ರೇಪ್‌ಗೆ ಯತ್ನ!

By Kannadaprabha NewsFirst Published Sep 17, 2019, 8:31 AM IST
Highlights

ವಿದ್ಯುತ್ ಸರಿಪಡಿಸುವ ನೆಪದಲ್ಲಿ ಮಹಿಳೆ ಮೇಲೆ ಎಲೆಕ್ಟ್ರಿಷಿಯನ್ ಓರ್ವ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ನಡೆದಿದೆ. 

ಬೆಂಗಳೂರು (ಸೆ.17):  ವಿದ್ಯುತ್‌  ಫ್ಯೂಸ್‌ ಸರಿಪಡಿಸುವ ನೆಪದಲ್ಲಿ ಮನೆಗೆ ನುಗ್ಗಿದ ಎಲೆಕ್ಟ್ರಿಷಿಯನ್‌ ಮನೆಯಲ್ಲಿದ್ದ ಒಂಟಿ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಇದೀಗ ಪರಪ್ಪನ ಅಗ್ರಹಾರ ಪೊಲೀಸರ ಬಲೆಗೆ ಬಿದ್ದಿದ್ದಾನೆ.

37 ವರ್ಷದ ಸಂತ್ರಸ್ತ ಮಹಿಳೆ ನೀಡಿದ ದೂರಿನ ಮೇರೆಗೆ ಕೂಡ್ಲು ಗ್ರಾಮದ ರಾಮ್‌ಕುಮಾರ್‌ ಯಾದವ್‌ (35) ಎಂಬಾತನನ್ನು ಪೊಲೀಸರು ಬಂಧಿಸಿ, ಜೈಲಿಗಟ್ಟಿದ್ದಾರೆ.

ವಿವಾಹಿತನಾಗಿರುವ ರಾಮ್‌ಕುಮಾರ್‌ ಕೂಡ್ಲು ಗ್ರಾಮ ನಿವಾಸಿಯಾಗಿದ್ದು, ಎಲೆಕ್ಟ್ರಿಷಿಯನ್‌ ಕೆಲಸ ಮಾಡುತ್ತಿದ್ದ. 37 ವರ್ಷದ ಮಹಿಳೆ ಕುಟುಂಬ ಕೂಡ್ಲು ಗ್ರಾಮದಲ್ಲಿ ನೆಲೆಸಿತ್ತು. ಮಹಿಳೆ ಕುಟುಂಬ ವಾಸವಿದ್ದ ಕಟ್ಟಡದ ನಿರ್ವಹಣೆಯನ್ನು ಆರೋಪಿಯೇ ನೋಡಿಕೊಳ್ಳುತ್ತಿದ್ದ. ಸಂತ್ರಸ್ತೆ ಮನೆಯಲ್ಲಿ ಸೆ.14ರಂದು ರಾತ್ರಿ ಕರೆಂಟ್‌ ಹೋಗಿತ್ತು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

 ಫ್ಯೂಸ್ ಚೆಕ್‌ ಮಾಡಲು ಆರೋಪಿಗೆ ಮಹಿಳೆ ಕರೆ ಮಾಡಿ ಹೇಳಿದ್ದರು. ರಾತ್ರಿ 10.30ರ ಸುಮಾರಿಗೆ ಮಹಿಳೆ ಮನೆಗೆ ಬಂದ ಆರೋಪಿ ಫ್ಯೂಸ್ ತಪಾಸಣೆ ನಡೆಸಿದ್ದ.  ಫ್ಯೂಸ್ ಹಾಳಾಗಿದ್ದು, ಬೆಳಗ್ಗೆ ರಿಪೇರಿ ಮಾಡುವುದಾಗಿ ಹೇಳಿದ್ದ. ಹೊರಗೆ ಹೋಗುವ ಸಮಯದಲ್ಲಿ ಏಕಾಏಕಿ ಆರೋಪಿ, ಮಹಿಳೆಯನ್ನು ಹಿಡಿದು ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಮಹಿಳೆ ಆರೋಪಿಯ ಕೈ ಕಚ್ಚಿ, ಚೋರಾಗಿ ಚೀರಾಡುತ್ತಾ ಆರೋಪಿಯಿಂದ ತಪ್ಪಿಸಿಕೊಂಡಿದ್ದರು. ಘಟನೆ ಸಂಬಂಧ ಠಾಣೆಗೆ ದೂರು ನೀಡಿದ್ದು, ಆರೋಪಿಯನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.

click me!