ಹಳೆ ಸೈಕಲ್‌ಗೆ ಬಂತು ಭಾರೀ ಬೇಡಿಕೆ !

By Kannadaprabha NewsFirst Published Sep 8, 2020, 11:05 AM IST
Highlights

ಕೊರೋನಾಟ್ಟಹಾಸ ದೇಶದಲ್ಲಿ ಹೆಚ್ಚಾಗುತ್ತಲೇ ಇದೆ. ಇದೀಗ ಲಾಕ್ ಡನ್ ರಿಲೀಸ್ ಮಾಡಿದ್ದು, ಈ ಸಂದರ್ಭದಲ್ಲಿ ಹಳೆ ಸೈಕಲ್‌ಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. 

 ತುಮಕೂರು(ಸೆ.08):  ಕೊರೋನಾ ಕಾರಣದಿಂದ ಲಾಕ್‌ಡೌನ್‌ ಆಗಿದ್ದ ತುಮಕೂರು ಈಗಾಗಲೇ ಅನ್‌ಲಾಕ್‌ ಆಗಿದ್ದರೂ ಇನ್ನೂ ಸಂಪೂರ್ಣವಾಗಿ ವಹಿವಾಟು ಯಥಾಸ್ಥಿತಿಗೆ ಬಂದಿಲ್ಲ. 

ಕೃಷಿ ಚಟುವಟಿಕೆಗಳಾಗಲಿ, ಬಟ್ಟೆಉದ್ಯಮ, ಹೋಟೆಲ್‌, ಬೇಕರಿ, ಸಾರಿಗೆ ಹೀಗೆ ಎಲ್ಲಾ ಚಟುವಟಿಕೆಗಳು ಪುನಾರಂಭಗೊಂಡು ಬಹಳ ದಿವಸಗಳೇ ಕಳೆದರೂ ಕೂಡ ನಿರೀಕ್ಷೆಯಷ್ಟುವಹಿವಾಟು ಆಗುತ್ತಿಲ್ಲ. ಹೋಟೆಲ್‌ಗಳಲ್ಲಿ ನಿರೀಕ್ಷೆಯಷ್ಟುಜನ ಬರುತ್ತಿಲ್ಲ. ಬೇಕರಿಗಳು ಪಾರ್ಸಲ್‌ಗಷ್ಟೆಸೀಮಿತವಾಗಿದೆ. ಇನ್ನು ಬಟ್ಟೆಉದ್ಯಮವಾಗಲಿ, ಸ್ಟೇಷನರಿ, ಎಲೆಕ್ಟ್ರಾನಿಕ್‌ ಉದ್ಯಮಗಳು ಇನ್ನೂ ಚೇತರಿಸಿಕೊಂಡಿಲ್ಲ. ಈ ವೇಳೆ ಸೈಕಲ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ. ಕಾರಣ ಸಾರ್ವಜನಿಕ ಸಾರಿಗೆ ಬಳಸಲು ಇರುವ ಭಯ.

ರಾಜ್ಯದಲ್ಲಿ 4 ಲಕ್ಷ ದಾಟಿದ ಕೊರೋನಾ ಸಂಖ್ಯೆ: ಸೋಮವಾರ ಸೋಂಕಿತರಿಗಿಂತ ಗುಣಮುಖರಾದವರೇ ಹೆಚ್ಚು..!

ತುಮಕೂರಿನ ವಾಣಿಜ್ಯ ಚಟುವಟಿಕೆಗಳ ಪ್ರಮುಖ ಕೇಂದ್ರವಾದ ತುಮಕೂರಿನ ಮಹಾತ್ಮಗಾಂಧಿ ರಸ್ತೆ ಅಂಗಡಿಗಳಲ್ಲಿ ನಿರೀಕ್ಷೆಯಷ್ಟುಜನ ಬರುತ್ತಿಲ್ಲ. ಬಹುತೇಕ ಎಲ್ಲ ವಾಣಿಜ್ಯ ಚಟುವಟಿಕೆಗಳ ಕೇಂದ್ರ ಸ್ಥಾನ ಇದಾಗಿದೆ. ಮೊಬೈಲ್‌ ಅಂಗಡಿ, ಎಲೆಕ್ಟ್ರಾನಿಕ್‌ ಗೂಡ್ಸ್‌, ಬಟ್ಟೆಅಂಗಡಿ, ಶೋರೂಂಗಳು ಹೀಗೆ ಎಲ್ಲವೂ ಒಂದೇ ಕಡಿ ನೆಲೆ ನಿಂತಿವೆ. ಸದ್ಯ ಎಂ.ಜಿ. ರಸ್ತೆ ಪಾರ್ಕಿಂಗ್‌ ಸ್ಥಳವಾಗಿ ಮಾರ್ಪಟ್ಟಿವೆ ವಿನಹ ಜನ ಮಾತ್ರ ಅಂಗಡಿಗಳಿಗೆ ಹೋಗುತ್ತಿಲ್ಲ. ಅನ್‌ಲಾಕ್‌ ಪ್ರಕ್ರಿಯೆ ಈಗ ಸಂಪೂರ್ಣ ಆರಂಭವಾಗಿದ್ದರೂ ಕೂಡ ಶೇ.70 ರಷ್ಟುಮಂದಿ ಮಾತ್ರ ಹೊರಗಡೆ ಬರುತ್ತಿದ್ದಾರೆ. ಇನ್ನು ಶೇ.30 ರಷ್ಟುಮಂದಿ ಹೊರಗೆ ಬರುತ್ತಿಲ್ಲ.

ಶೇ. 25 ರಷ್ಟುವಹಿವಾಟು ಇಲ್ಲ:

ಸ್ಮಾರ್ಟ್‌ ಸಿಟಿ ತುಮಕೂರಿನಲ್ಲಿ ಎಲ್ಲಾ ಚಟುವಟಿಕೆಗಳು ಸಾರ್ವಜನಿಕರಿಗಾಗಿ ಆರಂಭವಗೊಂಡಿದೆ. ಆದರೆ ಹಣದ ಮುಗ್ಗಟ್ಟು ಹಾಗೂ ಕೊರೋನಾ ಕಾರಣದಿಂದ ಜನ ಅಂಗಡಿಗಳಿಗೆ ಬರುತ್ತಿಲ್ಲ. ವಸ್ತುಗಳ ಕೊಳ್ಳುವಿಕೆಯನ್ನು ಮುಂದಕ್ಕೆ ಹಾಕುತ್ತಿದ್ದಾರೆಯೋ ಅಥವಾ ಆರ್ಥಿಕ ಹಿನ್ನಡೆತೆಯ ಕಾರಣವೋ ಜನ ಮಾತ್ರ ಇತ್ತ ಸುಳಿಯುತ್ತಿಲ್ಲ ಎಂಬುದು ವರ್ತಕ ಸಂಜಯ್‌ ಅವರ ಮಾತಾಗಿದೆ.

ಇನ್ನು ಕೆಲ ಹೊಟೇಲ್‌ಗಳಲ್ಲಿ ಕುಳಿತುಕೊಳ್ಳಲು ಅವಕಾಶ ಕಲ್ಪಿಸಿಲ್ಲ. ಈಗಲೂ ಕೆಲ ಹೊಟೇಲ್‌ಗಳಲ್ಲಿ ಸೆಲ್‌್ಫ ಸರ್ವಿಸ್‌ಗಳಿವೆ. ಹೀಗಾಗಿ ಹೊಟೇಲ್‌ಗಳಿಗೆ ಜನ ಮುಖ ಮಾಡುತ್ತಿಲ್ಲ

ನಗರ ಸಾರಿಗೆ ಜನರೇ ಇಲ್ಲ:

ಇನ್ನೂ ತುಮಕೂರು ನಗರದಲ್ಲಿ ಪೂರ್ಣಪ್ರಮಾಣದಲ್ಲಿ ನಗರ ಸಾರಿಗೆ ಬಸ್‌ ಸಂಚಾರ ಆರಂಭವಾಗಿಲ್ಲ. 3 ಬೀಟ್‌ಗಳನ್ನು ಮೊದಲು ಪ್ರಾಯೋಗಿಕವಾಗಿ ಬಿಡಲಾಗಿತ್ತು. ಆದರೆ ಜನ ಬಸ್‌ ನಲ್ಲಿ ಹೋಗದೆ ಖಾಲಿ ಬಸ್‌ಗಳ ಸಂಚಾರವಾಗುತ್ತಿದೆ. ಈಗ ಬೀಟ್‌ ಸಂಖ್ಯೆ ಹೆಚ್ಚಳ ಮಾಡಿದ್ದರೂ ಕೂಡ ಬಸ್‌ನಲ್ಲಿ ಕೂತು ಪ್ರಯಾಣಿಸುವವರ ಸಂಖ್ಯೆ ಗಣನೀಯವಾಗಿ ಕುಸಿದಿದೆ. ಬಸ್‌ಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಕಷ್ಟವಾಗಬಹುದೆಂದು ಬೈಕ್‌ಗಳಿಗೆ ಜನ ಮೊರೆ ಹೋಗುತ್ತಿದ್ದಾರೆ.

ಹಳೆ ಸೈಕಲ್‌ಗೆ ಬೇಡಿಕೆ:

ಇನ್ನು ಬಸ್‌ನಲ್ಲಿ ಹೋಗಲು ಹೆದರುವವರು, ಬೈಕ್‌ ಕೊಳ್ಳಲು ಆರ್ಥಿಕವಾಗಿ ಬಲ ಇಲ್ಲದವರು ಮೂಲೆ ಸೇರಿದ್ದ ಹಳೆ ಸೈಕಲ್‌ನ ಮೊರೆ ಹೋಗುತ್ತಿದ್ದಾರೆ. ಗುಜುರಿ ಸೇರುವ ಸ್ಥಿತಿ ತಲುಪಿದ್ದು ಸೈಕಲ್‌ಗಳನ್ನು ರಿಪೇರಿ ಮಾಡಿಸಿ ಬಳಸುತ್ತಿದ್ದಾರೆ.

ಮಾರುಕಟ್ಟೆಯಲ್ಲಿ ಜನವೋ ಜನ:

ಕೊರೋನಾ ಕಾರಣದಿಂದ ಹೊಟೇಲ್‌ಗೆ ಹೋಗಲು, ಬಸ್‌ ಹತ್ತುವವರ ಸಂಖ್ಯೆ ಕಡಿಮೆಯಾಗಿದ್ದರೂ ನಗರದಲ್ಲಿ ಓಡಾಡುವರ ಸಂಖ್ಯೆ ಕಡಿಮೆಯಾಗಿಲ್ಲ. ಎಲ್ಲೆಡೆ ವಾಹನಗಳದ್ದೇ ಕಾರು ಬಾರು, ಟ್ರಾಫಿಕ್‌ ಸಮಸ್ಯೆ ಕೂಡ ನಿಧಾನಕ್ಕೆ ಆರಂಭವಾಗಿದೆ. ಇನ್ನು ವಾರಾಂತ್ಯದಲ್ಲಿ ಮಾರುಕಟ್ಟೆಗೆ ಲಗ್ಗೆ ಇಡುವುದು ಜಾಸ್ತಿಯಾಗಿದೆ. ಆದರೆ ಇಲ್ಲಿ ಸಾಮಾಜಿಕ ಅಂತರವನ್ನು ಸಂಪೂರ್ಣವಾಗಿ ಮರೆತಿದ್ದಾರೆ. ಇನ್ನು ಅವರು ಧರಿಸಿರುವ ಮಾಸ್ಕ್‌ಗಳು ಮೂಗನ್ನಾಗಲಿ, ಬಾಯನ್ನಾಗಲಿ ಮುಚ್ಚಿರುವುದಿಲ್ಲ. ಹೀಗಾಗಿ ಮಾಸ್ಕ್‌ ಹಾಕಿಕೊಂಡರೂ, ಹಾಕದೇ ಇದ್ದರೂ ವ್ಯತ್ಯಾಸವಿಲ್ಲದಂತಾಗಿದೆ.

ಕೊರೋನಾ ಹೆಚ್ಚಳ: ಹಾಟ್ ಸ್ಪಾಟ್ ಜಿಲ್ಲೆಗಳ ಮೇಲೆ ಕೇಂದ್ರ ನೇರ ನಿಗಾ .

ಅಕ್ಟೋಬರ್‌ನಿಂದ ಯಥಾಸ್ಥಿತಿಗೆ ಬರಬಹುದು:

ಅನ್‌ಲಾಕ್‌ ಶುರುವಾದರೂ ವಹಿವಾಟು ಇನ್ನು ಚೇತರಿಸಿಕೊಂಡಿಲ್ಲ. ಈಗ ನಿಧಾನಕ್ಕೆ ಅಂಗಡಿ ಬಳಿ ಜನ ಎಡತಾಕುತ್ತಿದ್ದಾರೆ. ನವರಾತ್ರಿ ಹಬ್ಬದ ವೇಳೆಗ ಸಂಪೂರ್ಣವಾಗಿ ಆರ್ಥಿಕ ವಹಿವಾಟು ಯಥಾಸ್ಥಿತಿಗೆ ಬರಬಹುದೆಂಬ ನಿರೀಕ್ಷೆ ಅಂಗಡಿ ಮಾಲಿಕರದ್ದಾಗಿದೆ.

click me!