ಉದ್ಯಮಿ ಹೋಮಕುಂಡ ಹತ್ಯೆ ಕೇಸ್ : ಹೆಂಡ್ತಿ ಸೇರಿ ಮೂವರಿಗೆ ಜೀವಾವಧಿ ಶಿಕ್ಷೆ

By Suvarna NewsFirst Published Jun 8, 2021, 3:01 PM IST
Highlights
  • ಉಡುಪಿಯ ಉದ್ಯಮಿ ಭಾಸ್ಕರ್ ಶೆಟ್ಟಿ ಹೋಮಕುಂಡ ಹತ್ಯೆ ಪ್ರಕರಣ
  • ಉಡುಪಿ ಜಿಲ್ಲಾ ಪ್ರಧಾನ ಸತ್ರ ನ್ಯಾಯಾಲಯದಿಂದ ಮಹತ್ವದ ತೀರ್ಪು ಪ್ರಕಟ
  • ಮೂವರು ಪ್ರಮುಖ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ 

ಉಡುಪಿ (ಜೂ.08):  ಉಡುಪಿಯಲ್ಲಿ 2016ರಲ್ಲಿ ನಡೆದ ಉದ್ಯಮಿ ಭಾಸ್ಕರ್ ಶೆಟ್ಟಿ ಹೋಮಕುಂಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ  ಮಹತ್ವದ ತೀರ್ಪು ಪ್ರಕಟವಾಗಿದೆ. 

ಉಡುಪಿ ಜಿಲ್ಲಾ ಪ್ರಧಾನ ಸತ್ರ ನ್ಯಾಯಾಲಯ ಇಂದು  ಮೂವರು ಪ್ರಮುಖ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ  ನ್ಯಾಯಾಧೀಶ ಸುಬ್ರಹ್ಮಣ್ಯ ಜೆ.ಎನ್.ತೀರ್ಪು ನೀಡಿದ್ದಾರೆ.

ಉದ್ಯಮಿ ಭಾಸ್ಕರ ಶೆಟ್ಟಿ ಹತ್ಯೆ ಪ್ರಕರಣದ ಪ್ರಮುಖ ಅಪರಾಧಿಗಳಾದ ಭಾಸ್ಕರ ಶೆಟ್ಟಿ ಪತ್ನಿ ರಾಜೇಶ್ವರಿ, ಪುತ್ರ ನವನೀತ ಶೆಟ್ಟಿ ಹಾಗೂ ಆಕೆಯ ಪ್ರಿಯಕರ ನಿರಂಜನ ಭಟ್ ಗೆ  ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. 

ಇನ್ನು  ಸಾಕ್ಷ್ಯ ನಾಶ ಮಾಡಿದ  ಇಬ್ಬರು ಆರೋಪಿಗಳಲ್ಲಿ ಶ್ರೀನಿವಾಸ ಭಟ್ ಈಗಾಗಲೇ ಅನಾರೋಗ್ಯದಿಂದ ಮೃತರಾಗಿದ್ದಾರೆ. ಇನ್ನೊಬ್ಬ ಅರೋಪಿ ಕಾರು ಚಾಲಕ ರಾಘವೇಂದ್ರ ಖುಲಾಸೆಯಾಗಿದೆ.

ಪತಿಯನ್ನ ಹೋಮಕುಂಡದಲ್ಲಿ ಸುಟ್ಟಿದ್ದ ರಾಜೇಶ್ವರಿ ಶೆಟ್ಟಿ ಮೇಲೆ ವೇಶ್ಯಾವಾಟಿಕೆ ಕೇಸ್ ...

ರಾಜೇಶ್ವರಿ ಪತಿ ಭಾಸ್ಕರ್ ಶೆಟ್ಟಿ ದುಬೈನಲ್ಲಿದ್ದು, ಅಲ್ಲಿಂದ ಹಣವನ್ನು ಪತ್ನಿಗೆ ಕಳುಹಿಸುತ್ತಿದ್ದರು. ಅದರೆ ಈ ಹಣ ನಿರಂಜನ್ ಭಟ್‌ಗೆ ನೀಡುತ್ತಿದ್ದ ರಾಜೇಶ್ವರಿ ಆತನೊಂದಿಗಿನ ಅಕ್ರಮ ಸಂಬಂಧಕ್ಕೆ ವ್ಯಯಿಸುತ್ತಿದ್ದಳು. ಅಲ್ಲದೇ ಆತನಿಗೆ ಲಕ್ಷಾಂತರ ರು ಆಸ್ತಿಯನ್ನು ಮಾಡಿಕೊಟ್ಟಿದ್ದಳು. ಅಲ್ಲಿಂದ ಮರಳಿದ ಭಾಸ್ಕರ್ ಶೆಟ್ಟಿ  ಶಂಕೆ ಮೇಲೆ ಪತ್ನಿ ಪ್ರಶ್ನಿಸಿದ್ದೇ ಅವರ ಹತ್ಯೆಗೆ ಕಾರಣವಾಯ್ತು. 

ಪತ್ನಿಯ ಪರಸಂಗ ಪ್ರಶ್ನಿಸಿದ್ದಕ್ಕೆ ಭಾಸ್ಕರ್ ಶೆಟ್ಟಿ ಕೊಲೆಯಾಯ್ತಾ..?

ಅಕ್ರಮ ಸಂಬಂಧಕ್ಕಾಗಿ ತನ್ನ ಗಂಡನನ್ನೇ ಪುತ್ರ ಹಾಗೂ ಪ್ರಿಯಕರನೊಂದಿಗೆ ಸೇರಿ ಹತ್ಯೆ ಮಾಡಿ ಕೋಮಕುಂಡದಲ್ಲಿ ಸುಟ್ಟು ಹಾಕಿದ್ದಳು. ಈ ಪ್ರಕರಣದ ವಿಚಾರಣೆ ನಡೆದ ಬಳಿಕ ಇದೀಗ ಉಡುಪಿ ನ್ಯಾಯಾಲಯ ಮೂವರಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಆದರೆ ಇದೀಗ ತೀರ್ಪಿನ ವಿರುದ್ಧ ಹೈಕೋರ್ಟ್  ಮೊರೆ ಹೋಗುವುದಾಗಿ ಆರೋಪಿಗಳ ವಕೀಲರು ಹೇಳಿದ್ದಾರೆ.

click me!