ಗೋ ಹತ್ಯೆ ನಿಷೇಧ ಕಾನೂನು ರಕ್ಷಣೆಗೆ ಬದ್ಧ, ನನ್ನ ಮೇಲೆ ಪೊಲೀಸ್‌ ಕೇಸ್‌ ಹಾಕಿದ್ರೂ ಹೆದರಲ್ಲ: ಶಾಸಕ ಸಲಗರ

By Kannadaprabha News  |  First Published Jul 9, 2023, 9:50 PM IST

ಗೋ ಹತ್ಯೆ ಕಾನೂನು ಗೊತ್ತಿಲ್ಲದೆ ಪರಾಜಿತ ಅಭ್ಯರ್ಥಿ ವಿಜಯಸಿಂಗ್‌ ಗೋ ಹತ್ಯೆ ಮಾಡಿದ್ದನ್ನು ಬೆಂಬಲಿಸಿ ಫೇಸ್‌ಬುಕ್‌ನಲ್ಲಿ ಹೇಳಿಕೆ ನೀಡಿರುವುದು ಮತ್ತು ನನ್ನ ಮೇಲೆ ಪ್ರಕರಣ ದಾಖಲಿಸಲು ಗೃಹ ಸಚಿವರ ಮೇಲೆ ಒತ್ತಡ ಹೇರಿರುವುದು ಖಂಡನೀಯವಾಗಿದೆ ಎಂದ ಶಾಸಕ ಶರಣು ಸಲಗರ 


ಬಸವಕಲ್ಯಾಣ(ಜು.09): ಗೋ ಹತ್ಯೆ ನಿಷೇಧ ಕಾನೂನು ರಕ್ಷಣೆಗೆ ನಾನು ಬದ್ಧ, ನನ್ನ ಮೇಲೆ ಪೊಲೀಸ್‌ ಕೇಸ್‌ ಹಾಕಿದ್ರೆ ಹೆದರಲ್ಲ ಎಂದು ಶಾಸಕ ಶರಣು ಸಲಗರ ತಿಳಿಸಿದರು. ನಗರದ ಹೊರಲವಯದಲ್ಲಿರುವ ಶಾಸಕರ ಕಚೇರಿಯಲ್ಲಿ ಈ ಸಂಬಂಧ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಕ್ರೀದ್‌ ಹಬ್ಬದ 3ನೇ ದಿನದಂದು ನಗರದ ಹಿರೇಮಠ ಕಾಲೋನಿಯ ಮನೆಯಲ್ಲಿ ಗೋವನ್ನು ಕಡಿಯುತ್ತಿರುವ ಕುರಿತು ಅಲ್ಲಿಯ ನಾಗರಿಕರು ನೋಡಿ ನನಗೆ ಮಾಹಿತಿ ನೀಡಿದರು. ಕೂಡಲೇ ನಾನು ಸ್ಥಳಕ್ಕೆ ಹೋಗಿದ್ದಾಗ ನಮ್ಮ ಮುಂದೆಯೇ ಗೋಹತ್ಯೆ ನಡೆಯಿತು. ಇದನ್ನು ನಾನು ತೀವ್ರವಾಗಿ ಖಂಡಿಸಿದ್ದೇನೆ ಅಷ್ಟೇ ಎಂದು ಶಾಸಕ ಶರಣು ಸಲಗರ ತಿಳಿಸಿದರು.

ಗೋ ಹತ್ಯೆ ಕಾನೂನು ಗೊತ್ತಿಲ್ಲದೆ ಪರಾಜಿತ ಅಭ್ಯರ್ಥಿ ವಿಜಯಸಿಂಗ್‌ ಗೋ ಹತ್ಯೆ ಮಾಡಿದ್ದನ್ನು ಬೆಂಬಲಿಸಿ ಫೇಸ್‌ಬುಕ್‌ನಲ್ಲಿ ಹೇಳಿಕೆ ನೀಡಿರುವುದು ಮತ್ತು ನನ್ನ ಮೇಲೆ ಪ್ರಕರಣ ದಾಖಲಿಸಲು ಗೃಹ ಸಚಿವರ ಮೇಲೆ ಒತ್ತಡ ಹೇರಿರುವುದು ಖಂಡನೀಯವಾಗಿದೆ ಎಂದರು.

Latest Videos

undefined

ಬಾಕಿ ಕೊಡದಿರುವ ಕಾರ್ಖಾನೆಗಳ ಸಕ್ಕರೆ ಜಪ್ತಿ ಮಾಡಿ: ಸಚಿವ ಈಶ್ವರ ಖಂಡ್ರೆ

ನಮ್ಮ ಪೂರ್ವಜರು ವೇದ, ಉಪನಿಷತ್‌ ಕಾಲಗಳಿಗಿಂತಲೂ ಮುಂಚೆಯೇ ಗೋ ಮಾತೆಯನ್ನು ಪೂಜಿಸುತ್ತಾ ಬಂದಿದ್ದಾರೆ. ಇದಕ್ಕೆ ಸರ್ವಧರ್ಮೀಯರು ಸಹ ಬೆಂಬಲಿಸುತ್ತಾರೆ. ಗೋ ಮಾತೆ ಹಾಲನ್ನು ಕುಡಿದು ಕೋಟಿಗಟ್ಟಲೆ ಜನರು ಬದುಕುತ್ತಿದ್ದಾರೆ. ಹೀಗಾಗಿ ಗೋವನ್ನು ಕಡಿಯುವುದು ನಿಷೇಧಿಸಿ ಸರ್ಕಾರ ಕಾನೂನು ಜಾರಿ ಮಾಡಿದರೂ ಅದನ್ನು ಕಡಿಯುವ ಮತ್ತು ಬೆಂಬಲಿಸುವ ಕೀಳು ಮಟ್ಟದ ರಾಜಕೀಯ ಒಳ್ಳೆಯದಲ್ಲ ಎಂದರು.

ನನಗೆ 93 ಸಾವಿರ ಮತಗಳನ್ನು ನೀಡಿ ಜನರು ಆರಿಸಿದ್ದಾರೆ. ಅವರ ರಕ್ಷಣೆ, ಕಾನೂನು ಪಾಲನೆ ನನ್ನ ಕರ್ತವ್ಯ. ನಾನು ಉದ್ದೇಶಪೂರ್ವಕವಾಗಿ ಯಾರಿಗೂ ಹೆದರಿಸಿಲ್ಲ. ಕಾನೂನನ್ನು ಯಾರೇ ಮೀರಿದರೂ ಅದನ್ನು ನಾನು ಸಹಿಸುವುದಿಲ್ಲ ಎಂದ ಅವರು, ಮುಖ್ಯಮಂತ್ರಿ ಭಾರತೀಯರ ಗೌರವದ ಪೂಜೆಯ ಸಂಕೇತವಾದ ಗೋ ಮಾತೆ ರಕ್ಷಣೆಗೆ ಇನ್ನೂ ಹೆಚ್ಚಿನ ಕಾನೂನು ರೂಪಿಸಿ ಗೋವುಗಳನ್ನು ರಕ್ಷಿಸಬೇಕೆಂದು ಶಾಸಕರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ರೋಹಿದಾಸ ಬಿರಾದರ, ಯಶವಂತ ಹುಲಸೂರೆ, ತಾನಾಜಿ ಮುಕಿಂದೆ ಉಪಸ್ಥಿತರಿದ್ದರು.

click me!