ರಾಯಚೂರು: ಈ ವರ್ಷವಾದರೂ ಬರುತ್ತಾ ಕೊನೆಯ ಭಾಗದ ರೈತರಿಗೆ ನೀರು..!

Published : Aug 17, 2023, 02:30 AM IST
ರಾಯಚೂರು: ಈ ವರ್ಷವಾದರೂ ಬರುತ್ತಾ ಕೊನೆಯ ಭಾಗದ ರೈತರಿಗೆ ನೀರು..!

ಸಾರಾಂಶ

ಸಭೆಯಲ್ಲಿ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಶ್ರೀ.ಡಾ ಶರಣಪ್ರಕಾಶ ಪಾಟೀಲ್,  ಸಣ್ಣ ನೀರಾವರಿ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಬೋಸರಾಜು, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಯ ಸಂಸದರಾದ ರಾಜಾ ಅಮರೇಶ್ವರ ನಾಯಕ, ಸಂಸದ ಸಂಗಣ್ಣ ಕರಡಿ ಹಾಗೂ ಶಾಸಕರು, ಅಧಿಕಾರಿಗಳು ಭಾಗವಹಿಸಿದರು.

ವರದಿ: ಜಗನ್ನಾಥ ಪೂಜಾರ್, ಏಷ್ಯಾನೆಟ್ ಸುವರ್ಣ ನ್ಯೂಸ್

ರಾಯಚೂರು(ಆ.17): ಈ ವರ್ಷ ರಾಯಚೂರು ಜಿಲ್ಲೆಯಾದ್ಯಂತ ಮಳೆ ಕಡಿಮೆಯಾಗಿದೆ. ಮಳೆ ಇಲ್ಲದಕ್ಕೆ ಜಿಲ್ಲೆಯ ಬಹುತೇಕ ರೈತರು ಕಾಲುವೆ ನೀರಿಗಾಗಿ ಬಕಪಕ್ಷಿಯಂತೆ ಕಾಯುತ್ತಿದ್ದಾರೆ. ತುಂಗಭದ್ರಾ ಎಡದಂಡೆ ಕಾಲುವೆಗಳಿಗೆ ಯಾವ ನೀರು ಬರುತ್ತೆ ಅಂತ ಎದುರು ನೋಡುವ ರೈತರಿಗೆ ಇಂದು ಕೊಪ್ಪಳ ಜಿಲ್ಲೆ ಮುನಿರಬಾದ್ ನಲ್ಲಿ ನಡೆದ ನೀರಾವರಿ ಸಮಿತಿ ಸಭೆ ನಡೆಯಿತು.

119ನೇ ನೀರಾವರಿ ಸಲಹಾ ಸಮಿತಿ ಕಾಡಾ ಅಧ್ಯಕ್ಷ ಶಿವರಾಜ್. ಎಸ್.ತಂಗಡಗಿ ನೇತೃತ್ವದಲ್ಲಿ ನಡೆಯಿತು. ಸಭೆಯಲ್ಲಿ ‌ನ.30ರವರೆಗೆ ನಿರಂತರವಾಗಿ ಕಾಲುವೆಗಳಿಗೆ ನೀರು ಕೊಡಲು ತೀರ್ಮಾನಿಸಲಾಗಿದೆ. ಈ ತೀರ್ಮಾನ ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ.

RAICHUR: ನೀರಮಾನ್ವಿ ಗುಡ್ಡದಲ್ಲಿ ಚಿರತೆ ಪ್ರತ್ಯಕ್ಷ: ಭಯ ಭೀತರಾದ ಗ್ರಾಮಸ್ಥರು!

ರಾಜ್ಯದ ಹಲವೆಡೆ ಮಳೆ ಕಡಿಮೆಯಾದರೂ ಮಲೆನಾಡು ಪ್ರದೇಶದಲ್ಲಿ ಭಾರೀ ಮಳೆಯಾಗಿದ್ದರಿಂದ ತುಂಗಭದ್ರಾ ಜಲಾಶಯ ಶೇ. 80ರಷ್ಟು ಭರ್ತಿಯಾಗಿದೆ. ಹೀಗಾಗಿ ತುಂಗಭದ್ರಾ ಡ್ಯಾಂನಿಂದ ಕಾಲುವೆಗಳಿಗೆ ನೀರು ಬಿಡಲು ನೀರಾವರಿ ಸಲಹಾ ಸಮಿತಿಯಲ್ಲಿ ತೀರ್ಮಾನಿಸಲಾಗಿದೆ. ತುಂಗಭದ್ರಾ ಎಡದಂಡೆಯ ಕಾಲುವೆಗೆ ನವೆಂಬರ್ 30ವರೆಗೆ ನಿತ್ಯ 4,100 ಕ್ಯೂಸೆಕ್ ನೀರು ಬಿಡುಗಡೆ ಮಾಡಲು ತೀರ್ಮಾನ ತೆಗೆದುಕೊಳ್ಳಲಾಗಿದೆ. ಅದರಂತೆ ತುಂಗಭದ್ರಾ ಬಲದಂಡೆ ಮೇಲ್ಮಟ್ಟದ ಕಾಲುವೆಗೆ ನವೆಂಬರ್ 30 ವರೆಗೆ 1300 ಕ್ಯೂಸೆಕ್, ತುಂಗಭದ್ರಾ ಬಲದಂಡೆ ಕೆಳಮಟ್ಟದ ಕಾಲುವೆಗೆ ನವೆಂಬರ್ 30ವರೆಗೆ 850 ಕ್ಯೂಸೆಕ್ ನೀರು ಹರಿಸಲು ತೀರ್ಮಾನಿಸಲಾಗಿದೆ.  ಅಷ್ಟೇ ಅಲ್ಲದೆ ರಾಯ, ಬಸವ ಕಾಲುವೆಗೆ ನವೆಂಬರ್ 30 ವರೆಗೆ 270 ಕ್ಯೂಸೆಕ್ ಮತ್ತು ತುಂಗಭದ್ರಾ ಎಡದಂಡೆ ಮೇಲ್ಮಟ್ಟದ ಕಾಲುವೆಗೆ ನವೆಂಬರ್ 30ವರೆಗೆ 25 ಕ್ಯೂಸೆಕ್ ನೀರು ಹರಿಸಲಾಗುವುದು. ಮುಂದೆ ನಿಂತ ಬೆಳೆಗೆ ನೀರಿನ ಲಭ್ಯತೆ ಆಧರಿಸಿ ನೀರು ಹರಿಸುವುದಾಗಿ ತಿಳಿಸಿದರು.

ತುಂಗಭದ್ರಾ ಜಲಾಶಯದಲ್ಲಿ ಸದ್ಯ 88 ಟಿಎಂಸಿ ಅಡಿ ನೀರು ಸಂಗ್ರಹವಿದೆ. ಇದರಲ್ಲಿ 65 ಟಿಎಂಸಿ ಅಡಿ ನೀರು ರಾಜ್ಯದ ಪಾಲಾಗಿದೆ. ಈಗಾಗಲೇ 10 ಟಿಎಂಸಿ ನೀರು ಬಳಕೆ ಮಾಡಿದ್ದು, ಆಂಧ್ರಕ್ಕೆ  3 ಟಿಎಂಸಿ ನೀರು ಹರಿಸಲಾಗಿದೆ. ಕಾರ್ಖಾನೆಗಳಿಗೆ ನೀರು ಹಂಚಿಕೆ ಹಾಗೂ ಗುತ್ತಿಗೆ ನೌಕರರ ಬಾಕಿ ವೇತನ ಪಾವತಿ ಸಂಬಂಧ ಆ.19ರಂದು ಬೆಂಗಳೂರಿನಲ್ಲಿ ಜಲಸಂಪಲನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಹಾಗೂ ಇಲಾಖೆ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ.

‌ನೀರು ಇಲ್ಲದೆ ಒಣಗುತ್ತಿವೆ ಬೆಳೆಗಳು: 

ರಾಯಚೂರು ಜಿಲ್ಲೆಯ ನಾಲ್ಕು ತಾಲೂಕಿನ ರೈತರು ತುಂಗಭದ್ರಾ ನದಿ ನೀರು ನಂಬಿ ಬಿತ್ತನೆ ಮಾಡಿದ್ದಾರೆ. ಈ ವರ್ಷ ಮಳೆ ಕೈಕೊಟ್ಟಿದ್ದರಿಂದ ಅನ್ನದಾತರು ಕಂಗಾಲಾಗಿ ತುಂಗಭದ್ರಾ ಡ್ಯಾಂನ ತೀರಿಗಾಗಿ ಎದುರು ನೋಡುತ್ತಿದ್ದಾರೆ. ಅದರಲ್ಲೂ ಸಿಂಧನೂರು, ಮಸ್ಕಿ, ಮಾನ್ವಿ ಹಾಗೂ ರಾಯಚೂರು ತಾಲೂಕಿನ ‌ಸಾವಿರಾರು ರೈತರು ಹತ್ತಿ,ತೋಗರಿ,ಮೆಣಸಿನಕಾಯಿಭತ್ತ ಇತರೆ ಬೆಳೆಗಳು ನೀರು ಇಲ್ಲದೆ ಒಣಗುತ್ತಿವೆ. ಆದ್ದರಿಂದ ಕೆಳಭಾಗದ ರೈತರಿಗೆ ಒಂದು ವಾರದೊಳಗೆ ಕಾಲುವೆಗೆ ನೀರು ಹರಿಸಬೇಕು ಎಂದು ಶಾಸಕರು ಆಗ್ರಹಿಸಿದರು. ಮೊದಲು ಕೆಳಭಾಗದ ರೈತರಿಗೆ ನೀರು ಮಾಡಬೇಕು. ಆ ಬಳಿಕ ಮೇಲ್ಭಾಗಕ್ಕೆ ನೀರು ಕೊಡಬೇಕು. ಈ ಹಿಂದೆ ಇದೇ ಪದ್ಧತಿಯನ್ನು ನೀರಾವರಿ ಸಲಹಾ ಸಮಿತಿ ಸಭೆ ಅನುಸರಿಸುತ್ತಿತ್ತು. ಈಗಲೂ ಕೂಡ ಅದೇ ಮಾದರಿ ಅನುಸರಿಸಬೇಕೆಂದು ಕಾಡಾ ಅಧ್ಯಕ್ಷರಿಗೆ ಮನವಿ ಮಾಡಿದ್ರು.

ಗೋಹತ್ಯೆ ನಿಷೇಧ ಕಾಯ್ದೆ ಪುನರ್‌ ಪರಿಶೀಲಿಸಿ: ಉಜ್ಜಯನಿ ಜಗದ್ಗುರು

ಗೇಜ್ ಮೆಂಟೇನ್ ಮಾಡಿ ನೀರು ಕೊಡಿ:

ರಾಯಚೂರು ಜಿಲ್ಲೆಯಲ್ಲಿ ಹರಿಯುವ ತುಂಗಭದ್ರಾ ಎಡದಂಡೆಯ 104 ಮೈಲ್ ಕಾಲುವೆಗೆ 4100 ಕ್ಯೂಸೆಕ್ ನಂತೆ ನೀರು ಹರಿಸಲು ತೀರ್ಮಾನಿಸಲಾಗಿದೆ. ಆದ್ರೂ ಸಹ ಮೇಲ್ಭಾಗದಲ್ಲಿ ನೀರಿನ ಕಳ್ಳತನದಿಂದ ಕೊನೆಯ ಭಾಗದ ರೈತರು ಪ್ರತಿ ವರ್ಷವೂ ನೀರು ಸಿಗದೇ ಪರದಾಡುವ ಪರಿಸ್ಥಿತಿ ಇದೆ. ಇದನ್ನು ತಪ್ಪಿಸಲು ಈ ಬಾರಿ ನೀರಿನ ಕಳ್ಳತನ ತಡೆಗಾಗಿ ಕಲಬುರಗಿ ಪ್ರಾದೇಶಿಕ ಆಯುಕ್ತರಿಗೆ ಜವಾಬ್ದಾರಿ ನೀಡಲಾಗಿದೆ. ಇನ್ನೂ ಪ್ರತಿ ಹಂತದಲ್ಲೂ ಗೇಜ್ ನ್ನು ಮೆಂಟೇನ್ ಮಾಡಬೇಕು. ಅದಕ್ಕೆ ನೀರಾವರಿ ಇಲಾಖೆ ಅಧಿಕಾರಿಗಳು,  ಫೋಲೀಸ್ ಭದ್ರತೆ ನೀಡಬೇಕು. ಜೊತೆಗೆ ಕಾಲುವೆ ಸುತ್ತಮುತ್ತ ಗಸ್ತು ಹಾಕಬೇಕು. ನೀರಿನ ಕಳ್ಳತನ ತಡೆಗೆ ಬೇಕಾದ ಎಲ್ಲಾ ರೀತಿಯ ಅನುಕೂಲಗಳು  ಜಿಲ್ಲಾಡಳಿತ ಮಾಡಬೇಕೆಂದು ಸಭೆಯಲ್ಲಿ ತೀರ್ಮಾನಿಸಲಾಗಿದೆ. 

ಈ ಸಭೆಯಲ್ಲಿ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಶ್ರೀ.ಡಾ ಶರಣಪ್ರಕಾಶ ಪಾಟೀಲ್,  ಸಣ್ಣ ನೀರಾವರಿ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಬೋಸರಾಜು, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಯ ಸಂಸದರಾದ ರಾಜಾ ಅಮರೇಶ್ವರ ನಾಯಕ, ಸಂಸದ ಸಂಗಣ್ಣ ಕರಡಿ ಹಾಗೂ ಶಾಸಕರು, ಅಧಿಕಾರಿಗಳು ಭಾಗವಹಿಸಿದರು.

PREV
Read more Articles on
click me!

Recommended Stories

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಬಂಪರ್ ಆಫರ್: ಜ. 15 ರಿಂದ ಜಾರಿಗೆ ಬರಲಿದೆ 'QR Code' ಆಧಾರಿತ ಅನ್ಲಿಮಿಟೆಡ್ ಪಾಸ್!
ಶಿವಮೊಗ್ಗ ಲವ್ ಮ್ಯಾರೇಜ್: 2ನೇ ಮದುವೆಗೆ ಒಪ್ಪದ ಮೊದಲ ಹೆಂಡತಿಯನ್ನ ಯಮಲೋಕಕ್ಕೆ ಕಳಿಸಿದ ಗೋಪಿ!