* ಕೊರೋನಾ ರೋಗಿಗಳಿಗಾಗಿ 62 ರೆಫೆರಲ್ ಆಸ್ಪತ್ರೆ ಮೀಸಲು
* 92 ಸೋಂಕಿತರು ಮಾತ್ರ ದಾಖಲು
* ರೆಫೆರಲ್ ಆಸ್ಪತ್ರೇಲಿ ಕೊರೋನಾ ಚಿಕಿತ್ಸೆಗೆ ಆಕ್ಷೇಪ
ಜಯಪ್ರಕಾಶ್ ಬಿರಾದಾರ್
ಬೆಂಗಳೂರು(ಫೆ.19): ಕೊರೋನೇತರ ರೋಗಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ರಾಜಧಾನಿಯ ಹೆಚ್ಚುವರಿ ಚಿಕಿತ್ಸೆ ನೀಡುವ (ರೆಫೆರಲ್) ಪ್ರಮುಖ ಸರ್ಕಾರಿ ಆಸ್ಪತ್ರೆಗಳನ್ನು ಕೊರೋನಾ(Coronavirus) ಚಿಕಿತ್ಸೆಯಿಂದ ಮುಕ್ತಗೊಳಿಸಬೇಕು ಎಂಬ ಬೇಡಿಕೆ ಕೇಳಿ ಬಂದಿದೆ.
ಸದ್ಯ ನಗರದಲ್ಲಿ ಕೊರೋನಾ ಸೋಂಕಿತರಿಗೆಂದು 62 ಆಸ್ಪತ್ರೆಗಳಲ್ಲಿ 2,129 ಹಾಸಿಗೆಗಳನ್ನು ಮೀಸಲಿಡಲಾಗಿದೆ. ಆದರೆ, ಅವುಗಳಲ್ಲಿ 76 ಸೋಂಕಿತರು(Patients) ಮಾತ್ರ ಚಿಕಿತ್ಸೆ(Treatment) ಪಡೆಯುತ್ತಿದ್ದಾರೆ. ಹೀಗಾಗಿ, ಸರ್ಕಾರಿ ಆಸ್ಪತ್ರೆಗಳಿಗೆ(Government Hospitals) ಸೋಂಕಿತರ ದಾಖಲಾತಿ ಕಡಿಮೆ ಇರುವುದರಿಂದ ಸಾಕಷ್ಟುಹಾಸಿಗೆ ಸಾಮರ್ಥ್ಯವಿರುವ ಎರಡು ಪ್ರಮುಖ ಆಸ್ಪತ್ರೆಗಳನ್ನು ಮಾತ್ರ ಕೊರೋನಾ ಚಿಕಿತ್ಸೆಗೆ ಮೀಸಲಿಡಬೇಕು ಎಂಬ ಸಲಹೆಯು ಕೇಳಿ ಬಂದಿದೆ.
Covid 19 Crisis: ಕೊರೋನಾ ನಿರ್ಬಂಧ ತೆರವು ಮಾಡಿ: ರಾಜ್ಯಗಳಿಗೆ ಕೇಂದ್ರ ಸೂಚನೆ!
ಬಿಬಿಎಂಪಿ ಕೊರೋನಾ ವಾರ್ ರೂಂ(BBMP Corona War Room) ಮಾಹಿತಿ ಪ್ರಕಾರ, ನಗರದಲ್ಲಿ ಸರ್ಕಾರವು ಕೊರೋನಾ ಸೋಂಕಿತರ ಚಿಕಿತ್ಸೆಗೆ 18 ಸರ್ಕಾರಿ ಆಸ್ಪತ್ರೆ, ಎರಡು ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗಳು, 42 ಖಾಸಗಿ ಆಸ್ಪತ್ರೆಗಳನ್ನು ಸೇರಿ 62 ಆಸ್ಪತ್ರೆಗಳನ್ನು ಗುರುತಿಸಲಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ 1435, ಖಾಸಗಿಯಲ್ಲಿ 694 ಸೇರಿ 2,192 ಹಾಸಿಗೆಗಳನ್ನು ಮೀಸಲಿಡಲಾಗಿದೆ. ಈ ಆಸ್ಪತ್ರೆಗಳ ಪೈಕಿ ಬೌರಿಂಗ್ ಆಸ್ಪತ್ರೆ ಹೊರತು ಪಡಿಸಿ ಉಳಿದ 61 ಆಸ್ಪತ್ರೆಗಳಲ್ಲಿ ಬೆರಳೆಣಿಕೆಯಷ್ಟು ದಾಖಲಾಗಿದ್ದಾರೆ. ಅದರಲ್ಲೂ 40ಕ್ಕೂ ಹೆಚ್ಚು ಆಸ್ಪತ್ರೆಗಳಲ್ಲಿ ಒಬ್ಬರು ಅಥವಾ ಇಬ್ಬರು ಸೋಂಕಿತರು ಸೋಂಕಿತರು ಮಾತ್ರ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೀಸಲಿಟ್ಟಹಾಸಿಗೆಗಳ ಪೈಕಿ 76 ಮಾತ್ರ ಭರ್ತಿಯಾಗಿದ್ದು, ಶೇ. 97 ರಷ್ಟು ಖಾಲಿ ಇವೆ.
ಮೀಸಲಿಟ್ಟ ಆಸ್ಪತ್ರೆಗಳ ಪೈಕಿ ಬಹುತೇಕ ರೆಫೆರಲ್ ಆಸ್ಪತ್ರೆಗಳಾಗಿದ್ದು, ಸುತ್ತಮುತ್ತಲ ಜಿಲ್ಲೆಗಳು, ದೂರದ ಊರುಗಳಿಂದ ರೋಗಿಗಳು ಆಗಮಿಸುತ್ತಿದ್ದಾರೆ. ಪ್ರಮುಖವಾಗಿ ವಿಕ್ಟೋರಿಯಾ, ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆ, ಸಾಂಕ್ರಾಮಿಕ ರೋಗಗಳ ಆಸ್ಪತ್ರೆ, ಕೆ.ಸಿ.ಜನರಲ್ ಆಸ್ಪತ್ರೆ, ರಾಜೀವ್‌ಗಾಂಧಿ ಎದೆರೋಗಗಳ ಆಸ್ಪತ್ರೆ, ಇಎಸ್‌ಐ ಆಸ್ಪತ್ರೆಗಳಿವೆ. ಇವುಗಳಲ್ಲಿ ಕೊರೋನಾ ಚಿಕಿತ್ಸೆ(Corona Treatment) ಕೂಡಾ ಇದೆ ಎಂಬ ಕಾರಣಕ್ಕೆ ಇತರೆ ರೋಗಿಗಳು ಆಗಮಿಸಲು ಹಿಂದೇಟು ಹಾಕುತ್ತಿದ್ದಾರೆ. ಜತೆಗೆ ಆಸ್ಪತ್ರೆ ಆಡಳಿತ ಮಂಡಳಿಗಳಿಗೂ ಕೊರೋನಾ ಸೋಂಕಿತರ ಚಿಕಿತ್ಸೆ ಮತ್ತು ಕೊರೋನೇತರ ಚಿಕಿತ್ಸೆ ನಿರ್ವಹಣೆ ಕಷ್ಟ ಸಾಧ್ಯವಾಗುತ್ತಿದೆ. ಇವುಗಳಲ್ಲಿ ಕೆಲ ಆಸ್ಪತ್ರೆಗಳಲ್ಲಿ ಇತರೆ ರೋಗಿಗಳ ದಾಖಲಾತಿಗೆ ಹಾಸಿಗೆ ಕೊರತೆ ಎದುರಾಗಿದೆ.
Covid Crisis: ಬೆಂಗ್ಳೂರಲ್ಲಿ ಕೋವಿಡ್ ಪರೀಕ್ಷೆ ಅರ್ಧದಷ್ಟು ಇಳಿಕೆ: 7 ಸಾವು
ಬೌರಿಂಗ್ ಅಥವಾ ರಾಜೀವ್‌ಗಾಂಧಿ ಮೀಸಲಿಡಲಿ:
ಕೊರೋನಾಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ 76ಕ್ಕಿಂತ ಕಡಿಮೆ ಇದೆ. ನಿತ್ಯ ಶೇ.2ರಷ್ಟುಸೋಂಕಿತರು ಮಾತ್ರ ಆಸ್ಪತ್ರೆ ದಾಖಲಾಗುತ್ತಿದ್ದಾರೆ. ಹೀಗಾಗಿ, ಬೌರಿಂಗ್ ಅಥವಾ ರಾಜೀವ್‌ಗಾಂಧಿ ಆಸ್ಪತ್ರೆಯನ್ನು ಕೊರೋನಾ ಸೋಂಕಿಗೆ ಮೀಸಲಿಟ್ಟು ಇತರೆ ಆಸ್ಪತ್ರೆಗಳನ್ನು ಬಿಡುಗಡೆ ಮಾಡಬಹುದು. ಇದರಿಂದ ಇತರೆ ರೋಗಿಗಳ ಚಿಕಿತ್ಸೆಗೆ ಅನುಕೂಲವಾಗಲಿದೆ. ಅನಗತ್ಯ ಖರ್ಚು ವೆಚ್ಚವೂ ತಗ್ಗಲಿದೆ ಎನ್ನುತ್ತಾರೆ ನಗರ ಪ್ರಮುಖ ರೆಫೆರಲ್ ಆಸ್ಪತ್ರೆಗಳ ವೈದ್ಯರು.
ಪ್ರಮುಖ ಆಸ್ಪತ್ರೆ ಕೊರೋನಾ ಮೀಸಲು ಹಾಸಿಗೆ ಭರ್ತಿ ಹಾಸಿಗೆ
ಬೌರಿಂಗ್ 265 8
ಚರಕ 100 0
ಸಾಂಕ್ರಾಮಿಕ ರೋಗಗಳ ಆಸ್ಪತ್ರೆ 40 2
ಜಯನಗರ ಜನರಲ್ 72 4
ಘೋಶ್ 68 0
ಇಂದಿರಾಗಾಂಧಿ 110 0
ಕೆ.ಸಿ.ಜನರಲ್ 130 1
ಸಿ.ವಿ.ರಾಮನ್ 18 1
ಆಸ್ಪತ್ರೆ ವಿಧ ಮೀಸಲು ಹಾಸಿಗೆಗಳು ಭರ್ತಿ
ಸರ್ಕಾರಿ ಆಸ್ಪತ್ರೆಗಳು 998 17
ಸರ್ಕಾರಿ ವೈದ್ಯಕೀಯ ಕಾಲೇಜು 435 8
ಖಾಸಗಿ ಆಸ್ಪತ್ರೆಗಳು 230 17
ಖಾಸಗಿ ವೈದ್ಯಕೀಯ ಕಾಲೇಜು 479 34
ಒಟ್ಟು 2142 76