ನಾಮಪತ್ರ ಸಲ್ಲಿಕೆಗೆ ಇಂದೇ ಕೊನೆ ದಿನ

First Published Apr 24, 2018, 10:08 AM IST
Highlights

ಇಂದು (ಏ.24) ಕೊನೆಯ ದಿನವಾಗಿದ್ದರೂ, ಪ್ರಮುಖ ರಾಜಕೀಯ ಪಕ್ಷಗಳು ಅಭ್ಯರ್ಥಿಗಳ ಆಯ್ಕೆಯನ್ನು ಅಂತಿಮಗೊಳಿಸುವುದು ವಿಳಂಬವಾಗುತ್ತಿದೆ. ಪರಿಣಾಮ ಅಭ್ಯರ್ಥಿಗಳ ಸಲ್ಲಿಕೆಯಲ್ಲಿಯೂ ವಿಳಂಬವಾಗುತ್ತಿದೆ. ನಾಮಪತ್ರ ಸಲ್ಲಿಕೆಗೆ ಕೇವಲ ಒಂದು ದಿನ ಬಾಕಿ ಇದೆ. ಆದರೂ ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಅಭ್ಯರ್ಥಿಗಳನ್ನು ಅಖೈರುಗೊಳಿಸುವಲ್ಲಿ ಕಸರತ್ತು ನಡೆಸುತ್ತಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಈಗಾಗಲೇ ಚಾಮುಂಡೇಶ್ವರಿ ಕ್ಷೇತ್ರದಿಂದ ಕಣಕ್ಕಿಳಿದಿದ್ದು, ಇಂದು ಬಾದಾಮಿ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಕೆ ಮಾಡುವ ಮೂಲಕ ಎರಡನೇ ಕ್ಷೇತ್ರದಲ್ಲಿ ಅಖಾಡಕ್ಕಿಳಿಯಲಿದ್ದಾರೆ. ಮುಖ್ಯಮಂತ್ರಿಗೆ ಪ್ರತಿಸ್ಪರ್ಧಿಯಾಗಿ ಬಿಜೆಪಿ ಸಂಸದ ಶ್ರೀರಾಮುಲು ಅವರು ಕಣಕ್ಕಿಳಿಯುವ ಸಾಧ್ಯತೆಗಳಿವೆ. ಶ್ರೀರಾಮುಲು ಈಗಾಗಲೇ ಮೊಳಕಾಲ್ಮೂರು ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದಾರೆ.

ಬೆಂಗಳೂರು(ಏ.24) ರಾಜ್ಯ ವಿಧಾನಸಭೆ ಚುನಾವಣಾ ಅಖಾಡಕ್ಕಿಳಿಯ ಬಯಸುವ ಅಭ್ಯರ್ಥಿಗಳಿಗೆ ನಾಮಪತ್ರ ಸಲ್ಲಿಸಲು ಇಂದು(ಮಂಗಳವಾರ) ಕಡೆ ದಿನವಾಗಿದ್ದು, ಚುನಾವಣಾ ಆಯೋಗಕ್ಕೆ ಸೋಮವಾರ ಒಂದೇ ದಿನ ಒಟ್ಟು 1,127 ನಾಮಪತ್ರ ಸಲ್ಲಿಕೆಯಾಗಿವೆ. ಏ.17ರಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭಗೊಂಡಿದೆ.

ಇಂದು (ಏ.24) ಕೊನೆಯ ದಿನವಾಗಿದ್ದರೂ, ಪ್ರಮುಖ ರಾಜಕೀಯ ಪಕ್ಷಗಳು ಅಭ್ಯರ್ಥಿಗಳ ಆಯ್ಕೆಯನ್ನು ಅಂತಿಮಗೊಳಿಸುವುದು ವಿಳಂಬವಾಗುತ್ತಿದೆ. ಪರಿಣಾಮ ಅಭ್ಯರ್ಥಿಗಳ ಸಲ್ಲಿಕೆಯಲ್ಲಿಯೂ ವಿಳಂಬವಾಗುತ್ತಿದೆ. ನಾಮಪತ್ರ ಸಲ್ಲಿಕೆಗೆ ಕೇವಲ ಒಂದು ದಿನ ಬಾಕಿ ಇದೆ. ಆದರೂ ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಅಭ್ಯರ್ಥಿಗಳನ್ನು ಅಖೈರುಗೊಳಿಸುವಲ್ಲಿ ಕಸರತ್ತು ನಡೆಸುತ್ತಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಈಗಾಗಲೇ ಚಾಮುಂಡೇಶ್ವರಿ ಕ್ಷೇತ್ರದಿಂದ ಕಣಕ್ಕಿಳಿದಿದ್ದು, ಇಂದು ಬಾದಾಮಿ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಕೆ ಮಾಡುವ ಮೂಲಕ ಎರಡನೇ ಕ್ಷೇತ್ರದಲ್ಲಿ ಅಖಾಡಕ್ಕಿಳಿಯಲಿದ್ದಾರೆ. ಮುಖ್ಯಮಂತ್ರಿಗೆ ಪ್ರತಿಸ್ಪರ್ಧಿಯಾಗಿ ಬಿಜೆಪಿ ಸಂಸದ ಶ್ರೀರಾಮುಲು ಅವರು ಕಣಕ್ಕಿಳಿಯುವ ಸಾಧ್ಯತೆಗಳಿವೆ. ಶ್ರೀರಾಮುಲು ಈಗಾಗಲೇ ಮೊಳಕಾಲ್ಮೂರು ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದಾರೆ.

ಏ.17ರಿಂದ ಏ.23ರವರೆಗೆ ರಾಜ್ಯದಲ್ಲಿ 2500ಕ್ಕೂ ಅಧಿಕ ಅರ್ಜಿಗಳು ಸಲ್ಲಿಕೆಯಾಗಿವೆ. ಸೋಮವಾರ ಒಂದೇ ದಿನ ಬಿಜೆಪಿ ವತಿಯಿಂದ 178 ಉಮೇದುವಾರಿಕೆ ಸಲ್ಲಿಕೆಯಾದರೆ, ಕಾಂಗ್ರೆಸ್ 174 ಮತ್ತು ಜೆಡಿಎಸ್‌'ನಿಂದ 141 ನಾಮಪತ್ರಗಳು ಸಲ್ಲಿಕೆಯಾಗಿವೆ. ಪಕ್ಷೇತರರ ನಾಮಪತ್ರಗಳು ಅಧಿಕವಾಗಿ ಸಲ್ಲಿಕೆಯಾಗಿದ್ದು, ಒಟ್ಟು 457 ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಸಿದ್ದಾರೆ.

ತುಮಕೂರು ಜಿಲ್ಲೆಯಲ್ಲಿ ಅಧಿಕ ಉಮೇದುವಾರಿಕೆ ಸಲ್ಲಿಕೆಯಾಗಿವೆ. ಒಟ್ಟು 84 ನಾಮಪತ್ರ ಸಲ್ಲಿಕೆಯಾಗಿದ್ದು, ನಂತರ ಬೆಳಗಾವಿ 69, ಬಳ್ಳಾರಿ 48, ಬಿಬಿಎಂಪಿ ದಕ್ಷಿಣ 48 , ಶಿವಮೊಗ್ಗ 46 ನಾಮಪತ್ರ ಸಲ್ಲಿಕೆಯಾಗಿವೆ. ಉಳಿದಂತೆ ಬಿಬಿಎಂಪಿ ಕೇಂದ್ರ 38, ಬಿಬಿಎಂಪಿ ಉತ್ತರ 33, ಬಾಗಲಕೋಟೆ 42, ಬೆಂಗಳೂರು ಗ್ರಾಮಾಂತರ 12, ಬೆಂಗಳೂರು ನಗರ 28, ಕೋಲಾರ 55, ಬೀದರ್ 19, ಚಾಮರಾಜನಗರ 21, ಚಿಕ್ಕಬಳ್ಳಾಪುರ 44, ಚಿತ್ರದುರ್ಗ 38, ದಕ್ಷಿಣ ಕನ್ನಡ 20, ದಾವಣಗೆರೆ 35, ಧಾರವಾಡ 40, ಗದಗ 10, ಕಲಬುರಗಿ 27, ಹಾಸನ 22, ಹಾವೇರಿ 43, ಕೊಡಗು 5, ಕೊಪ್ಪಳ 30, ಮಂಡ್ಯ 28, ಮೈಸೂರು 49, ರಾಯಚೂರು 39, ರಾಮನಗರ 16, ಉಡುಪಿ 15, ಉತ್ತರಕನ್ನಡ 21, ವಿಜಯಪುರ 37, ಯಾದಗಿರಿ 18, ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಚುನಾವಣಾ ಆಯೋಗ ತಿಳಿಸಿವೆ.

ಟಿಕೆಟ್ ಆಯ್ಕೆ ಅಂತಿಮವಾಗದ ಕೊನೆ ಕ್ಷಣದಲ್ಲಿ ಬಿ ಫಾರಂ ಲಭ್ಯವಾಗುವ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಇಂದು ನಾಮಪತ್ರ ಸಲ್ಲಿಸುವ ಸಾಧ್ಯತೆಗಳಿವೆ. ಈವರೆಗೆ ಮಹಿಳಾ ಸಬಲೀಕರಣ ಪಕ್ಷದ (ಎಂಇಪಿ) ಯಾವೊಬ್ಬ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿಲ್ಲ. ಮಂಗಳವಾರವೇ ಎಲ್ಲಾ ಅಭ್ಯರ್ಥಿಗಳು ಕಣಕ್ಕಿಳಿಯುವ ಕ್ಷೇತ್ರದಲ್ಲಿ ಉಮೇದುವಾರಿಕೆ ಸಲ್ಲಿಕೆ ಮಾಡಲಿದ್ದಾರೆ ಎಂದು ಹೇಳಲಾಗಿದೆ. ಏ.25ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಅಂದು ತಿರಸ್ಕೃತ ಮತ್ತು ಕ್ರಮಬದ್ಧವಾದ ನಾಮಪತ್ರಗಳ ಪಟ್ಟಿಯನ್ನು ಆಯಾ

ವಿಧಾನಸಭಾ ಕ್ಷೇತ್ರಗಳ ಚುನಾವಣಾಧಿಕಾರಿಗಳು ಪ್ರಕಟಿಸಲಿದ್ದಾರೆ. ಏ.27ರವರೆಗೆ ನಾಮಪತ್ರಗಳನ್ನು ವಾಪಸ್ ಪಡೆಯಲು ಕೊನೆಯದಿನವಾಗಿದೆ.

click me!