ಜೆಡಿಎಸ್ ಗೆ ಲಾಭ ತಂದ ಮಾಯಾವತಿ ಮ್ಯಾಜಿಕ್

First Published May 16, 2018, 8:14 AM IST
Highlights

ಚುನಾವಣೆ ಆರಂಭದಲ್ಲೇ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಉತ್ತರಪ್ರದೇ ಶದ ಮಾಜಿ ಮುಖ್ಯಮಂತ್ರಿ ಮಾಯಾವತಿ ಅವರೊಂದಿಗೆ ಸ್ನೇಹ ಬೆಳೆಸಿ ತೋರಿದ ರಾಜಕೀಯ ಚಾಣಾಕ್ಷತನವು ಫಲ ನೀಡಿದೆ. ಆದರೆ ಆಂಧ್ರಪ್ರದೇಶದ ಅಸಾದುದ್ದೀನ್ ಒವೈಸಿ ಜೊತೆಗಿನ ಗೆಳೆತನವು ನಿರೀಕ್ಷಿತ ಮಟ್ಟದಲ್ಲಿ ಚುನಾವಣೆಯಲ್ಲಿ ಕೆಲಸ ಮಾಡಿಲ್ಲ ಎಂಬುದು ಸ್ಪಷ್ಟವಾಗಿದೆ.
 

ಬೆಂಗಳೂರು : ಪರಂಪರಾಗತ ಹಳೆ ಮೈಸೂರು ಪ್ರಾಂತ್ಯದ ಕೋಟೆಯನ್ನು ಮತ್ತಷ್ಟು ಭದ್ರಪಡಿಸಿಕೊಂಡ ದಳಪತಿಗಳು, ವಿಧಾನಸಭಾ ಚುನಾವಣಾ ಸಮರಾಂಗಣದಲ್ಲಿ ‘ಆನೆ’ ಮೇಲೆ ಕುಳಿತು ಹೂಡಿದ ಅಸ್ತ್ರಗಳಿಗೆ ಬಂಡಾಯ ಅಭ್ಯರ್ಥಿಗಳು ಸೇರಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತವರ ಆಪ್ತರು ಧೂಳೀಪಟವಾಗಿದ್ದಾರೆ. 

ಚುನಾವಣೆ ಆರಂಭದಲ್ಲೇ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಉತ್ತರಪ್ರದೇ ಶದ ಮಾಜಿ ಮುಖ್ಯಮಂತ್ರಿ ಮಾಯಾವತಿ ಅವರೊಂದಿಗೆ ಸ್ನೇಹ ಬೆಳೆಸಿ ತೋರಿದ ರಾಜಕೀಯ ಚಾಣಾಕ್ಷತನವು ಫಲ ನೀಡಿದೆ. ಆದರೆ  ಆಂಧ್ರ ಪ್ರದೇಶದ ಅಸಾದುದ್ದೀನ್ ಒವೈಸಿ ಜೊತೆಗಿನ ಗೆಳೆತನವು ನಿರೀಕ್ಷಿತ ಮಟ್ಟದಲ್ಲಿ ಚುನಾವಣೆಯಲ್ಲಿ ಕೆಲಸ ಮಾಡಿಲ್ಲ ಎಂಬುದು ಸ್ಪಷ್ಟವಾಗಿದೆ.

ದಶಕಗಳಿಂದ ಅಧಿಕಾರ ಸಿಗದೆ ಪರಿತಪಿಸುತ್ತಿದ್ದ ಜೆಡಿಎಸ್, ವಿಧಾನಸಭಾ ಚುನಾವಣೆ ಆರಂಭದಲ್ಲಿ ಚುನಾವಣೆ ಗೆಲುವಿಗೆ ತಮ್ಮ ಸಾಂಪ್ರದಾಯಿಕ ಒಕ್ಕಲಿಗ ಮತ ಬ್ಯಾಂಕ್ ಭದ್ರಪಡಿಸಿ ಕೊಂಡು ಇತರೆ ವರ್ಗಗಳ ಕ್ರೋಢೀಕರಣಕ್ಕೆ ಕಾರ್ಯತಂತ್ರ ರೂಪಿಸಿತು. ಕುಮಾರ ಸ್ವಾಮಿ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿಸಿ ಒಕ್ಕಲಿಗ ವರ್ಗಗಳು ಚದುರದಂತೆ ನೋಡಿ ಕೊಂಡ ಜೆಡಿಎಸ್, ಆನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ದಲಿತ ವರ್ಗದಲ್ಲಿ ಮಡುಗಟ್ಟಿದ್ದ ಕೋಪವನ್ನು ಬಳಸಿಕೊಳ್ಳಲು ಮುಂದಾಯಿತು.

ಆಗ ರಾಜಕೀಯ ಚತುರತೆ ಮೆರೆದ ದೇವೇಗೌಡರು ದೆಹಲಿಯಲ್ಲಿ ಖುದ್ದು ಬಿಎಸ್‌ಪಿ ನಾಯಕಿ ಮಾಯಾವತಿ ಅವರ ಮನೆಗೆ ತೆರಳಿ ಮೈತ್ರಿ ರಾಜಕಾರಣ ಬೆಸೆದರು. ಚಿತ್ರದುರ್ಗದ ಡಿ.ಮಂಜುನಾಥ್, ಎಚ್.ಸಿ.ಮಹದೇವಪ್ಪ, ಶ್ರೀನಿವಾಸ್ ಪ್ರಸಾದ್ ಅವರಂತಹ ಘಟಾ ನುಘಟಿ ದಲಿತ ನಾಯಕರು ಪಕ್ಷ ತೊರೆದ ಬಳಿಕ ದಲಿತ ನಾಯಕರ ಕೊರತೆ ಎದುರಿಸುತ್ತಿದ್ದ ಜೆಡಿಎಸ್ ಪಕ್ಷ ಬಿಎಸ್‌ಪಿ ನಾಯಕಿ ಮಾಯವತಿ ಮೂಲಕ ಆ ಶೂನ್ಯತೆಯನ್ನು ತುಂಬಿಸಿಕೊಳ್ಳುವಲ್ಲಿ ಯಶಸ್ವಿ ಯಾಗಿದೆ. 

ಈ ಮೈತ್ರಿ ರಾಜಕಾರಣವು ಹಳೆ ಮೈಸೂರು ಪ್ರಾಂತ್ಯದ ಪಾರುಪತ್ಯ ಮೆರೆಯಲು ಸಹಕಾರಿಯಾಗಿದೆ. ನಿರೀಕ್ಷೆಗೂ ಮೀರಿ ಜೆಡಿಎಸ್ ಬುಟ್ಟಿಗೆ ದಲಿತ ಮತಗಳು ಬಿದ್ದಿವೆ. ಕೊಳ್ಳೇಗಾಲದಲ್ಲಿ ಬಿಎಸ್‌ಪಿ ಮಹೇಶ್ ವಿಜಯದ ನಗೆ ಬೀರಲು ಸಹ ಕಾರಣವಾಗಿದೆ. ಚಾಮುಂಡೇಶ್ವರಿ, ಟಿ.ನರಸೀಪುರ, ಚನ್ನಪಟ್ಟಣ, ನಾಗಮಂಗಲ, ಗಂಗಾವತಿ, ಮಳವಳ್ಳಿ, ಶ್ರೀರಂಗಪಟ್ಟಣ ಸೇರಿದಂತೆ ಬಹುತೇಕ ಕ್ಷೇತ್ರಗಳಲ್ಲಿ ಗಣನೀಯ ಪ್ರಮಾಣ ದಲ್ಲಿ ದಲಿತರ ಮತಗಳು ದಳಪತಿಗಳ ಬುಟ್ಟಿಗೆ ಬಿದ್ದಿವೆ. ಹಾಗೆಯೇ ಜೆಡಿಎಸ್‌ಗೆ ಪರೋಕ್ಷವಾಗಿ ಬಿಜೆಪಿಯಲ್ಲಿರುವ ಹಿರಿಯ ದಲಿತ  ಸಮುದಾಯದ ತಲೆಯಾಳು ಶ್ರೀನಿವಾಸ್ ಪ್ರಸಾದ್ ಬೆಂಬಲ ಸಹ ಲಭಿಸಿದ್ದು, ಚಾಮುಂಡೇಶ್ವರಿ ಮತ್ತು ಟಿ.ನರಸೀಪುರದಲ್ಲಿ ದಳಪತಿಗಳು ವಿಜಯ ಪತಾಕೆ ಹಾರಿಸಲು ಸಹಾಯವಾಗಿದೆ.

ಆದರೆ ಬಿಎಸ್‌ಪಿ ಸ್ನೇಹ ಮಾಡಿ ದಲಿತ ಮತ ಗಳನ್ನು ಸೆಳೆದಂತೆ ಜೆಡಿಎಸ್, ಆಂಧ್ರಪ್ರದೇಶದ ಮುಸ್ಲಿಂ ಸಮುದಾಯದ ನಾಯಕಅಸಾದುದ್ದೀನ್ ಒವೈಸಿ ಕೈಜೋಡಿಸಿ ಅಲ್ಪಸಂಖ್ಯಾತ ಮತ ಗಳಿಸಲು ನಿರೀಕ್ಷಿತ ಮಟ್ಟದ ಯಶಸ್ಸು ಸಿಕ್ಕಿಲ್ಲ. ಈ ಮೈತ್ರಿಯು ಖುದ್ದು ಜೆಡಿಎಸ್ ವರಿಷ್ಠ ಕುಮಾರಸ್ವಾಮಿ ಅವರು ಸ್ವಕ್ಷೇತ್ರ ರಾಮನಗರದಲ್ಲಿ ಫಲಪ್ರದವಾಗಿಲ್ಲ ಎಂಬುದು ಅಲ್ಲಿ ಅಲ್ಪಸಂಖ್ಯಾತ ಸಮುದಾಯದ ಬಾಹುಳ್ಯ ಪ್ರದೇಶದಲ್ಲಿ ಜೆಡಿಎಸ್ ಮತಗಳಿಕೆ ತೋರಿಸುತ್ತದೆ.

ಪಕ್ಷದಿಂದ ಚಾಮರಾಜಪೇಟೆ ಶಾಸಕ ಜಮೀರ್ ಅಹಮ್ಮದ್, ಸಿ.ಎಂ.ಇಬ್ರಾಹಿಂ ಅವರು ಹೊರನಡೆದ ನಂತರ ಜೆಡಿಎಸ್ ಪಕ್ಷವೂ ಮುಸ್ಲಿಂ ನಾಯಕರ ಕೊರತೆಯನ್ನು ದೊಡ್ಡ ಮಟ್ಟದಲ್ಲಿ ಎದುರಿಸಿದೆ. ಒವೈಸಿ ಸ್ನೇಹಕ್ಕಿಂತ ದೇವೇಗೌಡ ಮತ್ತು ಕುಮಾರಸ್ವಾಮಿ ಅವರ ವೈಯಕ್ತಿಕ ವರ್ಚಸ್ಸು ಒಂದಷ್ಟು ಮುಸ್ಲಿಂ ಮತಗಳ ಸೆಳೆಯಲು ನೆರವಾಗಿರಬಹುದು.

https://kannada.asianetnews.com/karnataka-assembly-election-2018/karnataka-election-result-bjp-win-or-lose-p8suwj

https://kannada.asianetnews.com/karnataka-assembly-election-2018/belagavi-winners-full-list-p8sbmd

https://kannada.asianetnews.com/karnataka-assembly-election-2018/bengaluru-city-and-rural-winner-candidates-list-p8s2x2

click me!