ಪ್ರಾಸ್ಟಿಟ್ಯೂಟ್‌, ಅಫೇರ್, ಹೌಸ್‌ ವೈಫ್‌... ಕೋರ್ಟ್‌ನಲ್ಲಿ ಇನ್ಮುಂದೆ ಈ ಪದಗಳು ಬ್ಯಾನ್‌!

By Santosh NaikFirst Published Aug 16, 2023, 4:07 PM IST
Highlights


ನ್ಯಾಯಾಲಯಗಳ ವಿಚಾರಣೆಯಲ್ಲಿ ಹಾಗೂ ತೀರ್ಪಿನಲ್ಲಿ ಇನ್ನುಮುಂದೆ ಪ್ರಾಸ್ಟಿಟ್ಯೂಟ್‌, ಮಿಸ್ಟ್ರೆಸ್‌ನಂಥ ಪದಗಳನ್ನು ಬಳಸುವಂತಿಲ್ಲ. ಇಂಥ ಮಹಿಳೆಯರಿಗೆ ಬಳಸುವ ಬೇರೆ ಪಾರಿಭಾಷಿಕ ಪದಗಳನ್ನು ಸುಪ್ರೀಂ ಕೋರ್ಟ್‌ ಬಿಡುಗಡೆ ಮಾಡಿದ್ದು, ಮೂವರು ಮಹಿಳಾ ನ್ಯಾಯಾಧೀಶರು ಈ ಕೈಪಿಡಿಯನ್ನು ರಚನೆ ಮಾಡಿದ್ದಾರೆ.

ನವದೆಹಲಿ (ಆ.16): ಲಿಂಗ ಸೂಚಕ ಅದರಲ್ಲೂ ಮಹಿಳೆಯರ ಕುರಿತಾಗಿಯೇ ಬಳಸಲಾಗುವಂಥ ಕೆಲವೊಂದು ಪದಗಳನ್ನು ಸುಪ್ರೀಂ ಕೋರ್ಟ್‌ ಬ್ಯಾನ್‌ ಮಾಡಿದೆ. ಅಂಥ ಪದಗಳನ್ನು ಇನ್ನು ಮುಂದೆ ನ್ಯಾಯಾಲಯದ ವಿಚಾರಣೆಗಳಲ್ಲಿ ಹಾಗೂ ತೀರ್ಪಿನಲ್ಲಿ ಬಳಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್‌ ತಿಳಿಸಿದೆ.  ಮಹಿಳೆಯರಿಗೆ ಬಳಸುವ ಅವಹೇಳನಕಾರಿ ಪದಗಳನ್ನು ಹತ್ತಿಕ್ಕಲು ಲಿಂಗ ಸೂಚಕ ಪದಗಳನ್ನು ಬದಲಿಸುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ಕೈಪಿಡಿಯನ್ನು ಪ್ರಕಟ ಮಾಡಿದೆ. ಮಾರ್ಚ್‌ 8 ರಂದು ಸುಪ್ರೀಂ ಕೋರ್ಟ್‌ನಲ್ಲಿ ನಡೆದ ಮಹಿಳಾ ದಿನದ ಕಾರ್ಯಕ್ರಮದಲ್ಲಿ, ಕಾನೂನು ಸಂಬಂಧಿತ ಕಾರ್ಯಗಳಲ್ಲಿ ಮಹಿಳೆಯರ ಕುರಿತಾಗಿ ಬಳಸಲಾಗುವ ಆಕ್ಷೇಪಾರ್ಹ ಪದಗಳ ಬಳಕೆಯನ್ನು ನಿಲ್ಲಿಸಬೇಕು. ಈಗಿರುವ ಅಂಥ ಪದಗಳ ಬದಲಿಗೆ ಬೇರೆ ಯಾವ ಪದಗಳನ್ನು ಬಳಕೆ ಮಾಡಬೇಕು ಎನ್ನುವುದರ ಕುರಿತು ಶೀಘ್ರದಲ್ಲಿಯೇ ನಿಘಂಟು ಕೂಡ ಹೊರಬರಲಿದೆ ಎಂದು ಸುಪ್ರೀಂ ಕೋರ್ಟ್‌ ಸಿಜೆಐ ಡಿವೈ ಚಂದ್ರಚೂಡ್‌ ಹೇಳಿದ್ದರು. ಅದರಂತೆ, ಬುಧವಾರ ಮೂವರು ಮಹಿಳಾ ನ್ಯಾಯಾಧೀಶರು ಸೇರಿ ರಚನೆ ಮಾಡಿರುವ ಈ ಕೈಪಿಡಿ ಬಿಡುಗಡೆ ಮಾಡಲಾಗಿದೆ.

ಆಗಸ್ಟ್ 16 ರ ಬುಧವಾರದಂದು ಕೈಪಿಡಿಯನ್ನು ಬಿಡುಗಡೆ ಮಾಡಿದ ಸಿಜೆಐ ಡಿವೈ ಚಂದ್ರಚೂಡ್, ನ್ಯಾಯಾಧೀಶರು ಮತ್ತು ವಕೀಲರು ಯಾವ ಪದಗಳು ಸಾಂಪ್ರದಾಯಿಕವಾಗಿವೆ ಮತ್ತು ಅವುಗಳನ್ನು ಹೇಗೆ ತಪ್ಪಿಸಬೇಕು ಎಂಬುದನ್ನು ಅರ್ಥಮಾಡಿಕೊಳ್ಳಲು ಸುಲಭವಾಗುತ್ತದೆ ಎಂದು ಹೇಳಿದರು.

ಕೈಪಿಡಿಯಲ್ಲಿ ಏನಿದೆ?:ಈ ಕೈಪಿಡಿಯಲ್ಲಿ ಆಕ್ಷೇಪಾರ್ಹ ಪದಗಳ ಪಟ್ಟಿ ಮತ್ತು ಬದಲಿಗೆ ಬಳಸಬೇಕಾದ ಪದಗಳು ಮತ್ತು ವಾಕ್ಯಗಳಿವೆ ಎಂದು ಸಿಜೆಐ ಚಂದ್ರಚೂಡ್ ಹೇಳಿದ್ದಾರೆ.  ನ್ಯಾಯಾಲಯದಲ್ಲಿ ವಾದಗಳನ್ನು ಮಾಡವಾಗ, ಆದೇಶಗಳನ್ನು ನೀಡಲು ಮತ್ತು ಅದರ ಪ್ರತಿಗಳನ್ನು ತಯಾರಿಸಲು ಅವುಗಳನ್ನು ಬಳಸಬಹುದು. ಈ ಕೈಪಿಡಿ ವಕೀಲರಿಗೆ ಮತ್ತು ನ್ಯಾಯಾಧೀಶರಿಗೆ ಸಹಾಯವಾಗಲಿದೆ. ಈ ಕೈಪಿಡಿಯು ಹಿಂದೆ ನ್ಯಾಯಾಲಯಗಳು ಬಳಸಿದ ಪದಗಳನ್ನು ಒಳಗೊಂಡಿದೆ. ತೀರ್ಪಿನಲ್ಲಿ ಅಂಥ ಪದಗಳು ಬಳಸಿದ್ದು ಹೇಗೆ ತಪ್ಪು ಇದರಿಂದ ನ್ಯಾಯ ಅವರ ಪಾಲಿಗೆ ಹೇಗೆ ತಪ್ಪಿದಂತಾಗಿ ಎನ್ನುವುದನ್ನೂ ವಿವರಿಸಲಾಗಿದೆ.

ಈ ಕೈಪಿಡಿಯನ್ನು ಸಿದ್ಧಪಡಿಸುವ ಉದ್ದೇಶವು ಯಾವುದೇ ನಿರ್ಧಾರವನ್ನು ಟೀಕಿಸುವುದು ಅಥವಾ ಅನುಮಾನಿಸುವುದಲ್ಲ. ಸ್ತ್ರೀಯರ ವಿರುದ್ಧ ಆಕ್ಷೇಪಾರ್ಹ ಭಾಷೆಯ ಬಳಕೆಯನ್ನು ನ್ಯಾಯಾಲಯಗಳು ತಪ್ಪಿಸಬಹುದು, ಅದರಿಂದಾಗುವ ಹಾನಿಯೇನು ಎಂಬುದನ್ನು ವಿವರಿಸುವುದು ನ್ಯಾಯಾಲಯದ ಉದ್ದೇಶವಾಗಿದೆ. ಇದನ್ನು ಸುಪ್ರೀಂ ಕೋರ್ಟ್‌ನ ವೆಬ್‌ಸೈಟ್‌ನಲ್ಲಿ ಶೀಘ್ರದಲ್ಲೇ ಅಪ್‌ಲೋಡ್ ಮಾಡಲಾಗುವುದು ಎಂದಿದ್ದಾರೆ.

'ಇಷ್ಟ ಆಗಿಲ್ಲ ಅಂದ್ರೆ ನೋಡಬೇಡಿ' ಟಿವಿ ಚಾನೆಲ್‌ಗಳ ನಿಯಂತ್ರಣಕ್ಕೆ ಸಲ್ಲಿಸಿದ್ದ ಅರ್ಜಿ ವಜಾ ಮಾಡಿದ ಸುಪ್ರೀಂ

ಕೈಪಿಡಿ ಸಿದ್ಧಪಡಿಸಿದ ಕಲ್ಕತ್ತಾ ಹೈಕೋರ್ಟ್: ಸಿಜೆಐ ಚಂದ್ರಚೂಡ್ ಅವರು ನೀಡಿರುವ ಕಾನೂನು ಪರಿಭಾಷೆಯನ್ನು ಕಲ್ಕತ್ತಾ ಹೈಕೋರ್ಟ್‌ನ ನ್ಯಾಯಮೂರ್ತಿ ಮೌಶುಮಿ ಭಟ್ಟಾಚಾರ್ಯ ನೇತೃತ್ವದ ಸಮಿತಿ ಸಿದ್ಧಪಡಿಸಿದೆ. ಸಮಿತಿಯು ನಿವೃತ್ತ ನ್ಯಾಯಮೂರ್ತಿಗಳಾದ ಪ್ರಭಾ ಶ್ರೀದೇವನ್ ಮತ್ತು ಜಸ್ಟಿಸ್ ಗೀತಾ ಮಿತ್ತಲ್ ಮತ್ತು ಪ್ರೊಫೆಸರ್ ಜುಮಾ ಸೇನ್ ಅವರನ್ನು ಒಳಗೊಂಡಿತ್ತು. ಜುಮಾ ಸೆನ್‌, ಪ್ರಸ್ತುತ ಕೋಲ್ಕತ್ತಾದ ಪಶ್ಚಿಮ ಬಂಗಾಳ ರಾಷ್ಟ್ರೀಯ ನ್ಯಾಯಾಂಗ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕ ಸದಸ್ಯರಾಗಿದ್ದಾರೆ.

 

ದೇಶದಲ್ಲಿ 22 ಅಧಿಕೃತ ಭಾಷೆ ಇರಬಹುದು, ಆದರೆ, ಹಿಂದಿ ರಾಷ್ಟ್ರಭಾಷೆ: ಸುಪ್ರೀಂ ಕೋರ್ಟ್‌

ಯಾವ ಎಲ್ಲಾ ಪದಗಳು ಬ್ಯಾನ್‌.. ಇಲ್ಲಿದೆ ಲಿಸ್ಟ್‌:


 

click me!