ಮೆಟ್ರೋದಲ್ಲಿ ರೋಮ್ಯಾನ್ಸ್, ರೀಲ್ಸ್ , ಡ್ಯಾನ್ಸ್ ಸೇರಿದಂತೆ ಅಸಭ್ಯ ವರ್ತನೆಗಳ ವಿರುದ್ಧ ಎಚ್ಚರಿಕೆ ನೀಡಿದರೂ ಹುಚ್ಚಾಟಗಳು ನಿಲ್ಲುತ್ತಿಲ್ಲ. ಇದೀಗ ಯುವತಿಯೊಬ್ಬಳು ಮೆಟ್ರೋ ರೈಲಿನಲ್ಲಿ ಅಶ್ಲೀಲ ಡ್ಯಾನ್ಸ್ ಮಾಡಿದ್ದಾಳೆ. ಈಕೆಯ ಡ್ಯಾನ್ಸ್‌ನಿಂದ ಇತರ ಪ್ರಯಾಣಿಕರು ಮುಜುಗರಕ್ಕೀಡಾಗಿದ್ದಾರೆ.
ದೆಹಲಿ(ಮೇ.19) ನಗರ ಪ್ರದೇಶದ ಪ್ರಮುಖ ಸಾರಿಗೆ ಸಂಪರ್ಕವಾಗಿರುವ ಮೆಟ್ರೋ ಇದೀಗ ಬೇರೆ ಕಾರಣಗಳಿಂದ ಸುದ್ದಿಯಾಗುತ್ತಿದೆ. ಮೆಟ್ರೋದಲ್ಲಿ ಅಸಭ್ಯ ವರ್ತನೆ, ಅಶ್ಲೀಲ ಡ್ಯಾನ್ಸ್, ರೋಮ್ಯಾನ್ಸ್, ಕಿಸ್ಸಿಂಗ್ ಘಟನೆಗಳು ಮರುಕಳಿಸುತ್ತಿದೆ. ಈ ಕುರಿತು ಮೆಟ್ರೋ ಖಡಕ್ ಎಚ್ಚರಿಕೆ ನೀಡಿದರೂ ಪ್ರಯೋಜನವಾಗಿಲ್ಲ. ಇದೀಗ ಯುವತಿಯೊಬ್ಬಳು ಅಶ್ಲೀಲ ಡ್ಯಾನ್ಸ್ ಮಾಡಿದ್ದಾಳೆ. ರೀಲ್ಸ್ ವಿಡಿಯೋಗಾಗಿ ಮಾಡಿರುವ ಈ ಡ್ಯಾನ್ಸ್‌ನಿಂದ ಇತರ ಪ್ರಯಾಣಿಕರು ಮುಜುಗರಕ್ಕೀಡಾದ ಘಟನೆ ದೆಹಲಿಯಲ್ಲಿ ನಡೆದಿದೆ.
ಮೆಟ್ರೋದಲ್ಲಿ ಲೇಡಿಸ್ ಕೋಚ್ ಹತ್ತಿದ ಈ ಯುವತಿ ಪ್ರಯಾಣ ಆರಂಭಗೊಳ್ಳುತ್ತಿದ್ದಂತೆ ರೀಲ್ಸ್ ಆರಂಭಿಸಿದ್ಧಾಳೆ. ಆರಂಭದಲ್ಲಿ ಭೋಜಪುರಿ ಹಾಡಿಗೆ ಅಶ್ಲೀಲವಾಗಿ ಹೆಜ್ಜೆ ಹಾಕಿದ್ದಾಳೆ. ಬಳಿಕ ಹಿಂದಿ ಹಾಡಿಗೆ ಹೆಜ್ಜೆ ಹಾಕಿದ್ದಾಳೆ. ಈಕೆಯ ಎರಡು ಡ್ಯಾನ್ಸ್ ನೋಡಿದ ಸಹ ಪ್ರಯಾಣಿಕರು ಮುಜುಗರಕ್ಕೀಡಾಗಿದ್ದಾರೆ.
ಮೆಟ್ರೋ ರೈಲು ಹತ್ತುವ ರೀಲ್ಸ್ ಹುಚ್ಚಾಟದಲ್ಲಿ ಯುವತಿ ಮೊಬೈಲ್ ಪ್ಲಾಟ್‌ಫಾರ್ಮ್‌ನಲ್ಲೇ ಬಾಕಿ!
ರೀಲ್ಸ್ ಶೂಟ್ ಮಾಡಿದ ಯುವತಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾಳೆ. ಯುವತಿಯ ಹುಚ್ಚಾಟಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ದೆಹಲಿ ಮೆಟ್ರೋದಲ್ಲಿ ಪ್ರಯಾಣಿಕರನ್ನು ಸ್ವಾಗತಿಸುವ ಹೊಸ ವಿಧಾನ ಎಂದು ಕೆಲವರು ವ್ಯಂಗ್ಯವಾಡಿದ್ದಾರೆ. ದೆಹಲಿ ಜನತೆಗೆ ಮಾಡಿದ ಅವಮಾನ ಎಂದು ಮತ್ತೆ ಕೆಲವರು ಪ್ರತಿಕ್ರಿಯ ನೀಡಿದ್ದಾರೆ.
ಮೆಟ್ರೋದಲ್ಲಿ ಪದೆ ಪದೇ ಈ ರೀತಿ ಘಟನೆಗಳು ಮರುಕಳಿಸುತ್ತಿದೆ. ಇಂತಹ ಹುಚ್ಚಾಟ ನಿಯಂತ್ರಿಸಲು ಯಾವುದೇ ರೀತಿಯ ಕ್ರಮಗಳನ್ನು ಅಧಿಕಾರಿಗಳು ಕೈಗೊಂಡಿಲ್ಲವೇ? ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ. ಇತ್ತೀಚೆಗೆ ಮೆಟ್ರೋ, ಬಸ್ ಸೇರಿದಂತೆ ಸಾರ್ವಜನಿಕ ಪ್ರದೇಶದಲ್ಲಿ ಅಶ್ಲೀಲ ವರ್ತನೆ, ರೋಮ್ಯಾನ್ಸ್, ಕಿಸ್ಸಿಂಗ್ ಘಟನೆಗಳು ವರದಿಯಾಗುತ್ತಿದೆ.
Delhi metro mei apka swagat hai 😆 pic.twitter.com/NpYf24Im0I
— #RahulAggarwal (@ImRahulAggarwal)
ದೆಹಲಿ, ಬೆಂಗಳೂರು ಸೇರಿದಂತೆ ಕೆಲ ಮೆಟ್ರೋದಲ್ಲಿ ಈಗಾಗಲೇ ಈ ರೀತಿಯ ಘಟನೆಗಳು ವರದಿಯಾಗಿದೆ. ಇತ್ತೀಚೆಗೆ ಒಡಿಶಾದ ಸಾರ್ವಜನಿಕ ಸಾರಿಗೆ ಸಂಪರ್ಕದಲ್ಲೂ ಜೋಡಿಯ ರೋಮ್ಯಾನ್ಸ್ ವಿಡಿಯೋ ವೈರಲ್ ಆಗಿತ್ತು. ಪ್ರಯಾಣಿಕರಿಂದ ತುಂಬಿ ತುಳುಕುತ್ತಿದ್ದ ಬಸ್‌ನಲ್ಲಿ ಖುಲ್ಲಾಂ ಖುಲ್ಲಾ ಆಗಿ ಬಿಗಿದಪ್ಪಿ ಚುಂಬಿಸಿದ ಜೋಡಿ, ಇತರರಿಗೆ ಮುಜುಗರ ತಂದಿಟ್ಟಿದ್ದರು.
ಬೆಂಗಳೂರು ಮೆಟ್ರೋದಲ್ಲಿ ತಬ್ಬಿ ಮುದ್ದಾಡಿದ ಯುವ ಜೋಡಿ; ಸಹ ಪ್ರಯಾಣಿಕರ ಆಕ್ರೋಶ
ಮೆಟ್ರೋ ಪ್ರಯಾಣದಲ್ಲಿ ಈ ರೀತಿ ವರ್ತನೆಗೆ ನಿರ್ಬಂಧ ಹೇರಲಾಗಿದೆ. ಆದರೆ ಪ್ರಯಾಣದ ನಡುವೆ ಕೆಲವರು ರೀಲ್ಸ್ ಹುಚ್ಚಾಟದಲ್ಲಿ ವಿಡಿಯೋ ಶೂಟ್ ಮಾಡಿ ಬಳಿಕ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ವಿಡಿಯೋ ವೈರಲ್ ಬಳಿಕ ಪೊಲೀಸರು ಕ್ರಮ ಕೈಗೊಂಡ ಉದಾಹರಣೆಗಳೂ ಇವೆ. ಆದರೆ ಘಟನೆಗೆ ಮಾತ್ರ ಇನ್ನು ಬ್ರೇಕ್ ಬಿದ್ದಿಲ್ಲ.