ಕೇರಳದ ಮೀನುಗಾರರ ಕೊಂದ ಪ್ರಕರಣ; ಇಟಲಿಯಿಂದ 100 ಕೋಟಿ ಪರಿಹಾರ ಕೇಳಿದ ಕುಟುಂಬ!

By Suvarna NewsFirst Published Jul 11, 2020, 3:15 PM IST
Highlights

8 ವರ್ಷಗಳ ಹಿಂದೆ ನಡೆದ ಘಟನೆಯಿದ ದೇಶವೇ ಬೆಚ್ಚಿ ಬಿದ್ದಿತ್ತು. ಕೇರಳ ಕರಾವಳಿಯಲ್ಲಿ ಮೀನುಗಾರಿಕೆ ಮಾಡುತ್ತಿದ್ದ ಬೋಟ್ ಮೇಲಿ ಇಟಲಿ ನೌಕಾಪಡೆ ದಾಳಿ ಮಾಡಿ ಇಬ್ಬರನ್ನು ಹತ್ಯೆ ಮಾಡಿತ್ತು. ಈ ಬೋಟ್‌ನಲ್ಲಿ ಗಾಯಗೊಂಡಿದ್ದ ಮತೊರ್ವ  ಕಳೆದ ವರ್ಷ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದೀಗ ಆತನ ಕುಟುಂಬ ಇಟಲಿ ಮಾಡಿದ ತಪ್ಪಿಗೆ 100 ಕೋಟಿ ರೂಪಾಯಿ ಪರಿಹಾರ ನೀಡುವಂತೆ ಆಗ್ರಹಿಸಿದೆ.

ಕೊಚ್ಚಿ(ಜು.11): ಎನ್ರಿಕಾ ಲೆಕ್ಸಿ ಪ್ರಕರಣ ಮತ್ತೆ ಸದ್ದು ಮಾಡುತ್ತಿದೆ. 8 ವರ್ಷಗಳ ಹಿಂದೆ ಇಟಲಿ ತೈಲ ಟ್ಯಾಂಕರ್ ಎನ್ರಿಕಾ ಲೆಕ್ಸಿ ನಾಕೌಪಡೆ ಹಡಗು ಕೇರಳದ ಮೀನುಗಾರರ ದೋಣಿಗೆ ದಾಳಿ ಮಾಡಿತ್ತು. ಈ ಘಟನೆಯಲ್ಲಿ ಇಬ್ಬರನ್ನು ಸಾವನ್ನಪ್ಪಿದ್ದರೆ. ಮತ್ತೊರ್ವ ಪ್ರಿಜಿನ್ ಎಂಬಾತ ಗಾಯಗೊಂಡಿದ್ದ. ಕೇರಳದ ಕರಾವಳಿಯಲ್ಲಿ ನಡೆದ ಈ ಘಟನೆ ದೇಶವನ್ನೇ ಬೆಚ್ಚಿ ಬೀಳಿಸಿತ್ತು. 

ಇಟಲಿಯ ಈ ಹಳ್ಳಿಯನ್ನು ಕೊರೋನಾದಿಂದ ರಕ್ಷಿಸಿದ್ದು ಅಲ್ಲಿನ ಜಾದೂ ಬಾವಿಯಂತೆ!

ಘಟನೆಯಲ್ಲಿ ಗಾಯಗೊಂಡಿದ್ದ 14 ವರ್ಷದ ಬಾಲಕ, ಇಟಲಿ ನೌಕಾಪಡೆ ದಾಳಿಯಿಂದ ಬೆಚ್ಚಿ ಬಿದ್ದಿದ್ದ. ಇಷ್ಟೇ ಅಲ್ಲ ಗಾಯ ವಾಸಿಯಾದರೂ ಮಾನಸಿಕವಾಗಿ ಕುಗ್ಗಿ ಹೋಗಿದ್ದ. ಖಿನ್ನತೆಯಿಂದ ಬಳಲಿದ್ದ.   ಈತನ ಚೇತರಿಕೆಗೆ ಹಲವು ಚಿಕಿತ್ಸೆ ನೀಡಿದರೂ ಪ್ರಯೋಜನವಾಗಿರಲಿಲ್ಲ. ಕಳೆದ ವರ್ಷ ಈತ ಆತ್ಮಹತ್ಯೆ ಮಾಡಿಕೊಂಡಿದ್ದ.  ಇದೀಗ ಜುಲೈ 6 ರಂದು ಪ್ರಿಜಿನ್ ಕುಟುಂಬ ಸಲ್ಲಿಸಿದ ಮನವಿಯಲ್ಲಿ ಇಟಲಿ 100 ಕೋಟಿ ರೂಪಾಯಿ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದೆ.

ಇಟಲಿ ಎನ್ಲಿಕಾ ಲೆಕ್ಸಿ ಹಡಗು ಭಾರತದೊಳಕ್ಕೆ ನುಗ್ಗಿ ಮೀನುಗಾರರ ಮೇಲೆ ದಾಳಿ ಮಾಡಿದೆ. ಇದು ಅಂತಾರಾಷ್ಟ್ರೀಯ ಗಡಿ ನಿಮಮ ಉಲ್ಲಂಘನೆಯಾಗಿದೆ. ಇಷ್ಟೇ ಅಲ್ಲ ಸೇನೆ ಸೇರಿದಂತೆ ಯಾಾವುದೇ ಭದ್ರತಾ ಪಡೆಗಳು ಇಲ್ಲದ ಕೇರಳ ಕರಾವಳಿ ಪ್ರದೇಶಕ್ಕೆ ನುಗ್ಗಿ ಅಮಾಕಯ ಮೀನುಗಾರರನ್ನು ಹತ್ಯೆ ಮಾಡಿತ್ತು. ಈ ಘಟನೆಯಲ್ಲಿ ಪ್ರಿಜಿನ್ ತೀವ್ರವಾಗಿ ಗಾಯಗೊಂಡಿದ್ದ. ತನ್ನೆದುರಲ್ಲೇ ಇಬ್ಬರನ್ನು ಸಾವನ್ನಪ್ಪಿದ ಘಟನೆಯಿಂದ ಪ್ರಿಜಿನ್ ಖಿನ್ನತೆಗೆ ಒಳಗಾಗಿದ್ದರು. ಹೀಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದಕ್ಕೆ ಇಟಲಿ ನೌಕೆ  ಹಾಗೂ ಇಟಲಿ ಸರ್ಕಾರ ಕಾರಣ ಎಂದು ಮನವಿಯಲ್ಲಿ ಕುಟುಂಬ ಹೇಳಿದೆ.

#NewsIn100Seconds | ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್

"

 

click me!