ಹಾರಿ ಹೋಗುತ್ತಾ ಟ್ವಿಟ್ಟರ್ ಹಕ್ಕಿ: ಟ್ವೀಟರ್‌ಗೆ ಹೊಸ ಹೆಸರು, ಲೋಗೋ ಸುಳಿವು

By Kannadaprabha NewsFirst Published Jul 24, 2023, 9:38 AM IST
Highlights

ಜಗತ್ತಿನ ಪ್ರಸಿದ್ಧ ಸಾಮಾಜಿಕ ಜಾಲತಾಣಗಳಲ್ಲಿ ಒಂದಾಗಿರುವ ಟ್ವೀಟರ್‌ನ ಹೆಸರು ಹಾಗೂ ಲಾಂಛನ ಸದ್ಯದಲ್ಲೇ ಬದಲಾಗುವ ಸಾಧ್ಯತೆ ಇದೆ. ಈ ಕುರಿತು ಆ ಕಂಪನಿಯ ಮಾಲೀಕ ಹಾಗೂ ಶ್ರೀಮಂತ ಉದ್ಯಮಿ ಎಲಾನ್‌ ಮಸ್ಕ್ ಅವರೇ ಸ್ಪಷ್ಟ ಸುಳಿವು ನೀಡಿದ್ದಾರೆ.

ಸ್ಯಾನ್‌ಫ್ರಾನ್ಸಿಸ್ಕೋ: ಜಗತ್ತಿನ ಪ್ರಸಿದ್ಧ ಸಾಮಾಜಿಕ ಜಾಲತಾಣಗಳಲ್ಲಿ ಒಂದಾಗಿರುವ ಟ್ವೀಟರ್‌ನ ಹೆಸರು ಹಾಗೂ ಲಾಂಛನ ಸದ್ಯದಲ್ಲೇ ಬದಲಾಗುವ ಸಾಧ್ಯತೆ ಇದೆ. ಈ ಕುರಿತು ಆ ಕಂಪನಿಯ ಮಾಲೀಕ ಹಾಗೂ ಶ್ರೀಮಂತ ಉದ್ಯಮಿ ಎಲಾನ್‌ ಮಸ್ಕ್ ಅವರೇ ಸ್ಪಷ್ಟ ಸುಳಿವು ನೀಡಿದ್ದಾರೆ. ಶೀಘ್ರದಲ್ಲೇ ಟ್ವೀಟರ್‌ ಬ್ರ್ಯಾಂಡ್‌, ಬಳಿಕ ಹಂತಹಂತವಾಗಿ ಎಲ್ಲ ಹಕ್ಕಿಗಳಿಗೂ ವಿದಾಯ ಹೇಳುತ್ತೇವೆ ಎಂದು ಮಸ್ಕ್‌ ಅವರು ಟ್ವೀಟ್‌ ಮಾಡಿದ್ದಾರೆ. ಮಸ್ಕ್ ಅವರು ಟ್ವೀಟರ್‌ ಎಂಬ ಬ್ರ್ಯಾಂಡ್‌ನೇಮ್‌ ಅನ್ನು ಬದಲಿಸಬಹುದು, ಟ್ವೀಟರ್‌ನ ಹೆಗ್ಗುರುತಾಗಿರುವ ನೀಲಿ ಹಕ್ಕಿಗಳ ಬದಲಿಗೆ ಹೊಸ ಲಾಂಛನ ಬಿಡುಗಡೆ ಮಾಡಬಹುದು, ಆದರೆ ಟ್ವೀಟರ್‌ ಕಾರ್ಯನಿರ್ವಹಣೆ ಈಗಿನಂತೆಯೇ ಇರಬಹುದು ಎಂದು ಮಾಧ್ಯಮಗಳು ವಿಶ್ಲೇಷಣೆ ಮಾಡಿವೆ.

2022ರ ಅಕ್ಟೋಬರ್‌ನಲ್ಲಿ ಟ್ವೀಟರ್‌ ಕಂಪನಿಯನ್ನು ಖರೀದಿಸಿದ ಬಳಿಕ ಹಲವಾರು ಬದಲಾವಣೆಗಳನ್ನು ಮಸ್ಕ್ ಅವರು ತಂದಿದ್ದಾರೆ. ಈ ಪೈಕಿ ಬಹುತೇಕ ರೂಪಾಂತರಗಳು ವಿವಾದದ ಅಲೆ ಎಬ್ಬಿಸಿದ್ದೂ ಉಂಟು. ಅಲ್ಪಾವಧಿಗೆ ಟ್ವೀಟರ್‌ ಲೋಗೋದಲ್ಲಿ ಹಕ್ಕಿಗಳ ಬದಲಾಗಿ ನಾಯಿಯ ಚಿತ್ರವನ್ನೂ ಅವರು ಅಳವಡಿಸಿ ಟೀಕೆ ಎದುರಿಸಿದ್ದರು. ಮಸ್ಕ್ ತೆಕ್ಕೆಗೆ ಬರುವ ಮುನ್ನ ಟ್ವೀಟರ್‌ ಷೇರುಪೇಟೆಯಲ್ಲಿ ನೋಂದಾಯಿತ ಕಂಪನಿಯಾಗಿತ್ತು. ಆದರೆ ಈಗ ಅದು ಮಸ್ಕ್‌ ಅವರು ಅಧ್ಯಕ್ಷರಾಗಿರುವ ಎಕ್ಸ್‌ ಕಾಪರ್‌ ಅಡಿ ಇರುವ ಒಂದು ಅಂಗಸಂಸ್ಥೆಯಾಗಿದೆ. ಎಕ್ಸ್‌ ಕಾಪರ್ ದೂರದೃಷ್ಟಿಗೆ ಅನುಗುಣವಾಗಿ ಟ್ವೀಟರ್‌ನ ಹೊಸ ಲೋಗೋ ಇರುವ ಸಾಧ್ಯತೆ ಇದೆ.

ಎಲಾನ್ ಮಸ್ಕ್, ಮಾರ್ಕ್ ಜುಕರ್ ಬರ್ಗ್ ವೈರತ್ವ ಮರೆತು ಸ್ನೇಹಿತರಾದ್ರಾ? ವೈರಲ್ ಆಯ್ತು ಇಬ್ಬರ ಈ ಫೋಟೋ

ಥ್ರೆಡ್ಸ್‌ ಲಾಂಚ್‌ ಬಳಿಕ ಕಂಗಾಲಾದ ಎಲಾನ್‌ ಮಸ್ಕ್‌: ಟ್ವಿಟ್ಟರ್‌ ಖರೀದಿಗೆ ಒತ್ತಾಯಿಸಿದ ಕಾನೂನು ಸಂಸ್ಥೆ ಮೇಲೆ ಕೇಸ್‌!

click me!