ಹಿಂದು ನಾಯಕರ ಹತ್ಯೆಗೆ ತಮಿಳುನಾಡಿಗೆ 4 ಉಗ್ರರ ಪ್ರವೇಶ: ಭಾರೀ ಕಟ್ಟೆಚ್ಚರ

By Kannadaprabha NewsFirst Published Dec 20, 2019, 12:38 PM IST
Highlights

ಹಿಂದು ನಾಯಕರ ಹತ್ಯೆಗೆ ತಮಿಳುನಾಡಿಗೆ 4 ಉಗ್ರರ ಪ್ರವೇಶ: ಭಾರೀ ಕಟ್ಟೆಚ್ಚರ | ಯಾವ ಉಗ್ರ ಸಂಘಟನೆಗೆ ಸೇರಿದವರು ಎಂಬ ಮಾಹಿತಿ ಇಲ್ಲ | ಉಗ್ರರ ಫೋಟೋಗಳು ದೆಹಲಿ ಗುಪ್ತಚರದಿಂದ ತಮಿಳ್ನಾಡಿಗೆ ರವಾನೆ | ತಮಿಳ್ನಾಡಿನ ಸೇಲಂ-ಕೊಯಮತ್ತೂರು ಚೆಕ್‌ಪೋಸ್ಟ್‌ನಲ್ಲಿ ಶೋಧ

ಕೊಯಮತ್ತೂರು (ಡಿ. 20): ರಾಷ್ಟ್ರೀಯ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ರಾಷ್ಟಾ್ರದ್ಯಂತ ಭಾರೀ ಪ್ರಮಾಣದ ಪ್ರತಿಭಟನೆಗಳು ಜನ ಸಾಮಾನ್ಯರಲ್ಲಿ ಆತಂಕದ ವಾತಾವರಣ ಸೃಷ್ಟಿಸಿದ ಬೆನ್ನಲ್ಲೇ, ಹಿಂದೂ ಸಂಘಟನೆಗಳ ಮುಖಂಡರನ್ನು ಹತ್ಯೆ ಮಾಡುವ ದುರುದ್ದೇಶದಿಂದ ಕೇರಳದಿಂದ ನಾಲ್ವರು ಉಗ್ರರು ತಮಿಳುನಾಡನ್ನು ಪ್ರವೇಶ ಮಾಡಿದ್ದಾರೆ ಎಂಬ ಆತಂಕಕಾರಿ ವಿಚಾರ ಬೆಳಕಿಗೆ ಬಂದಿದೆ.

ಈ ಹಿನ್ನೆಲೆ, ರಾಜ್ಯಾದ್ಯಂತ ಪೊಲೀಸರು ತೀವ್ರ ಕಟ್ಟೆಚ್ಚರ ವಹಿಸಿದ್ದಾರೆ. ಇದರ ಭಾಗವಾಗಿ ಸೇಲಂ-ಕೊಯಮತ್ತೂರು ಭಾಗದ ಚೆಕ್‌ಪೋಸ್ಟ್‌ಗಳಲ್ಲಿ ಉಗ್ರರು ಬಳಸಿದ್ದಾರೆ ಎನ್ನಲಾದ ಕಾರು ಶೋಧಕ್ಕಾಗಿ ಎಲ್ಲ ವಾಹನಗಳ ಶೋಧನೆ ತೀವ್ರಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
'ಶಿಕ್ಷೆಗೆ ಮುನ್ನ ಮುಷರ್ರಫ್‌ ಸತ್ತರೆ ಇಸ್ಲಾಮಾಬಾದಲ್ಲಿ 3 ದಿನ ನೇತು ಹಾಕಿ'

ಹಿಂದು ಮುಖಂಡರನ್ನು ಗುರಿಯಾಗಿಸಿಕೊಂಡಿದ್ದಾರೆ ಎನ್ನಲಾದ ನಾಲ್ವರು ಉಗ್ರರು ಫೋಟೋಗಳನ್ನು ದೆಹಲಿ ಗುಪ್ತಚರ ದಳ ತಮಿಳುನಾಡಿಗೆ ರವಾನೆ ಮಾಡಿದ್ದು, ಸೇಲಂ, ತಿರುಪುರ ಹಾಗೂ ಕೊಯಮತ್ತೂರು ಭಾಗಗಳಲ್ಲಿರುವ ಬಸ್‌ ನಿಲ್ದಾಣಗಳು, ರೈಲ್ವೆ ನಿಲ್ದಾಣ ಸೇರಿದಂತೆ ಇನ್ನಿತರ ಹೆಚ್ಚು ಜನ ಸಂದಣಿ ಪ್ರದೇಶಗಳಲ್ಲಿ ತೀವ್ರ ಕಟ್ಟೆಚ್ಚರ ವಹಿಸಲು ಸೂಚಿಸಲಾಗಿದೆ. ಆದರೆ, ಈ ನಾಲ್ವರು ಉಗ್ರರು ಯಾವ ಉಗ್ರ ಸಂಘಟನೆಗೆ ಸೇರಿದ್ದಾರೆ. ಅಥವಾ ಅವರ ಮೂಲ ಉದ್ದೇಶವೇನು ಎಂಬುದರ ಕುರಿತಾದ ಮಾಹಿತಿ ಲಭ್ಯವಾಗಿಲ್ಲ ಎಂದು ಮೂಲಗಳು ತಿಳಿಸಿವೆ.

click me!