ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ, ಥಾಯ್ಲೆಂಡ್ ಸಂಸತ್ತಿನಲ್ಲಿ ಕಾಯ್ದೆ ಪಾಸ್!

By Suvarna NewsFirst Published Mar 28, 2024, 7:15 PM IST
Highlights

ಸಲಿಂಗ್ ವಿವಹ ಕಾಯ್ದೆ ಥಾಯ್ಲೆಂಡ್ ಸಂಸತ್ತಿನಲ್ಲಿ ಅಂಗೀಕಾರಗೊಂಡಿದೆ. ಈ ಮೂಲಕ ಥಾಯ್ಲೆಂಡ್‌ನಲ್ಲಿನ್ನು ಸೇಮ್ ಸೆಕ್ಸ್ ಮ್ಯಾರೇಜ್‌ಗೆ ಕಾನೂನು ಮಾನ್ಯತೆ ದೊರಕಿದೆ.
 

ಥಾಯ್ಲೆಂಡ್(ಮಾ.28)  ಸಲಿಂಗ ವಿವಾಹ ಕಾಯ್ದೆಗೆ ಮಾನ್ಯತೆ ನೀಡುವ ಕುರಿತು ಹಲವು ದೇಶಗಳಲ್ಲಿ ಚರ್ಚೆಗಳು, ನ್ಯಾಯಲಯದಲ್ಲಿ ಹೋರಾಟಗಳು ನಡೆಯುತ್ತಲೇ ಇದೆ. ಇದರ ನಡುವೆ ಥಾಯ್ಲೆಂಡ್‌ನಲ್ಲಿ ಸಲಿಂಗ ವಿವಾಹ ಕಾಯ್ದೆಗೆ ಅನುಮೋದನೆ ಸಕ್ಕಿದೆ. ಇಂದು ಥಾಯ್ಲೆಂಡ್ ಸಂಸತ್ತಿನಲ್ಲಿ ಈ ಬಿಲ್ ಮಂಡಿಸಲಾಗಿತ್ತು. ಈ ಮೂಲಕ ದಕ್ಷಿಣ ಏಷ್ಯಾದಲ್ಲಿ ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ನೀಡಿದ ಮೊದಲ ದೇಶ ಅನ್ನೋ ಹೆಗ್ಗಳಿಕೆಗೆ ಥಾಯ್ಲೆಂಡ್ ಪಾತ್ರವಾಗಿದೆ.

ಥಾಯ್ಲೆಂಡ್‌ನ ಯಾವುದೇ ಸಲಿಂಗಿಗಳು ಮದುವೆಯಾಗಲು ಇನ್ನು ಮುಂದೆ ಕಾನೂನು ಮಾನ್ಯತೆ ಇದೆ. ಥಾಯ್ಲೆಂಡ್‌ನ ಕೆಳಮನೆಯಲ್ಲಿ ಈ ಬಿಲ್ ಇಂದು ಮಂಡಿಸಲಾಗಿತ್ತು. 415ರ ಸದಸ್ಯರ ಪೈಕಿ 400 ಮತಗಳನ್ನು ಪಡೆದಿದೆ. ಇನ್ನು 10 ಸದಸ್ಯರು ಕಾಯ್ದೆ ವಿರುದ್ಧ ಮತಚಲಾಯಿಸಿದ್ದರು. ಅಭೂತಪೂರ್ವ ಮತಗಳೊಂದಿಗೆ ಸಲಿಂಗ ವಿವಾಹ ಕಾಯ್ದೆ ಸಂಸತ್ತಿನಲ್ಲಿ ಪಾಸ್ ಆಗಿದೆ.

'ನಾನವಳಿಗೆ ಮೋಸ ಮಾಡ್ಬಿಟ್ಟೆ' ಭಾರತ ಪಾಕಿಸ್ತಾನದ ಖ್ಯಾತ ಸಲಿಂಗ ಜೋಡಿ ಅಂಜಲಿ ಚಕ್ರ- ಸೂಫಿ ಮಲಿಕ್ ಬ್ರೇಕಪ್

ಥಾಯ್ಲೆಂಡ್ ಕೆಳಮನೆಯಲ್ಲಿ ಅಂಗೀಕಾರಗೊಂಡ ಈ ಕಾಯ್ದೆಯನ್ನು ಸೆನೆಟ್ ಕಳುಹಿಸಲಾಗುತ್ತದೆ. ಕಳಮನೆಯಲ್ಲಿ ಅನುಮೋದನೆ ಪಡದ ಬಿಲ್‌ಗೆ ಸೆನೆಟ್ ಸಹಿ ಹಾಕದೆ ಇದ್ದ ಉದಾಹರಣೆ ಕಡಿಮೆ. ಹೀಗಾಗಿ ಶೀಘ್ರದಲ್ಲೇ ಥಾಯ್ಲೆಂಡ್‌ನಲ್ಲಿ ಸೇಮ್ ಸೆಕ್ಸ್ ಮ್ಯಾರೇಜ್ ಕಾನೂನು ಅಧಿಕೃತವಾಗಿ ಜಾರಿಯಾಗಲಿದೆ. ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ನೀಡಿದ ದಕ್ಷಿಣ ಏಷ್ಯಾದ ಮೊದಲ ರಾಷ್ಟ್ರ ಥಾಯ್ಲೆಂಡ್ ಆದರೆ, ಏಷ್ಯಾದ ಮೂರನೇ ರಾಷ್ಟ್ರ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ಏಷ್ಯಾದಲ್ಲಿ ಥಾಯ್ಲೆಂಡ್‌ಗೂ ಮೊದಲು ತೈವಾನ್ ಹಾಗೂ ನೇಪಾಳದಲ್ಲಿ ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ಇದೆ. 

ಈ ಕಾನೂನು ಮೂಲಕ  LGBTQ+ ಸಮುದಾಯಕ್ಕೆ ಥಾಯ್ಲೆಂಡ್ ಸರ್ಕಾರ ವಿಶೇಷ ಸವಲತ್ತು ಮಾಡಿಕೊಟ್ಟಿದೆ. ಇತರ ಎಲ್ಲಾ ದಂಪತಿಗಳಿಗೆ  ಇರುವಂತಾ ಎಲ್ಲಾ ಸೌಲಭ್ಯ, ಅವಕಾಶ, ಹಕ್ಕುಗಳು ಸಲಿಂಗ ಜೋಡಿಗಳಿಗೂ ಇರಲಿದೆ ಎಂದು ಕಾಯ್ದೆ ಹೇಳುತ್ತದೆ. ಥಾಯ್ಲೆಂಡ್ ಸರ್ಕಾರ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ಇದು ಐತಿಹಾಸಿಕ ಎಂದು ಬಣ್ಣಿಸಿದೆ.

ಹುಡುಗಿಯ ಮದ್ವೆಯಾದ ಹುಡುಗಿ: ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಸಲಿಂಗಿ ಜೋಡಿ

ಭಾರತದಲ್ಲೂ ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ಹೋರಾಟಗಳು ನಡೆಯುತ್ತಲೇ ಇದೆ. ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ನೀಡಬೇಕು ಹಾಗೂ ಅವರಿಗೆ ಮಕ್ಕಳನ್ನು ದತ್ತು ಪಡೆಯುವ ಅವಕಾಶ ನೀಡಬೇಕು ಎಂಬುದು ಸೇರಿ ಅನೇಕ ಬೇಡಿಕೆಗಳೊಂದಿಗೆ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು. ಆದರೆ ಕಳೆದ ವರ್ಷ ಅಕ್ಟೋಬರ್ 17 ರಂದು ಸುಪ್ರೀಂ ಕೋರ್ಟ್ ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ನೀಡಲು ನಿರಾಕರಿಸಿತ್ತು. ಈ ತೀರ್ಪನ್ನು ಮರು ಪರಿಶೀಲಿಸುವತ ಅರ್ಜಿ ಸಲ್ಲಿಸಲಾಗಿದೆ.  
 

click me!