‘ರೇಪಿಸ್ಟ್‌’ ಜಾಮೀನಿಗೆ ರಾಖಿ ಷರತ್ತು : ಹೈ ಆದೇಶ ಸುಪ್ರೀಂನಲ್ಲಿ ವಜಾ

By Kannadaprabha NewsFirst Published Mar 19, 2021, 8:46 AM IST
Highlights

ಲೈಂಗಿಕ ಕಿರುಕುಳ ಪ್ರಕರಣ ಒಂದರಲ್ಲಿ  ಅತ್ಯಾಚಾರಿಗೆ ರಾಖಿ ಷರತ್ತಿನ ಜಾಮೀನಿನ ಬಗ್ಗೆ ಸುಪ್ರೀಂ ಕೋರ್ಟ್ ಆಕ್ಷೇಪಿಸಿದೆ.  ಮಧ್ಯ ಪ್ರದೇಶ ಹೈಕೋರ್ಟ್‌ನ ಇಂದೋರ್‌ ಪೀಠದ ಆದೇಶವನ್ನು ಸುಪ್ರೀಂಕೋರ್ಟ್‌   ರದ್ದುಗೊಳಿಸಿದೆ. 

ನವದೆಹಲಿ (ಮಾ.19): ಲೈಂಗಿಕ ಕಿರುಕುಳ ಪ್ರಕರಣವೊಂದರಲ್ಲಿ ಆರೋಪಿಗೆ ಜಾಮೀನು ನೀಡಲು ಆತನಿಗೆ ಸಂತ್ರಸ್ತೆಯ ಕೈಯಿಂದ ರಾಖಿ ಕಟ್ಟಿಸಿಕೊಂಡು ಬರುವಂತೆ ಷರತ್ತು ವಿಧಿಸಿದ್ದ ಮಧ್ಯ ಪ್ರದೇಶ ಹೈಕೋರ್ಟ್‌ನ ಇಂದೋರ್‌ ಪೀಠದ ಆದೇಶವನ್ನು ಸುಪ್ರೀಂಕೋರ್ಟ್‌ ಗುರುವಾರ ರದ್ದುಗೊಳಿಸಿದೆ. 

2020ರ ಜುಲೈನಲ್ಲಿ ಆದೇಶವೊಂದನ್ನು ಹೊರಡಿಸಿದ್ದ ಇಂದೋರ್‌ ಪೀಠ, ಆರೋಪಿಗೆ ರಾಖಿ ಹಬ್ಬದ ವೇಳೆ ಓರ್ವ ಸಹೋದರನಾಗಿ ದೂರುದಾರ ಸಂತ್ರಸ್ತೆಗೆ 11000 ರು. ಹಣವನ್ನು ನೀಡಿ ಆಕೆಯಿಂದ ರಾಖಿ ಕಟ್ಟಿಸಿಕೊಳ್ಳಬೇಕು. 

ಕಲಬುರಗಿ; ಕೊಲೆ ಮಾಡಿದ್ದ ವಿಚಾರ ಎಣ್ಣೆ ಏಟಿನಲ್ಲಿ ಹೊರಬಂತು!

ಜೊತೆಗೆ ಇದಕ್ಕೆ ಸಾಕ್ಷಿಯಾಗಿ ಪತ್ನಿಯನ್ನೂ ಕರೆದೊಯ್ಯಬೇಕು ಎಂದು ಸೂಚನೆ ನೀಡಿತ್ತು. ಈ ತೀರ್ಪಿನ ವಿರುದ್ಧ ವಕೀಲೆ ಅಪರ್ಣಾ ಭಟ್‌ ಹಾಗೂ ಇತರ 8 ಮಂದಿ ವಕೀಲರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌, ನ್ಯಾಯಾಧೀಶರು ಎಲ್ಲರ ಬಗ್ಗೆಯೂ ಒಂದೇ ರೀತಿಯಲ್ಲಿ ಗ್ರಹಿಸುವುದಕ್ಕೆ ಕಾರಣವಾಗುವ ಹೇಳಿಕೆಗಳನ್ನು ನೀಡಬಾರದು ಎಂದು ಖಾರವಾಗಿ ಪ್ರತಿಕ್ರಿಯಿಸಿದೆ.

click me!