ಮದುವೆ ಆಮಿಷ ಒಡ್ಡಿ ಲೈಂಗಿಕ ಸಂಪರ್ಕ ಮಾಡಿದರೆ ರೇಪ್‌ ಅಲ್ಲ: ಹೈಕೋರ್ಟ್!

By Kannadaprabha NewsFirst Published May 25, 2020, 9:02 AM IST
Highlights

ಮದುವೆಯ ಆಮಿಷ ಒಡ್ಡಿ ಲೈಂಗಿಕ ಸಂಪರ್ಕ ಮಾಡಿದರೆ ರೇಪ್‌ ಅಲ್ಲ| ನಿಕಟ ಸಂಬಂಧ ಹೊಂದಿರುವ ಪ್ರಕರಣಗಳಿಗೆ ಅತ್ಯಾಚಾರ ಕಾನೂನು ಅನ್ವಯಿಸಬಾರದು 

ಕಟಕ್‌(ಮೇ.25): ಮದುವೆಯಾಗುತ್ತೇನೆ ಎಂದು ಸುಳ್ಳು ಹೇಳಿ ಲೈಂಗಿಕ ಸಂಪರ್ಕ ಬೆಳೆಸಿ ಬಳಿಕ ಕೈಕೊಟ್ಟರೆ ಅದನ್ನು ಅತ್ಯಾಚಾರ ಎನ್ನಲಾಗದು ಎಂದು ಒಡಿಶಾ ಹೈಕೋರ್ಟ್‌ ತೀರ್ಪು ನೀಡಿದೆ.

ಒಡಿಶಾದ ಕೋರಾಪುಟ್‌ ಜಿಲ್ಲೆಯ ವಿದ್ಯಾರ್ಥಿಯೊಬ್ಬ ಮದುವೆಯಾಗುತ್ತೇನೆ ಎಂದು ನಂಬಿಸಿ ದೈಹಿಕ ಸಂಪರ್ಕ ನಡೆಸಿ ಈಗ ಮೋಸ ಮಾಡಿದ್ದಾನೆ ಎಂದು ಆರೋಪಿಸಿ 19 ವರ್ಷದ ಬುಡಕಟ್ಟು ಮಹಿಳೆಯೊಬ್ಬಳು 2019ರ ನವೆಂಬರ್‌ನಲ್ಲಿ ದೂರು ನೀಡಿದ್ದಳು.

ವಿವಾಹವಾಗಲು ನಿರಾಕರಿಸಿದ ಪ್ರೇಯಸಿಯ ದೋಸೆ ತವಾದಲ್ಲಿ ಹೊಡೆದು ​ಹತ್ಯೆ ಮಾಡಿದ!

ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಈ ತೀರ್ಪು ನೀಡಿದೆ. ಅಲ್ಲದೇ ನಿಕಟ ಸಂಬಂಧ ಹೊಂದಿರುವ ಪ್ರಕರಣಗಳಿಗೆ ಅತ್ಯಾಚಾರ ಕಾನೂನು ಅನ್ವಯಿಸಬಾರದು ಎಂದು ಅಭಿಪ್ರಾಯ ಪಟ್ಟಿದೆ.

click me!