ಕ್ಯಾಲಿಗ್ರಫಿ ಆರ್ಟಿಸ್ಟ್, ಪ್ರೇಮ್ ಬಿಹಾರಿ ನಾರಾಯಣ್ ರಾಯ್ಜಾದಾ ಬರೆದಿದ್ರು ಭಾರತದ ಸಂವಿಧಾನ| ಶಾಂತಿನಿಕೇತನದ ಕಲಾವಿದರಿಂದ ತಯಾರಾಗಿತ್ತು ಸಂವಿಧಾನದ ಪುಟಗಳು| ಸಂವಿಧಾನ ಬರೆಯುವ ಕೆಲಸಕ್ಕೆ ಒಂದು ರೂ. ಕೂಡಾ ಸ್ವೀಕರಿಸಿರಲಿಲ್ಲ| 303 ನಿಬ್ ಗಳ ಪೆನ್ ಹಾಗೂ 254 ಬಾಟಲ್ ಇಂಕ್
ನವದೆಹಲಿ[ನ.26]: ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಭಾರತಕ್ಕೆ ನವೆಂಬರ್ 26 ಅತ್ಯಂತ ಹೆಮ್ಮೆಯ ದಿನ. ಇದೇ ದಿನ 1949ರಂದು ಭಾರತೀಯ ಸಂವಿಧಾನ ಜಾರಿಗೆ ಬಂತು. 1947ರ ಆಗಸ್ಟ್ 29 ರಂದು ಡಾ. ಭೀಮ್ ರಾವ್ ಅಂಬೇಡ್ಕರ್ ರವರ ಅಧ್ಯಕ್ಷತೆಯಲ್ಲಿ ಸಂವಿಧಾನವನ್ನು ರಚಿಸಲಾಯ್ತು. ಬಳಿಕ ಸಂವಿಧಾನ ಸಭೆ ರಚನೆಯಾಯ್ತು ಹಾಗೂ 1950ರ ನವೆಂಬರ್ 26ರಂದು ಪ್ರಜಾಪ್ರಭುತ್ವ ಪ್ರಣಾಳಿಗೆ ಬಿಡುಗಡೆಯಾಯ್ತು. ಆದರೆ ನಿಮಗೆ ಗೊತ್ತಾ ಹಿಂದಿ ಹಾಗೂ ಇಂಗ್ಲೀಷ್ ನಲ್ಲಿದ್ದ ಸಂವಿಧಾನದ ಮೂಲಪ್ರತಿ ಪ್ರಿಂಟ್ ಮಾಡಿರಲಿಲ್ಲ. ಇದನ್ನು ಕೈಗಳಲ್ಲೇ ಬರೆಯಲಾಗಿತ್ತು. ಕ್ಯಾಲಿಗ್ರಫಿ ಆರ್ಟಿಸ್ಟ್ ಆಗಿದ್ದ ಪ್ರೇಮ್ ಬಿಹಾರಿ ನಾರಾಯಣ್ ರಾಯ್ಜಾದಾ ನಮ್ಮ, ಭಾರತದ ಸಂವಿಧಾನವನ್ನು ಬರೆದಿದ್ದರು.
ಶಾಂತಿನಿಕೇತನದ ಕಲಾವಿದರಿಂದ ತಯಾರಾಗಿತ್ತು ಸಂವಿಧಾನದ ಪುಟಗಳು
undefined
ಭಾರತದ ರಾಜ್ಯಗಳಿಂದ ಆಯ್ಕೆಯಾದ ನಾಯಕರಿಂದ ಸಂವಿಧಾನ ಸಮಿತಿಯ ಸದಸ್ಯರು ಆಯ್ಕೆಯಾಗಿದ್ದರು. ಪಂಡಿತ್ ಜವಾಹರಲಾಲ್ ನೆಹರೂ, ಡಾ. ಭೀಮ್ ರಾವ್ ಅಂಬೇಡ್ಕರ್, ಡಾ. ರಾಜೇಂದ್ರ ಪ್ರಸಾದ್, ಸರ್ದಾರ್ ವಲ್ಲಭಾಬಾಯಿ ಪಟೇಲ್, ಮೌಲಾನಾ ಅಬುಲ್ ಕಲಾಂ ಆಜಾದ್ ಈ ಸಭೆಯ ಪ್ರಮುಖ ಸದಸ್ಯರು. ಸಂವಿಧಾನವನ್ನು ಪ್ರಿಂಟ್ ಮಾಡದೇ ಕೈಯಾರೆ ಬರೆಯಬೇಕೆಂಬುವುದು ಈ ಸಮಿತಿಯ ಸದಸ್ಯರೇ ಕೈಗೊಂಡ ನಿರ್ಧಾರವಾಗಿತ್ತು. ಈ ಜವಾಬ್ದಾರಿ ಪ್ರೇಮ್ ಬಿಹಾರಿ ನಾರಾಯಣ್ ರಾಯ್ಜಾದಾಗೆ ವಹಿಸಲಾಗಿತ್ತು. ಹೀಗಿರುವಾಗ ಇವುಗಳನ್ನು ಬರೆಯುವ ಪುಟಗಳನ್ನು ತಯಾರಿಸುವ ಕೆಲಸ ಶಾಂತಿನಿಕೇತನದ ಕಲಾವಿದರಿಗೆ ವಹಿಸಲಾಗಿತ್ತು.
ಸಂವಿಧಾನ ಬರೆಯುವ ಕೆಲಸಕ್ಕೆ ಒಂದು ರೂ. ಕೂಡಾ ಸ್ವೀಕರಿಸಿರಲಿಲ್ಲ
ರಾಯ್ಜಾದಾ ಅದೆಷ್ಟು ಉತ್ತಮ ಕಲಾವಿದರೆಂದು ಸಂವಿಧಾನದ ಮೂಲಪ್ರತಿಯಿಂದಲೇ ತಿಳಿದು ಬರುತ್ತದೆ. ಯಾಕೆಂದರೆ ಅಷ್ಟು ಉದ್ದ ಹಾಗೂ ಅಗಲದ ಪುಟ ಹಾಗೂ ಅಷ್ಟು ದೀರ್ಘ ಸಂವಿಧಾನದಲ್ಲಿ ಯಾವೊಂದೂ ಚಿಕ್ಕ ತಪ್ಪು ಮಾಡಿರಲಿಲ್ಲ. ರಾಯ್ಜಾದಾ ತನ್ನ ಅಜ್ಜ ರಾಮ್ ಪ್ರಸಾದ್ ರಿಂದ ಕ್ಯಾಲಿಗ್ರಫಿ ಕಲಿತಿದ್ದರು. ಪಾರ್ಸಿ ಹಾಗೂ ಇಂಗ್ಲೀಷ್ ವಿದ್ವಾಂಸರಾಗಿದ್ದರು. ತಂದೆ ತಾಯಿ ನಿಧನದ ಬಳಿಕ ರಾಯ್ಜಾದಾರವರೇ ತನ್ನ ನಾಲ್ವರು ಸಹೋದರರ ಜವಾಬ್ದಾರಿ ಹೊತ್ತುಕೊಂಡಿದ್ದರು.
ಸಂವಿಧಾನದ ನೆರಳಲ್ಲಿ ಭವ್ಯ ಭವಿಷ್ಯ: ಮೋದಿ ಮಾತು ಕೇಳುವುದು ಅವಶ್ಯ!
ಒಂದು ಷರತ್ತು ಇಟ್ಟಿದ್ದ ರಾಯ್ಜಾದಾ
ರಾಯ್ಜಾದಾರವರು ದೆಹಲಿಯ ಸೇಂಟ್ ಸ್ಟೀಫನ್ ಕಾಲೇಜಿಂದ ಪದವಿ ಪಡೆದಿದ್ದರು. ಇನ್ನು ಸಂವಿಧಾನ ಬರೆಯಲು ತಾವು ಆಯ್ಕೆಯಾದಾಗ ಈ ಕೆಲಸಕ್ಕೆ ತಾವು ಒಂದು ರೂ. ಕೂಡಾ ಪಡೆಯುವುದಿಲ್ಲ ಎಂದು ಅಂದಿನ ಪ್ರಧಾನಿ ಜವಾಹರಲಾಲ್ ಬಳಿ ಹೇಳಿಕೊಂಡಿದ್ದರು. 'ನನಗೆ ಒಂದು ರೂಪಾಯಿ ಕೂಡಾ ಬೇಡ. ಆದರೆ ಸಂವಿಧಾನದ ಪ್ರತಿ ಪುಟದಲ್ಲೂ ನನ್ನ ಹೆಸರನ್ನು ಬರೆಯುತ್ತೇನೆ ಹಾಗೂ ಕೊನೆಯ ಪುಟದಲ್ಲಿ ನನ್ನ ಹಾಗೂ ನನ್ನ ಅಜ್ಜನ ಹೆಸರು ಬರೆಯುತ್ತೇನೆ ಎಂಬ ಷರತ್ತು' ಹಾಕಿದ್ದರು.
303 ನಿಬ್ ಗಳ ಪೆನ್ ಹಾಗೂ 254 ಬಾಟಲ್ ಇಂಕ್
ಪ್ರೇಮ್ ಬಿಹಾರಿ ನಾರಾಯಣ್ ರಾಯ್ಜಾದಾ ಈ ಷರತ್ತು ಒಪ್ಪಿಕೊಳ್ಳಲಾಯ್ತು. ಸಂವಿಧಾನ ಬರೆಯಲು ಕೈಯ್ಯಾರೆ ತಯಾರಿಸಲಾದ ಕಾಗದದ ಪುಟಗಳನ್ನು ಪುಣೆಯಿಂದ ತರಿಸಲಾಯ್ತು. ರಾಯ್ಜಾದಾ ಸಂವಿಧಾನ ಬರೆಯಲು 303 ನಿಬ್ ಹೋಲ್ಡರ್ ಪೆನ್ ಹಾಗೂ 254 ಬಾಟಲ್ ಇಂಕ್ ಬಳಸಿದರು.
ಸಂವಿಧಾನ 6 ತಿಂಗಳಲ್ಲಿ ಬರೆದಾಯ್ತು
ಸಂವಿಧಾನದ ಲಿಖಿತ ಪುಟಗಳನ್ನು ಶಾಂತಿನಿಕೇತನದ ನಂದಲಾಲ್ ಬೋಸ್ ನೇತೃತ್ವದ ತಂಡ ತಮ್ಮ ಕಲೆಯಿಂದ ಅಲಂಕರಿಸಿತು. ಭಾರತೀಯ ಇತಿಹಾಸದ ವಿಭಿನ್ನ ಅನುಭವ ಹಾಗೂ ಅಂಕಿ ಅಂಶಗಳನ್ನು ಸಂವಿಧಾನದ ಈ ಪುಟಗಳಲ್ಲಿ ತೆರೆದಿಡಲಾಯ್ತು. ಈ ಮೂಲಕ ಮಹಾನ್ ದೇಶದ ಮಹಾನ್ ಸಂವಿಧಾನ ಲಿಖಿತ ರೂಪದಲ್ಲಿ 6 ತಿಂಗಳೊಳಗೆ ತಯಾರಾಯ್ತು. ಬಳಿಕ ಸಂವಿಧಾನ ಸಮಿತಿಯ ಎಲ್ಲಾ 299 ಸದಸ್ಯರು 1950ರ ಜನವರಿ ಯಲ್ಲಿ ಇದರ ಮೇಲೆ ಹಸ್ತಯಾಕ್ಷರ ಹಾಕಿದರು.