Published : May 12, 2025, 06:46 AM ISTUpdated : May 12, 2025, 08:30 PM IST

Operation Sindoor Live: ಸಾಂಬಾದಲ್ಲಿ ಪಾಕ್ ಡ್ರೋನ್ ಹೊಡೆದುರುಳಿಸಿದ ಭಾರತ

ಸಾರಾಂಶ

ನವದೆಹಲಿ: ಭಾರತ ಮತ್ತು ಪಾಕಿಸ್ತಾನದ ಸೇನಾ ಕಾರ್ಯಾಚರಣೆಗಳ ಮಹಾನಿರ್ದೇಶಕರ (ಡಿಜಿಎಂಒ) ನಡುವೆ ಇಂದು ಸೋಮವಾರ ಕದನ ವಿರಾಮದ ಭವಿಷ್ಯದ ಕುರಿತು ಮಾತುಕತೆ ನಿಗದಿಯಾಗಿದೆ. ಮಧ್ಯಾಹ್ನ 12ರ ಸುಮಾರಿಗೆ ಹಾಟ್‌ಲೈನ್ ಮೂಲಕ ಈ ಸಭೆ ನಡೆಯಲಿದೆ. ಇದೀಗ ನಡೆಯಲಿರುವ ಮಾತುಕತೆಯಲ್ಲಿ ಕದನವಿರಾಮದ ಮರು ಜಾರಿ, ಸದ್ಯದ ಪರಿಸ್ಥಿತಿ ಮತ್ತು ಗಡಿಯಲ್ಲಿನ ಪ್ರಸ್ತುತ ಉದ್ವಿಗ್ನತೆಯನ್ನು ಕಡಿಮೆ ಮಾಡುವ ಕ್ರಮಗಳ ಬಗ್ಗೆ ಚರ್ಚೆಯಾಗುವ ನಿರೀಕ್ಷೆಯಿದೆ. ಶನಿವಾರವಷ್ಟೇ ಕನದ ವಿರಾಮ ಪ್ರಸ್ತಾಪ ದೊಂದಿಗೆ ಪಾಕಿಸ್ತಾನದ ಡಿಜಿಎಂಒ, ಭಾರತದ ಡಿಜಿಎಂಒ ಅವರನ್ನು ಸಂಪರ್ಕಿಸಿದ್ದರು. ಇದರ ಬೆನ್ನಲ್ಲೇ ಸಂಜೆ 5 ಗಂಟೆಯಿಂದ ಸಮರ ವಿರಾಮ ಜಾರಿಯಾಗಿತ್ತು.

Operation Sindoor Live: ಸಾಂಬಾದಲ್ಲಿ ಪಾಕ್ ಡ್ರೋನ್ ಹೊಡೆದುರುಳಿಸಿದ ಭಾರತ

11:53 PM (IST) May 12

ಸಾಂಬಾದಲ್ಲಿ ಪಾಕ್ ಡ್ರೋನ್ ಹೊಡೆದುರುಳಿಸಿದ ಭಾರತ

ಡಿಜಿಎಂಒಗಳ ಮಾತುಕತೆ ನಂತರ, ಸಾಂಬಾದಲ್ಲಿ ಪಾಕಿಸ್ತಾನದ ಡ್ರೋನ್ ಅನ್ನು ಭಾರತ ಹೊಡೆದುರುಳಿಸಿದೆ.

ಪೂರ್ತಿ ಓದಿ

10:57 PM (IST) May 12

ಮತ್ತೆ ಐಪಿಎಲ್-2025 ಪಂದ್ಯಗಳು ಆರಂಭ: ಹೊಸ ವೇಳಾಪಟ್ಟಿ ಇಲ್ಲಿದೆ

ಐಪಿಎಲ್ 2025, ಮೇ 17 ರಿಂದ ಮತ್ತೆ ಶುರುವಾಗಲಿದೆ. ಆರು ಕಡೆಗಳಲ್ಲಿ ಉಳಿದ ಪಂದ್ಯಗಳು ನಡೆಯಲಿವೆ.

ಪೂರ್ತಿ ಓದಿ

10:07 PM (IST) May 12

ಪಾಕ್‌ನ ಡ್ರೋನ್, ಕ್ಷಿಪಣಿ ಭಾರತದ ಮುಂದೆ ಒಣಹುಲ್ಲಿನಂತೆ ಚದುರಿಹೋದವು; ಪ್ರಧಾನಿ ಮೋದಿ ಭಾಷಣದ ಪ್ರಮುಖ ಅಂಶಗಳು

ಪ್ರಧಾನಿ ಮೋದಿ ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆ ನೀಡಿದ್ದಾರೆ. 'ಆಪರೇಷನ್ ಸಿಂದೂರ'ದ ಬಗ್ಗೆ ಮಾಹಿತಿ ನೀಡಿದ ಅವರು, ಭಾರತ ಪಾಕ್ ನಲ್ಲಿ ಉಗ್ರರ ನೆಲೆಗಳನ್ನ ಹೇಗೆ ಧ್ವಂಸ ಮಾಡಿತು ಮತ್ತು ಜಗತ್ತಿಗೆ ಭಾರತದ ಶಕ್ತಿಯನ್ನ ತೋರಿಸಿಕೊಟ್ಟಿತು ಎಂಬುದನ್ನ ವಿವರಿಸಿದರು.

ಪೂರ್ತಿ ಓದಿ

09:25 PM (IST) May 12

ಆಪರೇಷನ್ ಸಿಂದೂರ: ಪಾಕಿಸ್ತಾನದ ಸೇನಾ ನೆಲೆಗಳಿಗೆ ಭಾರತದಿಂದ ಭಾರೀ ಹಾನಿ, ವಿಡಿಯೋ ಬಿಡುಗಡೆ

ಆಪರೇಷನ್ ಸಿಂದೂರದಲ್ಲಿ ಭಾರತವು ಪಾಕಿಸ್ತಾನದ ಸೇನಾ ನೆಲೆಗಳ ಮೇಲೆ ದಾಳಿ ನಡೆಸಿ ಹಾನಿ ಮಾಡಿದೆ. ಬಿಡುಗಡೆಯಾದ ವಿಡಿಯೋಗಳು ಈ ಕಾರ್ಯಾಚರಣೆಯ ವ್ಯಾಪ್ತಿ ಮತ್ತು ಪರಿಣಾಮವನ್ನು ತೋರಿಸುತ್ತವೆ. ಈ ಕಾರ್ಯಾಚರಣೆಯು ಭಾರತದ ರಕ್ಷಣಾ ಸಾಮರ್ಥ್ಯ ಮತ್ತು ಭಯೋತ್ಪಾದನೆ ವಿರೋಧಿ ನಿಲುವನ್ನು ಪ್ರದರ್ಶಿಸುತ್ತದೆ.

ಪೂರ್ತಿ ಓದಿ

08:59 PM (IST) May 12

ಕಾಲ್ ಗರ್ಲ್‌ ಹೆಸರಿನಲ್ಲಿ ಯುವಕನಿಗೆ ₹1.39 ಲಕ್ಷ ವಂಚನೆ; ಪೊಲೀಸರ ಮುಂದೆಯೇ ಕಾಲಿಂಗ್, ಮೆಸೇಜಿಂಗ್!

ಎಸ್ಕಾರ್ಟ್ ಸೇವೆಗಾಗಿ ಆನ್‌ಲೈನ್‌ನಲ್ಲಿ ಹುಡುಕಾಟ ನಡೆಸಿದ್ದ ಯುವಕನಿಗೆ ₹1.39 ಲಕ್ಷ ವಂಚನೆಯಾಗಿದೆ. 'ಕಾಲ್ ಗರ್ಲ್' ಹೆಸರಿನಲ್ಲಿ ಅಪರಿಚಿತರಿಂದ ಹಂತ ಹಂತವಾಗಿ ಹಣ ಪಾವತಿಸುವಂತೆ ಒತ್ತಾಯಿಸಿ ವಂಚಿಸಲಾಗಿದೆ. ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪೂರ್ತಿ ಓದಿ

08:19 PM (IST) May 12

ಪತ್ರಿಕಾಗೋಷ್ಠಿ ವೇಳೆ ವಿರಾಟ್‌ ಕೊಹ್ಲಿ ನನ್ನ ಫೇವರೆಟ್‌ ಎಂದ ಡಿಜಿಎಂಒ ಲೆ.ಜ. ರಾಜೀವ್ ಘಾಯ್

ಆಪರೇಷನ್ ಸಿಂದೂರ್ ಸಂದರ್ಭದಲ್ಲಿ ಭಾರತದ ರಕ್ಷಣಾ ಸನ್ನದ್ಧತೆಯ ಕುರಿತು ಡಿಜಿಎಂಒ ಲೆಫ್ಟಿನೆಂಟ್ ಜನರಲ್ ರಾಜೀವ್ ಘಾಯ್ ವಿವರಿಸಿದರು. ಪಾಕಿಸ್ತಾನದ ದಾಳಿಗೆ ಪ್ರತಿದಾಳಿ ಕುರಿತು ಕ್ರಿಕೆಟ್ ಉದಾಹರಣೆ ನೀಡಿ, ಭಾರತದ ಗಡಿ ದಾಟುವುದು ಕಷ್ಟ ಎಂಬ ಸಂದೇಶ ರವಾನಿಸಿದರು. ಈ ವೇಳೆ ಕೊಹ್ಲಿ ಎಲ್ಲರಂತೆ ನನ್ನ ಪೇವರೆಟ್‌ ಎಂದರು.

ಪೂರ್ತಿ ಓದಿ

08:17 PM (IST) May 12

ಯಾವುದೇ ಪರಮಾಣು ಬೆದರಿಕೆಯನ್ನು ಭಾರತ ಸಹಿಸಲ್ಲ: ಪ್ರಧಾನಿ ನರೇಂದ್ರ ಮೋದಿ

PM Narendra Modi And Operation Sindoor: ಆಪರೇಷನ್ ಸಿಂದೂರ ಯಶಸ್ವಿ ಕಾರ್ಯಾಚರಣೆ ಬಳಿಕ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮೊದಲ ಬಾರಿ ದೇಶವನ್ನು ಉದ್ದೇಶಿಸಿ ಮಾತನಾಡಿದರು. ಆಪರೇಷನ್ ಸಿಂದೂರ  ಕುರಿತು  ಪ್ರಧಾನಿಗಳು ಹೇಳಿದ್ದೇನು ಎಂಬುದರ ಮಾಹಿತಿ  ಇಲ್ಲಿದೆ.

ಪೂರ್ತಿ ಓದಿ

07:50 PM (IST) May 12

ನಾವು ಪರಮಾಣು ಯುದ್ಧ ನಿಲ್ಲಿಸಿದ್ದೇವೆ: ಡೊನಾಲ್ಡ್ ಟ್ರಂಪ್ ಅಚ್ಚರಿ ಹೇಳಿಕೆ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಭಾರತ ಮತ್ತು ಪಾಕಿಸ್ತಾನದ ನಡುವೆ ಪರಮಾಣು ಸಂಘರ್ಷವನ್ನು ತಪ್ಪಿಸಲಾಗಿದೆ ಎಂದು ಹೇಳಿದ್ದಾರೆ. ಉಪರಾಷ್ಟ್ರಪತಿ ಜೆಡಿ ವ್ಯಾನ್ಸ್ ಮತ್ತು ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಅವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.

ಪೂರ್ತಿ ಓದಿ

06:55 PM (IST) May 12

ಕಿರಾನಾ ಬೆಟ್ಟದ ಮೇಲೆ ಭಾರತದ ದಾಳಿ ತಳ್ಳಿ ಹಾಕಿದ ಸೇನೆ, ಆ ಬೆಟ್ಟ ಪಾಕಿಸ್ತಾನಕ್ಕೆ ಅಷ್ಟು ಮುಖ್ಯ ಏಕೆ?

ಪಾಕಿಸ್ತಾನದ ಕಿರಾನಾ ಬೆಟ್ಟದ ಮೇಲೆ ಭಾರತ ದಾಳಿ ನಡೆಸಿದೆ ಎಂಬ ವದಂತಿಗಳನ್ನು ಭಾರತ ತಳ್ಳಿಹಾಕಿದೆ. ಏರ್ ಮಾರ್ಷಲ್ ಎ.ಕೆ. ಭಾರ್ತಿ ಅವರು ಯಾವುದೇ ದಾಳಿ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಕಿರಾನಾ ಬೆಟ್ಟ ಪಾಕಿಸ್ತಾನದ ಪರಮಾಣು ಶಸ್ತ್ರಾಗಾರದ ಒಂದು ಭಾಗವನ್ನು ಹೊಂದಿದೆ ಎಂದು ಹೇಳಲಾಗುತ್ತದೆ.

ಪೂರ್ತಿ ಓದಿ

06:21 PM (IST) May 12

ಉಗ್ರ ತಹಾವುರ್‌ ರಾಣಾ, ಛೋಟಾ ರಾಜನ್ ಇರೋ ತಿಹಾರ್ ಜೈಲಿನ ಭದ್ರತೆ ಹೆಚ್ಚಳ

ಆಪರೇಷನ್ ಸಿಂದೂರ್ ನಂತರ, ದೆಹಲಿಯ ತಿಹಾರ್ ಜೈಲಿನಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಅಪಾಯಕಾರಿ ಕೈದಿಗಳ ಮೇಲೆ ನಿಗಾ ಇಡಲಾಗುತ್ತಿದೆ.

ಪೂರ್ತಿ ಓದಿ

06:15 PM (IST) May 12

ಭಾರತದ ಕ್ಷಿಪಣಿ ಹೊಡೆತಕ್ಕೆ ಪಾಕ್ ಏರ್‌ಬೇಸ್‌ನಲ್ಲಿ ಕೆರೆಯಂಥ ಹೊಂಡ : ಸೇನೆಯಿಂದ ವೀಡಿಯೋ ರಿಲೀಸ್

ಭಾರತದ ಕ್ಷಿಪಣಿ ದಾಳಿಯ ನಂತರ ಪಾಕಿಸ್ತಾನದ ನೂರ್ ಖಾನ್ ಏರ್‌ಬೇಸ್‌ ಹಾಗೂ ರಹೀಮ್ ಯಾರ್ ಖಾನ್ ಏರ್‌ಬೇಸ್‌ನ ಪ್ರಸ್ತುತ ಹೇಗಾಗಿವ ನೋಡಿ, ಭಾರತೀಯ ಭದ್ರತಾ ಪಡೆ ಬಿಡುಗಡೆ ಮಾಡಿದ ವೀಡಿಯೋ ಇಲ್ಲಿದೆ.

ಪೂರ್ತಿ ಓದಿ

05:17 PM (IST) May 12

ಸ್ಥಗಿತಗೊಂಡಿದ್ದ 32 ಏರ್ಪೋರ್ಟ್ ರೀ ಓಪನ್, ಆದ್ರೆ ಪ್ರಯಾಣಿಕರು ಈ ನಿಯಮ ಪಾಲಿಸಲೇಬೇಕು

ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆ ಕಡಿಮೆಯಾದ ನಂತರ ಉತ್ತರ ಮತ್ತು ವಾಯುವ್ಯ ಭಾರತದಲ್ಲಿ ತಾತ್ಕಾಲಿಕವಾಗಿ ಮುಚ್ಚಲಾಗಿದ್ದ 32 ವಿಮಾನ ನಿಲ್ದಾಣಗಳನ್ನು ಪುನಃ ತೆರೆಯಲಾಗಿದೆ. ಪ್ರಯಾಣಿಕರು ತಮ್ಮ ವಿಮಾನಗಳ ಸ್ಥಿತಿಯನ್ನು ಏರ್‌ಲೈನ್‌ಗಳೊಂದಿಗೆ ಪರಿಶೀಲಿಸಬೇಕು.

ಪೂರ್ತಿ ಓದಿ

05:01 PM (IST) May 12

ಅಣ್ವಸ್ತ್ರ ಹೊಂದಿರುವ ರಾಷ್ಟ್ರದ ಮೇಲೆ ದಾಳಿ ಮಾಡಿದ ಮೊದಲ ದೇಶ ಭಾರತ

ಅಣ್ವಸ್ತ್ರ ಹೊಂದಿರುವ ಪಾಕಿಸ್ತಾನದ ಮೇಲೆ ಭಾರತ ದಾಳಿ ಮಾಡಿ, ಭಯೋತ್ಪಾದಕ ಚಟುವಟಿಕೆಗಳಿಗೆ ಪ್ರತ್ಯುತ್ತರ ನೀಡಿದೆ. ಪಾಕಿಸ್ತಾನದ ಪ್ರಮುಖ ವಾಯುನೆಲೆಗಳಾದ ನೂರ್ ಖಾನ್ ಮತ್ತು ರಾವಲ್ಪಿಂಡಿಯನ್ನು ಗುರಿಯಾಗಿಸಿಕೊಂಡು ಭಾರತ ದಾಳಿ ನಡೆಸಿತು. ಕದನವಿರಾಮ ಘೋಷಣೆಯಾದ ನಂತರವೂ ಪಾಕಿಸ್ತಾನದಿಂದ ಭಾರತದ ಮೇಲೆ ದಾಳಿ ಮುಂದುವರೆದಿದೆ.

ಪೂರ್ತಿ ಓದಿ

04:22 PM (IST) May 12

ಇಂದು ರಾತ್ರಿ 8 ಗಂಟೆಗೆ ದೇಶವನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತು

ಇಂದು ರಾತ್ರಿ 8 ಗಂಟೆಗೆ ದೇಶವನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡಲಿದ್ದಾರೆ. 

ಪೂರ್ತಿ ಓದಿ

03:49 PM (IST) May 12

ಪಾಕಿಗಳ ಮೇಲೆ ಪ್ರಕೃತಿಗೂ ಮುನಿಸು! ಉಗ್ರರ ನೆಲೆ ಛಿದ್ರಗೊಳ್ತಿದ್ದಂತೆಯೇ ಹಲವೆಡೆ ಭೂಕಂಪ...

ಪೆಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಪಾಕಿಸ್ತಾನದ ನೂರ್ ಖಾನ್ ವಾಯುನೆಲೆಯ ಮೇಲೆ ಭಾರತ ದಾಳಿ ನಡೆಸಿತು. ಅದೇ ಸಮಯದಲ್ಲಿ ಪಾಕಿಸ್ತಾನದಲ್ಲಿ ಭೂಕಂಪ ಸಂಭವಿಸಿದೆ. ಪಾಪಿಗಳಿಗೆ ಪ್ರಕೃತಿಯೇ ನೀಡುತ್ತಿದೆ ಶಾಪ... ಇಲ್ಲಿದೆ ಡಿಟೇಲ್ಸ್​...

ಪೂರ್ತಿ ಓದಿ

03:47 PM (IST) May 12

ಸೌದಿಯಲ್ಲಿ ಮಲಯಾಳಿ ಜೋಡಿ ದುರ್ಮರಣ; ಮೃತದೇಹ ವಾಪಸಾತಿಗೆ ಪರದಾಟ!

ಸೌದಿ ಅರೇಬಿಯಾದಲ್ಲಿ ನಡೆದ ವಾಹನ ಅಪಘಾತದಲ್ಲಿ ಮೃತಪಟ್ಟ ಮಲಯಾಳಿ ನರ್ಸ್ ಮತ್ತು ಆಕೆಯ ನಿಶ್ಚಿತಾರ್ಥ ಮಾಡಿಕೊಂಡ ವರನ ಮೃತದೇಹಗಳನ್ನು ತವರಿಗೆ ಕಳುಹಿಸಲು ಪ್ರಯತ್ನಗಳು ನಡೆಯುತ್ತಿವೆ. ಮೃತದೇಹಗಳು ಸುಟ್ಟುಹೋಗಿದ್ದರಿಂದ ಗುರುತಿಸುವಿಕೆ ಸಂಕೀರ್ಣವಾಗಿತ್ತು.

ಪೂರ್ತಿ ಓದಿ

03:44 PM (IST) May 12

ಪಾಕಿಸ್ತಾನ ಭಯೋತ್ಪಾದಕರಿಗಾಗಿ ನಮ್ಮೊಂದಿಗೆ ಕಾದಾಟಕ್ಕಿಳಿದಿದ್ದು ದುರಾದೃಷ್ಟಕರ: ಏರ್ ಮಾರ್ಷಲ್ ಎ.ಕೆ. ಭಾರ್ತಿ

ಭಾರತ ಮತ್ತು ಪಾಕಿಸ್ತಾನದ DGMOಗಳ ನಡುವಿನ ಮಾತುಕತೆಯನ್ನು ಸಂಜೆಗೆ ಮುಂದೂಡಲಾಗಿದೆ. ಇತ್ತ ಭಾರತದ ಅಧಿಕಾರಿಗಳು ಆಪರೇಷನ್ ಸಿಂದೂರ್‌ನ ಇಂಚಿಂಚು ವಿವರವನ್ನು ವೀಡಿಯೋ ಸಹಿತ ನೀಡುತ್ತಿದ್ದಾರೆ.

ಪೂರ್ತಿ ಓದಿ

02:07 PM (IST) May 12

ಅಣ್ವಸ್ತ್ರ ಇದೆ ಎಂದು ಹೆದರಿಸ್ತಿರೋ ಪಾಕ್,​ ಕದನ ವಿರಾಮಕ್ಕೆ ಕಾಲು ಹಿಡಿದಿದ್ದೇಕೆ? ಅಸಲಿ ಸ್ಟೋರಿನೇ ಬೇರೆ!

ಅಣ್ವಸ್ತ್ರ ಇದೆ ಎಂದು ಮೊದಲಿಂದಲೂ ಹೇಳ್ತಿರೋ ಪಾಕ್,​ ಕದನ ವಿರಾಮಕ್ಕೆ ಅಮೆರಿಕದ ಕಾಲು ಹಿಡಿದಿದ್ದೇಕೆ? ಅಸಲಿಗೆ ಇರೋ  ಸ್ಟೋರಿನೇ ಬೇರೆ! ಇಲ್ಲಿದೆ ನೋಡಿ ಡಿಟೇಲ್ಸ್​

ಪೂರ್ತಿ ಓದಿ

01:57 PM (IST) May 12

ಭಯೋತ್ಪಾದಕರಿಗೆ ಪಾಕಿಸ್ತಾನವೇ ತಾಯಿ, ಅಲ್ಲಿನ ಸೇನೆಯೇ ನಿರ್ವಾಹಕ ಅವು ಬೇರೆ ಬೇರೆ ಅಲ್ಲ!

: ಪಾಕಿಸ್ತಾನವೂ  ಭಯೋತ್ಪಾದಕರ ತಾಯಿ, ಪಾಕಿಸ್ತಾನದ ಸೇನೆಯೇ ಇದರ ಹ್ಯಾಂಡಲರ್ ಎಂಬುದನ್ನು ಭಾರತ ಇಡೀ ಜಗತ್ತಿನ ಮುಂದೆ ಬಯಲು ಮಾಡಿದ್ದು, ಭಯೋತ್ಪಾದಕ ಅಂತ್ಯಸಂಸ್ಕಾರದಲ್ಲಿ ಭಾಗಿಯಾದ ಪಾಕಿಸ್ತಾನದ ಸೇನೆಯ ಅಧಿಕಾರಿಗಳನ್ನು ಜಾಗತಿಕ ಭಯೋತ್ಪಾದಕರು ಎಂದು ಗುರುತಿಸಲು ಆಗ್ರಹಿಸಿದೆ

ಪೂರ್ತಿ ಓದಿ

01:22 PM (IST) May 12

ಪ್ರಸಿದ್ಧಿಗಾಗಿ ಪಾಕಿಸ್ತಾನ ಬೆಂಬಲಿಸಿದ ಯೂಟೂಬರ್ ಬಿಯರ್ ಬೈಸೆಪ್ಸ್ ರಣವೀರ್ ಅಲ್ಲಾಬಾದಿಯಾ!

ಯೂಟ್ಯೂಬರ್ ರಣವೀರ್ ಅಲ್ಲಾಹಾಬಾದಿಯಾ ಪಾಕಿಸ್ತಾನದ ಬೆಂಬಲಕ್ಕೆ ನಿಂತು ವಿವಾದಕ್ಕೆ ಸಿಲುಕಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ನಂತರ ಅಳಿಸಿದ್ದಾರೆ. ಪೋಸ್ಟ್‌ನಲ್ಲಿ ಪಾಕಿಸ್ತಾನಿಯರ ಪರ 'ಸಹೋದರ ಸಹೋದರಿಯರೆ' ಎಂಬ ಪದ ಬಳಸಿ ಕ್ಷಮೆ ಕೇಳಿದ್ದಾರೆ.

ಪೂರ್ತಿ ಓದಿ

12:41 PM (IST) May 12

ಪಾಕ್‌ ಸಂಘರ್ಷವನ್ನು ಸಮರ್ಥವಾಗಿ ನಿಭಾಯಿಸಲು ಭಾರತದ ಅಧಿಕಾರಿಗಳಿಗೆ ನೆರವಾಗಿದ್ದು ಏನು ಯಾರು?

ಇತ್ತೀಚಿನ ಭಾರತ-ಪಾಕಿಸ್ತಾನ ಸಂಘರ್ಷದ ಸಮಯದಲ್ಲಿ ಭಾರತದ ಅಧಿಕಾರಿಗಳು ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಲು ನೆರವಾಗಿದ್ದು, ರಹಸ್ಯ ಯುದ್ಧ ಕೈಪಿಡಿ ಎಂದು ಅಂಗ್ಲ ಮಾಧ್ಯಮವೊಂದು ವರದಿ ಮಾಡಿದೆ.

ಪೂರ್ತಿ ಓದಿ

12:30 PM (IST) May 12

ಕದನ ವಿರಾಮದ ಬೆನ್ನಲ್ಲೇ ಷೇರುಪೇಟೆಯಲ್ಲಿ ಅಬ್ಬರಿಸಿದ ಗೂಳಿ: ಸೆನ್ಸೆಕ್ಸ್​- ನಿಫ್ಟಿ ದಾಖಲೆ

ಕದನ ವಿರಾಮದ ಬೆನ್ನಲ್ಲೇ ಷೇರುಪೇಟೆಯಲ್ಲಿ ಅಬ್ಬರಿಸಿದ ಗೂಳಿ: ಸೆನ್ಸೆಕ್ಸ್​- ನಿಫ್ಟಿ ದಾಖಲೆ ಬರೆದಿದೆ. ಎರಡರ ದಾಖಲೆ ಎಷ್ಟು? ಈ ರೀತಿ ವ್ಯತ್ಯಾಸಕ್ಕೆ ಇನ್ನೇನು ಕಾರಣ? ತಜ್ಞರು ಹೇಳುವುದೇನು? 

ಪೂರ್ತಿ ಓದಿ

12:02 PM (IST) May 12

14 ವರ್ಷದ ಟೆಸ್ಟ್‌ ಕ್ರಿಕೆಟ್‌ ಜರ್ನಿಗೆ ಗುಡ್‌ಬೈ ಹೇಳಿದ ವಿರಾಟ್‌ ಕೊಹ್ಲಿ! ಭಾವುಕ ಪೋಸ್ಟ್‌ ಹಂಚಿಕೊಂಡ ಕ್ರಿಕೆಟಿಗ!

ವಿರಾಟ್ ಕೊಹ್ಲಿ ಅವರು ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದಾರೆ. 14 ವರ್ಷಗಳ ವೃತ್ತಿಜೀವನದ ನಂತರ, ಅವರು ಈ ಸ್ವರೂಪಕ್ಕೆ ವಿದಾಯ ಹೇಳುತ್ತಿದ್ದಾರೆ, ತಮ್ಮ ಅನುಭವಗಳಿಗೆ ಕೃತಜ್ಞತೆ ಸಲ್ಲಿಸುತ್ತಿದ್ದಾರೆ.

ಪೂರ್ತಿ ಓದಿ

09:14 AM (IST) May 12

ಸಿಂಧೂ ಜಲ ಒಪ್ಪಂದ ಮರುಜಾರಿಗೆ ಅಮೆರಿಕಕ್ಕೆ ಪಾಕ್ ಮೊರೆ: ತಜ್ಞರ ಸಲಹೆಯೇನು?

ಪಹಲ್ಗಾಂ ದಾಳಿಗೆ ಪ್ರತೀಕಾರವಾಗಿ ಭಾರತ ನೀಡಿದ ಎದುರೇಟಿಗೆ ತತ್ತರಿಸಿದ ಪಾಕಿಸ್ತಾನ ಕದನ ವಿರಾಮ ಜಾರಿಗೊಳಿಸುವಂತೆ ಅಮೆರಿಕಕ್ಕೆ ಮೊರೆಯಿಟ್ಟಿತ್ತು. 

ಪೂರ್ತಿ ಓದಿ

09:13 AM (IST) May 12

ಐಪಿಎಲ್‌ ಇನ್ನುಳಿದ ಪಂದ್ಯಕ್ಕೆ ಇಂದು ಮುಹೂರ್ತ ನಿಗದಿ; ಬೆಂಗಳೂರು ಫ್ಯಾನ್ಸ್‌ಗೆ ಗುಡ್‌ ನ್ಯೂಸ್?

ಭಾರತ-ಪಾಕಿಸ್ತಾನ ಸಂಘರ್ಷದಿಂದ ಸ್ಥಗಿತಗೊಂಡಿದ್ದ ಐಪಿಎಲ್ ಮೇ 16ರಿಂದ ಪುನಾರಂಭವಾಗುವ ಸಾಧ್ಯತೆ ಇದೆ. ಬಿಸಿಸಿಐ ಈ ಬಗ್ಗೆ ಸಿದ್ಧತೆ ಆರಂಭಿಸಿದ್ದು, ಲೀಗ್ ಪುನಾರಂಭದ ಬಗ್ಗೆ ಚರ್ಚೆ ನಡೆಸುತ್ತಿದೆ. ಸೋಮವಾರ ವೇಳಾಪಟ್ಟಿ ಪ್ರಕಟವಾಗುವ ನಿರೀಕ್ಷೆ ಇದೆ.

ಪೂರ್ತಿ ಓದಿ

08:49 AM (IST) May 12

ಕಣಿವೆಯಲ್ಲಿ ಜನಜೀವನ ಸಹಜ ಸ್ಥಿತಿಗೆ : ಮಾರುಕಟ್ಟೆ ಓಪನ್, ವ್ಯಾಪಾರ ಜೋರು

ಕಳೆದ ಕೆಲವು ವಾರಗಳಿಂದ ಆತಂಕದಲ್ಲಿ ಕಾಲ ಕಳೆದಿದ್ದ ಕಾಶ್ಮೀರ ಕಣಿವೆಯ ಜನರು ಈಗ ನಿಟ್ಟುಸಿರು ಬಿಡುತ್ತಿದ್ದಾರೆ. ಶ್ರೀನಗರ, ಉರಿ, ಬಾರಾಮುಲ್ಲಾಗಳಲ್ಲಿ ಸಹಜ ಸ್ಥಿತಿ ಮರಳುತ್ತಿದ್ದು, ಮಾರುಕಟ್ಟೆಗಳು ತೆರೆದು ವ್ಯಾಪಾರ-ವಹಿವಾಟುಗಳು ಆರಂಭವಾಗಿವೆ. 

ಪೂರ್ತಿ ಓದಿ

08:39 AM (IST) May 12

ಭಾರತ ಮಹಿಳಾ ತಂಡ ತ್ರಿಕೋನ ಸರಣಿ ಚಾಂಪಿಯನ್; ಮಿಂಚಿದ ಮಂಧನಾ, ಸ್ನೆಹ್ ರಾಣಾ

ಶ್ರೀಲಂಕಾ ವಿರುದ್ಧದ ಫೈನಲ್‌ ಪಂದ್ಯದಲ್ಲಿ ಭಾರತ ಮಹಿಳಾ ತಂಡ 97 ರನ್‌ಗಳಿಂದ ಭರ್ಜರಿ ಗೆಲುವು ದಾಖಲಿಸಿ ತ್ರಿಕೋನ ಸರಣಿಯ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಸ್ಮೃತಿ ಮಂಧನಾ ಅವರ ಶತಕ ಮತ್ತು ಸ್ನೆಹ್ ರಾಣಾ ಅವರ ಮಾರಕ ಬೌಲಿಂಗ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು.

ಪೂರ್ತಿ ಓದಿ

08:09 AM (IST) May 12

ಯೂಟ್ಯೂಬರ್‌ ಅಲಹಾಬಾದಿಯಾನಿಂದ ಪಾಕ್‌ಗೆ ಕ್ಷಮೆ: ಕ್ಷಿಪಣಿ ದಾಳಿಯಿಂದ ಆಸೀಸ್‌ ಕ್ರಿಕೆಟಿಗರ ಪಾರು

ಭಾರತದ ಸೇನಾ ದಾಳಿಗೆ ಪಾಕ್‌ ಬಳಿ ಕ್ಷಮೆ ಕೇಳಿದ ಯೂಟ್ಯೂಬರ್‌ ರಣವೀರ್‌ ಈಗ ತಮ್ಮ ಪೋಸ್ಟ್‌ ಡಿಲೀಟ್ ಮಾಡಿದ್ದಾರೆ.ಮತ್ತೊಂದೆಡೆ ಕ್ಷಿಪಣಿ ದಾಳಿಯಿಂದ ಆಸೀಸ್‌ನ ನಾಲ್ವರು ಕ್ರಿಕೆಟಿಗರು ಸ್ವಲ್ಪದರಲ್ಲೇ ಪಾರಾಗಿದ್ದಾರೆ.

ಪೂರ್ತಿ ಓದಿ

08:08 AM (IST) May 12

ಭಾರತದ ವಿರುದ್ಧ ತನ್ನ ದೇಶದ ಕ್ಷಿಪಣಿ ಬಳಸಿದ್ದಕ್ಕೆ ಪಾಕ್‌ಗೆ ಚೀನಾ ಸಮನ್ಸ್

ತಮ್ಮ ದೇಶದ ಪಿಎಸ್‌15 ಕ್ಷಿಪಣಿ, ಜೆ17 ಫೈಟರ್‌ ಜೆಟ್‌ಗಳನ್ನು ಯುದ್ಧಕ್ಕೆ ಬಳಸಬಾರದು ಎನ್ನುವ ಷರತ್ತನ್ನು ಹಾಕಿದ್ದರೂ ಅದನ್ನು ಧಿಕ್ಕರಿಸಿದ ಪಾಕ್‌ಗೆ ಚೀನಾ ಸಮನ್ಸ್‌ ನೀಡಿದೆ. ಮತ್ತೊಂದೆಡೆ ಎಫ್‌-16 ವಿಮಾನ ಬಳಕೆಯಲ್ಲಿಯೂ ಪಾಕ್ ಅಮೆರಿಕದ ನಿಯಮ ಉಲ್ಲಂಘಿಸಿದೆ ಎಂಬ ಆರೋಪ ಕೇಳಿಬಂದಿದೆ. 

ಪೂರ್ತಿ ಓದಿ

07:58 AM (IST) May 12

ರೋಚಕ ಸಮರ: 2000 ಪಾಕಿಸ್ತಾನ ಸೈನಿಕರ ಓಡಿಸಿದ್ದ 120 ಭಾರತೀಯ ಯೋಧರು!

ಭಾರತೀಯ ಸೇನೆಯ ಗಾತ್ರ, ಶಸ್ತ್ರಾಸ್ತ್ರ, ದೈಹಿಕ ಮತ್ತು ಬೌದ್ಧಿಕ ಸಾಮರ್ಥ್ಯದಲ್ಲಿ ಯಾರೂ ಸರಿಸಾಟಿಯಿಲ್ಲ ಎಂಬುದನ್ನು ಜಗತ್ತಿಗೇ ತೋರಿಸಿದ ಯುದ್ಧವೊಂದು ಪಾಕಿಸ್ತಾನದೊಂದಿಗೆ ಬಾಂಗ್ಲಾದ ವಿಮೋಚನೆಗಾಗಿ 1971ರ ಡಿ.4ರಂದು ನಡೆದಿತ್ತು. 

ಪೂರ್ತಿ ಓದಿ

07:58 AM (IST) May 12

ಭಾರತೀಯ ಸೇನೆಗೆ ಉಗ್ರರ ನೆಲೆ ತೋರಿಸಿದ್ದು ಇಸ್ರೋ: ಫೋಟೋ ಕಳಿಸಿ ನೆರವು!

ಪಹಲ್ಗಾಂ ನರಮೇಧದ ಬಳಿಕ ಪಾಕಿಸ್ತಾನದ ಮೇಲೆ ವೈಮಾನಿಕ ದಾಳಿಯಲ್ಲಿ ಭಾರತೀಯ ಸೇನೆಯ ಮಹತ್ವದ ಜಯದಲ್ಲಿ ಬೆಂಗಳೂರಲ್ಲಿ ಕೇಂದ್ರ ಕಚೇರಿ ಹೊಂದಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಕೂಡಾ ಮಹತ್ವದ ಪಾತ್ರ ವಹಿಸಿದೆ ಎಂಬ ಅಚ್ಚರಿಯ ವಿಷಯ ಬೆಳಕಿಗೆ ಬಂದಿದೆ. 

ಪೂರ್ತಿ ಓದಿ

07:58 AM (IST) May 12

ದಾಳಿ ಮಾಡಿದ್ದಕ್ಕೆ ಭಾರತ ಛೀಮಾರಿ, ಹೆದರಿ ಗಡಿ ತಂಟೆ ನಿಲ್ಲಿಸಿದ ಪಾಕಿಸ್ತಾನ

ಶನಿವಾರ ಸಂಜೆ ಕದನ ವಿರಾಮ ಘೋಷಣೆ ಬಳಿಕವೂ ರಾತ್ರಿ 7.30ರಿಂದ 11 ಗಂಟೆಯವರೆಗೆ ಭಾರತದ ಗಡಿಗಳ ಮೇಲೆ ಭಾರೀ ಪ್ರಮಾಣದ ಡ್ರೋನ್‌, ಶೆಲ್‌, ಗುಂಡಿನ ದಾಳಿ ನಡೆಸಿದ್ದ ಪಾಕಿಸ್ತಾನ ತಡರಾತ್ರಿ ಬಳಿಕ ತೆಪ್ಪಗಾಗಿದೆ.

ಪೂರ್ತಿ ಓದಿ

07:57 AM (IST) May 12

ಭಾರತದ ದಾಳಿಗೆ 40 ಪಾಕ್ ಯೋಧರ ಹತ್ಯೆ, 100 ಉಗ್ರರು ಫಿನಿಷ್‌: ಭಾರತೀಯ ಸೇನಾಪಡೆ ಹೇಳಿದ್ದೇನು?

‘ಪಹಲ್ಗಾಂ ನರಮೇಧಕ್ಕೆ ಪ್ರತಿಯಾಗಿ ಭಾರತೀಯ ಸೇನೆ ನಡೆಸಿದ ‘ಅಪರೇಷನ್‌ ಸಿಂದೂರ್‌’ ಕಾರ್ಯಾಚರಣೆಯಲ್ಲಿ 9 ಉಗ್ರ ನೆಲೆ ಮತ್ತು ಹಲವು ಸೇನಾ ನೆಲೆಗಳನ್ನು ಧ್ವಂಸಗೊಳಿಸಲಾಗಿದೆ. ಈ ವೇಳೆ ಪಾಕಿಸ್ತಾನ ಕೆಲವು ಹಿರಿಯ ಸೇನಾಧಿಕಾರಿಗಳೂ ಸೇರಿದಂತೆ ಸೇನೆಯ 40 ಯೋಧರು ಸಾವನ್ನಪ್ಪಿದ್ದಾರೆ. 

ಪೂರ್ತಿ ಓದಿ

07:57 AM (IST) May 12

ಮಾತುಕತೆ ಏನಿದ್ದರೂ ಪಿಒಕೆ ವಾಪಸ್‌ ಕುರಿತು ಮಾತ್ರ: ಅಮೆರಿಕ ಉಪಾಧ್ಯಕ್ಷಗೆ ಮೋದಿ ಖಡಕ್‌ ಸಂದೇಶ

ಪಾಕಿಸ್ತಾನದ ಜೊತೆಗೆ ಇನ್ನೇನಾದರೂ ಮಾತುಕತೆ ಇದೆ ಎಂದಾದಲ್ಲಿ, ಅದು ಪಾಕ್‌ ಆಕ್ರಮಿತ ಕಾಶ್ಮೀರವನ್ನು ಭಾರತಕ್ಕೆ ಮರಳಿಸುವ ಕುರಿತು ಮತ್ತು ಪಾಕಿಸ್ತಾನದ ನೆಲದಲ್ಲಿರುವ ಭಯೋತ್ಪಾದಕರನ್ನು ಹಸ್ತಾಂತರಿಸುವ ಕುರಿತು ಮಾತ್ರ ಎಂದು ಪ್ರಧಾನಿ ನರೇಂದ್ರ ಮೋದಿ ಅಮೆರಿಕಕ್ಕೆ ಅತ್ಯಂತ ಸ್ಪಷ್ಟವಾಗಿ ಹೇಳಿದ್ದಾರೆ.

ಪೂರ್ತಿ ಓದಿ

07:57 AM (IST) May 12

ಆಪರೇಷನ್‌ ಸಿಂದೂರ ನಿಲ್ಲಲ್ಲ, ಗುಂಡು ಹಾರಿಸಿದರೆ ಬಾಂಬ್ ಮೂಲಕ ಉತ್ತರ ಎಂದ ಮೋದಿ

ಕದನ ವಿರಾಮದ ಬಳಿಕವೂ ಗಡಿಯಲ್ಲಿ ಪಾಕಿಸ್ತಾನ ಮುಂದುವರಿಸಿದ್ದ ಶೆಲ್ ದಾಳಿ ಮತ್ತು ಡ್ರೋನ್ ದಾಳಿಗಳ ಬಗ್ಗೆ ತೀವ್ರ ಕೆಂಡಾಮಂಡಲರಾಗಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ.
 

ಪೂರ್ತಿ ಓದಿ

07:57 AM (IST) May 12

ಕಾಶ್ಮೀರ ವಿವಾದ ಮಧ್ಯಸ್ಥಿಕೆಗೆ ಟ್ರಂಪ್ ಇಂಗಿತ: ಪಾಕಿಸ್ತಾನ ಸ್ವಾಗತ

ಭಾರತ ಮತ್ತು ಪಾಕಿಸ್ತಾನ ನಡುವಿನ ಕದನ ವಿರಾಮಕ್ಕೆ ಅಮೆರಿಕ ಮಧ್ಯಸ್ಥಿಕೆ ವಹಿಸಿದ ಬೆನ್ನಲ್ಲೇ ಎರಡು ದೇಶಗಳ ನಡುವಿನ ಕಾಶ್ಮೀರ ವಿವಾದ ಇತ್ಯರ್ಥಗೊಳಿಸುವ ಪರವಾಗಿ ಕೆಲಸ ಮಾಡುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಹೇಳಿದ್ದಾರೆ.

ಪೂರ್ತಿ ಓದಿ

07:56 AM (IST) May 12

ಪಾಕ್‌ ಸೇನಾ ಹೆಡ್‌ಆಫೀಸ್‌ಗೇ ಭಾರತದ ಸೇನೆ ರುಚಿ: ರಾಜನಾಥ್ ಸಿಂಗ್‌

ಗಡಿಯಲ್ಲಿರುವ ಸೇನಾ ನೆಲಗಳಷ್ಟೇ ಅಲ್ಲ, ಉಗ್ರ ಪೋಷಕ ಪಾಕಿಸ್ತಾನ ಸೇನೆಯ ಮುಖ್ಯ ಕಚೇರಿ ಇರುವ ರಾವಲ್ಪಿಂಡಿಯ ಮೇಲೂ ನುಗ್ಗಿ ಹೊಡೆಯುವ ಮೂಲಕ ಭಾರತ ತನ್ನ ಸೇನಾ ಸಾಮರ್ಥ್ಯ ತೋರಿಸಿಕೊಟ್ಟಿದೆ. 

ಪೂರ್ತಿ ಓದಿ

07:56 AM (IST) May 12

ಭಾರತಕ್ಕೆ ಮತ್ತಷ್ಟು ಬ್ರಹ್ಮೋಸ್‌ ಬಲ: ಉತ್ಪಾದನಾ ಘಟಕಕ್ಕೆ ರಾಜನಾಥ್‌ ಚಾಲನೆ

ಉತ್ತರ ಪ್ರದೇಶದ ಲಖನೌದಲ್ಲಿ ನಿರ್ಮಿಸಲಾಗಿರುವ ನೂತನ ಬ್ರಹ್ಮೋಸ್‌ ಕ್ಷಿಪಣಿ ಉತ್ಪಾದನೆ ಮತ್ತು ಜೋಡಣಾ ಘಟಕವನ್ನು ರಕ್ಷಣಾ ಸಚಿವ ರಾಜ್‌ನಾಥ್‌ ಸಿಂಗ್‌ ಭಾನುವಾರ ಉದ್ಘಾಟಿಸಿದರು. 

ಪೂರ್ತಿ ಓದಿ

07:56 AM (IST) May 12

ಪಾಕಿಸ್ತಾನಕ್ಕೆ ನುಗ್ಗಿ ಹೊಡೆದಿದ್ದು ಬ್ರಹ್ಮೋಸ್‌: ಈ ಕ್ಷಿಪಣಿಯ ಸಾಮರ್ಥ್ಯವೇನು?

ಭಾರತ ಮತ್ತು ರಷ್ಯಾ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ವಿಶ್ವದ ಅತ್ಯಾಧುನಿಕ ಸೂಪರ್‌ಸಾನಿಕ್‌ ಕ್ಷಿಪಣಿಯಾದ ಬ್ರಹ್ಮೋಸ್‌ ಅನ್ನು ಪಾಕಿಸ್ತಾನದ ಮೇಲಿನ ದಾಳಿಯಲ್ಲಿ ಭಾರತ ಬಳಸಿದೆ ಎಂಬ ಮಾಹಿತಿ ಹೊರಬಿದ್ದಿದೆ.

ಪೂರ್ತಿ ಓದಿ

07:48 AM (IST) May 12

ಅಣು ದಾಳಿ ಭೀತಿಗೆ ಅಮೆರಿಕದ ಮಧ್ಯ ಪ್ರವೇಶ?: ಭಾರತ ದಿಢೀರ್‌ ಕದನ ವಿರಾಮಕ್ಕೆ ಒಪ್ಪಿದ್ದೇಕೆ?

ಕರಾಚಿ ಮೇಲಿನ ದಾಳಿಗೂ ಸಜ್ಜಾಗಿದ್ದ, ಈ ಬಾರಿ ವೈರಿರಾಷ್ಟ್ರದ ಗರ್ವಭಂಗ ಮಾಡಲು ಎಲ್ಲರೀತಿಯಲ್ಲೂ ಸಿದ್ಧವಾಗಿದ್ದ ಪಾಕಿಸ್ತಾನದ ಜತೆಗೆ ಭಾರತ ದಿಢೀರ್‌ ಕದನ ವಿರಾಮಕ್ಕೆ ಒಪ್ಪಿಕೊಂಡಿದ್ದು ಯಾಕೆ? 

ಪೂರ್ತಿ ಓದಿ

More Trending News