ಛತ್ತೀಸ್‌ಗಢದಲ್ಲಿ ಮತ್ತೆ ಭಾರಿ ಎನ್‌ಕೌಂಟರ್ ನಡೆದಿದೆ. ನಕ್ಸಲರ ವಿರುದ್ಧ ಕಾರ್ಯಾಚರಮೆ ಬಿಗಿಗೊಳಿಸಲಾಗಿದೆ. ಈ ದಾಳಿಯಲ್ಲಿ ಇಬ್ಬರು ಭದ್ರತಾ ಪಡೆ ಸಿಬ್ಬಂದಿಗಳು ಗಾಯಗೊಂಡಿದ್ದಾರೆ. ಹತರಾದ 17 ನಕ್ಸಲರ ಪೈಕಿ 11 ಮಹಿಳೆಯರು.
ಸುಕ್ಮಾ(ಮಾ.30) ಛತ್ತೀಸ್‌ಗಢದಲ್ಲಿ ನಕ್ಸಲರ ವಿರುದ್ಧದ ಕಾರ್ಯಾಚರಣೆ ಭರ್ಜರಿಯಾಗಿ ಮುಂದುವರೆದಿದ್ದು, ಸುಕ್ಮಾ ಜಿಲ್ಲೆಯಲ್ಲಿ ಶನಿವಾರ ಭದ್ರತಾ ಸಿಬ್ಬಂದಿ 17 ನಕ್ಸಲರನ್ನು ಹತ್ಯೆ ಮಾಡಿದ್ದಾರೆ. ಹತ ನಕ್ಸಲರಲ್ಲಿ 11 ಮಹಿಳೆಯರಿದ್ದು, 25 ಲಕ್ಷ ರು. ಬಹುಮಾನ ಹೊಂ ದಿದ್ದ ಓರ್ವ ನಕ್ಸಲನೂ ಇದ್ದಾನೆ. ಈ ಮೂಲಕ ರಾಜ್ಯದಲ್ಲಿ ಈ ವರ್ಷ ಎನ್‌ಕೌಂಟರ್‌ಗೆ ಬಲಿಯಾದ ನಕ್ಸಲರ ಸಂಖ್ಯೆ 132ಕ್ಕೇರಿಕೆಯಾಗಿದೆ.
ಕೆರ್ಲಪಾಲ್ ಪೊಲೀಸ್ ಠಾಣಾ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಭದ್ರತಾ ಪಡೆಯ ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಗುಂಡಿನ ಕಾಳಗ ನಡೆದಿದ್ದು, 17 ಮಾವೋವಾದಿಗಳು ಹತರಾಗಿದ್ದಾರೆ. ಭದ್ರತಾ ಪಡೆಯ ಇಬ್ಬರು ಸಿಬ್ಬಂದಿ ಗಾಯಗೊಂಡಿದ್ದಾರೆ.
ಛತ್ತೀಸ್ ಗಢದಲ್ಲಿ ಕಾರ್ಯಾಚರಣೆ ತೀವ್ರ : 30 ನಕ್ಸಲರ ಹತ್ಯೆ, ಓರ್ವ ಯೋಧ ಹುತಾತ್ಮ
ಬಳಿಕವೂ ಈ ಪ್ರದೇಶದಲ್ಲಿ ನಕ್ಸಲ್ ವಿರುದ್ಧದ ಕಾರ್ಯಾಚರಣೆ ಮುಂದುವರೆದಿದೆ. ಈ ವೇಳೆ ನಕ್ಸಲರಿಂದ ಎಕೆ- 47 ರೈಫಲ್, ಎಸ್‌ಎಲ್ಆರ್, ಐಎನ್‌ಎಸ್‌ಎಎಸ್ ರೈಫೆಲ್, 303 ರೈಫೆಲ್, ಬಿಜಿಎಲ್ ಸೇರಿದಂತೆ ದೊಡ್ಡ ಪ್ರಮಾಣದ ಬಂದೂಕು ಮತ್ತು ಸ್ಫೋಟಕ ವಸ್ತುಗಳನ್ನು ಭದ್ರತಾ ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆ.
ಹಿಂಸೆಯಿಂದ ಬದಲಾವಣೆ ಅಸಾಧ್ಯ: ಶಾ
ಈ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ‘ಎಕ್ಸ್’ ಖಾತೆಯಲ್ಲಿ ಪ್ರತಿಕ್ರಿಯಿಸಿ, ‘ನಕ್ಸಲಿಸಂ ವಿರುದ್ಧ ಮತ್ತೊಂದು ದಾಳಿ ಆಗಿದೆ. ನಮ್ಮ ಭದ್ರತಾ ಸಿಬ್ಬಂದಿ ಸುಕ್ಮಾದಲ್ಲಿ 17 ನಕ್ಸಲರನ್ನು ಹತ್ಯೆ ಮಾಡಿ, ಬೃಹತ್ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ಶಸ್ತ್ರಾಸ್ತ್ರ ಮತ್ತು ಹಿಂಸಾಚಾರದಿಂದ ಬದಲಾವಣೆ ತರಲು ಸಾಧ್ಯವಿಲ್ಲ. ಕೇವಲ ಶಾಂತಿ ಮತ್ತು ಅಭಿವೃದ್ಧಿಯಿಂದ ಬದಲಾವಣೆ ಸಾಧ್ಯ’ ಎಂದಿದ್ದಾರೆ.
ಗರಿಯಾಬಂದ್ ಆಪರೇಶನ್
ಇತ್ತೀಚೆಗೆ ಛತ್ತೀಸ್‌ಗಢದ ಗರಿಯಾಬಂದ್ ಜಿಲ್ಲೆಯ ಅರಣ್ಯದಲ್ಲಿ ಭದ್ರತಾ ಪಡೆಗಳು ಮತ್ತು ನಕ್ಸಲೀಯರ ನಡುವಿನ ಕಾದಾಟದಲ್ಲಿ ಸೋಮವಾರ ಇಬ್ಬರು ಮಹಿಳಾ ನಕ್ಸಲೀಯರು ಸಾವನ್ನಪ್ಪಿದ್ದಾರೆ ಮತ್ತು ಸಿಆರ್‌ಪಿಎಫ್‌ನ ಹಿರಿಯ ಕಮಾಂಡೋ ಬೆಟಾಲಿಯನ್ ಫಾರ್ ರೆಸಲ್ಯೂಟ್ ಆಕ್ಷನ್ (ಕೋಬ್ರಾ)ನ ಒಬ್ಬ ಸಿಬ್ಬಂದಿ ಗಾಯಗೊಂಡಿದ್ದಾರೆ.ಇದರಿಂದಾಗಿ ಛತ್ತೀಸಗಢದಲ್ಲಿ ಈ ವರ್ಷ 28 ನಕ್ಸಲರು ಹತರಾದಂತಾಗಿದೆ. ಈ ಪೈಕಿ ಜನವರಿ 16ರಂದು ಬಿಜಾಪುರ ಜಿಲ್ಲೆಯಲ್ಲಿ 18 ನಕ್ಸಲೀಯರು ಹತರಾಗಿದ್ದರು. 2024ರಲ್ಲಿ ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ 219 ನಕ್ಸಲೀಯರನ್ನು ಹತ್ಯೆ ಮಾಡಲಾಗಿತ್ತು.
ಮಲೆನಾಡಿಗರಿಗೆ 20 ವರ್ಷದಿಂದ ಕಾಡುತ್ತಿದ್ದ ನಕ್ಸಲ್, ಪೊಲೀಸ್ ಭಯಕ್ಕೆ ಮುಕ್ತಿ