ನವದೆಹಲಿ (ಜ.30): ಗ್ಯಾರಂಟಿಯಿಂದ ರಾಜ್ಯಗಳ ಆರ್ಥಿಕತೆ ವಿನಾಶವಾಗಲಿದೆ ಎಂದು 2026ರ ಬಜೆಟ್ ಪೂರ್ವ ಕೇಂದ್ರ ಆರ್ಥಿಕ ಸಮೀಕ್ಷೆ ಎಚ್ಚರಿಕೆ ನೀಡಿದೆ. ನಗದು ವರ್ಗಾವಣೆಯಿಂದ ತಕ್ಷಣಕ್ಕೆ ಲಾಭ ಖಂಡಿತವಾಗಿ ಗೋಚರವಾಗಲಿದೆ, ಆದರೆ, ದೀರ್ಘಕಾಲದಲ್ಲಿ ಇದು ಆರ್ಥಿಕತೆಯ ಮೇಲೆ ಹೊಡೆತ ಬೀಳಲಿದೆ ಎಂದು ಎಚ್ಚರಿಸಿದೆ. ಸದ್ಯ ಗ್ಯಾರಂಟಿ ರಾಜ್ಯಗಳ ಸಂಖ್ಯೆ ದೇಶದಲ್ಲಿ ಐದು ಪಟ್ಟು ಹೆಚ್ಚಳವಾಗಿದೆ. ವರ್ಷಕ್ಕೆ 1.7 ಲಕ್ಷ ಕೋಟಿ ಇದಕ್ಕಾಗಿಯೇ ವೆಚ್ಚವಾಗುತ್ತಿದೆ. ಫ್ರೀ ಸ್ಕೀಮ್‌ಗಳಿಂದ ಬೊಕ್ಕಸಕ್ಕೆ ಭಾರೀ ಪೆಟ್ಟು ಬೀಳುತ್ತಿದೆ ಎಂದು ಎಚ್ಚರಿಕೆ ನೀಡಲಾಗಿದೆ. ಅದರೊಂದಿಗೆ ಇಂದಿನ ರಾಷ್ಟ್ರೀಯ, ರಾಜಕೀಯ, ಚುನಾವಣೆ, ವಾಣಿಜ್ಯ, ಟೆಕ್ನಾಲಜಿ ಹಾಗೂ ಎಂಟರ್‌ಟೇನ್‌ಮೆಂಟ್‌ನ ಸುದ್ದಿಗಳ ವಿವರಗಳ ಲೈವ್ ಬ್ಲಾಗ್..
09:27 AM (IST) Jan 30
ಇಂಡಿಯಾ ಟುಡೇ-ಸಿ ವೋಟರ್ ನಡೆಸಿದ 'ಮೂಡ್ ಆಫ್ ದಿ ನೇಷನ್' ಸಮೀಕ್ಷೆಯ ಪ್ರಕಾರ, ಇಂದು ಲೋಕಸಭಾ ಚುನಾವಣೆ ನಡೆದರೆ ಎನ್‌ಡಿಎ ಮೈತ್ರಿಕೂಟ 352 ಸ್ಥಾನಗಳನ್ನು ಗೆಲ್ಲಲಿದೆ. ಇದಕ್ಕೆ ಪ್ರತಿಯಾಗಿ, ಇಂಡಿಯಾ ಒಕ್ಕೂಟವು 182 ಸ್ಥಾನಗಳಿಗೆ ಕುಸಿಯಲಿದೆ ಎಂದು ಸಮೀಕ್ಷೆ ತಿಳಿಸಿದೆ.
08:59 AM (IST) Jan 30
ರೆನೊ ಇಂಡಿಯಾ ಕಂಪನಿಯು ತನ್ನ ಪ್ರಸಿದ್ಧ ಡಸ್ಟರ್ ಕಾರನ್ನು ಆಧುನಿಕ ವಿನ್ಯಾಸ ಮತ್ತು ಹೊಸ ವೈಶಿಷ್ಟ್ಯಗಳೊಂದಿಗೆ ಮರು ಬಿಡುಗಡೆ ಮಾಡಿದೆ. ಚೆನ್ನೈನಲ್ಲಿ ಅನಾವರಣಗೊಂಡ ಈ ಕಾರು, ಪನೋರಾಮಿಕ್ ಸನ್‌ರೂಫ್, ಹೈಬ್ರಿಡ್ ಎಂಜಿನ್ ಆಯ್ಕೆ, ಮತ್ತು 5-ಸ್ಟಾರ್ ಸುರಕ್ಷತಾ ಮಾನದಂಡಗಳೊಂದಿಗೆ ಬರುತ್ತದೆ.
07:58 AM (IST) Jan 30
ಹಲವಾರು ರಾಜ್ಯಗಳಲ್ಲಿ ನಡೆಯುತ್ತಿರುವ ಬೇಷರತ್ ನೇರ ನಗದು ವರ್ಗಾವಣೆ (ಯುಸಿಟಿ) ಯೋಜನೆಗಳು ಆರ್ಥಿಕತೆಗೆ ಅಪಾಯ ಉಂಟುಮಾಡುತ್ತದೆ ಮತ್ತು ಮುಂದಿನ ದಿನಗಳಲ್ಲಿ ಸಮಸ್ಯೆ ಸೃಷ್ಟಿಸುತ್ತವೆ ಎಂದು 2026 ರ ಆರ್ಥಿಕ ಸಮೀಕ್ಷೆ ಗುರುವಾರ ಹೇಳಿದೆ.
07:58 AM (IST) Jan 30
ವಿವಿ ಹಾಗೂ ವಿವಿ ಸಂಯೋಜಿತ ಕಾಲೇಜುಗಳ ಕ್ಯಾಂಪಸ್‌ಗಳಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಘದವರ ವಿರುದ್ಧ ನಡೆಯುವ ಜಾತಿ ಆಧಾರಿತ ತಾರತಮ್ಯ ತಡೆಗಟ್ಟುವ ಕುರಿತು ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ರೂಪಿಸಿದ್ದ ನಿಯಮಗಳಿಗೆ ಸುಪ್ರೀಂ ಕೋರ್ಟ್ ಗುರುವಾರ ತಡೆ ನೀಡಿದೆ
07:57 AM (IST) Jan 30
ಅಂತಾರಾಷ್ಟ್ರೀಯ ಏರಿಳಿತಗಳು, ವ್ಯಾಪಾರ ಆಘಾತಗಳ ನಡುವೆಯೂ ನಡುವೆಯೂ 2026-27ನೇ ಸಾಲಿನಲ್ಲಿ ಭಾರತದ ಆರ್ಥಿಕ ಬೆಳವಣಿಗೆ ಉತ್ತಮವಾಗಿಯೇ ಇರಲಿದೆ. ಏಪ್ರಿಲ್‌ನಿಂದ ಆರಂಭವಾಗಲಿರುವ ಮುಂದಿನ ವಿತ್ತ ವರ್ಷದಲ್ಲಿ ದೇಶ ಶೇ.6.8ರಿಂದ ಶೇ.7.2ರ ನಡುವೆ ಆರ್ಥಿಕ ಬೆಳವಣಿಗೆ ದಾಖಲಿಸಲಿದೆ ಎಂದು ಅಂದಾಜಿಸಲಾಗಿದೆ.