Published : Jul 23, 2025, 07:58 AM ISTUpdated : Jul 23, 2025, 11:07 PM IST

India Latest News Live: ನಾನು ರಾಹುಲ್ ಗಾಂಧಿ ಹಿಂದೆ ಹಿಂದೆಯೇ ಓಡಲಾರೆ - ಅಮೇಥಿ ಸೋಲಿನ ಬಗ್ಗೆ ಸ್ಮೃತಿ ಇರಾನಿ ಅಚ್ಚರಿ ಹೇಳಿಕೆ

ಸಾರಾಂಶ

ಬೆಂಗಳೂರು (ಜುಲೈ 23): ಸಂಸತ್ತಿನ  (Parilament Moonson Session)ಮುಂಗಾರು ಅಧಿವೇಶನ ಆರಂಭದ ದಿನವೇ ಉಪರಾಷ್ಟ್ರಪತಿ ಹುದ್ದೆಗೆ ಜಗದೀಪ್‌ ಧನಕರ್‌ (jagdeep dhankhar) ಅನಾರೋಗ್ಯದ ಕಾರಣ ನೀಡಿ ದಿಢೀರ್‌ ರಾಜೀನಾಮೆ ನೀಡಿದ್ದು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಅನಾರೋಗ್ಯದ ಹೊರತಾಗಿ ಅನ್ಯ ಕಾರಣವೂ ಇದೆ ಎಂದು ಅದಾಜಿಸಲಾಗಿದೆ. ಇಂದಿನ ರಾಷ್ಟ್ರೀಯ, ರಾಜಕೀಯ, ಚುನಾವಣೆ, ವಾಣಿಜ್ಯ, ಟೆಕ್ನಾಲಜಿ ಹಾಗೂ ಎಂಟರ್‌ಟೇನ್‌ಮೆಂಟ್‌ನ ಸುದ್ದಿಗಳ ವಿವರಗಳ ಲೈವ್‌ ಬ್ಲಾಗ್‌..

 

11:07 PM (IST) Jul 23

ನಾನು ರಾಹುಲ್ ಗಾಂಧಿ ಹಿಂದೆ ಹಿಂದೆಯೇ ಓಡಲಾರೆ - ಅಮೇಥಿ ಸೋಲಿನ ಬಗ್ಗೆ ಸ್ಮೃತಿ ಇರಾನಿ ಅಚ್ಚರಿ ಹೇಳಿಕೆ

BJP Leader Smriti Irani interview: ಸ್ಮೃತಿ ಇರಾನಿ ಅವರು ಅಮೇಥಿ ಕ್ಷೇತ್ರದ ಅನುಭವ, ರಾಹುಲ್ ಗಾಂಧಿ ವಿರುದ್ಧದ ಸ್ಪರ್ಧೆ ಹಾಗೂ ಸೋಲು-ಗೆಲುವಿನ ಕುರಿತು ಮಾತನಾಡಿದ್ದಾರೆ. ಅಮೇಥಿಯಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ವಿವರಿಸಿದ್ದಾರೆ.

Read Full Story

10:19 PM (IST) Jul 23

'ಇದು ನನ್ನ ಭಾರತವಲ್ಲ, ಇದನ್ನ ನಾನು ಸ್ವೀಕರಿಸೋಲ್ಲ..' ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಸ್ಫೋಟಕ ಹೇಳಿಕೆ!

ಫಾರೂಕ್ ಅಬ್ದುಲ್ಲಾ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಭಾರತದಲ್ಲಿ ಎಲ್ಲ ಧರ್ಮ, ಭಾಷೆ, ಪ್ರದೇಶದ ಜನರು ಪರಸ್ಪರ ಪ್ರೀತಿಸುವಂತಾಗಬೇಕು ಎಂದು ಹೇಳಿದ್ದಾರೆ. ಕಾಶ್ಮೀರದಿಂದ 370ನೇ ವಿಧಿಯನ್ನು ರದ್ದುಗೊಳಿಸಿದ ಕ್ರಮವನ್ನು ಟೀಕಿಸಿದ್ದಾರೆ.
Read Full Story

07:37 PM (IST) Jul 23

ತುರ್ತು ಕೋಟಾ ನಿಯಮಗಳಲ್ಲಿ ಪರಿಷ್ಕರಣೆ, ಹೊಸ ನಿಯಮ ಪ್ರಕಟಿಸಿದ ರೈಲ್ವೆ ಇಲಾಖೆ

ಭಾರತೀಯ ರೈಲ್ವೆ ತುರ್ತು ಕೋಟಾ (EQ) ನಿಯಮಗಳನ್ನು ಪರಿಷ್ಕರಿಸಿದೆ. ಇನ್ನು ಮುಂದೆ, EQ ಟಿಕೆಟ್‌ಗಳಿಗೆ ಕನಿಷ್ಠ ಒಂದು ದಿನ ಮುಂಚಿತವಾಗಿ ಅರ್ಜಿ ಸಲ್ಲಿಸಬೇಕು. ಹೊಸ ಟಿಕೆಟ್ ಬುಕಿಂಗ್ ವ್ಯವಸ್ಥೆ ಮತ್ತು ತತ್ಕಾಲ್ ಬದಲಾವಣೆಗಳ ಬಗ್ಗೆಯೂ ಮಾಹಿತಿ ಲಭ್ಯವಿದೆ.
Read Full Story

07:21 PM (IST) Jul 23

ಯೆಮೆನ್‌ನಲ್ಲಿ ನಿಮಿಷಾ ಪ್ರಿಯಾ ಬಿಡುಗಡೆ ಸುದ್ದಿ ಸುಳ್ಳು ಎಂದ ಭಾರತ ಸರ್ಕಾರ

ಯೆಮೆನ್‌ನಲ್ಲಿ ಮರಣದಂಡನೆಗೆ ಗುರಿಯಾಗಿರುವ ನಿಮಿಷಾ ಪ್ರಿಯಾ ಬಿಡುಗಡೆಯಾಗಿದ್ದಾರೆ ಎಂಬ ವದಂತಿಗಳನ್ನು ಭಾರತ ಸರ್ಕಾರ ತಳ್ಳಿಹಾಕಿದೆ. ಬಿಡುಗಡೆ ಪ್ರಯತ್ನಗಳು ಮುಂದುವರೆದಿವೆ, ಆದರೆ ಖಚಿತ ಮಾಹಿತಿಯಿಲ್ಲ ಎಂದು ವಿದೇಶಾಂಗ ಇಲಾಖೆ ತಿಳಿಸಿದೆ.
Read Full Story

07:13 PM (IST) Jul 23

Google pay- PhonePe ಜನರಿಗೆ ಫ್ರೀ ಆಗಿದ್ರೂ ಗಳಿಸ್ತಿದೆ 5 ಸಾವಿರ ಕೋಟಿ! ಇಂಟರೆಸ್ಟಿಂಗ್​ ವಿಷ್ಯ ಇಲ್ಲಿದೆ...

ಗೂಗಲ್​ ಪೇ- ಫೋನ್​ ಪೇ ಸೇವೆ ಉಚಿತವಾಗಿದ್ದರೂ ಮಾಸಿಕ ಐದು ಸಾವಿರ ಕೋಟಿ ರೂಪಾಯಿಗೂ ಅಧಿಕ ಲಾಭ ಮಾಡುತ್ತಿವೆ ಎನ್ನುವುದು ಗೊತ್ತಾ? ಅದ್ಹೇಗೆ ನೋಡಿ... ಕುತೂಹಲದ ವಿಷ್ಯ ಇಲ್ಲಿದೆ...

 

Read Full Story

06:57 PM (IST) Jul 23

ಶೋಲಾ ಕಾಡಲ್ಲಿ ನಿದ್ದೆಗೆ ಜಾರಿದ ಆನೆ ಹಿಂಡು - ಮರಿಗೆ ಸ್ನಾನ ಮಾಡಿಸಿದ ತಾಯಾನೆ - ವನ್ಯಲೋಕದ ಅದ್ಭುತ ವೀಡಿಯೋ

ತಾಯಿ ಆನೆಯೊಂದು ತನ್ನ ಮರಿಗೆ ಸ್ನಾನ ಮಾಡಿಸುತ್ತಿರುವ ಮುದ್ದಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ಹಾಗೆಯೇ ಶೋಲಾ ಕಾಡಿನಲ್ಲಿ ಆನೆಗಳ ಹಿಂಡು ನಿದ್ದೆ ಮಾಡುವ ಇನ್ನೊಂದು ವಿಡಿಯೋ ಕೂಡ ವೈರಲ್ ಆಗಿದೆ.

Read Full Story

06:55 PM (IST) Jul 23

ದೆಹಲಿಯಲ್ಲಿ 2450 ಕೊಲೆಗಳು! ರಾಜ್ಯಸಭೆಗೆ ವರದಿ ಕೊಟ್ಟ ಕೇಂದ್ರ ಸರ್ಕಾರ

ಕಳೆದ ಐದು ವರ್ಷಗಳಲ್ಲಿ ದೆಹಲಿಯಲ್ಲಿ 2,450 ಕೊಲೆ ಪ್ರಕರಣಗಳು ದಾಖಲಾಗಿವೆ ಎಂದು ಕೇಂದ್ರ ಸರ್ಕಾರ ರಾಜ್ಯಸಭೆಗೆ ತಿಳಿಸಿದೆ. 2022 ರಲ್ಲಿ ಅತಿ ಹೆಚ್ಚು ಕೊಲೆಗಳು (509) ನಡೆದಿವೆ.
Read Full Story

06:12 PM (IST) Jul 23

ಅದ್ಭುತ ಪುನರ್ಮಿಲನ - ಒಂದೇ ಶಾಲೆಯ ಬೆಂಚ್‌ಮೇಟ್‌ಗಳು ಈಗ ಸೇನೆಯ ಉನ್ನತ ಹುದ್ದೆಯಲ್ಲಿರುವವರು

ಒಂದೇ ಶಾಲೆಯಲ್ಲಿ ಕಲಿತ ನಾಲ್ವರು ಸ್ನೇಹಿತರು ದಶಕಗಳ ನಂತರ ಸೇನೆಯ ವಿವಿದ ಉನ್ನತ ಹುದ್ದೆಯ ಅಧಿಕಾರಿಗಳಾಗಿ  ತಮ್ಮ ಶಾಲೆಗೆ ಭೇಟಿ ನೀಡಿದರು. ಒಂದೇ ಬೆಂಚಿನಲ್ಲಿ ಕುಳಿತು ಪಾಠ ಕೇಳಿದ ಈ ಸ್ನೇಹಿತರು ಈಗ ದೇಶ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.

Read Full Story

03:57 PM (IST) Jul 23

ಡಾನ್ಸ್ ಮಾಡಿ ಫಾರಿನ್ ಕ್ಲೈಂಟ್‌ ಸ್ವಾಗತಿಸಿದ ಉದ್ಯೋಗಿಗಳು - ಅಧುನಿಕ ಗುಲಾಮಗಿರಿ ಎಂದ ನೆಟ್ಟಿಗರು

ತಮ್ಮ ಸಂಸ್ಥೆಯ ವಿದೇಶಿ ಗ್ರಾಹಕನನ್ನು ಸಂಸ್ಥೆಯ ಉದ್ಯೋಗಿಗಳು ಬಿಂದಾಸ್ ಆಗಿ ಡಾನ್ಸ್ ಮಾಡುವ ಮೂಲಕ ಸ್ವಾಗತಿಸಿದ್ದು, ಈ ಘಟನೆಗೆ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ.

Read Full Story

03:39 PM (IST) Jul 23

1654 ಕೋಟಿ ವಿದೇಶಿ ನೇರ ಹೂಡಿಕೆ ಉಲ್ಲಂಘನೆ, ಬೆಂಗಳೂರಿನ Myntra ವಿರುದ್ಧ ED ದೂರು!

ED ಪ್ರಕಾರ, ಮಿಂತ್ರಾ ಮತ್ತು ಅದರ ಸಂಬಂಧಿತ ಘಟಕಗಳು 'ಸಗಟು ನಗದು ಮತ್ತು ಸಾಗಣೆ' ವ್ಯವಹಾರಗಳಾಗಿ ಕಾರ್ಯನಿರ್ವಹಿಸುವುದಾಗಿ ಸುಳ್ಳು ಹೇಳಿಕೊಂಡು ಮಲ್ಟಿ-ಬ್ರಾಂಡ್ ಚಿಲ್ಲರೆ ವ್ಯಾಪಾರ (MBRT) ಚಟುವಟಿಕೆಗಳನ್ನು ನಡೆಸಿವೆ.

 

Read Full Story

03:24 PM (IST) Jul 23

ಪ್ರತಿ ತಿಂಗಳು 5 ಸಾವಿರ SIP ಮಾಡಿದರೆ, 10, 20, 30 ವರ್ಷಗಳಲ್ಲಿ ವ್ಯಕ್ತಿ ಗಳಿಸುವ ಹಣವೆಷ್ಟು?

₹5,000 monthly SIP over 10, 20, and 30 year ಕೇವಲ ₹5,000 ಮಾಸಿಕ SIP ನಿಂದ ನಿವೃತ್ತಿಯ ವೇಳೆಗೆ ₹1 ಕೋಟಿಗೂ ಹೆಚ್ಚು ಹಣ ಗಳಿಸಬಹುದು. ದೀರ್ಘಾವಧಿಯ ಹೂಡಿಕೆ ಮತ್ತು ಸರಿಯಾದ ನಿಧಿ ಆಯ್ಕೆ ಮೂಲಕ ಇದು ಸಾಧ್ಯ. ಈ ಲೇಖನದಲ್ಲಿ SIP ಹೂಡಿಕೆಯ ಬಗ್ಗೆ ತಿಳಿದುಕೊಳ್ಳಿ.

Read Full Story

02:54 PM (IST) Jul 23

ಬೀಚ್‌ನಲ್ಲಾಯ್ತು ದೊಡ್ಡ ಎಡವಟ್ಟು - ವೀಡಿಯೋಗೆ ಬಂದ ಕಾಮೆಂಟ್ ನೋಡಿ ಮತ್ತಷ್ಟು ಆಘಾತ

ಒಳ್ಳೆ ನೀರು ಯಾವುದು ಕೆಟ್ಟ ನೀರು ಯಾವುದು ಎಂದು ಮೇಲ್ನೋಟಕ್ಕೆ ಎಂಥ ದಡ್ಡರಿಗಾದರೂ ತಿಳಿಯುತ್ತೆ. ಆದರೆ ಇಲ್ಲೊಬ್ಬರು ಇನ್‌ಫ್ಲುಯೆನ್ಸರ್ ತಿಳಿಯದೇ ಬೀಚ್‌ನಲ್ಲಿ ಕೊಳಕು ನೀರಿನಲ್ಲಿ ಸ್ನಾನ ಮಾಡಿ ಈಗ ಬಾಯ್ಬಾಯಿ ಬಡ್ಕೊಂಡಿದ್ದಾಳೆ.

Read Full Story

01:33 PM (IST) Jul 23

ಬ್ಯಾಂಕ್‌ಗಳಲ್ಲಿ ನೇಮಕಾತಿ ಗಣನೀಯ ಕುಸಿತ, ಉನ್ನತ ಬ್ಯಾಂಕುಗಳ ವ್ಯವಹಾರ ಇಳಿಕೆಯಾಯ್ತಾ?

HDFC, SBI ಮತ್ತು Axis ಬ್ಯಾಂಕ್ ಸೇರಿದಂತೆ ಪ್ರಮುಖ ಬ್ಯಾಂಕುಗಳಲ್ಲಿ FY25ರಲ್ಲಿ ನೇಮಕಾತಿ ಗಣನೀಯವಾಗಿ ಕುಸಿತ ಕಂಡಿದೆ. ನಿಧಾನಗತಿಯ ಬೆಳವಣಿಗೆ, ಕಡಿಮೆಯಾದ ವಿಸ್ತರಣೆ ಮತ್ತು ಸುಧಾರಿತ ಕ್ಷೀಣತೆ ಮುಂತಾದ ಅಂಶಗಳು ಇದಕ್ಕೆ ಕಾರಣ ಎನ್ನಲಾಗಿದೆ. 

Read Full Story

01:27 PM (IST) Jul 23

ಫೇಕ್‌ ಬ್ಯಾಂಕ್‌, ಫೇಕ್‌ ಆಫೀಸರ್‌ ನೋಡಿದ್ದಾಯ್ತು, ನಕಲಿ ರಾಯಭಾರ ಕಚೇರಿಯನ್ನೇ ತೆರೆದ ಉತ್ತರ ಪ್ರದೇಶದ ವ್ಯಕ್ತಿ!

ಗಾಜಿಯಾಬಾದ್‌ನ ಹರ್ಷವರ್ಧನ್ ಜೈನ್ ನಕಲಿ ರಾಯಭಾರ ಕಚೇರಿ ನಡೆಸುತ್ತಿದ್ದರು, ನಕಲಿ ರಾಜತಾಂತ್ರಿಕ ಪ್ಲೇಟ್‌ಗಳನ್ನು ಬಳಸುತ್ತಿದ್ದರು ಮತ್ತು ವಿದೇಶಿ ಉದ್ಯೋಗಗಳನ್ನು ನೀಡುವುದಾಗಿ ಹವಾಲಾ ದಂಧೆ ನಡೆಸುತ್ತಿದ್ದರು ಎಂದು ಯುಪಿ ಎಸ್‌ಟಿಎಫ್‌ ಹೇಳಿದೆ.

 

Read Full Story

01:12 PM (IST) Jul 23

ತಾಯಿ ಮಗಳ ಕೊಲೆಗೆ ರೋಚಕ ಟ್ವಿಸ್ಟ್ - ಲಿಪ್‌ಸ್ಟಿಕ್ ಬಳಸಿ ಗೋಡೆ ಮೇಲೆ ಲಿವ್ ಇನ್ ಪಾರ್ಟನರ್ ಬರೆದಿದ್ದೇನು?

ವಿದಿಶಾದಲ್ಲಿ ಲೀವಿಂಗ್ ಪಾರ್ಟನರ್ ತನ್ನ ಸಂಗಾತಿ ಮತ್ತು ಮಗಳನ್ನು ಕೊಂದು ಗೋಡೆಯ ಮೇಲೆ ಲಿಪ್‌ಸ್ಟಿಕ್‌ನಿಂದ ಕೊಲೆಯ ಕಾರಣ ಬರೆದಿದ್ದಾನೆ. ರಾತ್ರಿಯಿಡಿ ಶವಗಳೊಂದಿಗೆ ಕಳೆದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. 

Read Full Story

01:04 PM (IST) Jul 23

ಲಾಭದ ಹಾದಿ ಹಿಡಿದ BSNL; 197 ಅನ್‌ಲಿಮಿಟೆಡ್ ಪ್ಲಾನ್ ವ್ಯಾಲಿಡಿಟಿ ಕಡಿತ! ಇನ್ನೂ ಹಲವು ಬದಲಾವಣೆ!

ಬಿಎಸ್ಎನ್ಎಲ್ ತನ್ನ 197 ರೂ. ಪ್ರಿಪೇಯ್ಡ್ ಪ್ಲಾನ್‌ನ ವ್ಯಾಲಿಡಿಟಿ ಮತ್ತು ಸೌಲಭ್ಯಗಳನ್ನು ಕಡಿತಗೊಳಿಸಿದೆ. 70 ದಿನಗಳ ವ್ಯಾಲಿಡಿಟಿಯನ್ನು 54 ದಿನಗಳಿಗೆ ಇಳಿಸಲಾಗಿದೆ ಮತ್ತು ಅನ್‌ಲಿಮಿಟೆಡ್ ಕರೆಗಳನ್ನು ಸೀಮಿತಗೊಳಿಸಲಾಗಿದೆ. ಡೇಟಾ ಮತ್ತು ಎಸ್‌ಎಂಎಸ್ ಸೌಲಭ್ಯಗಳಲ್ಲೂ ಬದಲಾವಣೆಗಳಾಗಿವೆ.
Read Full Story

12:35 PM (IST) Jul 23

Grossery Compare App - ಜನಸಾಮಾನ್ಯರಿಗೆ ಗುಡ್​ ನ್ಯೂಸ್!​ ಇನ್ಮುಂದೆ ದಿನಸಿ ಖರ್ಚಲ್ಲಿ ಮಹಾ ಉಳಿತಾಯ- ಡಿಟೇಲ್ಸ್​ ಇಲ್ಲಿದೆ..

ಮನೆಯಲ್ಲಿಯೇ ಕುಳಿತು ದಿನಸಿ ಸಾಮಗ್ರಿಗಳನ್ನು ತರಿಸಿಕೊಳ್ಳುವುದು ನಿಮಗೆ ಇದಾಗಲೇ ಗೊತ್ತು. ಆದರೆ ತಲೆಬಿಸಿ ಇಲ್ಲದೇ ದಿನಸಿ ಸಾಮಗ್ರಿಗಳಲ್ಲಿಯೂ ಉಳಿತಾಯ ಮಾಡಲು ನೆರವಾಗಲಿದೆ ಈ ಹೊಸ ಆ್ಯಪ್​. ಇಲ್ಲಿದೆ ಡಿಟೇಲ್ಸ್​...

 

Read Full Story

12:12 PM (IST) Jul 23

ಭಾರತೀಯ ಉದ್ಯೋಗಿಯ ಹಗರಣ ಬಯಲಿಗೆಳೆದ ಎರಡೇ ದಿನಕ್ಕೆ ಸಿಂಗಾಪುರದ ಮಹಿಳೆ ಸಾವು

ಭಾರತೀಯ ಉದ್ಯೋಗಿಯ ವರ್ತನೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಎರಡೇ ದಿನಕ್ಕೆ ಸಿಂಗಾಪುರ ಮಹಿಳೆ ಸಾವನ್ನಪ್ಪಿದ್ದು, ಅಲ್ಲಿನ ವ್ಯಾಪಾರಿ ವಲಯದಲ್ಲಿ ಈ ಸಾವು ಭಯ ಮೂಡಿಸಿದೆ.

Read Full Story

11:23 AM (IST) Jul 23

ಛೀ ಇವನೆಂಥಾ ಗಂಡ - ಹೆಂಡ್ತಿ ಸ್ನಾನದ ವೀಡಿಯೋ ಮಾಡಿ ಕಾರಿನ ಇಎಂಐ ಕಟ್ಟುವಂತೆ ಬ್ಲಾಕ್‌ಮೇಲ್

ಆಕೆಗೆ ತಾಳಿ ಕಟ್ಟಿ ಕರೆತಂದವನ್ನೇ ಯಾರೂ ಮಾಡಲೇಬಾರದ್ದಂತಹ ಪೈಶಾಚಿಕ ಕೃತ್ಯವನ್ನು ಮಾಡಿದರೆ ಅಳುವುದಾದರೂ ಯಾರ ಬಳಿ, ಇಂತಹದ್ದೊಂದು ಸಂದಿಗ್ಧ ಸ್ಥಿತಿಗೆ ಸಿಕ್ಕ ಹೆಣ್ಣೊಬ್ಬಳು ಕಡೆಗೂ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ಹಾಗಿದ್ದರೆ ಗಂಡ ಮಾಡಿದ್ದೇನು ಇಲ್ಲಿದೆ ನೋಡಿ ಡಿಟೇಲ್ ಸ್ಟೋರಿ...

Read Full Story

09:54 AM (IST) Jul 23

ಜಗದೀಪ್‌ ಧನ್‌ಕರ್‌ ರಾಜೀನಾಮೆಗೆ ಮೋದಿ ಸರ್ಕಾರ ಒತ್ತಡ ಹಾಕಿದ್ದೇಕೆ? ಇಲ್ಲಿದೆ ಇನ್‌ಸೈಡ್‌ ಸ್ಟೋರಿ

ಉಪರಾಷ್ಟ್ರಪತಿ ಜಗದೀಪ್ ಧನ್‌ಕರ್‌ ಅವರ ದಿಢೀರ್ ರಾಜೀನಾಮೆ ರಾಜಕೀಯ ಚರ್ಚೆಗೆ ಗ್ರಾಸವಾಗಿದೆ. ಕೇಂದ್ರ ಸರ್ಕಾರದ ಬಗ್ಗೆ ಅಸಮಾಧಾನ, ಜಾಟ್ ಸಮುದಾಯದ ಬಗ್ಗೆ ಅನ್ಯಾಯದ ಆರೋಪ, ನ್ಯಾಯಮೂರ್ತಿ ವರ್ಮಾ ವಿರುದ್ಧದ ಅರ್ಜಿ ಸ್ವೀಕಾರ ಸೇರಿದಂತೆ ಹಲವು ಕಾರಣಗಳಿವೆ ಎನ್ನಲಾಗಿದೆ.
Read Full Story

08:08 AM (IST) Jul 23

ಉಪರಾಷ್ಟ್ರಪತಿಗಳ ದಿಢೀರ್‌ ರಾಜೀನಾಮೆಗೆ 4 ಕಾರಣ?

ಸಂಸತ್ತಿನ ಮುಂಗಾರು ಅಧಿವೇಶನ ಆರಂಭದ ದಿನವೇ ಉಪರಾಷ್ಟ್ರಪತಿ ಹುದ್ದೆಗೆ ಜಗದೀಪ್‌ ಧನಕರ್‌ ಅನಾರೋಗ್ಯದ ಕಾರಣ ನೀಡಿ ದಿಢೀರ್‌ ರಾಜೀನಾಮೆ ನೀಡಿದ್ದು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

 

Read Full Story

08:07 AM (IST) Jul 23

ತಲಾದಾಯದ ಬೆಳವಣಿಗೆ : ದೇಶದಲ್ಲೇ ಕರ್ನಾಟಕ ನಂ.1

ತೆರಿಗೆ ಸಂಗ್ರಹದಲ್ಲಿ ದೇಶದಲ್ಲೇ 2ನೇ ಸ್ಥಾನದಲ್ಲಿರುವ ಕರ್ನಾಟಕ, ಕಳೆದೊಂದು ದಶಕದಲ್ಲಿ ತಲಾದಾಯ ಹೆಚ್ಚಳ ಪ್ರಮಾಣದಲ್ಲಿ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ ಎಂದು ಕೇಂದ್ರ ಸರ್ಕಾರದ ಅಂಕಿ ಅಂಶಗಳು ಹೇಳಿವೆ.

 

Read Full Story

08:07 AM (IST) Jul 23

ಬೋಯಿಂಗ್ ವಿಮಾನಗಳ ಇಂಧನ ಸ್ವಿಚ್‌ಗಳಲ್ಲಿ ಯಾವ ದೋಷವಿಲ್ಲ : ಏರಿಂಡಿಯಾ

ತನ್ನ ಒಡೆತನದ ಯಾವುದೇ ಬೋಯಿಂಗ್‌ 787 ಮತ್ತು 737 ಮಾದರಿಯ ವಿಮಾನಗಳಲ್ಲಿ ಇಂಧನ ನಿಯಂತ್ರಣ ಮಾಡುವ ಸ್ವಿಚ್‌ ವ್ಯವಸ್ಥೆಯಲ್ಲಿ ಯಾವುದೇ ಲೋಪದೋಷ ಕಂಡುಬಂದಿಲ್ಲ ಎಂದು ಏರ್‌ ಇಂಡಿಯಾ ಸ್ಪಷ್ಟಪಡಿಸಿದೆ.

 

Read Full Story

08:07 AM (IST) Jul 23

2024ರಲ್ಲಿ 37 ಲಕ್ಷ ನಾಯಿ ಕಡಿತ, 54 ಜನ ರೇಬಿಸ್‌ಗೆ ಬಲಿ : ಕೇಂದ್ರ

2024ರಲ್ಲಿ ದೇಶದಲ್ಲಿ 37 ಲಕ್ಷ ಜನರು ನಾಯಿ ಕಡಿತಕ್ಕೆ ಒಳಗಾಗಿದ್ದಾರೆ. ಈ ಪೈಕಿ 54 ಮಂದಿ ಶಂಕಿತ ರೇಬಿಸ್‌ಗೆ ಬಲಿಯಾಗಿದ್ದಾರೆ ಎಂದು ಕೇಂದ್ರ ಸರ್ಕಾರ ಲೋಕಸಭೆಗೆ ಮಾಹಿತಿ ನೀಡಿದೆ.

 

Read Full Story

08:06 AM (IST) Jul 23

ಬೆಂಗಳೂರಿನ ನಗರ ನಕ್ಸಲರಿಂದ ಮಹಾ ಅಭಿವೃದ್ಧಿಗೆ ಅಡ್ಡಿ : ಫಡ್ನವೀಸ್‌

ಬೆಂಗಳೂರು ಮತ್ತು ಕೋಲ್ಕತಾದಲ್ಲಿ ಕುಳಿತಿರುವ ಕೆಲ ನಗರ ನಕ್ಸಲರು ವಿದೇಶಗಳಿಂದ ಹಣ ಪಡೆದು ಮಹಾರಾಷ್ಟ್ರದಲ್ಲಿ ಸುಳ್ಳು ಸುದ್ದಿ ಹಬ್ಬಿಸಿ, ಇಲ್ಲಿನ ಅಭಿವೃದ್ಧಿಗೆ ಅಡ್ಡಿಯಾಗುತ್ತಿದ್ದಾರೆ ಎಂದು ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಆರೋಪಿಸಿದ್ದಾರೆ.

 

Read Full Story

08:06 AM (IST) Jul 23

ಇಂದಿನಿಂದ 4 ದಿನ ಮೋದಿ ಬ್ರಿಟನ್, ಮಾಲ್ಡೀವ್ಸ್‌ಗೆ

ಇತ್ತೀಚೆಗಷ್ಟೇ 5 ರಾಷ್ಟ್ರಗಳ ಪ್ರವಾಸ ಮುಗಿಸಿ ಬಂದ ಬೆನ್ನಲ್ಲೇ ಪ್ರಧಾನಿ ಮೋದಿ ಜು.23ರಿಂದ 4 ದಿನಗಳ ಕಾಲ ಬ್ರಿಟನ್ ಮತ್ತು ಮಾಲ್ಡೀವ್ಸ್‌ಗೆ ಭೇಟಿ ನೀಡಲಿದ್ದಾರೆ.

 

Read Full Story

08:05 AM (IST) Jul 23

₹12 ಕೋಟಿ, ಮನೆ, ಬಿಎಂಡಬ್ಲ್ಯು ಜೀವನಾಂಶ ಕೇಳಿದವಳಿಗೆ ಚಾಟಿ

‘ಸುಶಿಕ್ಷಿತರಾಗಿರುವ ನೀವು ಜೀವನಾಂಶವನ್ನೇಕೆ ಅವಲಂಬಿಸುತ್ತೀರಾ? ನೀವೇ ಯಾಕೆ ದುಡಿಯಬಾರದು’ ಎಂದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾ। ಬಿ.ಆರ್‌. ಗವಾಯಿ ಅವರು, ವಿಚ್ಛೇದಿತ ಮಹಿಳೆಯೊಬ್ಬರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

 

Read Full Story

08:05 AM (IST) Jul 23

ನನ್ನನ್ನು ಪಕ್ಷದಿಂದ ಹೊರಗಿಡಲು ಮುರಳಿ ಯಾರು : ತರೂರ್‌ ಕಿಡಿ

ಪಕ್ಷಕ್ಕಿಂತ ರಾಷ್ಟ್ರೀಯ ಭದ್ರತೆ ದೊಡ್ಡದು’ ಎಂದಿದ್ದ ಶಶಿ ತರೂರ್‌ ಅವರನ್ನು ಕಾಂಗ್ರೆಸ್‌ ಸದಸ್ಯರೆಂದು ಪರಿಗಣಿಸುವುದಿಲ್ಲ ಎಂದಿದ್ದ ಕೇರಳದ ಕಾಂಗ್ರೆಸ್‌ ರಾಜ್ಯಾಧ್ಯಕ್ಷ ಕೆ. ಮುರಳೀಧರನ್‌ ಹೇಳಿಕೆಗೆ ತಿರುಗೇಟು ನೀಡಿರುವ ತರೂರ್‌, ‘ಪಕ್ಷದಲ್ಲಿ ಅವರ ಸ್ಥಾನವಾದರೂ ಏನು’ ಎಂದು ಕೇಳಿದ್ದಾರೆ.

 

Read Full Story

08:05 AM (IST) Jul 23

ಸುರ್ಜೇವಾಲಾರ ವೈ ಪ್ಲಸ್‌ ಭದ್ರತೆ ಹಿಂಪಡೆದ ಕೇಂದ್ರ

ಕಾಂಗ್ರೆಸ್‌ ಸಂಸದ, ಕರ್ನಾಟಕ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸುರ್ಜೇವಾಲಾ ಅವರಿಗೆ ನೀಡಲಾಗಿದ್ದ ವೈ ಪ್ಲಸ್‌ ಭದ್ರತೆಯನ್ನು ಕೇಂದ್ರ ಸರ್ಕಾರ ಹಿಂಪಡೆದಿದೆ.

 

Read Full Story

08:04 AM (IST) Jul 23

₹199 ಕೋಟಿ ತೆರಿಗೆ ವಿನಾಯಿತಿ ಕೋರಿದ್ದ ಕಾಂಗ್ರೆಸ್ ಅರ್ಜಿ ವಜಾ

ದೇಣಿಗೆ ಮೂಲಕ ಬಂದ 199 ಕೋಟಿ ರು. ಆದಾಯಕ್ಕೆ ತೆರಿಗೆ ವಿನಾಯಿತಿಯ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆಯಾಗಿದೆ. 2018-19ನೇ ವರ್ಷದಲ್ಲಿ 199.15 ಕೋಟಿ ರು. ಆದಾಯಕ್ಕೆ ತೆರಿಗೆ ವಿನಾಯಿತಿ ಕೋರಿ ಕಾಂಗ್ರೆಸ್ ಸಲ್ಲಿಸಿದ್ದ ಅರ್ಜಿ ಮೇಲ್ಮನವಿ ನ್ಯಾಯಮಂಡಳಿ(ಐಟಿಎಟಿ) ವಜಾಗೊಳಿಸಿದೆ.

 

Read Full Story

08:04 AM (IST) Jul 23

2ನೇ ದಿನ ಕಲಾಪ ಬಲಿ ಪಡೆದ ಮತಪಟ್ಟಿ ಪರಿಷ್ಕರಣೆ ಗದ್ದಲ

ಸೋಮವಾರದಿಂದ ಆರಂಭವಾಗಿರುವ ಸಂಸತ್‌ ಅಧಿವೇಶನ 2ನೇ ದಿನವೂ ವಿಪಕ್ಷಗಳ ಗದ್ದಲಕ್ಕೆ ಬಲಿಯಾಯಿತು. ಬಿಹಾರದಲ್ಲಿ ನಡೆಯುತ್ತಿರುವ ಮತಪಟ್ಟಿ ಪರಿಷ್ಕರಣೆ ಉಭಯ ಸದನಗಳಲ್ಲಿ ಕಲಾಪವನ್ನು ಬಲಿ ಪಡೆದಿದ್ದರಿಂದ ಅದು ಬುಧವಾರಕ್ಕೆ ಮುಂದೂಡಿಕೆಯಾಯಿತು.

 

Read Full Story

08:03 AM (IST) Jul 23

Real life 3 Idiots Joy Lobo? 20ರ ಹುಡುಗರಿಂದ ರಡಾರ್‌ ಕಣ್ತಪ್ಪಿಸಬಲ್ಲ ಡ್ರೋನ್‌ ಅಭಿವೃದ್ಧಿ!

ಹೈದರಾಬಾದ್‌ನ ಇಬ್ಬರು 20 ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಹಾಸ್ಟೆಲ್‌ನಲ್ಲಿ ರಾಡಾರ್‌ ತಪ್ಪಿಸುವ ಡ್ರೋನ್‌ಗಳನ್ನು ತಯಾರಿಸಿ ಭಾರತೀಯ ಸೇನೆಗೆ ಮಾರಾಟ ಮಾಡಿದ್ದಾರೆ. ಕ್ಯಾಮಿಕಾಜೆ ಡ್ರೋನ್‌ಗಳು ಗಂಟೆಗೆ 300 ಕಿ.ಮೀ ವೇಗದಲ್ಲಿ ಚಲಿಸಬಲ್ಲವು ಮತ್ತು 1 ಕೆ.ಜಿ. ಸರಕು ಹೊತ್ತೊಯ್ಯಬಲ್ಲವು.

 

Read Full Story

More Trending News