ಬೆಂಗಳೂರು : ‘1925ರಲ್ಲಿ ಆರ್‌ಎಸ್‌ಎಸ್ ಆರಂಭಿಸಿದ ಡಾ.ಹೆಡ್ಗೆವಾರ್ ಬ್ರಿಟಿಷರ ವಿರುದ್ಧ ಹೋರಾಡಿದ್ದರು. ಹಾಗಾದರೆ ನಾವು ಸಂಘವನ್ನು ಬ್ರಿಟಿಷ್ ಸರ್ಕಾರದಲ್ಲಿ ನೋಂದಣಿ ಮಾಡಬೇಕಿತ್ತೆ? ಸ್ವಾತಂತ್ರ್ಯಾನಂತರ ಸರ್ಕಾರವು ಸಂಘವನ್ನು ವ್ಯಕ್ತಿಗಳ ಸಂಘಟನೆ ಎಂದು ಗುರುತಿಸಿದೆ. ಆದಾಯ ತೆರಿಗೆ ಇಲಾಖೆಯು ಗುರುದಕ್ಷಿಣೆ ಗೆ ಆದಾಯ ತೆರಿಗೆ ವಿನಾಯಿತಿ ನೀಡಿದೆ ಎಂದು ಆರ್‌ಎಸ್‌ಎಸ್ ಸರಸಂಘಚಾಲಕ ಡಾ.ಮೋಹನ್ ಭಾಗವತ್ ಪ್ರತಿಪಾದಿಸಿದ್ದಾರೆ. ತನ್ಮೂಲಕ ಆರ್‌ಎಸ್‌ಎಸ್ ಏಕೆ ನೋಂದಣಿಯಾಗಿಲ್ಲ? ಎಂದು ಪ್ರಶ್ನಿಸುತ್ತಿದ್ದ ಕಾಂಗ್ರೆಸ್ಸಿಗರಿಗೆ ಪರೋಕ್ಷ ತಿರುಗೇಟು ನೀಡಿದ್ದಾರೆ. ಆರ್‌ಎಸ್‌ಎಸ್ ನೂರನೇ ವರ್ಷದ ಆಚರಣೆ ಪ್ರಯುಕ್ತ ನಗರದ ಪಿಇಎಸ್ ವಿಶ್ವವಿದ್ಯಾಲಯದಲ್ಲಿ ‘ಸಂಘದ 100 ವರ್ಷ ಪಯಣ; ನವ ಕ್ಷಿತಿಜಗಳು ಶೀರ್ಷಿಕೆಯಡಿ ಆಯೋಜಿಸಿರುವ ಎರಡು ದಿನಗಳ ಉಪನ್ಯಾಸ ಮಾಲಿಕೆಯಲ್ಲಿ 2ನೇ ದಿನವಾದ ಭಾನುವಾರ ಪ್ರಶ್ನೋತ್ತರದ ವೇಳೆ ಅವರು ಮಾತನಾಡಿದರು. ಈ ಹಿಂದೆ ಮೂರು ಬಾರಿ ಸರ್ಕಾರವು ಸಂಘವನ್ನು ನಿಷೇಧಿಸಿದೆ ಎಂದರೆ ಅದು ಸಂಘವನ್ನು ಗುರುತಿಸಿದೆ ಎಂದಲ್ಲವೇ? ಸಂಘವು ಸಂಪೂರ್ಣವಾಗಿ ಕಾನೂನುಬದ್ಧವಾಗಿದೆ. ಸಂವಿಧಾನದ ಚೌಕಟ್ಟಿನಲ್ಲೇ ಕೆಲಸ ಮಾಡುತ್ತಿದೆ. ಹಾಗೆ ನೋಡಿದರೆ ಹಿಂದೂ ಧರ್ಮವೂ ನೋಂದಣಿ ಆಗಿಲ್ಲ ಅಲ್ಲವೇ ಎನ್ನುವ ಮುಖಾಂತರ ಆರ್‌ಎಸ್‌ಎಸ್ ಸಂಘಟನೆ ನೋಂದಣೆಯಾಗದಿರುವುದನ್ನು ಸಮರ್ಥಿಸಿಕೊಂಡರು.

11:36 PM (IST) Nov 10
ದೆಹಲಿ ಸ್ಫೋಟಕ್ಕೂ ಪುಲ್ವಾಮಾ ಲಿಂಕ್, ಕಾರು ಮಾಲೀಕ ಸಲ್ಮಾನ್ ವಶಕ್ಕೆ, ನದೀಮ್‌ಗೆ ಹುಡುಕಾಟ , ದೆಹಲಿ ಸ್ಫೋಟಕ್ಕೂ ಫರೀದಾಬಾದ್ ಸ್ಫೋಟಕ ಪತ್ತೆಗೂ ಲಿಂಕ್ ಇದೆ ಅನ್ನೋ ಅನುಮಾನ ಹೆಚ್ಚಾಗುತ್ತಿದೆ.
10:53 PM (IST) Nov 10
ದೆಹಲಿ ಸ್ಫೋಟದ ಬಳಿಕ ಪ್ರಧಾನಿ ಮೋದಿ ಮೊದಲ ಪ್ರತಿಕ್ರಿಯೆ, ಉನ್ನತ ಮಟ್ಟದ ಸಭೆ, ಘಟನೆಯಲ್ಲಿ ಸಾವು ನೋವಿನ ಸಂಖ್ಯೆ ಹೆಚ್ಚಾಗಿದೆ. ಭಯೋತ್ಪಾದಕ ಕೃತ್ಯದ ಶಂಕೆ ಹೆಚ್ಚಾಗುತ್ತಿದ್ದು, ಇದರ ಬೆನ್ನಲ್ಲೇ ಮೋದಿ ಪ್ರತಿಕ್ರಿಯಿಸಿದ್ದಾರೆ.
09:51 PM (IST) Nov 10
ದೆಹಲಿ ಸ್ಫೋಟ ಸಂಬಂಧ ಓರ್ವ ಶಂಕಿತ ಪೊಲೀಸ್ ವಶಕ್ಕೆ, ಎನ್ಐಎ ತನಿಖೆಗೆ ಆದೇಶಿಸಿದ ಅಮಿತ್ ಶಾ , ಐ20 ಕಾರಿನಲ್ಲಿ ಸ್ಫೋಟ ಸಂಭವಿಸಿದೆ. ಎನ್ಐಎ ಜೊತೆ ಎನ್‌ಎಸ್‌ಜಿ ಕೂಡ ತನಿಖೆ ನಡೆಸಲಿದೆ. ಸ್ಥಳಕ್ಕೆ ಅಮಿತ್ ಶಾ ಭೇಟಿ ನೀಡುತ್ತಿದ್ದಾರೆ.
09:07 PM (IST) Nov 10
ದೆಹಲಿ ಸ್ಫೋಟಕ್ಕೆ 10 ಸಾವು ಹಲವರಿಗೆ ಗಾಯ, ಬ್ಲಾಸ್ಟ್ ತೀವ್ರತೆ ಸಾರಿ ಹೇಳುತ್ತಿದೆ ಫೋಟೋಸ್, ಭೀಕರ ಸ್ಫೋಟ ಸಂಭವಿಸಿದೆ. ಕೆಂಪು ಕೋಟೆ ಬಳಿ ಪಾರ್ಕ್ ಮಾಡಿದ್ದ ಎರಡು ಕಾರು ಸ್ಫೋಟಗೊಂಡಿದೆ. ಘಟನೆಯ ತೀವ್ರತೆಯನ್ನು ಫೋಟೋಗಳು ಹೇಳುತ್ತಿದೆ.
08:11 PM (IST) Nov 10
ದೆಹಲಿ ಕೆಂಪು ಕೋಟೆ ಬಳಿ ಕಾರು ಬ್ಲಾಸ್ಟ್, ರಾಜಧಾನಿ, ಮುಂಬೈ ಸೇರಿ ಹಲವು ನಗರದಲ್ಲಿ ಹೈ ಅಲರ್ಟ್, ಕಾರು ಸ್ಫೋಟದಲ್ಲಿ ಸಾವಿನ ಸಂಖ್ಯೆ ಏರಿಕೆಯಾಗುತ್ತಿದೆ. ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಭಯೋತ್ಪಾದಕ ಕೃತ್ಯ ಎಂದು ಶಂಕಿಸಲಾಗಿದೆ.
07:31 PM (IST) Nov 10
Breaking ದೆಹಲಿ ಕೆಂಪು ಕೋಟೆ ಬಳಿ ಕಾರು ಸ್ಫೋಟ, ಭಯೋತ್ಪಾದಕ ಕೃತ್ಯದ ಶಂಕೆ, ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದಾರೆ. ಅಗ್ನಿಶಾಮಕ ದಳ ಸ್ಥಳಕ್ಕೆ ದೌಡಾಯಿಸಿದೆ. ಘಟನೆಯಲ್ಲಿ ಓರ್ವ ಮೃತಪಟ್ಟಿರುವ ಶಂಕೆಯಿದೆ.
07:07 PM (IST) Nov 10
ಡಿಜಿಟಲ್ ಗೋಲ್ಡ್, ಇ ಚಿನ್ನದ ಮೇಲೆ ಹೂಡಿಕೆ ಅಪಾಯ, ಹಗರಣ ಕುರಿತು ಸೆಬಿ ಎಚ್ಚರಿಕೆ, ಹೂಡಿಕೆದಾರರು ಅತೀವ ಎಚ್ಚರಿಕೆ ವಹಿಸಬೇಕು, ಇದು ಅತೀ ದೊಡ್ಡ ಹಗರಣ ಎಂದು ಸೆಬಿ ಹೇಳಿದೆ. ಡಿಜಿಟಲ್ ಗೋಲ್ಡ್ ಸೆಬಿ ನಿಯಂತ್ರಣದಲ್ಲಿಲ್ಲ.
07:04 PM (IST) Nov 10
2008ರಲ್ಲಿ ಧೋನಿ ಮತ್ತು ಜಡೇಜಾ ಒಟ್ಟಿಗೆ ಐಪಿಎಲ್ ಪಯಣ ಆರಂಭಿಸಿದ್ದರು. ಮೊದಲ ಸೀಸನ್‌ನಲ್ಲಿ ಚೆನ್ನೈಗೆ ಬಂದ ನಂತರ ಧೋನಿ ಬೇರೆಲ್ಲೂ ಹೋಗಿಲ್ಲ. ಇದೀಗ ಸಂಜು ಸ್ಯಾಮ್ಸನ್ ಚೆನ್ನೈ ತಂಡಕ್ಕೆ ಬಂದ್ರೆ ಧೋನಿ ಐಪಿಎಲ್‌ಗೆ ಮಧ್ಯದಲ್ಲೇ ಗುಡ್ ಬೈ ಹೇಳುವ ಸಾಧ್ಯತೆಯಿದೆ ಎಂದು ಮಾಜಿ ಕ್ರಿಕೆಟಿಗ ಬಾಂಬ್ ಸಿಡಿಸಿದ್ದಾರೆ
04:56 PM (IST) Nov 10
04:28 PM (IST) Nov 10
eagle breaks train windshield: ವೇಗವಾಗಿ ಚಲಿಸುತ್ತಿದ್ದ ಬಾರಾಮುಲ್ಲಾ-ಬನಿಹಾಲ್ ರೈಲಿಗೆ ಹದ್ದೊಂದು ಡಿಕ್ಕಿ ಹೊಡೆದಿದೆ. ಈ ಘಟನೆಯಲ್ಲಿ ರೈಲಿನ ಮುಂಭಾಗದ ಗಾಜು ಒಡೆದು, ಲೋಕೋ ಪೈಲಟ್‌ಗೆ ಗಾಯಗಳಾಗಿವೆ. ಡಿಕ್ಕಿಯ ರಭಸಕ್ಕೆ ಹದ್ದಿಗೂ ಗಾಯಗಳಾಗಿದೆ.
04:19 PM (IST) Nov 10
ಚಿನ್ನ ಖರೀದಿಸುವ ಪ್ಲಾನ್ ಇದೆಯಾ? ಪಾನ್-ಆಧಾರ್ ಕಡ್ಡಾಯ; ಏನಿದು ನಿಯಮ? 2026ರಿಂದ ಹೊಸ ನಿಯಮಗಳು ಜಾರಿಯಾಗುತ್ತಿದೆ. ಕೈಯಲ್ಲಿ ನಗದು ಹಣವಿದೆ, ಅಕೌಂಟ್‌ನಲ್ಲಿ ದುಡ್ಡಿದೆ ಎಂದು ಕೈಬೀಸಿ ಚಿನ್ನ ಖರೀದಿಸಲು ಹೋದರೆ ಸಾಧ್ಯವಿಲ್ಲ.
04:09 PM (IST) Nov 10
ರಾಜಸ್ಥಾನ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್‌ಗಾಗಿ ಚೆನ್ನೈ ಸೂಪರ್ ಕಿಂಗ್ಸ್ ರವೀಂದ್ರ ಜಡೇಜಾರನ್ನು ಬಿಟ್ಟುಕೊಡುವ ಸಾಧ್ಯತೆಯ ಬಗ್ಗೆ ವರದಿಗಳಿದ್ದು, ಇದು CSK ಮಾಡುವ ದೊಡ್ಡ ತಪ್ಪಾಗಲಿದೆ ಎಂದು ಮಾಜಿ ಕ್ರಿಕೆಟಿಗ ಪ್ರಿಯಾಂಕ್ ಪಾಂಚಾಲ್ ಎಚ್ಚರಿಸಿದ್ದಾರೆ.
02:34 PM (IST) Nov 10
Doctor arrested for terrorism: ಜಮ್ಮು ಕಾಶ್ಮೀರದ ಪೊಲೀಸರು ಹರ್ಯಾಣದ ಫರಿದಾಬಾದ್‌ನಲ್ಲಿ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಭಾರಿ ಪ್ರಮಾಣದ ಸ್ಫೋಟಕವನ್ನು ವಶಕ್ಕೆ ಪಡೆಯಲಾಗಿದ್ದು, ಮತ್ತೊಬ್ಬ ವೈದ್ಯನನ್ನು ಬಂಧಿಸಲಾಗಿದೆ.
01:43 PM (IST) Nov 10
ಬೆಂಗಳೂರು: 19ನೇ ಆವೃತ್ತಿಯ ಐಪಿಎಲ್ ಮಿನಿ ಹರಾಜಿಗೂ ಮುನ್ನ ಎಲ್ಲಾ 10 ಫ್ರಾಂಚೈಸಿಗಳು ತನ್ನ ರೀಟೈನ್ಷನ್ ಮಾಹಿತಿಯನ್ನು ಫೈನಲ್ ಮಾಡಬೇಕಿದೆ. ಆದರೆ ಸಿಎಸ್‌ಕೆ ತಂಡದ ಸ್ಟಾರ್ ಆಟಗಾರ ರವೀಂದ್ರ ಜಡೇಜಾ ಟ್ರೇಡಿಂಗ್ ವಿಚಾರ ಸದ್ದು ಮಾಡುತ್ತಿರುವ ಬೆನ್ನಲ್ಲೇ ಅವರ ಇನ್‌ಸ್ಟಾಗ್ರಾಂ ಅಕೌಂಟ್ ನಾಪತ್ತೆಯಾಗಿದೆ.
12:41 PM (IST) Nov 10
ಮೇಘಾಲಯದ ಕ್ರಿಕೆಟಿಗ ಆಕಾಶ್ ಕುಮಾರ್ ಚೌಧರಿ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಸತತ ಎಂಟು ಸಿಕ್ಸರ್‌ಗಳನ್ನು ಬಾರಿಸಿ ವಿಶ್ವದಾಖಲೆ ನಿರ್ಮಿಸಿದ್ದಾರೆ. ಅರುಣಾಚಲ ಪ್ರದೇಶ ವಿರುದ್ಧದ ಪಂದ್ಯದಲ್ಲಿ, ಅವರು ಕೇವಲ 11 ಎಸೆತಗಳಲ್ಲಿ ಅತಿ ವೇಗದ ಅರ್ಧಶತಕವನ್ನೂ ಗಳಿಸಿದರು. ಅಷ್ಟಕ್ಕೂ ಯಾರು ಈ ಆಕಾಶ್ ಕುಮಾರ್ ಚೌಧರಿ?
12:28 PM (IST) Nov 10
Divorce settlement amount: ಕೌಟುಂಬಿಕ ಕಲಹದ ವಿಚ್ಛೇದನ ಪ್ರಕರಣವೊಂದರಲ್ಲಿ ಪತ್ನಿಯೊಬ್ಬರ ಮಾಸಿಕ 6 ಲಕ್ಷ ರೂಪಾಯಿಗಳ ಪರಿಹಾರದ ಬೇಡಿಕೆಯನ್ನು ನ್ಯಾಯಾಧೀಶರು ತಿರಸ್ಕರಿಸಿದ್ದಾರೆ. ಆ ವಿಚಾರಣೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
11:02 AM (IST) Nov 10
ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ ರಾಯಲ್ಸ್ ನಡುವೆ ಸಂಜು ಸ್ಯಾಮ್ಸನ್ ಅವರ ಟ್ರೇಡ್ ಒಪ್ಪಂದದ ವದಂತಿಗಳು ಹಬ್ಬಿವೆ. ಸಂಜುಗೆ ಬದಲಾಗಿ ರವೀಂದ್ರ ಜಡೇಜಾ ಮತ್ತು ಸ್ಯಾಮ್ ಕರ್ರನ್‌ರನ್ನು ಬಿಟ್ಟುಕೊಡಲು ಸಿಎಸ್‌ಕೆ ಸಿದ್ಧವಿದೆ ಎಂದು ವರದಿಯಾಗಿದೆ.
11:00 AM (IST) Nov 10
Indian student dies in USA: ಅಮೆರಿಕಾದಲ್ಲಿ ಉನ್ನತ ವ್ಯಾಸಂಗಕ್ಕೆ ತೆರಳಿದ್ದ ಆಂಧ್ರಪ್ರದೇಶ ಮೂಲದ ವಿದ್ಯಾರ್ಥಿನಿಯೊಬ್ಬರು ಹಠಾತ್ ಸಾವನ್ನಪ್ಪಿದ್ದು, ಬಡಕುಟುಂಬದಿಂದ ಬಂದ ವಿದ್ಯಾರ್ಥಿನಿ ಕುಟುಂಬಕ್ಕೆ ನೆರವಾಗಲು ಸ್ನೇಹಿತರು ಗೋಫಂಡ್ ಅಭಿಯಾನ ನಡೆಸಿದ್ದಾರೆ.
10:31 AM (IST) Nov 10
7 years in prison for polygamy in Assam ಅಸ್ಸಾಂ ಸರ್ಕಾರವು ಬಹುಪತ್ನಿತ್ವವನ್ನು ನಿಷೇಧಿಸುವ ಹೊಸ ಕಾನೂನನ್ನು ಜಾರಿಗೆ ತರಲು ನಿರ್ಧರಿಸಿದೆ. ಈ ಕಾಯ್ದೆ ಮೊದಲ ಪತ್ನಿಗೆ ವಿಚ್ಛೇದನ ನೀಡದೆ ಎರಡನೇ ವಿವಾಹವಾದರೆ, ಧರ್ಮ ಲೆಕ್ಕಿಸದೆ, ಆರೋಪಿಗೆ ಗರಿಷ್ಠ 7 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗುತ್ತದೆ.
09:43 AM (IST) Nov 10
Bihar elections 2025 live updates: ಬಿಹಾರ ವಿಧಾನಸಭಾ ಚುನಾವಣೆಯ ಅಬ್ಬರದ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದ್ದು, ನ. 11 ರಂದು ಎರಡನೇ ಹಂತದ ಮತದಾನ ನಡೆಯಲಿದೆ ಮತ್ತು ನವೆಂಬರ್ 14 ರಂದು ಫಲಿತಾಂಶ ಪ್ರಕಟವಾಗಲಿದೆ. ಪ್ರಧಾನಿ ಮೋದಿ, ರಾಹುಲ್ ಗಾಂಧಿ ಸೇರಿದಂತೆ ಘಟಾನುಘಟಿ ನಾಯಕರು ಪ್ರಚಾರ ನಡೆಸಿದರೆ,
09:05 AM (IST) Nov 10
Denmark social media ban for kids: ಸ್ಮಾರ್ಟ್‌ಫೋನ್ ಮತ್ತು ಸೋಶಿಯಲ್ ಮೀಡಿಯಾದಿಂದ ಯುವ ಸಮುದಾಯದ ಮೇಲೆ ಆಗುತ್ತಿರುವ ದುಷ್ಪರಿಣಾಮಗಳನ್ನು ತಡೆಯಲು, ಡೆನ್ಮಾರ್ಕ್ ಸರ್ಕಾರ 15 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಮಾಧ್ಯಮವನ್ನು ನಿಷೇಧಿಸಲು ನಿರ್ಧರಿಸಿದೆ.