National War Memorial : ಸುಮ್ಮನೆ ಆಗಿದ್ದಲ್ಲ ರಾಷ್ಟ್ರೀಯ ಯುದ್ಧ ಸ್ಮಾರಕ, ಇದಕ್ಕಾಗಿಯೇ ನಡೆದಿತ್ತು ಹೋರಾಟ!

By Suvarna NewsFirst Published Jan 21, 2022, 5:52 PM IST
Highlights

ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಅಮರ್ ಜವಾನ್ ಜ್ಯೋತಿ ಲೀನ
ದಶಕಗಳ ಕಾಲ ನಡೆಸಿದ ಹೋರಾಟಕ್ಕೆ ಸಿಕ್ಕ ಫಲ ಯುದ್ಧ ಸ್ಮಾರಕ
ರಾಷ್ಟ್ರೀಯ ಯುದ್ಧ ಸ್ಮಾರಕ ದೇಶದ ಇತಿಹಾಸ ಹಾಗೂ ನಮ್ಮ ಹೆಮ್ಮೆಯ ಸೈನಿಕರ ಪ್ರತೀಕ

ನವದೆಹಲಿ (ಜ. 21): ರಾಜಪಥದಲ್ಲಿದ್ದ(Rajpath) ಅಮರ್ ಜವಾನ್ ಜ್ಯೋತಿಯನ್ನು(Amar Jawan Jyoti )  ಕೇಂದ್ರ ಸರ್ಕಾರ ಶುಕ್ರವಾರ ಅಧಿಕೃತವಾಗಿ ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿರುವ (National War Memorial) ಜ್ಯೋತಿಯೊಂದಿಗೆ ಲೀನ ಮಾಡಿದೆ. ಆದರೆ, ಕೇಂದ್ರ ಸರ್ಕಾರದ ಈ ಕ್ರಮಕ್ಕೆ ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ವಿರೋಧ ವ್ಯಕ್ತಪಡಿಸಿದೆ. ಅಧಿಕಾರದಲ್ಲಿದ್ದ ಏಳು ದಶಕಗಳ ವೇಳೆ ದೇಶಕ್ಕೆ ಒಂದು ರಾಷ್ಟ್ರೀಯ ಯುದ್ಧ ಸ್ಮಾರಕ ಬೇಕು ಎಂದು ಅದರಲ್ಲಿ ಕಾರ್ಯೋನ್ಮುಖವಾಗದ ಪಕ್ಷದಿಂದ ಈ ವಿಚಾರದಲ್ಲಿ ಕಲಿಯುವಂಥದ್ದಿಲ್ಲ ಎಂದು ಕಾಂಗ್ರೆಸ್ ಪಕ್ಷಕ್ಕೆ ನೇರವಾಗಿ ಚಾಟಿ ಬೀಸಿದೆ. ನರೇಂದ್ರ ಮೋದಿ (PM Narendra Modi) ಸರ್ಕಾರ ಅಧಿಕಾರಕ್ಕೆ ಏರಿದ ಬಳಿಕ ಮಾಡಿದ ಪ್ರಮುಖ ಸಾಧನೆಗಳಲ್ಲಿ ಒಂದು ರಾಷ್ಟ್ರೀಯ ಯುದ್ಧ ಸ್ಮಾರಕದ ನಿರ್ಮಾಣ. 2019ರ ಫೆಬ್ರವರಿಯಲ್ಲಿ ದೇಶದ ಜನತೆಗೆ ಅರ್ಪಿತವಾಗಿರುವ ಈ ಯುದ್ಧ ಸ್ಮಾರಕದ ನಿರ್ಮಾಣ ಸುಮ್ಮನೆ ಆಗಿದ್ದಲ್ಲ, ಇದಕ್ಕೆ ದಶಕಗಳ ಕಾಲ ಮಾಜಿ ಸೈನಿಕರು, ಯುದ್ಧ ಸ್ಮಾರಕದ ಪರವಾಗಿದ್ದ ಕೆಲ ರಾಜಕಾರಣಿಗಳ ಅವಿರತ ಹೋರಾಟದ ಶ್ರಮ.

2009 ರಲ್ಲಿ, ಹಿರಿಯ ಕಾಂಗ್ರೆಸ್ ನಾಯಕ ಎಕೆ ಆಂಟನಿ (AK Antony) ಅವರು ರಕ್ಷಣಾ ಸಚಿವಾಲಯದ ನೇತೃತ್ವ ವಹಿಸಿಕೊಂಡಿದ್ದಾಗ, ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ (Rajya Sabha MP Rajeev Chandrasekhar) ಅವರು ವಿಶ್ವದ ಬಹುತೇಕ ದೇಶಗಳು ಅವರದೇ ಆದ ಯುದ್ಧ ಸ್ಮಾರಕಗಳನ್ನು ಹೊಂದಿವೆ. ಭಾರತಕ್ಕೂ ತನ್ನದೇ ಆದ ಯುದ್ಧ ಸ್ಮಾರಕ ನಿರ್ಮಾಣವಾಗಬೇಕು ಎಂದು ಆಗ್ರಹಿಸಿ ರಕ್ಷಣಾ ಇಲಾಖೆ (ರಾಜ್ಯ) ಸಚಿವ ಎಂ.ಎಂ. ಪಲ್ಲಂ ರಾಜು (Pallam Raju) ಅವರಿಗೆ ಪತ್ರ ಬರೆದಿದ್ದರು. ಇತಿಹಾಸದಲ್ಲಿ ಹಲವಾರು ಯುದ್ಧಗಳಲ್ಲಿ ಭಾಗಿಯಾಗಿರುವ ನಮ್ಮ ದೇಶದ ಸೈನಿಕರ ನೆನಪಿಗಾಗಿ ಕನಿಷ್ಠ ಯುದ್ಧ ಸ್ಮಾರಕವೊಂದನ್ನು ಅಂತಿಮ ಮಾಡುವಲ್ಲಿ ನಿರಂತರವಾದ ಪ್ರಗತಿಯ ಕೊರತೆ ಇಡೀ ದೇಶದ ಮುಜುಗರಕ್ಕೆ ಕಾರಣವಾಗಿದೆ ಎಂದು ರಾಜೀವ್ ಚಂದ್ರಶೇಖರ್ ಬರೆದಿದ್ದರು.

2009 ರ ಆಗಸ್ಟ್ 4 ರಂದು ರಾಜ್ಯಸಭಾ ಸಂಸದ ಮತ್ತು ಬಿಜೆಪಿಯ ಹಿರಿಯ ನಾಯಕ ಬರೆದಿದದ ಪತ್ರದಲ್ಲಿ, "ಭಾರತೀಯ ಉಪಖಂಡದಲ್ಲಿ ಸಂಘರ್ಷಗಳಿಗೆ ಕೊನೆಯೇ ಇರುವುದಿಲ್ಲ. ನಾಗರಿಕರು ಹಾಗೂ ಮಿಲಿಟರಿ ಸಿಬ್ಬಂದಿಗಳ  ಸಾವುಗಳು ಸಂಭವಿಸುತ್ತಲೇ ಇರುತ್ತದೆ. ಸೇನಾ ಸಿಬ್ಬಂದಿಗಳ ಶೌರ್ಯ ಹಾಗೂ ತ್ಯಾಗಗಳು ದೇಶದಲ್ಲಿ ಗುರುತಿಸಲ್ಪಟ್ಟಿಲ್ಲ ಹಾಗೂ ಮೆಚ್ಚುಗೆಯನ್ನೂ ಪಡೆದಿಲ್ಲ' ಎಂದು ಬರೆದಿದ್ದರು. ಅಮೆರಿಕ ಸೇರಿದಂತೆ ಇತರ ದೇಶಗಳಲ್ಲಿನ ಸರ್ಕಾರಗಳು ಮತ್ತು ನಾಗರಿಕ ಸಮಾಜಗಳು ತಮ್ಮ ಸಶಸ್ತ್ರ ಪಡೆಗಳಿಗೆ ಹಣಕಾಸಿನ ಬೆಂಬಲ, ವೃತ್ತಿ ಸಲಹೆ, ವಸತಿ ನೆರವು, ಮನರಂಜನಾ ಚಿಕಿತ್ಸಾ ಕಾರ್ಯಕ್ರಮಗಳು ಮತ್ತು ಸಂಪೂರ್ಣ ಮತ್ತು ಸಂಪೂರ್ಣ ಸಮುದಾಯ ಬೆಂಬಲದ ಮೂಲಕ ಗುರುತಿಸಲು ಹಲವಾರು ಉಪಕ್ರಮಗಳನ್ನು ಕೈಗೊಂಡಿವೆ ಎಂದು ಹೇಳಿದ್ದಾರೆ.

Amar Jawan Jyoti : ತಪ್ಪು ಗ್ರಹಿಕೆ ಬೇಡ, ಅಮರ್ ಜವಾನ್ ಜ್ಯೋತಿ ಆರಿಸುತ್ತಿಲ್ಲ ಎಂದ ಕೇಂದ್ರ ಸರ್ಕಾರ
ಅಂದು ಅಧಿಕಾರದಲ್ಲಿದ್ದ ಯುಪಿಎ ಸರ್ಕಾರ, ರಾಷ್ಟ್ರೀಯ ಯುದ್ಧ ಸ್ಮಾರಕ ನಿರ್ಮಾಣಕ್ಕಾಗಿ ಸೂಕ್ತ ಸ್ಥಳದ ಹುಡುಕಾಟದಲ್ಲಿದ್ದ ವೇಳೆ ಪ್ರಸ್ತುತ ಕೇಂದ್ರ ಸಚಿವರಾಗಿರುವ ರಾಜೀವ್ ಚಂದ್ರಶೇಖರ್ ಯಮುನಾ ನದಿಯ ತೀರದಲ್ಲಿ ಯುದ್ಧ ಸ್ಮಾರಕವನ್ನು ನಿಮಾರ್ಣ ಮಾಡಬಹುದು ಎಂದು ಸಲಹೆ ನೀಡಿದ್ದರು. "ರಾಷ್ಟ್ರೀಯ ಯುದ್ಧ ಸ್ಮಾರಕವನ್ನು ದೆಹಲಿಯ ಒಳಗೆ ನಿರ್ಮಿಸಲು ಸ್ಥಳ ಕೊರತೆ ಇದೆ ಎಂದು ನನಗೆ ಅರ್ಥವಾಗುತ್ತದೆ ಹಾಗೂ ಇದೇ ಕಾರಣಕ್ಕಾಗಿ ಯುದ್ಧ ಸ್ಮಾರಕ ನಿರ್ಮಾಣ ಕಾಮಗಾರಿ ಇನ್ನೂ ಆರಂಭವಾಗಿಲ್ಲ ಎನ್ನುವುದೂ ತಿಳಿದಿದೆ' ಎಂದು ಚಂದ್ರಶೇಖರ್ ಬರೆದಿದ್ದಾರೆ.  ಈ ಕಾರಣದಿಂದ ಸರ್ಕಾರವು ಯಮುನಾ ನದಿಯ ತೀರದಲ್ಲಿ 50 ಅಥವಾ 60 ಎಕರೆ ಪ್ರದೇಶದಲ್ಲಿ ಆರ್ಲಿಂಗ್ಟನ್ ವಾರ್ ಮೆಮೋರಿಯಲ್ ಮಾದರಿಯ ರಾಷ್ಟ್ರೀಯ ಮಿಲಿಟರಿ ಸ್ಮಾರಕ ಉದ್ಯಾನವನವನ್ನು ನಿರ್ಮಿಸಬಹುದು ಎಂದು ಸಲಹೆ ನೀಡಿದ್ದರು. ಇದು ರಾಜ್‌ಘಾಟ್ ಮತ್ತು ಶಾಂತಿವನ ಸಂಕೀರ್ಣಗಳಂತೆಯೇ ಇರುತ್ತದೆ ಎಂದು ಅವರು ಬರೆದಿದ್ದರು.

ದೇಶದ ಯುದ್ಧ ಸ್ಮಾರಕ ಲೋಕಾರ್ಪಣೆ: ಏನಿದರ ವಿಶೇಷತೆ?
ವಿನ್ಯಾಸವನ್ನೂ ಕಳುಹಿಸಿದ್ದ ರಾಜೀವ್ ಚಂದ್ರಶೇಖರ್:
ರಾಷ್ಟ್ರೀಯ ಯುದ್ಧ ಸ್ಮಾರಕ ಹೇಗಿರಬೇಕು ಎನ್ನುವ ವಿನ್ಯಾಸ ಹಾಗೂ ಏನೆಲ್ಲಾ ಇರಬೇಕು ಎನ್ನುವ ಮಾಹಿತಿಯನ್ನು ಒಳಗೊಂಡ ಸಂಪೂರ್ಣ ಲೇ ಔಟ್ ಅನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿದ್ದ ರಾಜೀವ್ ಚಂದ್ರಶೇಖರ್, ಈ ಸ್ಮಾರಕ ರೂಪುಗೊಳ್ಳುವ ನಿಟ್ಟಿನಲ್ಲಿ ಯಾವುದೇ ರೀತಿಯ ಸಹಾಯ ಮಾಡಲು ಸಹಿತ ತಾವು ಸಿದ್ಧವಿರುವುದಾಗಿ ಹೇಳಿದ್ದರು. ಆದರೆ, ಇವೆಲ್ಲವೂ ನಡೆದು ಒಂದು ದಶಕದ ಹೋರಾಟ ಬಳಿಕ, 2019ರ ಜನವರಿಯಲ್ಲಿ ಇಂಡಿಯಾ ಗೇಟ್ ನ 40 ಎಕರೆ ಪ್ರದೇಶದಲ್ಲಿ 175 ಕೋಟಿ ವೆಚ್ಚದಲ್ಲಿ ರಾಷ್ಟ್ರೀಯ ಯುದ್ಧ ಸ್ಮಾರಕ ನಿರ್ಮಾಣ ಕಂಡಿತ್ತು.

click me!