18ನೇ ಲೋಕಸಭಾ ಸ್ಪೀಕರ್ ಆಗಿ ಎನ್‌ಡಿಎ ಅಭ್ಯರ್ಥಿ ಒಂ ಬಿರ್ಲಾ ಆಯ್ಕೆಯಾಗಿದ್ದಾರೆ. 48 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ನಡೆದ ಮತದಾನದಲ್ಲಿ ಓಂ ಬಿರ್ಲಾ ಆಯ್ಕೆಯಾಗಿದ್ದಾರೆ.
ನವದೆಹಲಿ(ಜೂ.26) ಲೋಕಸಭಾ ಇತಿಹಾಸದಲ್ಲಿ 48 ವರ್ಷಗಳ ಬಳಿಕ ನಡೆದ ಸ್ಪೀಕರ್ ಮತದಾನದಲ್ಲಿ ಎನ್‌ಡಿಎ ಅಭ್ಯರ್ಥಿ ಒಂ ಬಿರ್ಲಾ ಆಯ್ಕೆಯಾಗಿದ್ದಾರೆ. ಧ್ವನಿ ಮತದ ಮೂಲಕ ಹೊಸ ಸ್ವೀಕರ್ ಆಯ್ಕೆ ಪ್ರಕ್ರಿಯೆ ನಡೆದಿತ್ತು. ಓಮ್ ಬಿರ್ಲಾ ವಿರುದ್ಧ ಇಂಡಿಯಾ ಒಕ್ಕೂಟದ ಅಭ್ಯರ್ಥಿಯಾಗಿ ಕೆ ಸುರೇಶ್ ಸ್ಪರ್ಧಿಸಿದ್ದರು. ನೂತನ ಸ್ಪೀಕರ್ ಆಗಿ ಆಯ್ಕೆಯಾದ ಒಮ್ ಬಿರ್ಲಾಗೆ ಪ್ರಧಾನಿ ಮೋದಿ ಸೇರಿದಂತೆ ಎನ್‌ಡಿಎ ಒಕ್ಕೂಟ ನಾಯಕರು ಶುಭ ಕೋರಿದ್ದಾರೆ.
ಪ್ರಧಾನಿ ಮೋದಿ 2ನೇ ಅವಧಿಯಲ್ಲಿ ಲೋಕಸಭಾ ಸ್ಪೀಕರ್ ಆಗಿ ಕಾರ್ಯನಿರ್ವಹಿಸಿದ ಓಂ ಬಿರ್ಲಾ ಇದೀಗ ಸತತ 2ನೇ ಬಾರಿಗೆ ಲೋಕಸಭಾ ಸ್ವೀಕರ್ ಆಗಿ ಆಯ್ಕೆಯಾಗಿದ್ದಾರೆ. ಸ್ಪೀಕರ್ ಹಾಗೂ ಡೆಪ್ಯೂಟಿ ಸ್ಪೀಕರ್ ವಿಚಾರದಲ್ಲಿ ಎನ್‌ಡಿಎ ಹಾಗೂ ವಿಪಕ್ಷಗಳಲ್ಲಿ ಒಮ್ಮತ ಮೂಡದ ಕಾರಣ ಚುನಾವಣೆ ಮೊರೆ ಹೋಗಲಾಗಿತ್ತು. ಡೆಪ್ಯೂಟಿ ಸ್ಪೀಕರ್ ಹುದ್ದೆ ವಿಪಕ್ಷಗಳಿಗೆ ನೀಡಿದರೆ ಮಾತ್ರ, ಸ್ಪೀಕರ್ ಸ್ಥಾನಕ್ಕೆ ಒಂ ಬಿರ್ಲಾಗೆ ಬೆಂಬಲ ನೀಡುವುದಾಗಿ ಇಂಡಿಯಾ ಒಕ್ಕೂಟ ಹೇಳಿತ್ತು. ಡೆಪ್ಯೂಟಿ ಸ್ಪೀಕರ್ ಹುದ್ದೆ ವಿಪಕ್ಷಗಳಿಗೆ ನೀಡಲು ನಿರಾಕರಿಸಿದ ಎನ್‌ಡಿಎ, ಚುನಾವಣೆಗೆ ತಯಾರಿ ನಡೆಸಿತ್ತು. ಇದೀಗ ಒಂ ಬಿರ್ಲಾ 18ನೇ ಲೋಕಸಭೆಯ ಸ್ಪೀಕರ್ ಆಗಿ ಆಯ್ಕೆಯಾಗಿದ್ದಾರೆ.
undefined
ಒವೈಸಿಗೆ ಅನರ್ಹತೆ ಭೀತಿ, ಸಂಸತ್ತಿನಲ್ಲಿ ಜೈ ಪ್ಯಾಲೆಸ್ತೀನ್ ಘೋಷಣೆ ಕೂಗಿ ಸಂಕಷ್ಟಕ್ಕೆ ಸಿಲುಕಿದ ನಾಯಕ!
ಒಮ್ಮತದಿಂದ ಸ್ಪೀಕರ್ ಆಯ್ಕೆ ಮಾಡಲು ಆಡಳಿತ ಹಾಗೂ ಪ್ರತಿಪಕ್ಷಗಳ ಸಭೆ ನಡೆಸಿತ್ತು. ಸಂಸತ್ತಿನ ರಾಜನಾಥ ಸಿಂಗ್ ಅವರ ಕಚೇರಿಯಲ್ಲಿ ನಡೆದ ಈ ಸಭೆಯಲ್ಲಿ ಸರ್ಕಾರದ ಕಡೆಯಿಂದ ರಾಜನಾಥ, ಅಮಿತ್ ಶಾ, ಜೆ.ಪಿ. ನಡ್ಡಾ, ಪ್ರತಿಪಕ್ಷಗಳ ಪಾಳೆಯದಿಂದ ಕಾಂಗ್ರೆಸ್ಸಿನ ಕೆ.ಸಿ.ವೇಣುಗೋಪಾಲ್ ಹಾಗೂ ಡಿಎಂಕೆಯ ಟಿ.ಆರ್. ಬಾಲು ಪಾಲ್ಗೊಂಡಿದ್ದರು. ಬಿರ್ಲಾ ಅವರನ್ನು ಬೆಂಬಲಿಸಲು ಸಿದ್ಧರಿದ್ದೇವೆ. ಆದರೆ ಉಪಸ್ಪೀಕರ್ ಸ್ಥಾನವನ್ನು ನಮಗೆ ಕೊಡಬೇಕು ಎಂದು ವಿಪಕ್ಷ ನಾಯಕರು ಷರತ್ತು ವಿಧಿಸಿದರು. ಈ ಷರತ್ತಿಗೆ ಸರ್ಕಾರ ಒಪ್ಪದ ಕಾರಣ, ಎರಡೂ ಬಣಗಳು ಸ್ಪರ್ಧೆಗೆ ನಿರ್ಧರಿಸಿದವು. ಹೀಗಾಗಿ ಓಂ ಬಿರ್ಲಾ ಹಾಗೂ ಕೆ ಸುರೇಶ್ ಉಮೇದುವಾರಿಕೆ ಸಲ್ಲಿಸಿದ್ದರು.
ಲೋಕಸಭೆ ಸ್ಪೀಕರ್ ಸ್ಥಾನಕ್ಕೆ ಈವರೆಗೆ 2 ಬಾರಿ ಮಾತ್ರ ಚುನಾವಣೆಗಳು ನಡೆದಿದೆ. 1952ರಲ್ಲಿ ಜಿ.ವಿ.ಮಾವಲಂಕರ್ ಹಾಗೂ ಶಂಕರ್ ಶಾಂತಾರಾಮ್ ಅವರು ಸ್ಪರ್ಧೆ ಮಾಡಿದ್ದರಿಂದ ಚುನಾವಣೆ ಆಗಿತ್ತು. ಮಾವಲಂಕರ್ ಅವರು 394 ಮತಗಳನ್ನು ಪಡೆದು ವಿಜೇತರಾದರೆ, ಶಾಂತಾರಾಮ್ ಅವರು ಕೇವಲ 55 ಮತಗಳನ್ನು ಗಳಿಸಿದ್ದರು. ತುರ್ತು ಪರಿಸ್ಥಿತಿಯ ವೇಳೆ ಅಂದರೆ 1976ರಲ್ಲಿ ಬಲಿರಾಮ್ ಭಗತ್ ಹಾಗೂ ಜಗನ್ನಾಥ ರಾವ್ ಅವರು ಸ್ಪೀಕರ್ ಸ್ಥಾನಕ್ಕೆ ಸ್ಪರ್ಧಿಸಿದ್ದರು. ಭಗತ್ ಅವರು 344 ಮತಗಳೊಂದಿಗೆ ಆಯ್ಕೆಯಾಗಿದ್ದರೆ, ಜಗನ್ನಾಥರಾವ್ ಅವರು 58 ಮತ ಪಡೆದು ಪರಾಜಿತರಾಗಿದ್ದರು.
ಲೋಕಸಭಾ ವಿರೋಧ ಪಕ್ಷದ ನಾಯಕರಾಗಿ ರಾಹುಲ್ ಗಾಂಧಿ ಆಯ್ಕೆ