ಆಕೆಗೆ ದಿನದ 24*7, 365 ದಿನವೂ ಕೆಲಸ ಮಾಡಿ ಎಂದಿದ್ದರು: ಸಿಜೆಐ ನೆನಪು ಮಾಡಿಕೊಂಡಿದ್ದು ಯಾರನ್ನಾ?

Published : Aug 27, 2023, 04:04 PM IST
 ಆಕೆಗೆ ದಿನದ 24*7, 365 ದಿನವೂ ಕೆಲಸ ಮಾಡಿ ಎಂದಿದ್ದರು: ಸಿಜೆಐ ನೆನಪು ಮಾಡಿಕೊಂಡಿದ್ದು ಯಾರನ್ನಾ?

ಸಾರಾಂಶ

ತಮ್ಮ ಕಾಲದಲ್ಲಿ ವಕೀಲ ವೃತ್ತಿ ಹೇಗಿತ್ತು ಕೇಸ್ ಸ್ಟಡಿಗೆ ಎಷ್ಟು ಸಮಯ ಮೀಸಲಿಡಬೇಕಿತ್ತು ಎಂಬುದರ ಕುರಿತು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶ ಡಿ.ವೈ ಚಂದ್ರಚೂಡ್ (CJI DY Chandrachud) ಅವರು ಮಾತನಾಡಿದ್ದು ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ನವದೆಹಲಿ: ಕಾನೂನು ಪದವಿ ಪಡೆದು, ವಕೀಲ ವೃತ್ತಿಯ ಕನಸು ಹೊತ್ತು ಕಾನೂನು ಸಂಸ್ಥೆಗಳಲ್ಲಿ ಕೆಲಸ ಮಾಡುವುದು ಸುಲಭದ ಕೆಲಸವಲ್ಲ, ಉತ್ತಮವಾದ ಅಡ್ವೋಕೇಟ್ ಆಗಬೇಕಾದರೆ ಕುಟುಂಬ ವೈಯಕ್ತಿಕ ಜೀವನದ ಜೊತೆ ಕಳೆಯುವುದಕ್ಕಿಂತ ಹೆಚ್ಚು ಹೊತ್ತು ತಮ್ಮ ಚೇಂಬರ್‌ಗಳಲ್ಲಿ, ಕೋರ್ಟ್ ಲೈಬ್ರೆರಿಗಳಲ್ಲಿ ಅಧ್ಯಯನದಲ್ಲೇ ಕಳೆಯಬೇಕಾಗುತ್ತದೆ. ತಮ್ಮ ಕಾಲದಲ್ಲಿ ವಕೀಲ ವೃತ್ತಿ ಹೇಗಿತ್ತು ಕೇಸ್ ಸ್ಟಡಿಗೆ ಎಷ್ಟು ಸಮಯ ಮೀಸಲಿಡಬೇಕಿತ್ತು ಎಂಬುದರ ಕುರಿತು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶ ಡಿ.ವೈ ಚಂದ್ರಚೂಡ್ (CJI DY Chandrachud) ಅವರು ಮಾತನಾಡಿದ್ದು, ಇದೇ ವೇಳೆ ಅವರು ತಮ್ಮ ಅಗಲಿದ ಮಡದಿ ಹೊಂದಿದ್ದ ವೃತ್ತಿ ಬದುಕಿನ ಒಳನೋಟಗಳನ್ನು ನೆನಪು ಮಾಡಿಕೊಂಡರು. 

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ವಿಶ್ವವಿದ್ಯಾನಿಲಯದ (National Law School of India University) 31 ನೇ ವಾರ್ಷಿಕ ಘಟಿಕೋತ್ಸವದ  ವೇಳೆ ಮಾತನಾಡಿದ ಸಿಜೆಐ ಡಿ.ವೈ. ಚಂದ್ರಚೂಡ್ ಅವರು ತಮ್ಮ ವೃತ್ತಿ ಜೀವನದ ಹಲವು ವಿಚಾರಗಳನ್ನು ಕಾನೂನು ವಿದ್ಯಾರ್ಥಿಗಳ ಜೊತೆ ಹಂಚಿಕೊಂಡರು. ವಕೀಲೆಯಾಗಿದ್ದ ನನ್ನ ಪತ್ನಿ  ಕಾನೂನು ವೃತ್ತಿ ಮಾಡುವುದಕ್ಕಾಗಿ ಕಾನೂನು ಸಂಸ್ಥೆಯೊಂದನ್ನು ಸಂಪರ್ಕಿಸಿದಾಗ ಆಕೆಗೆ ವರ್ಷದ 365 ದಿನ ದಿನದ 24 ಗಂಟೆಯೂ ಕೆಲಸ ಮಾಡಬೇಕು ಎಂದು ಹೇಳಿದ್ದರು. ಕಾನೂನು ವೃತ್ತಿಯಲ್ಲಿ ಮುಂದುವರಿಯಲು ಸಂಸ್ಥೆಯೊಂದಕ್ಕೆ ಕೆಲಸಕ್ಕೆ ಹೋದ ಆಕೆ ಕೆಲಸದ ಸಮಯವೆಷ್ಟು ಎಂದು ಕೇಳಿದಾಗ ಆಕೆಗೆ ದಿನದ 24ಗಂಟೆ ವರ್ಷದ 365 ದಿನವೂ ಎಂದು ಹೇಳಿದ್ದರು ಎಂಬುದನ್ನು ಸಿಜೆಐ ನೆನಪು ಮಾಡಿಕೊಂಡರು. 

ಪ್ರಾಸ್ಟಿಟ್ಯೂಟ್‌, ಅಫೇರ್, ಹೌಸ್‌ ವೈಫ್‌... ಕೋರ್ಟ್‌ನಲ್ಲಿ ಇನ್ಮುಂದೆ ಈ ಪದಗಳು ಬ್ಯಾನ್‌!

ಅದರ ಜೊತೆಗೆ ನಿಮಗೆ ನಿಮ್ಮ ಕುಟುಂಬದ ಜೊತೆ ಕಳೆಯಲು ಯಾವುದೇ ಸಮಯವಿರುವುದಿಲ್ಲ ಎಂದು ಆಕೆಗೆ ಹೇಳಿದರು. ಹಾಗಾದರೆ ಕುಟುಂಬದ ಕತೆ ಏನು ಎಂದು ಕೇಳಿದಾಗ, ಮನೆ ಕೆಲಸವನ್ನು ಮಾಡುವ ಗಂಡನನ್ನು ಹುಡುಕಿ ಎಂದು ಆಕೆಗೆ ಹೇಳಿದ್ದರು ಎಂಬುದನ್ನು ಸಿಜೆಐ ನೆನಪು ಮಾಡಿಕೊಂಡರು.  ಸುಧಾರಿತ ಕೆಲಸದ ಸಮಯ ಮತ್ತು ಕಾನೂನು ಕಚೇರಿಗಳಲ್ಲಿ, ವಕೀಲರ ಕೊಠಡಿಗಳಲ್ಲಿ ಆರೋಗ್ಯಕರ ವೃತ್ತಿ ಹಾಗೂ ಜೀವನದ ನಡುವೆ ಸಮತೋಲನವಿರಬೇಕು ಎಂಬುದನ್ನು ಸಿಜೆಐ ಒತ್ತಿ ಹೇಳಿದರು. 

ಆದರೆ ನ್ಯಾಯಾಂಗ ವ್ಯವಸ್ಥೆಯಲ್ಲಿ ಈಗ ಮೊದಲಿನ ಸ್ಥಿತಿ ಇಲ್ಲ ಎಂಬುದನ್ನು ಗಮನಿಸಿದ ಅವರು ಪಿರೇಡ್ಸ್‌ನಲ್ಲಿರುವ ಮಹಿಳಾ ಸಿಬ್ಬಂದಿಗೆ ಮನೆಯಿಂದಲೇ ಕೆಲಸ ಮಾಡಲು ಅವಕಾಶವಿದೆ. ಮುಟ್ಟಿಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿದ್ದ ಮಹಿಳೆ ಗುಮಾಸ್ತರಿಗೆ ದೂರದಿಂದ ಅಥವಾ ಮನೆಯಿಂದಲೇ ಕೆಲಸ ಮಾಡಲು ಅನುಮತಿ ನೀಡಿರುವುದಾಗಿಯೂ ಹೇಳಿದರು. 

ಕಳೆದ ವರ್ಷ ಐವರಲ್ಲಿ ನಾಲ್ವರು ಮಹಿಳಾ ಗುಮಾಸ್ತರಾಗಿದ್ದು,  ಅವರು ನನ್ನಲ್ಲಿ ಸರ್ ನನಗೆ ಮುಟ್ಟಿನ ಸಮಸ್ಯೆ (menstruation) ಇದೆ ಎಂದು ಹೇಳುತ್ತಿದ್ದರು. ನಾನು ಅವರಿಗೆ ಮನೆಯಿಂದಲೇ ಕೆಲಸ ಮಾಡಿ  ನಿಮ್ಮ ಆರೋಗ್ಯವನ್ನು ನೋಡಿಕೊಳ್ಳಿ ಎಂದು ಹೇಳುತ್ತೇನೆ. ಇದರ ಜೊತೆಗೆ ಭಾರತದ ಸುಪ್ರೀಂಕೋರ್ಟ್ ಮಹಿಳಾ ವಾಶ್‌ರೂಮ್‌ನಲ್ಲಿ ಸ್ಯಾನಿಟರಿ ಪ್ಯಾಡ್‌ಗಳ (Sanitary Pad) ವಿತರಣೆಗೂ ವ್ಯವಸ್ಥೆ ಮಾಡಲಾಗಿದೆ ಎಂದರು. 

ಸುಪ್ರೀಂ ಮುಖ್ಯ ನ್ಯಾಯಮೂರ್ತಿ ಹೆಸರಲ್ಲಿ ಹರಿದಾಡುತ್ತಿರುವ ಸೋಶಿಯಲ್ ಮೀಡಿಯಾ ಪೋಸ್ಟ್ ಫೇಕ್

ಇದೇ ವೇಳೆ ಕಾನೂನು ಪದವಿ ಮುಗಿಸಿ ಕಾನೂನು ವೃತ್ತಿಯಲ್ಲಿ ತೊಡಗುವ ಉತ್ಸಾಹದಲ್ಲಿರುವ ವಿದ್ಯಾರ್ಥಿಗಳಿಗೂ ಕೆಲ ಕಿವಿಮಾತನ್ನು ಹೇಳಿದ ಅವರು, ಒಂದು ವೇಳೆ ಒಳ್ಳೆಯ ವ್ಯಕ್ತಿ ಹಾಗೂ ಒಳ್ಳೆಯ ವಕೀಲರು ಎಂದು ಆಯ್ಕೆ ಮಾಡುವುದಾದರೆ ನಾನು ನಿಮಗೆ ಒಳ್ಳೆಯ ವ್ಯಕ್ತಿಯಾಗಿ ಎಂದು ಒತ್ತಾಯಿಸುತ್ತೇನೆ. ಯಶಸ್ವಿ ವಕೀಲರಾಗುವುದಕ್ಕೆ  ಕೆಲವೊಮ್ಮೆ ನಮ್ಮ ಆತ್ಮಸಾಕ್ಷಿಗೆ ವಿರುದ್ಧವಾಗಿ ವರ್ತಿಸಬೇಕಾಗುತ್ತದೆ ಅಥವಾ ಅನ್ಯಾಯದ ಬಗ್ಗೆ ಅಸಡ್ಡೆ ತೋರಬೇಕಾಗುತ್ತದೆ ಎಂದು ಹೇಳಿದರು. ಕೆಲಸ ಹಾಗೂ ಜೀವನದ ಎರಡನ್ನು ಬ್ಯಾಲೆನ್ಸ್ ಮಾಡುವ ಬಗ್ಗೆ ಮಾತು ಮುಂದುವರಿಸಿದ ಸಿಜೆಐ ಮಿತಿ ಮೀರಿದ ಸಮಯವನ್ನು ಬೇಡುವ ವಕೀಲ ವೃತ್ತಿಯ ಪ್ರವೃತ್ತಿ ಬಗ್ಗೆ ವಿಷಾದ ವ್ಯಕ್ತಪಡಿಸಿದರು. ಅಲ್ಲದೇ ಇದು ಮಾನಸಿಕ ಆರೋಗ್ಯ ಸಮಸ್ಯೆಗೆ ಕಾರಣವಾಗಬಹುದು ಎಂದು ಹೇಳಿದರು.  

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಅಯೋಧ್ಯೆಯ ರಾಮಲಲ್ಲಾ ಪ್ರತ್ಯಕ್ಷನಾಗಿ ಆಶೀರ್ವದಿಸಿದರೆ ಹೇಗಿರತ್ತೆ? ರೋಮಾಂಚಕಾರಿ ವಿಡಿಯೋ ವೈರಲ್​
ಮೆಹೆಂದಿಯಾಗಿತ್ತು, ಆದರೆ ಮದುವೆಯಾಗಲ್ಲ: ಕೊನೆಗೂ Palash Muchhal ಜೊತೆಗಿನ ಸಂಬಂಧಕ್ಕೆ ತೆರೆ ಎಳೆದ Smriti Mandhana