ಮದರಸಾ ಫೋಟೋ ಕ್ಲಿಕ್ಕಿಸುತ್ತಿದ್ದ ಶಿಕ್ಷಕನ ಮೇಲೆ ಮಾರಣಾಂತಿಕ ಹಲ್ಲೆ

By Mahmad Rafik  |  First Published May 19, 2024, 12:12 PM IST

ಶಿಕ್ಷಕರೊಬ್ಬರು ಮದರಸಾ ಫೋಟೋಗಳನ್ನು ಕ್ಲಿಕ್ ಮಾಡುತ್ತಿದ್ದರು. ಈ ವೇಳೆ ಶಿಕ್ಷಕನನ್ನು ಸುತ್ತುವರಿದ ಗುಂಪು ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ. ದಾಳಿ ಬಳಿಕ ಶಿಕ್ಷಕ ಹೇಳಿದ್ದೇನು? 


ಅಹಮದಾಬಾದ್: ಗುಜರಾತಿನ ಅಹಮದಾಬಾದ್ ನಗರದಲ್ಲಿ ಶಿಕ್ಷಕನ ಮೇಲೆ  ಗುಂಪೊಂದು ಹಲ್ಲೆ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ. ಶಿಕ್ಷಕರೊಬ್ಬರು ಮದರಸಾದ ಸಮೀಕ್ಷೆಗೆ ತೆರಳಿದ್ದರು. ಈ ಸಮಯದಲ್ಲಿ ಶಿಕ್ಷಕ ಮದರಸಾದ ಫೋಟೋಗಳನ್ನು ಕ್ಲಿಕ್ಕಿಸುತ್ತಿದ್ದರು. ಈ ವೇಳೆ ಸುತ್ತುವರಿದ ಗುಂಪು ಮಾರಣಾಂತಿಕವಾಗಿ ಹಲ್ಲೆ ನಡೆಸಿದೆ ಎಂದು ವರದಿಯಾಗಿದೆ. 

ಈ ಘಟನೆ ಬೆಳಕಿಗೆ ಬರುತ್ತಿದ್ದಂತೆ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಇಬ್ಬರನ್ನು ಬಂಧಿಸಿದೆ. ಇನ್ನುಳಿದವವರಿಗಾಗಿ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ. ಶೃತಿ ಹೈಯರ್ ಸೆಕೆಂಡರಿ ಶಾಲೆಯ ಪ್ರಾಂಶುಪಾಲ ಸಂದೀಪ್ ಪಟೇಲ್ ಹಲ್ಲೆಗೊಳಗಾದವರು.

Latest Videos

undefined

ಐದರಿಂದ ಏಳು ಜನರ ಗುಂಪಿನಿಂದ ಹಲ್ಲೆ ಆರೋಪ

ಸಂದೀಪ್ ಪಾಟೀಲ್ ಸರ್ಕಾರಿ ಅಧಿಕಾರಿಯಾಗಿ ನಗರದ ದರಿಯಾಪುರ ಪ್ರದೇಶದಲ್ಲಿರುವ ಮದರಸಾದ ಪರಿಶೀಲನೆಗೆ ತೆರಳಿದ್ದರು. ಪರಿಶೀಲನೆ  ವೇಳೆ ಮದರಸಾದಲ್ಲಿರುವ ವಿದ್ಯಾರ್ಥಿಗಳ ಸಂಖ್ಯೆ ಮತ್ತು ಅಲ್ಲಿಯ ಮೂಲಭೂತ ಸೌಕರ್ಯಗಳ ಬಗ್ಗೆ ವಿವರಗಳನ್ನು ಸಂಗ್ರಹಿಸಲಾಗುತ್ತಿತ್ತು. ಸಂದೀಪ್ ಪಾಟೀಲ್ ಮದರಸಾದ ಫೋಟೋ ಕ್ಲಿಕ್ ಮಾಡುತ್ತಿರುವಾಗ ಐದರಿಂದ ಏಳು ಜನರ ಗುಂಪು ಹಲ್ಲೆ ನಡೆಸಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಆರೋಪಿಗಳ ವಿರುದ್ಧ ಕಾನೂನುಬಾಹಿರ ಸಭೆ, ಗಲಭೆ, ಸ್ವಯಂಪ್ರೇರಣೆಯಿಂದ ಹಲ್ಲೆ, ದರೋಡೆ ಮತ್ತು ಜೀವ ಬೆದರಿಕೆ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸದ್ಯ ಪೊಲೀಸರು ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 

ಜಮ್ಮು ಕಾಶ್ಮೀರ: ಕಲ್ಲು ತೂರಾಟಗಾರನಾಗಿದ್ದವ ಮೋದಿ ಅಭಿಮಾನಿಯಾಗಿ ಬದಲಾದ, ಇಂದು ಗುಂಡಿಗೆ ಬಲಿಯಾದ

ಪ್ರಾಣ ಉಳಿಸಿಕೊಳ್ಳಲು ಓಡಿ ಬಂದ ಶಿಕ್ಷಕ

ಸಂದೀಪ್ ಪಾಟೀಲ್ ದರಿಯಾಪುರ ಪ್ರದೇಶದ ಮದರಸಾಕ್ಕೆ ತೆರಳಿದ್ದರು. ಇನ್ನು ಮದರಸಾದೊಳಗೆ ಸಂದೀಪ್ ಪಾಟೀಲ್ ಹೋಗಿರಲಿಲ್ಲ. ಮೊದಲು  ಫೋಟೋ ಕ್ಲಿಕ್ ಮಾಡಲು ಶುರು ಮಾಡಿದ್ದಾರೆ. ಸಂದೀಪ್ ಪಾಟೀಲ್ ಬಳಿ ಬಂದ ಐದರಿಂದ ಏಳು ಜನರ ಗುಂಪು, ಯಾರು ನೀನು? ಇಲ್ಲಿ ಏನು ಮಾಡುತ್ತಿದ್ದೀಯಾ ಎಂದು ಪ್ರಶ್ನೆ ಮಾಡಿದ್ದಾರೆ. 

ಈ ವೇಳೆ ತಾನೊಬ್ಬ ಶಾಲೆಯ ಪ್ರಾಂಶುಪಾಲರಾಗಿದ್ದು, ಸರ್ಕಾರಿ ಅಧಿಕಾರಿಯಾಗಿ ಮದರಸಾದ ಪರಿಶೀಲನೆಗೆ ಬಂದಿರೋದಾಗಿ ಸಂದೀಪ್ ಪಾಟೀಲ್ ಹೇಳಿದ್ದಾರೆ. ಸರ್ಕಾರದ  ಆದೇಶದಂತೆ ಫೋಟೋಗಳನ್ನು ತೆಗೆದಕೊಳ್ಳುತ್ತಿದ್ದೇನೆ ಎಂದು ವಿವರಿಸಿದ್ದಾರೆ. ಆದ್ರೂ ಜನರ ಗುಂಪು ಸಂದೀಪ್ ಪಾಟೀಲ್ ಮೇಲೆ ಹಲ್ಲೆ ನಡೆಸಿ, ಬಲವಂತವಾಗಿ ಮೊಬೈಲ್ ಕಿತ್ಕೊಂಡಿದ್ದಾರೆ. ಕೊನೆಗೆ  ಸಂದೀಪ್ ಪಾಟೀಲ್ ಪ್ರಾಣ ಉಳಿಸಿಕೊಳ್ಳಲು ಅಲ್ಲಿಂದ ಓಡಿ ಬಂದಿದ್ದಾರೆ ಎಂದು ಸ್ಥಳೀಯ ಪೊಲೀಸರೊಬ್ಬರು ಹೇಳಿದ್ದಾರೆ. 

ಅವನು ನನ್ನ ಗಂಡ, ಅಲ್ಲ ನನ್ನ ಪತಿ; ಇಬ್ರು ಮಹಿಳೆಯರ ಕಿತ್ತಾಟದಲ್ಲಿ ಹೈರಾಣದ ಪೊಲೀಸರು!

175 ಮದರಸಾಗಳ ಸಮೀಕ್ಷೆ

ಘಟನೆ ಸಂಬಂಧ ಇಬ್ಬರನ್ನು ಬಂಧಿಸಿದ್ದೇವೆ. ತನಿಖೆ ನಡೆಸಲಾಗುತ್ತಿದೆ  ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ. ಈ ಕುರಿತು ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಷನ್ (ಎಎಂಸಿ) ಶಿಕ್ಷಣ ಸಮಿತಿಯ ಅಧಿಕಾರಿ ಲಬ್ಧೀರ್ ದೇಸಾಯಿ ಪ್ರತಿಕ್ರಿಯೆ ನೀಡಿದ್ದಾರೆ.

ಸರ್ಕಾರದ ಆದೇಶದಂತೆ ನಗರದಲ್ಲಿರುವ ಹಲವು ಮದರಸಾಗಳ ಸಮೀಕ್ಷೆ ನಡೆಸಲಾಗುತ್ತಿದೆ. ನಾವು 175 ಮದರಸಾಗಳಲ್ಲಿ ಸಮೀಕ್ಷೆ ನಡೆಸಿದ್ದೇವೆ. ಸಮೀಕ್ಷೆಯ ಪ್ರತಿ ತಂಡವು ಇಬ್ಬರು ಸದಸ್ಯರನ್ನು ಒಳಗೊಂಡಿದೆ ಎಂದು ಲಬ್ಧೀರ್ ದೇಸಾಯಿ ಹೇಳಿದ್ದಾರೆ.

click me!