ಬಕ್ರೀದ್ ಹಬ್ಬದಂದು ಹತ್ಯೆ ತಡೆಯಲು 250 ಮೇಕೆ ಖರೀದಿಸಿದ ಜೈನ ಸಮುದಾಯ!

By Suvarna NewsFirst Published Jun 29, 2023, 9:08 PM IST
Highlights

ವಿಶ್ವದೆಲ್ಲೆಡೆ ಬಕ್ರೀದ್ ಹಬ್ಬ ಆಚರಿಸಲಾಗಿದೆ. ಬಕ್ರೀದ್ ಹಬ್ಬದ ದಿನ ಮಾಂಸಹಾರಕ್ಕೆ ವಿಶೇಷ ಸ್ಥಾನ. ಹೀಗಾಗಿ ಬಕ್ರೀದ್ ಹಬ್ಬದ ದಿನ ಮಾರಾಟಕ್ಕಿಟ್ಟಿದ್ದ ಮೇಕೆಗಳ ಪೈಕಿ 250 ಮೇಕೆಯನ್ನು ಜೈನ ಸಮುದಾಯ ಖರೀದಿಸಿದೆ. ಮೇಕೆಗಳ ಹತ್ಯೆ ತಡೆಯಲು ಈ ರೀತಿ ಮಾಡಿರುವುದಾಗಿ ಹೇಳಿದ್ದಾರೆ.
 

ಲಖನೌ(ಜೂ.29) ಬಕ್ರೀದ್ ಹಬ್ಬದ ದಿನ ಮೇಕೆ, ಕುರಿ ಸೇರಿದಂತೆ ಹಲವು ಮಾಸಾಂಹಾರ ಪ್ರಾಣಿಗಳ ಮಾರಾಟ ಬಲು ಜೋರು. ಹೀಗೆ ಮಾರುಕಟ್ಟೆಯಲ್ಲಿ ಮಾರಟಕ್ಕಿಟ್ಟಿದ್ದ 250 ಮೇಕೆಗಳನ್ನು ಜೈನ ಸಮುದಾಯದ ಖರೀದಿಸಿದೆ. ಬಕ್ರೀದ್ ಹಬ್ಬದ ದಿನ ಮೇಕೆಗಳ ಹತ್ಯೆ ತಡೆಯಲು ಈ ರೀತಿ ಮಾಡಿರುವುದಾಗಿ ಜೈನ ಸಮುದಾಯ ಹೇಳಿದ್ದಾರೆ. ಉತ್ತರ ಪ್ರದೇಶ ಭಾಘಪಟ್‌ನಲ್ಲಿ ಈ ಘಟನೆ ನಡೆದಿದೆ. 

ಉತ್ತರ ಪ್ರದೇಶಧ ಬಾಘಪಾಟ್ ಪ್ರದೇಶ ಜೈನರ ಪವಿತ್ರ ಕ್ಷೇತ್ರವಾಗಿದೆ. ಇಲ್ಲಿ ಹಲವು ಬಸದಿಗಳು, ಜೈನ ಮುನಿಗಳ ತಪಸ್ವಿ ಸ್ಥಳಗಳು ಇವೆ. ಸ್ವಾತಂತ್ರ್ಯ ನಂತರ ಈ ಪ್ರದೇಶದಲ್ಲಿ ಮುಸ್ಲಿಂ ಜನಸಂಖ್ಯೆಯೂ ಹೆಚ್ಚಿದೆ. ಇಲ್ಲಿ ಬಕ್ರೀದ್ ಹಬ್ಬದ ದಿನ ನಡೆಯುವ ಪ್ರಾಣಿ ಹತ್ಯೆ ಜೈನ ಸಮುದಾಯದಕ್ಕೆ ತೀವ್ರ ನೋವುಂಟು ಮಾಡುತ್ತಿದೆ. ಹೀಗಾಗಿ 2016ರಲ್ಲಿ ಜೈನ ಸಮುದಾಯ ಮೇಕೆಗಳ ಹತ್ಯೆ ತಡೆಯಲು ಜೀವ ದಯಾ ಸಂಸ್ಥಾನ ಸಂಘಟನೆ ಸ್ಥಾಪಿಸಿದೆ. ಈ ಸಂಘಟನೆ ಇದೀಗ ಬಕ್ರೀದ್ ಹಬ್ಬಕ್ಕೆ ಮಾರಾಟ ಮಾಡಲು ಇಟ್ಟಿದ್ದ ಮೇಕೆಗಳನ್ನು ಖರೀದಿಸಿದೆ.

Latest Videos

ಬಕ್ರೀದ್ ಹಬ್ಬದಂದು 700ಕ್ಕೂ ಹೆಚ್ಚು ಜಾನುವಾರು ರಕ್ಷಣೆ, ಗೋ ಹತ್ಯೆ ನಿಷೇಧ ಕಾಯ್ದೆ ಉಲ್ಲಂಘಿಸಿದ 60 ಜನರ ಮೇಲೆ FIR

ಬಕ್ರೀದ್ ಹಬ್ಬಕ್ಕಾಗಿ ಬಕ್ರಶಾಲಾದಲ್ಲಿ ಸುಮಾರು 450 ಮೇಕೆಗಳನ್ನು ಮಾರಾಟಕ್ಕೆ ಇಡಲಾಗಿತ್ತು. ಇದರಲ್ಲಿ 250 ಮೇಕೆಗಳನ್ನು ಖರೀದಿಸಿದೆ. ಬಳಿಕ ಜೀವ ದಯಾ ಸಂಸ್ಥಾನ ಸಂಘಟನೆ ನಡೆಸುತ್ತಿರುವ ಮೇಕೆ ಹಾಗೂ ಗೋಶಾಲೆಯಲ್ಲಿ ಈ ಮೇಕೆಗಳನ್ನು ಬಿಡಲಾಗಿದೆ. 40 ಮೇಕೆಗಳಿಂದ ಆರಂಭಗೊಂಡ ಈ ಮೇಕೆ ಶಾಲೆಯಲ್ಲಿ ಇದೀಗ 500ಕ್ಕೂ ಹೆಚ್ಚು ಮೇಕೆಗಳಿವೆ.

ಇಲ್ಲಿ ಎಲ್ಲಾ ಮೇಕೆಗಳನ್ನು ಉತ್ತಮವಾಗಿ ನೋಡಿಕೊಳ್ಳಲಾಗುತ್ತದೆ. ವೈದ್ಯರು ತಂಡವಿದೆ. ಮೇವು ಸೇರಿದಂತೆ ಎಲ್ಲಾ ವ್ಯವಸ್ಥೆ ಮಾಡಲಾಗಿದೆ. ಸಂಪೂರ್ಣ ಜವಾಬ್ದಾರಿಯನ್ನು ಜೈನ ಸಮುದಾಯ ನೋಡಿಕೊಳ್ಳುತ್ತದೆ ಎಂದು ಜೀವ ದಯಾ ಸಂಸ್ಥಾನ ಸದಸ್ಯ ದಿನೇಶ್ ಜೈನ್ ಹೇಳಿದ್ದಾರೆ. ಪ್ರತಿ ವರ್ಷ ಬಕ್ರೀದ್ ಹಬ್ಬದ ದಿನ ಹೆಚ್ಚಿನ ಮೇಕೆಗಳನ್ನು ನಾವು ಖರೀದಿಸುತ್ತೇವೆ. ಈಮೂಲಕ ಖರೀದಿಸಿದ ಮೇಕೆಗಳ ಹತ್ಯೆ ತಡೆಯಲು ನಾವು ಯಶಸ್ವಿಯಾಗಿದ್ದೇವೆ ಅನ್ನೋ ಸಣ್ಣ ತೃಪ್ತಿ ಇದೆ. ಇದರ ಜೊತೆಗೆ ಇನ್ನುಳಿದ ಮೇಕೆಗಳನ್ನು ಉಳಿಸಲಾಗಿಲ್ಲ ಅನ್ನೋ ನೋವು ಕೂಡ ಇದೆ ಎಂದು ದಿನೇಶ್ ಜೈನ್ ಹೇಳಿದ್ದಾರೆ.

 

ಗೋ ಹತ್ಯೆ ಇಲ್ಲದೇ ಬಕ್ರೀದ್ ಆಚರಣೆ, ಕುರಿ ಮಾಲೀಕರಿಗೆ ಫುಲ್ ಕಲೆಕ್ಷನ್

ಉತ್ತರ ಪ್ರದೇಶದ ಇತರ ಭಾಗದಲ್ಲಿ ಈ ರೀತಿಯ ಮೇಕೆ ಹಾಗೂ ಗೋ ಶಾಲೆ ಆರಂಭಿಸಲು ಯೋಜನೆ ರೂಪಿಸಿದ್ದೇವೆ. ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಗುಜರಾತ್‌ನಲ್ಲಿ ಈ ರೀತಿಯ ಮೇಕೆ ಹಾಗೂ ಗೋ ಶಾಲೆ ಆರಂಭಿಸಲು ಎಲ್ಲಾ ಸಿದ್ದತೆ ನಡೆಯುತ್ತಿದೆ ಎಂದು ದಿನೇಶ್ ಜೈನ್ ಹೇಳಿದ್ದಾರೆ. ಬಕ್ರಿದ್ ಹಬ್ಬದ ಆಚರಣೆಗೆ ನಮ್ಮ ವಿರೋಧವಿಲ್ಲ. ನಮ್ಮ ಧರ್ಮದಲ್ಲಿ ಹಿಂಸೆಗೆ ಎಳ್ಳಷ್ಟು ಅವಕಾಶ ನೀಡುವುದಿಲ್ಲ. ಹೀಗಾಗಿ ಹತ್ಯೆ ನಮಗೆ ತೀವ್ರ ನೋವು ತರುತ್ತಿದೆ. ಪವಿತ್ರ ಭಾರತದಲ್ಲಿ ಈ ರೀತಿ ಪ್ರಾಣಿಗಳ ಹತ್ಯೆ ನಡೆಯುತ್ತಿರುವುದು ನೋವು ತರುತ್ತದೆ ಎಂದು ದಿನೇಶ್ ಜೈನ್ ಹೇಳಿದ್ದಾರೆ.

click me!