ಲಕ್ನೋ: ದೇಶದ ಅನೇಕ ಕಡೆ ಉದ್ವಿಗ್ನ ವಾತಾವರಣಕ್ಕೆ ಕಾರಣವಾಗಿರುವ ‘ಐ ಲವ್ ಮೊಹಮ್ಮದ್’ I Love Muhammad ಅಭಿಯಾನವನ್ನು ಬೆಂಬಲಿಸಿ ಪ್ರತಿಭಟನೆಗೆ ಕರೆ ನೀಡಿದ್ದ ಸ್ಥಳೀಯ ಧರ್ಮಗುರು ಮತ್ತು ಇತ್ತೆಹಾದ್-ಎ-ಮಿಲ್ಲತ್ ಕೌನ್ಸಿಲ್ ಮುಖ್ಯಸ್ಥ ತೌಕೀರ್ ರಾಜಾ ಖಾನ್ ಅವರನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ. ಉತ್ತರ ಪ್ರದೇಶದ ಬರೇಲಿಯಲ್ಲಿ ಶುಕ್ರವಾರದ ಪ್ರಾರ್ಥನೆಯ ನಂತರ ತೌಕೀರ್ ರಾಜಾ ಐ ಲವ್ ಮೊಹಮ್ಮದ್ ಆಂದೋಲನಕ್ಕೆ ಕರೆ ನೀಡಿದ್ದರು.

12:05 AM (IST) Sep 29
ಪಾಕಿಸ್ತಾನ ಬಗ್ಗುಬಡಿದು ಏಷ್ಯಾಕಪ್ ಟ್ರೋಫಿ ಗೆದ್ದ ಭಾರತ, ವಿಕೆಟ್ ಪತನ, ಅಂತಿಮ ಹಂತದಲ್ಲಿ ಎದುರಾದ ಸವಾಲು , ಪಾಕ್ ವಿರುದ್ದದ ಪಂದ್ಯದ ಒತ್ತಡಗಳಿಂದ ಪಂದ್ಯ ಕುತೂಹಲ ಘಟ್ಟಕ್ಕೆ ತಲುಪಿತ್ತು. ಯಾರಿಗೆ ಗೆಲುವು ಅನ್ನೋದು ನಿಗೂಢವಾಗಿತ್ತು. ಆದರೆ ತಿಲಕ್ ವರ್ಮಾ ಹೋರಾಟ ಗೆಲುವು ತಂದುಕೊಟ್ಟಿದೆ.
11:38 PM (IST) Sep 28
2025ರ ಏಷ್ಯಾಕಪ್ ಫೈನಲ್‌ನಲ್ಲಿ, ಜಸ್ಪ್ರೀತ್ ಬುಮ್ರಾ ಮಾರಕ ಯಾರ್ಕರ್ ಮೂಲಕ ಹ್ಯಾರಿಸ್ ರೌಫ್ ವಿಕೆಟ್ ಪಡೆದರು. ಈ ಹಿಂದೆ ಭಾರತೀಯ ಅಭಿಮಾನಿಗಳನ್ನು ಅಣಕಿಸಿದ್ದ ರೌಫ್‌ಗೆ, ಬುಮ್ರಾ 'ಜೆಟ್ ಪತನ'ದ ಆಕ್ಷನ್ ಮೂಲಕವೇ ತಿರುಗೇಟು ನೀಡಿದ್ದಾರೆ.
09:52 PM (IST) Sep 28
Asia Cup Final ಅಬ್ಬರಿಸಿದ ಪಾಕಿಸ್ತಾನಕ್ಕೆ ಸ್ಪಿನ್ ಬ್ರೇಕ್, ಟೀಂ ಇಂಡಿಯಾ 147 ರನ್ ಟಾರ್ಗೆಟ್, ಆರಂಭದಲ್ಲಿ ಅಬ್ಬರಿಸಿದ ಪಾಕಿಸ್ತಾನಕ್ಕೆ ಭಾರತ ತಕ್ಕ ಉತ್ತರ ನೀಡಿದೆ. 146 ರನ್‌ಗೆ ಪಾಕಿಸ್ತಾನ ಕಟ್ಟಿ ಹಾಕಿರುವ ಟೀಂ ಇಂಡಿಯಾ ಚೇಸಿಂಗ್ ಮಾಡಲು ಸಜ್ಜಾಗಿದೆ.
08:24 PM (IST) Sep 28
ಇಂಡೋ ಪಾಕ್ ಫೈನಲ್ ಆರಂಭದಲ್ಲೇ ಹೈಡ್ರಾಮ, ರವಿ ಶಾಸ್ತ್ರಿ-ವಕಾರ್ ಇಬ್ಬರು ಟಾಸ್ ಪ್ರೆಸೆಂಟರ್ ಬಳಕೆ ಮಾಡಲಾಗಿದೆ. ಇದೇ ಮೊದಲ ಬಾರಿಗೆ ಟಾಸ್ ಪ್ರಕ್ರಿಯೆಗೆ ಇಬ್ಬರು ನಿರೂಪಕರ ಬಳಕೆ ಮಾಡಲಾಗಿದೆ. ಇದರ ಹಿಂದೆ ಪಾಕಿಸ್ತಾನದ ಬಹಿಷ್ಕಾರದ ಕತೆ ಇದೆ.
07:37 PM (IST) Sep 28
Asia Cup Final ಪಾಕಿಸ್ತಾನ ವಿರುದ್ಧ ಟಾಸ್ ಗೆದ್ದ ಭಾರತಕ್ಕೆ ಶಾಕ್, ಹಾರ್ದಿಕ್ ಪಾಂಡ್ಯಗೆ ವಿಶ್ರಾಂತಿ, ಭಾರತ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ. ಆದರೆ ತಂಡದಲ್ಲಿನ ಮಹತ್ವದ ಬದಲಾವಣೆ ಅಭಿಮಾನಿಗಳಿಗೆ ಆಘಾತ ನೀಡಿದೆ.
07:15 PM (IST) Sep 28
06:53 PM (IST) Sep 28
ಇಂಡೋ-ಪಾಕ್ ಫೈನಲ್ ಪಂದ್ಯಕ್ಕೆ ಬಿಸಿಸಿಐ ನೂತನ ಅಧ್ಯಕ್ಷ ಮಿಥುನ್ ಮನ್ಹಾಸ್ ಸೇರಿ ಸದಸ್ಯರು ಗೈರು, ಏಷ್ಯಾಕಪ್ ಫೈನಲ್ ಪಂದ್ಯಕ್ಕೂ ಮುನ್ನ ಬಿಸಿಸಿಐ ಅಧ್ಯಕ್ಷರ ಆಯ್ಕೆಯಾಗಿದೆ. ಆದರೆ ಬಿಸಿಸಿಐ ಯಾವುದೇ ಸದಸ್ಯರು ಫೈನಲ್ ಪಂದ್ಯ ವೀಕ್ಷಣೆಗೆ ಹಾಜರಾಗುತ್ತಿಲ್ಲ.
06:18 PM (IST) Sep 28
Vijays TVK Rally Tragedy: ತಮಿಳುನಾಡಿನ ಕರೂರಿನಲ್ಲಿ ನಟ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಸಮಾವೇಶದಲ್ಲಿ ಸಂಭವಿಸಿದ ದುರಂತದಲ್ಲಿ ಮೃತರಾದ ಒಬ್ಬೊಬ್ಬರದ್ದು ಒಂದೊಂದು ನೋವಿನ ಕತೆಯಾಗಿದ್ದು, ಕುಟುಂಬಸ್ಥರನ್ನು ಕಣ್ಣೀರಲ್ಲಿ ಕೈ ತೊಳೆಯುವಂತೆ ಮಾಡಿದೆ.
06:05 PM (IST) Sep 28
ಅತೀ ಹೆಚ್ಚು ವಿಸ್ಕಿ ಕುಡಿಯುವ ಭಾರತದ ರಾಜ್ಯಗಳ ಪಟ್ಟಿ ಪ್ರಕಟ, ಕರ್ನಾಟಕಕ್ಕೆ ಎಷ್ಟನೇ ಸ್ಥಾನ? ವಿಶೇಷ ಅಂದರೆ ದಕ್ಷಿಣ ಭಾರತದ ರಾಜ್ಯಗಳೇ ಈ ಪಟ್ಟಿಯಲ್ಲಿ ಪ್ರಾಬಲ್ಯ ಸಾಧಿಸಿದೆ. ವಿಸ್ಕಿ ಗುಟುಕೇರಿಸುವ ರಾಜ್ಯಗಳ ಲಿಸ್ಟ್ ಇಲ್ಲಿದೆ.
05:48 PM (IST) Sep 28
ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು 'ಆ*ತ್ಮಹತ್ಯೆ ಕಾಯಿಲೆ' ಎಂದು ಕರೆಯಲ್ಪಡುವ ಟ್ರೈಜಿಮಿನಲ್ ನರಶೂಲೆ ಎಂಬ ಗಂಭೀರ ಆರೋಗ್ಯ ಸ್ಥಿತಿಯಿಂದ ಬಳಲುತ್ತಿರುವುದಾಗಿ ಬಹಿರಂಗಪಡಿಸಿದ್ದಾರೆ. ಈ ಕಾಯಿಲೆಯು ಉಂಟುಮಾಡುವ ಅಸಹನೀಯ ಮುಖದ ನೋವಿನಿಂದಾಗಿ ತಾವು ಸಾವಿನ ಬಗ್ಗೆಯೂ ಯೋಚಿಸಿದ್ದಾಗಿ ಅವರು ಹೇಳಿಕೊಂಡಿದ್ದಾರೆ.
05:36 PM (IST) Sep 28
ಹ್ಯಾರಿಸ್ ರೌಫ್ ಪತ್ನಿ ಮುಜ್ನಾ ಮಸೂದ್: ಭಾರತ-ಪಾಕಿಸ್ತಾನ ಏಷ್ಯಾಕಪ್ 2025ರ ಫೈನಲ್ ಪಂದ್ಯದಲ್ಲಿ ಸೆಪ್ಟೆಂಬರ್ 28, ಭಾನುವಾರದಂದು ಮುಖಾಮುಖಿಯಾಗಲಿವೆ. ಪಾಕಿಸ್ತಾನದ ಬಲವೇ ಅದರ ಬೌಲರ್‌ಗಳು. ಪಾಕ್ ವೇಗದ ಬೌಲರ್ ಹ್ಯಾರಿಸ್ ರೌಫ್ ಅವರ ಸುಂದರ ಪತ್ನಿ ಮುಜ್ನಾ ಮಸೂದ್ ಮಲಿಕ್ ಬಗ್ಗೆ ತಿಳಿಯೋಣ.
05:17 PM (IST) Sep 28
05:03 PM (IST) Sep 28
ರಸ್ತೆ ಅಪಘಾತದಲ್ಲಿ ಗಾಯಗೊಂಡ ಸಿಂಗರ್ ರಾಜ್‌ವೀರ್ ಪರಿಸ್ಥಿತಿ ಗಂಭೀರ, ವೆಂಟಿಲೇಟರ್ ನೆರವು ನೀಡಲಾಗಿದೆ. ಫೋರ್ಟಿಸ್ ಆಸ್ಪತ್ರೆಯ ಐಸಿಯು ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆಗೆ ಭೇಟಿ ನೀಡಿರುವ ಮುಖ್ಯಮಂತ್ರಿ ವೈದ್ಯರ ಜೊತೆ ಮಾತುಕತೆ ನಡೆಸಿದ್ದಾರೆ.
04:53 PM (IST) Sep 28
Philadelphia drug crisis: ಫಿಲಡೆಲ್ಫಿಯಾದಲ್ಲಿ ಡ್ರಗ್ಸ್ ಚಟಕ್ಕೆ ದಾಸರಾದ ಜನರು ಜೋಂಬಿಗಳಂತೆ ವರ್ತಿಸುತ್ತಿರುವ ಆಘಾತಕಾರಿ ವೀಡಿಯೋ ವೈರಲ್ ಆಗಿದೆ. ಫೆಂಟನಿಲ್‌ನಂತಹ ಮಾದಕವಸ್ತುಗಳಿಂದ ಉಂಟಾದ ಈ ಬಿಕ್ಕಟಿನಿಂದ ಅನೇಕರು ಸಂಕಷ್ಟ ಎದುರಿಸುತ್ತಿದ್ದಾರೆ.
04:27 PM (IST) Sep 28
ದುಬೈ: 2025ರ ಏಷ್ಯಾಕಪ್ ಟೂರ್ನಿಯು ನಿರ್ಣಾಯಕ ಘಟ್ಟ ತಲುಪಿದ್ದು, ಫೈನಲ್‌ನಲ್ಲಿ ಕ್ರಿಕೆಟ್ ಜಗತ್ತಿನ ಬದ್ದ ಎದುರಾಳಿಗಳಾದ ಭಾರತ - ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯ ಗೆಲ್ಲೋರು ಯಾರು ಎನ್ನುವ ಕುರಿತಂತೆ ಪಾಕ್ ದಿಗ್ಗಜ ಕ್ರಿಕೆಟಿಗ ವಾಸೀಂ ಅಕ್ರಂ ಅಚ್ಚರಿ ಭವಿಷ್ಯ ನುಡಿದಿದ್ದಾರೆ.
04:18 PM (IST) Sep 28
ಇಂಡೋ-ಪಾಕ್ ಫೈನಲ್ ವೀಕ್ಷಿಸುವ ಫ್ಯಾನ್ಸ್‌ಗೆ ಮಾರ್ಗಸೂಚಿ ಪ್ರಕಟ, ಹಲವು ನಿರ್ಬಂಧ ವಿಧಿಸಲಾಗಿದೆ. ಬದ್ಧವೈರಿಗಳ ಕದನಕ್ಕೆ ದುಬೈ ಪೊಲೀಸರು ಭಾರಿ ತಯಾರಿ ಮಾಡಿದ್ದರೆ. ಇಷ್ಟೇ ಅಲ್ಲ, ಅಭಿಮಾನಿಗಳು ಕೆಲ ಕಟ್ಟು ನಿಟ್ಟಿನ ನಿಯಮ ಪಾಲಿಸುವಂತೆ ಸೂಚಿಸಿದ್ದಾರೆ.
03:46 PM (IST) Sep 28
Rapido driver helps woman at night: ತಡರಾತ್ರಿ ಮನೆಗೆ ಬಂದ ಯುವತಿಯೊಬ್ಬಳು ಕೀ ಮರೆತು ಹೊರಗೆ ನಿಲ್ಲುವಂತಾಗುತ್ತದೆ. ಆಕೆಯನ್ನು ಡ್ರಾಪ್ ಮಾಡಿದ ರಾಪಿಡೋ ಚಾಲಕ, ಆಕೆಯ ಸುರಕ್ಷತೆಗಾಗಿ ಆಕೆಯ ಸ್ನೇಹಿತೆ ಬರುವವರೆಗೂ ಕಾದು, ಮಾನವೀಯತೆ ಮೆರೆದ ಘಟನೆ ನಡೆದಿದ್ದು, ವೀಡಿಯೋ ವೈರಲ್ ಆಗಿದೆ.
03:11 PM (IST) Sep 28
ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದವರಿಗೆ ಮುಂದಿನ ತಿಂಗಳು ನಿರಾಸೆ, 11 ದಿನ ಟ್ರೇಡಿಂಗ್ ಇಲ್ಲ, ಈ ತಿಂಗಳಲ್ಲಿ ಲಾಭ ಮಾಡಿದವರು, ಕಳೆದುಕೊಂಡವರು ಮುಂದಿನ ತಿಂಗಳು ಲಾಭ ಮಾಡಿಕೊಳ್ಳಲು ಪ್ಲಾನ್ ಮಾಡಿದ್ದರೆ, 11 ದಿನ ಯಾವುದೇ ಟ್ರೇಡಿಂಗ್ ಇರುವುದಿಲ್ಲ.
02:53 PM (IST) Sep 28
ಏಷ್ಯಾಕಪ್ ಫೈನಲ್‌ಗೂ ಮುನ್ನ ಪಾಕಿಸ್ತಾನದ ನಾಯಕ ಸಲ್ಮಾನ್ ಅಘಾ ಭಾರತಕ್ಕೆ ಎಚ್ಚರಿಕೆ ನೀಡಿದ್ದು, ತಮ್ಮ ಸಂಪೂರ್ಣ ಶಕ್ತಿಯನ್ನು ಅಂತಿಮ ಪಂದ್ಯಕ್ಕೆ ಮೀಸಲಿಟ್ಟಿದ್ದೇವೆ ಎಂದಿದ್ದಾರೆ. ಟೀಂ ಇಂಡಿಯಾ, ಈ ಟೂರ್ನಿಯಲ್ಲಿ ಈಗಾಗಲೇ ಎರಡು ಬಾರಿ ಪಾಕಿಸ್ತಾನವನ್ನು ಸೋಲಿಸಿ ಸಂಪೂರ್ಣ ಆತ್ಮವಿಶ್ವಾಸದಲ್ಲಿದೆ.
01:28 PM (IST) Sep 28
ಏಷ್ಯಾಕಪ್ ಫೈನಲ್‌ನಲ್ಲಿ ಭಾರತ-ಪಾಕಿಸ್ತಾನ ಮುಖಾಮುಖಿಯಾಗಲಿದ್ದು, ದುಬೈ ಪೊಲೀಸರು ಅಭಿಮಾನಿಗಳಿಗೆ ಕಠಿಣ ಭದ್ರತಾ ನಿಯಮಗಳನ್ನು ಜಾರಿಗೊಳಿಸಿದ್ದಾರೆ. ಸ್ಟೇಡಿಯಂ ಒಳಗೆ ಧ್ವಜ, ಪಟಾಕಿ ಸೇರಿದಂತೆ ಹಲವು ವಸ್ತುಗಳನ್ನು ನಿಷೇಧಿಸಲಾಗಿದ್ದು, ನಿಯಮ ಉಲ್ಲಂಘಿಸಿದರೆ ಭಾರೀ ದಂಡ ಮತ್ತು ಜೈಲು ಶಿಕ್ಷೆ ವಿಧಿಸಲಾಗುವುದು.
01:11 PM (IST) Sep 28
ಬಾಲಿವುಡ್ ನಟಿ ಹುಮಾ ಖುರೇಷಿ ಏರ್‌ಪೋರ್ಟ್ ಲುಕ್ ಭಾರಿ ಟ್ರೋಲ್ ಆಗ್ತಿದೆ. ಮುಂದಿನಿಂದ ಫ್ಯಾಷನ್ ಐಕಾನ್‌ನಂತೆ ಕಾಣುವ ಹುಮಾ ಹಿಮದೆ ತಿರುಗುತ್ತಿದ್ದಂತೆ ಗಾಬರಿಯಾಗುವ ಸರದಿ ನೋಡುಗರದಾಗಿದೆ. ಅವರ ಈ ವಿಡಿಯೋ ಈಗ ಇಂಟರ್‌ನೆಟ್‌ನಲ್ಲಿ ಸಖತ್ ವೈರಲ್ ಆಗಿದೆ.
12:12 PM (IST) Sep 28
ಏಷ್ಯಾಕಪ್ ಫೈನಲ್‌ನಲ್ಲಿ ಇಂದು ಭಾರತ ಮತ್ತು ಪಾಕಿಸ್ತಾನ ತಂಡಗಳು ದುಬೈನಲ್ಲಿ ಮುಖಾಮುಖಿಯಾಗುತ್ತಿವೆ. ಟೂರ್ನಿಯಲ್ಲಿ ಅಜೇಯವಾಗಿರುವ ಸೂರ್ಯಕುಮಾರ್ ಯಾದವ್ ನೇತೃತ್ವದ ಭಾರತ ತಂಡವು ಪಾಕಿಸ್ತಾನದ ವಿರುದ್ಧ ಮೂರನೇ ಗೆಲುವಿನ ನಿರೀಕ್ಷೆಯಲ್ಲಿದೆ.
11:15 AM (IST) Sep 28
Bunty tera sabun slow hai kya 'ಬಂಟಿ ನಿನ್ನ ಸಾಬೂನು ಸ್ಲೋನಾ' ಜಾಹೀರಾತಿನ ಮೂಲಕ ಖ್ಯಾತರಾಗಿದ್ದ ಬಾಲಕಿ ಈಗ ನಾಯಕಿಯಾಗಿ ನಟಿಸುತ್ತಿದ್ದಾರೆ. ತಮ್ಮ 'ಲವ್ ಇನ್ ವಿಯಟ್ನಾಂ' ಸಿನಿಮಾದ ಸಹನಟ ಶಾಂತನು ಮಹೇಶ್ವರಿಗೆ, ತಾನೇ ಆ ಜಾಹೀರಾತಿನ ಹುಡುಗಿ ಎಂಬ ವಿಷಯ ಚಿತ್ರೀಕರಣದವರೆಗೂ ತಿಳಿದಿರಲಿಲ್ಲ.
09:51 AM (IST) Sep 28
ಏಷ್ಯಾಕಪ್ ಟಿ20 ಟೂರ್ನಿಯ ಫೈನಲ್‌ನಲ್ಲಿ ಭಾರತ ತಂಡವು ಬದ್ಧವೈರಿ ಪಾಕಿಸ್ತಾನವನ್ನು ಎದುರಿಸಲಿದ್ದು, ಟೂರ್ನಿಯಲ್ಲಿ ಅಜೇಯವಾಗಿ ಉಳಿದು ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿದೆ. ಹಾರ್ದಿಕ್ ಪಾಂಡ್ಯರ ಅಲಭ್ಯತೆಯ ಆತಂಕ ಹಾಗೂ ಕಳಪೆ ಫೀಲ್ಡಿಂಗ್‌ನಂತಹ ಸಮಸ್ಯೆ ಭಾರತ ಕಾಡುವ ಸಾಧ್ಯತೆ
09:04 AM (IST) Sep 28
ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ತಲೆಮರೆಸಿಕೊಂಡಿದ್ದ ದೆಹಲಿಯ ಶಾರದಾ ಇನ್ಸ್ಟಿಟ್ಯೂಟ್ ನಿರ್ದೇಶಕ ಸ್ವಾಮಿ ಚೈತನ್ಯಾನಂದ ಸರಸ್ವತಿಯನ್ನು ಉತ್ತರ ಪ್ರದೇಶದ ಆಗ್ರಾದಲ್ಲಿ ಬಂಧಿಸಲಾಗಿದೆ.
08:12 AM (IST) Sep 28
ಭಾರತೀಯ ರೈಲ್ವೆಯು ಅಕ್ಟೋಬರ್ 1 ರಿಂದ ಟಿಕೆಟ್ ಬುಕಿಂಗ್ ನಿಯಮಗಳಲ್ಲಿ ಮಹತ್ವದ ಬದಲಾವಣೆ ತಂದಿದೆ. ಈ ಕ್ರಮವು ವಂಚನೆಯನ್ನು ತಡೆಯಲು ಮತ್ತು ಪಾರದರ್ಶಕತೆಯನ್ನು ಹೆಚ್ಚಿಸಲು ಜಾರಿಗೆ ತರಲಾಗಿದೆ.