ಅತೀ ಹೆಚ್ಚು ವಿಸ್ಕಿ ಕುಡಿಯುವ ಭಾರತದ ರಾಜ್ಯಗಳ ಪಟ್ಟಿ ಪ್ರಕಟ, ಕರ್ನಾಟಕಕ್ಕೆ ಎಷ್ಟನೇ ಸ್ಥಾನ?
ಅತೀ ಹೆಚ್ಚು ವಿಸ್ಕಿ ಕುಡಿಯುವ ಭಾರತದ ರಾಜ್ಯಗಳ ಪಟ್ಟಿ ಪ್ರಕಟ, ಕರ್ನಾಟಕಕ್ಕೆ ಎಷ್ಟನೇ ಸ್ಥಾನ? ವಿಶೇಷ ಅಂದರೆ ದಕ್ಷಿಣ ಭಾರತದ ರಾಜ್ಯಗಳೇ ಈ ಪಟ್ಟಿಯಲ್ಲಿ ಪ್ರಾಬಲ್ಯ ಸಾಧಿಸಿದೆ. ವಿಸ್ಕಿ ಗುಟುಕೇರಿಸುವ ರಾಜ್ಯಗಳ ಲಿಸ್ಟ್ ಇಲ್ಲಿದೆ.

ವಿಸ್ಕಿ ಗುಟುಕೇರಿಸುವ ರಾಜ್ಯ
ವಿಸ್ಕಿ ಗುಟುಕೇರಿಸುವ ರಾಜ್ಯ
ಭಾರತದಲ್ಲಿ ಪ್ರೀಮಿಯಂ ವಿಸ್ಕಿಗೆ ಬಾರಿ ಬೇಡಿಕೆ ಹೆಚ್ಚಾಗುತ್ತಿದೆ. ಭಾರತೀಯರು ಉತ್ತಮ ಬ್ರ್ಯಾಂಡ್ ವಿಸ್ಕಿ ರುಚಿಗೆ ಮಾರುಹೋಗಿದ್ದಾರೆ. ಮೇಡ್ ಇನ್ ಇಂಡಿಯಾ ವಿಸ್ಕಿಗಳೇ ಭಾರಿ ಪ್ರಮಾಣದಲ್ಲಿ ಮಾರಾಟವಾಗುತ್ತಿದೆ. ಇದರ ಜೊತೆಗೆ ವಿದೇಶಿ ಬ್ರ್ಯಾಂಡ್ ವಿಸ್ಕಿಗೂ ಅದೇ ರೀತಿ ಡಿಮ್ಯಾಂಡ್ ಇದೆ. ಭಾರತದ ಬಹುತೇಕ ರಾಜ್ಯಗಳಲ್ಲಿ ಮದ್ಯ ಮಾರಾಟ ಮುಕ್ತವಾಗಿದೆ. ಕೆಲ ರಾಜ್ಯಗಳಲ್ಲಿ ಮಾತ್ರ ಮದ್ಯ ಮಾರಾಟ ನಿಷೇಧಿಸಲಾಗಿದೆ. ಭಾರತದಲ್ಲಿ ಅತೀ ಹೆಚ್ಚು ವಿಸ್ಕಿ ಕುಡಿಯುವ ರಾಜ್ಯ ಯಾವುದು? ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ.
ನಂಬರ್ 1 ರಾಜ್ಯ ಯಾವುದು?
ನಂಬರ್ 1 ರಾಜ್ಯ ಯಾವುದು?
ಭಾರತದ ವಿಸ್ಕಿ ಮಾರುಕಟ್ಟೆ ವೇಗವಾಗಿ ಬೆಳೆಯುತ್ತಿದೆ. 2024-25ರ ಸಾಲಿನಲ್ಲಿ ಭಾರತದಲ್ಲಿ ವಿಸ್ಕಿ ಮಾರಾಟದಲ್ಲಿ ಗಣನೀಯವಾಗಿ ಹೆಚ್ಚಳವಾಗಿದೆ. ಇದೀಗ ಬಿಡುಗಡೆಯಾಗಿರುವ 2024-25ರ ಸಾಲಿನಲ್ಲಿ ಅತೀ ಹೆಚ್ಚು ವಿಸ್ಕಿ ಕುಡಿಯುವ ರಾಜ್ಯದಲ್ಲಿ ಕರ್ನಾಟಕ ಮೊದಲ ಸ್ಥಾನ ಪಡೆದುಕೊಂಡಿದೆ.
6.88 ಕೋಟಿ ಕೇಸ್
6.88 ಕೋಟಿ ಕೇಸ್
2024-25ರ ಸಾಲಿನಲ್ಲಿ ಕರ್ನಾಟಕದಲ್ಲಿ 6.88 ಕೋಟಿ ಕೇಸ್ ವಿಸ್ಕಿ ಮಾರಾಟವಾಗಿದೆ. ವಿಶೇಷ ಅಂದರೆ ಭಾರತದಲ್ಲಿ ಒಟ್ಟ ಮಾರಾಟವಾಗಿ ಪ್ರೀಮಿಯಂ ಬ್ರ್ಯಾಂಡ್ ವಿಸ್ಕಿ ಪೈಕಿ ಕರ್ನಾಟಕದ ಪಾಲು ಶೇಕಡಾ 17. ಕರ್ನಾಟಕ ನಂಬರ್ 1 ಪಡೆಯುತ್ತಿರುವುದು ಇದೇ ಮೊದಲಲ್ಲ. ಕಳೆದ ವರ್ಷ ಸೇರಿದಂತೆ ಕಳೆದ ಕೆಲ ವರ್ಷಗಳಿಂದ ವಿಸ್ಕಿ ಕುಡಿಯುವ ರಾಜ್ಯದಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ.
ಎರಡನೇ ಸ್ಥಾನದಲ್ಲಿ ತಮಿಳುನಾಡು
ಎರಡನೇ ಸ್ಥಾನದಲ್ಲಿ ತಮಿಳುನಾಡು
ಅತೀ ಹೆಚ್ಚು ಪ್ರೀಮಿಯಂ ಬ್ರ್ಯಾಂಡ್ ವಿಸ್ಕಿ ಸೇವಿಸುವ ರಾಜ್ಯಗಳ ಪೈಕಿ ತಮಿಳುನಾಡು ಎರಡನೇ ಸ್ಥಾನದಲ್ಲಿದೆ. ದೇಶದ ಒಟ್ಟು ಮಾರಾಟದ ಪೈಕಿ ತಮಿಳುನಾಡು ಪಾಲು ಶೇಕಡಾ 16. 2024-25ರ ಸಾಲಿನಲ್ಲಿ 6.47 ಕೋಟಿ ಕೇಸ್ ಮಾರಾಟವಾಗಿದೆ. ತಮಿಳುನಾಡು ಸರ್ಕಾರದ ಅಧಿನದ ಕೇಂದ್ರಗಳಲ್ಲಿ ಮಾರಾಟವಾಗುವ ವಿಸ್ಕಿ ಪ್ರಮಾಣ ಹೆಚ್ಚು.
ದಕ್ಷಿಣದ ರಾಜ್ಯಗಳ ಪ್ರಾಬಲ್ಯ
ದಕ್ಷಿಣದ ರಾಜ್ಯಗಳ ಪ್ರಾಬಲ್ಯ
ಪ್ರೀಮಿಯಂ ಬ್ರ್ಯಾಂಡ್ ವಿಸ್ಕಿ ಕುಡಿಯುವ ರಾಜ್ಯಗಳ ಪೈಕಿ ದಕ್ಷಿಣ ರಾಜ್ಯಗಳೇ ಪ್ರಾಬಲ್ಯ ಸಾಧಿಸಿದೆ. ಆರಂಭಿಕ 4 ಸ್ಥಾನಗಳನ್ನು ದಕ್ಷಿಣ ರಾಜ್ಯಗಳೇ ಪಡೆದುಕೊಂಡಿದೆ. ತೆಲಂಗಾಣದ ದೇಶದ ಒಟ್ಟು ಮಾರಾಟದ ಪೈಕಿ ಶೇಕಡಾ 9ರಷ್ಟು ಕೊಡುಗೆ ನೀಡುತ್ತಿದೆ. 3.71 ಕೋಟಿ ಕೇಸ್ ವಿಸ್ಕಿ ಮಾರಾಟವಾಗಿದೆ. ಇನ್ನು ಆಂಧ್ರ ಪ್ರದೇಶ ನಾಲ್ಕನೇ ಸ್ಥಾನ ಪಡೆದಿದೆ. 3.55 ಕೋಟಿ ಕೇಸ್ ವಿಸ್ಕಿ ಮಾರಾಟವಾಗಿದೆ.
ಮಹಾರಾಷ್ಟ್ರ, ಯುಪಿಗೂ ಸ್ಥಾನ
ಮಹಾರಾಷ್ಟ್ರ, ಯುಪಿಗೂ ಸ್ಥಾನ
ಆರಂಭಿಕ ನಾಲ್ಕು ಸ್ಥಾನ ದಕ್ಷಿಣ ರಾಜ್ಯಗಳು ಪಡೆದರೆ, 5 ಮತ್ತು 6 ನೇ ಸ್ಥಾನ ಮಹಾರಾಷ್ಟ್ರ ಹಾಗೂ ಉತ್ತರ ಪ್ರದೇಶ ಪಡೆದಿದೆ. ಮಹಾರಾಷ್ಟ್ರದಲ್ಲಿ 2.71 ಕೋಟಿ ಕೇಸ್ ಹಾಗೂ ಉತ್ತರ ಪ್ರದೇಶದಲ್ಲಿ 2.50 ಕೋಟಿ ಕೇಸ್ ವಿಸ್ಕಿ ಮಾರಾಟವಾಗಿದೆ. ಮಹಾರಾಷ್ಟ್ ವಾಣಿಜ್ ನಗರಿಯಾಗಿ ಗುರುತಿಸಿಕೊಂಡಿದ್ದರೆ, ಉತ್ತರ ಪ್ರದೇಶ ಅತೀ ಹೆಚ್ಚು ಜನಸಂಖ್ಯೆ ರಾಜ್ಯವಾಗಿ ಗುರುತಿಸಿಕೊಂಡಿದೆ.
ಸೂಚನೆ: ಮದ್ಯ ಸೇವನೆ ಆರೋಗ್ಯಕ್ಕೆ ಹಾನಿಕರ. ಕೇವಲ ದೇಶದ ವಿಸ್ಕಿ ಮಾರಾಟದ ಅಂಕಿ ಅಂಶ ಮಾಹಿತಿಗಾಗಿ ಈ ಲೇಖನ ನೀಡಲಾಗಿದೆ.