ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ತಲೆಮರೆಸಿಕೊಂಡಿದ್ದ ದೆಹಲಿಯ ಶಾರದಾ ಇನ್ಸ್ಟಿಟ್ಯೂಟ್ ನಿರ್ದೇಶಕ ಸ್ವಾಮಿ ಚೈತನ್ಯಾನಂದ ಸರಸ್ವತಿಯನ್ನು ಉತ್ತರ ಪ್ರದೇಶದ ಆಗ್ರಾದಲ್ಲಿ ಬಂಧಿಸಲಾಗಿದೆ.
ನವದೆಹಲಿ: ತಲೆಮರೆಸಿಕೊಂಡಿದ್ದ ದೆಹಲಿಯ ಶಾರದಾ ಇನ್ಸ್ಟಿಟ್ಯೂಟ್ ನಿರ್ದೇಶಕ ಸ್ವಾಮಿ ಚೈತನ್ಯಾನಂದ ಸರಸ್ವತಿ ಸ್ವಾಮೀಜಿಯುನ್ನು (Swami Chaitanyananda Saraswati) ಉತ್ತರ ಪ್ರದೇಶದ ಆಗ್ರಾದಲ್ಲಿ ಬಂಧಿಸಲಾಗಿದೆ. ತನ್ನ ನೀಚತನ ಮುನ್ನಲೆಗೆ ಬರುತ್ತಿದ್ದಂತೆ ಕಾಮುಕ ಚೈತನ್ಯಾನಂದ ಸರಸ್ವತಿ ಸ್ವಾಮಿ ಎಸ್ಕೇಪ್ ಆಗಿದ್ದನು. ಆರೋಪಿ ಸ್ವಾಮಿ ವಿರುದ್ದ 2009 ಮತ್ತು 2016 ರಲ್ಲಿಯೂ ಎರಡು ದೂರು ದಾಖಲಾಗಿದ್ದವು. ವಿದ್ಯಾರ್ಥಿಗಳನ್ನು ತನ್ನ ಕೆಳಮಹಡಿಗೆ ಕರೆಸಿಕೊಂಡುಮ ಲೈಂಗಿಕ ದೌರ್ಜ*ನ್ಯ ಎಸಗುತ್ತಿದ್ದನು ಎಂಬ ಆರೋಪ ಕೇಳಿ ಬಂದಿವೆ. ಅಷ್ಟು ಮಾತ್ರವಲ್ಲ ವಿದ್ಯಾರ್ಥಿಗಳನ್ನು ಹರಿದ್ವಾರ ಪ್ರವಾಸಕ್ಕೂ ಕರೆದುಕೊಂಡು ಹೋದಾಗಲೂ ದೌರ್ಜನ್ಯ ಎಸಗಿದ್ದಾನೆ. ಈ ಆರೋಪ ಕೇಳಿ ಬಂದ ಹಿನ್ನೆಲೆ ಶಾರದಾ ಇನ್ಸ್ಟಿಟ್ಯೂಟ್ ಆಫ್ ಇಂಡಿಯನ್ ಮ್ಯಾನೇಜ್ಮೆಂಟ್ ಚೈತನ್ಯಾನಂದ ಸ್ವಾಮಿಯನ್ನು ಹುದ್ದೆಯಿಂದ ವಜಾಗೊಳಿಸಿದೆ.
ಬೇಬಿ, ಸ್ವೀಟ್ ಗರ್ಲ್ ಎಂದು ಕರೆಯುತ್ತಿದ್ದ ಚೈತನ್ಯಾನಂದ
2016ರಲ್ಲಿ ಪ್ರಕರಣ ದಾಖಲಿಸಿದ್ದ ಸಂತ್ರಸ್ತೆಯೊಬ್ಬಳು, “ನಾನು ಸಂಸ್ಥೆಗೆ ಸೇರಿದ ಕೆಲವೇ ದಿನಗಳಲ್ಲಿ ಚೈತನ್ಯಾನಂದರು ಅಶ್ಲೀಲ ಸಂದೇಶಗಳನ್ನು ಕಳುಹಿಸಲು ಪ್ರಾರಂಭಿಸಿದ್ದರು. ನನ್ನನ್ನು ಬೇಬಿ, ಸ್ವೀಟ್ ಗರ್ಲ್ ಎಂದು ಕರೆಯುತ್ತಿದ್ದರು. ತರಗತಿಗಳ ಬಳಿಕ ಕಚೇರಿಗೆ ಕರೆಯುತ್ತಿದ್ದರು, ದುಬೈ ಪ್ರವಾಸಕ್ಕೆ ಕರೆದೊಯ್ಯುವುದಾಗಿ ಭರವಸೆ ನೀಡುತ್ತಿದ್ದರು. ನಾನು ನಿರಾಕರಿಸಿದಾಗ, ಅವರ ಸಿಬ್ಬಂದಿ ನಿರಂತರ ಒತ್ತಡ ಹೇರುತ್ತಿದ್ದರು. ಫೋನ್ ವಶಪಡಿಸಿಕೊಂಡು ಹಾಸ್ಟೆಲ್‌ನಲ್ಲಿ ಒಂಟಿಯಾಗಿರಲು ಒತ್ತಾಯಿಸಿದ್ದರು” ಎಂದು ತಮ್ಮ ನೋವನ್ನು ಹಂಚಿಕೊಂಡಿದ್ದಾರೆ.
ಜಾಮೀನು ಅರ್ಜಿ ವಜಾ
ಚೈತನ್ಯಾನಂದ ಸರಸ್ವತಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಸೆಷನ್ಸ್ ಕೋರ್ಟ್ ವಜಾ ಮಾಡಿದೆ. ವಂಚನೆ, ಫೋರ್ಜರಿ ಮತ್ತು ಕ್ರಿಮಿನಲ್ ಪಿತೂರಿ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಆತ ದೆಹಲಿ ಕೋರ್ಟ್‌ನ ಮರೆಹೋಗಿದ್ದ. ಈ ಬಗ್ಗೆ ಮಾತನಾಡಿರುವ ಹೆಚ್ಚುವರಿ ಸೆಷನ್ಸ್ ನ್ಯಾ। ಹರ್ದೀಪ್ ಕೌರ್, ‘ಈ ಪ್ರಕರಣದ ತನಿಖೆಗೆ ಅರ್ಜಿದಾರ/ಆರೋಪಿಯ ಉಪಸ್ಥಿತಿ ಅಗತ್ಯ. ಆದರೆ ಸದ್ಯ ಅವರು ನೀಡಿರುವ ವಿಳಾಸದಲ್ಲಿಲ್ಲ. ಮೊಬೈಲ್ ಕೂಡ ಆಫ್ ಆಗಿದೆ. ಕೇಸ್‌ನ ಗಂಭೀರತೆಯನ್ನು ಪರಿಗಣಿಸಿ ಬೇಲ್ ತಿರಸ್ಕರಿಸಲಾಗಿದೆ’ ಎಂದರು.
ಇದನ್ನೂ ಓದಿ: ಪಾಕಿಸ್ತಾನ ಐಎಸ್‌ಐಗೆ ಸಿಮ್ ಕಾರ್ಡ್ ಪೂರೈಕೆ, ನೇಪಾಳಿ ಪ್ರಜೆ ದೆಹಲಿಯಲ್ಲಿ ಅರೆಸ್ಟ್, ನೇಪಾಳ ದಂಗೆಗೆ ಈತನೂ ಕಾರಣ!
8 ಕೋಟಿ ರು. ಫ್ರೀಜ್: ಅತ್ತ ಈ ಸ್ವಾಮಿಯ 18 ಬ್ಯಾಂಕ್ ಖಾತೆಗಳು ಮತ್ತು 28 ಎಫ್‌ಡಿಗಳಲ್ಲಿದ್ದ 8 ಕೋಟಿ ರು.ಅನ್ನು ಫ್ರೀಜ್ ಮಾಡಲಾಗಿದೆ ಎಂದು ಮಾಧ್ಯಮ ವರದಿಯೊಂದು ಹೇಳಿದೆ.
ಮತ್ತಷ್ಟು ಆರೋಪ
ಈ ನಡುವೆ ತಾನು ಸಂಚಾಲಕನಾಗಿದ್ದ ಶಿಕ್ಷಣ ಸಂಸ್ಥೆಯ ಬಡ ವಿದ್ಯಾರ್ಥಿನಿಯೊಬ್ಬಳಿಗೆ ಹೆಚ್ಚು ಶುಲ್ಕ ನೀಡುವಂತೆ ಸ್ವಾಮಿ ಬೆದರಿಸಿದ್ದ ಎಂಬ ಆರೋಪ ಕೇಳಿಬಂದಿದೆ. ‘ನಾನು ನಿಗದಿತ 60 ಸಾವಿರ ರು. ಶುಲ್ಕ ಕಟ್ಟಿದ್ದರೂ ಹೆಚ್ಚು ಶುಲ್ಕ ಕಟ್ಟುವಂತೆ ಕೇಳಿದ್ದ’ ಎಂದು ವಿದ್ಯಾರ್ಥಿನಿ ಆರೋಪಿಸಿದ್ದಾಳೆ.
ಇದನ್ನೂ ಓದಿ: ಸ್ವಾಮೀಜಿಯಿಂದಲೇ 15ಕ್ಕೂ ಹೆಚ್ಚು ವಿದ್ಯಾರ್ಥಿನಿಯರಿಗೆ ಕಿರುಕುಳ: ಕೇಸ್ ದಾಖಲಾಗುತ್ತಿದ್ದಂತೆ ಚೈತನ್ಯಾನಂದ ಸರಸ್ವತಿ ನಾಪತ್ತೆ
