Published : Jul 31, 2025, 06:51 AM ISTUpdated : Jul 31, 2025, 10:51 PM IST

India Latest News Live: ನಾಳೆಯಿಂದ ಎಲ್‌ಪಿಜಿ ಸಿಲಿಂಡರ್‌ ಮತ್ತಷ್ಟು ಅಗ್ಗ!

ಸಾರಾಂಶ

ಪಿಟಿಐ ಶ್ರೀಹರಿಕೋಟ: ಭಾರತ ಹಾಗೂ ಅಮೆರಿಕ ಮೊದಲ ಬಾರಿ ಜಂಟಿಯಾಗಿ ಅಭಿವೃದ್ಧಿಪಡಿಸಿದ ಅತ್ಯಾಧುನಿಕ ಹಾಗೂ ವಿಶ್ವದ ಅತಿ ದುಬಾರಿ ಭೂಸರ್ವೇಕ್ಷಣಾ ಉಪಗ್ರಹ 'ನಿರ್ಸಾ' ಬುಧವಾರ ಸಂಜೆ 5.40ಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆಯಾಗಿದೆ. ಈ ಮೂಲಕ ಶುಭಾಂಶು ಶುಕ್ಲಾ ಬಾಹ್ಯಾ ಕಾಶಯಾನದ ಬೆನ್ನಲ್ಲೇ, ಅಂತರಿಕ್ಷ ಕ್ಷೇತ್ರದಲ್ಲಿ ಭಾರತ ಮತ್ತೊಂದು ಮೈಲುಗಲ್ಲು ಸಾಧಿಸಿದೆ. 27.30 ಗಂಟೆಗಳ ಕ್ಷಣಗಣನೆ ಬಳಿಕ, ಇಸ್ರೋದ ಜಿಎಸ್‌ಎಲ್‌ವಿ-16 ರಾಕೆಟ್ ಸುಮಾರು 745 ಕಿ.ಮೀ. ದೂರ, 19 ನಿಮಿಷಗಳ ಕಾಲ ಹಾರಾಟ ನಡೆಸಿ ನಿಸಾರ್‌ಸಿಂಥೆಟಿಕ್ ಅಪರ್ಚ‌್ರ ರಾಡಾರ್‌ ಉಪಗ್ರಹವನ್ನು ಉದ್ದೇಶಿತ ಕಕ್ಷೆಗೆ ಸೇರಿಸಿದೆ. ಈ ಉಪಗ್ರಹದಲ್ಲಿನ ಎಸ್-ಬ್ಯಾಂಡ್ ಅನ್ನು ಒದಗಿಸಿದ್ದರೆ, ಎಲ್-ಬ್ಯಾಂಡ್ ಅನ್ನು ಇಸ್ರೋ ನಾಸಾ ಒದಗಿಸಿದೆ. ಕಾರಾಚರಣೆಯನ್ನು ಇಸ್ರೋ, ಕಕ್ಷೆ ಮತ್ತು ರಾಡಾರ್‌ನ ಕಾರ್ಯಾಚರಣೆಯನ್ನು ನಾಸಾ ವಹಿಸಿಕೊಂಡಿವೆ.

gas cylinder

10:51 PM (IST) Jul 31

ನಾಳೆಯಿಂದ ಎಲ್‌ಪಿಜಿ ಸಿಲಿಂಡರ್‌ ಮತ್ತಷ್ಟು ಅಗ್ಗ!

ಆಗಸ್ಟ್ 1 ರಿಂದ 19 ಕೆಜಿ ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ಬೆಲೆಯಲ್ಲಿ 33.50 ರೂ.ಗಳಷ್ಟು ಇಳಿಕೆ. ದೆಹಲಿಯಲ್ಲಿ ಹೊಸ ಬೆಲೆ 1631.50 ರೂ. ದೇಶೀಯ ಸಿಲಿಂಡರ್‌ಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ.
Read Full Story

10:26 PM (IST) Jul 31

ಬೆಂಗಳೂರಿನಲ್ಲಿ ಕಮರ್ಷಿಯಲ್‌ ಗ್ಯಾಸ್‌ ಟರ್ಬೈನ್‌ ಇಂಜಿನ್‌ ನಿರ್ಮಾಣ ಮಾಡಲಿರುವ Zomato ಸಂಸ್ಥಾಪಕನ ಏರೋಸ್ಪೇಸ್‌ ಕಂಪನಿ!

ಈ ಎಂಜಿನ್ ಕಂಪನಿಯ ಸಣ್ಣ ಟೇಕ್-ಆಫ್ ಮತ್ತು ಲ್ಯಾಂಡಿಂಗ್ ವಿಮಾನಗಳಿಗೆ ಶಕ್ತಿ ತುಂಬುವ ಉದ್ದೇಶವನ್ನು ಹೊಂದಿದೆ.

 

Read Full Story

10:22 PM (IST) Jul 31

ಯೂರಿಯಾ ಪೂರೈಕೆಯಲ್ಲಿ ಕೇಂದ್ರ ಸರ್ಕಾರದ ನಿರ್ಲಕ್ಷ್ಯ - ಸಚಿವ ಚಲುವರಾಯಸ್ವಾಮಿ ವಾಗ್ದಾಳಿ

ಬಿಜೆಪಿ ನಾಯಕರು ರೈತರ ವಿಚಾರದಲ್ಲೂ ರಾಜಕೀಯ ಮಾಡಿ ಆಟ ಆಡಲು ನೋಡುತ್ತಿದ್ದು, ಅದನ್ನು ರಾಜ್ಯ ಸರ್ಕಾರ ಸಹಿಸುವುದಿಲ್ಲ ಎಂದು ಕೃಷಿ ಸಚಿವ ಎನ್‌. ಚಲುವರಾಯಸ್ವಾಮಿ ಹೇಳಿದ್ದಾರೆ.

Read Full Story

10:00 PM (IST) Jul 31

ನಾಳೆಯಿಂದ UPI ಬಳಕೆಯಲ್ಲಿ ಆಗಲಿದೆ ಈ ಬದಲಾವಣೆಗಳು, ಎಚ್ಚರವಿರಲಿ!

ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (NPCI) 2025 ಆಗಸ್ಟ್ 1ರಿಂದ UPI ಪಾವತಿಗಳಿಗೆ ಹಲವಾರು ಹೊಸ ನಿಯಮಗಳನ್ನು ಜಾರಿಗೆ ತರುತ್ತಿದೆ. ಈ ಬದಲಾವಣೆಗಳು ವ್ಯವಸ್ಥೆಯ ಕಾರ್ಯಕ್ಷಮತೆ, ಪ್ರತಿಕ್ರಿಯೆ ಸಮಯ ಮತ್ತು ಡಿಜಿಟಲ್ ಪಾವತಿಗಳ ನಿಯಂತ್ರಣವನ್ನು ಸುಧಾರಿಸುವ ಗುರಿಯನ್ನು ಹೊಂದಿವೆ.
Read Full Story

09:59 PM (IST) Jul 31

ಪಡಿತರ ರೀತಿಯಲ್ಲಿ ರೈತರಿಗೆ ರಸಗೊಬ್ಬರ ವಿತರಿಸಿ - ಸಚಿವ ಸಂತೋಷ್ ಲಾಡ್ ಸಲಹೆ

ಪಡಿತರ ಚೀಟಿ ರೀತಿಯಲ್ಲೇ ರೈತರಿಗೆ ರಸಗೊಬ್ಬರ ಚೀಟಿ ವಿತರಿಸಲು ಕ್ರಮ ಕೈಗೊಳ್ಳುವಂತೆ ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಸಲಹೆ ನೀಡಿದ್ದಾರೆ.

Read Full Story

09:35 PM (IST) Jul 31

'ಟ್ರಂಪ್‌ ಶೇ.25ರಷ್ಟು ತೆರಿಗೆ ತಾತ್ಕಾಲಿಕ..' ಎಂದ ಪ್ರಸಿದ್ಧ ಬ್ರೋಕರೇಜ್‌ ಸಂಸ್ಥೆ

ಆಗಸ್ಟ್ 1 ರಿಂದ ಭಾರತೀಯ ಆಮದುಗಳ ಮೇಲೆ ಶೇ. 25 ರಷ್ಟು ಸುಂಕ ವಿಧಿಸಲು ಅಮೆರಿಕ ನಿರ್ಧರಿಸಿದೆ. ವಲಯವಾರು ವಿನಾಯಿತಿಗಳನ್ನು ಗಣನೆಗೆ ತೆಗೆದುಕೊಂಡು, ಪರಿಣಾಮಕಾರಿ ಸುಂಕ ದರ ಶೇ.20 ರಷ್ಟಿರಬಹುದು ಎಂದು ನೊಮುರಾ ಅಂದಾಜಿಸಿದೆ. ಭಾರತವು ಚೀನಾ ಪ್ಲಸ್ ಒನ್ ತಂತ್ರದ ಫಲಾನುಭವಿಯಾಗಿ ಉಳಿಯುವ ನಿರೀಕ್ಷೆಯಿದೆ.
Read Full Story

09:01 PM (IST) Jul 31

ಕಮಿಷನ್‌ಗಾಗಿ ಕಾಳಸಂತೆಯಲ್ಲಿ ರಸಗೊಬ್ಬರ ಮಾರಾಟ - ಶ್ರೀರಾಮುಲು ಆರೋಪ

ರಾಜ್ಯದಲ್ಲಿ ಯೂರಿಯಾ ರಸಗೊಬ್ಬರಕ್ಕಾಗಿ ಹಾಹಾಕಾರ ಉಂಟಾಗಿದ್ದು, ಇತ್ತ ಕಾಂಗ್ರೆಸ್ ನಾಯಕರು ಸಿಎಂ ಕುರ್ಚಿಯಾಗಿ ಪೈಪೋಟಿಗೆ ಇಳಿದಿದ್ದಾರೆ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಕಾಂಗ್ರೆಸ್ ವಿರುದ್ಧ ಹಾರಿಹಾಯ್ದರು.

Read Full Story

08:36 PM (IST) Jul 31

ಫ್ರೀಯಾಗಿ ಕೈಗೆ ಸಿಕ್ಕಷ್ಟು ಸೇಬುಹಣ್ಣು ಎತ್ತಿಕೊಂಡು ಹೋದ ಜನ; ಲಾರಿ ಬಿದ್ದಿದ್ದೇ ಇವರಿಗೆ ಹಬ್ಬವಾಯ್ತು!

ಶಿರಾ ತಾಲೂಕಿನಲ್ಲಿ ಸೇಬು ತುಂಬಿದ ಲಾರಿ ಪಲ್ಟಿಯಾಗಿ, ರಸ್ತೆಗೆ ಚೆಲ್ಲಾಪಿಲ್ಲಿಯಾದ ಹಣ್ಣುಗಳನ್ನು ಜನರು ಉಚಿತವಾಗಿ ಎತ್ತಿಕೊಂಡು ಹೋದ ಘಟನೆ ನಡೆದಿದೆ. ಚಾಲಕನ ನಿಯಂತ್ರಣ ತಪ್ಪಿ ಈ ಅಪಘಾತ ಸಂಭವಿಸಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಸೇಬುಗಳು ಹಾನಿಗೊಳಗಾಗಿವೆ.
Read Full Story

08:27 PM (IST) Jul 31

ಭೂಕುಸಿತದ ಭೀತಿಯಲ್ಲಿ ವೃದ್ಧೆಯ ಕಣ್ಣೀರಿನ ಮನವಿ - ಕೊಡಗಿನಲ್ಲಿ ಮತ್ತೊಂದು ಹೃದಯ ವಿದ್ರಾವಕ ಘಟನೆ

ಭಾರೀ ಮಳೆಗೆ ಭೂಕುಸಿತವಾಗಿದ್ದರಿಂದ ವಾಹನಗಳ ಓಡಾಟಕ್ಕೆ ಸಮಸ್ಯೆಯಾಗಬಾರದೆಂದು ಹೆದ್ದಾರಿ ಕುಸಿಯದಂತೆ ಕೋಟ್ಯಂತರ ರೂಪಾಯಿಯಲ್ಲಿ ತಡೆಗೋಡೆ ನಿರ್ಮಿಸಲಾಗಿತ್ತು.

Read Full Story

08:23 PM (IST) Jul 31

ನರ್ಸ್ ನಿಮಿಷಾ ಪ್ರಿಯಾ ಪ್ರಕರಣ - ಕ್ಷಮಿಸುವಂತೆ ಕೇಳಿಕೊಂಡು ಕಣ್ಣೀರಿಟ್ಟ ಚಿಕ್ಕ ಮಗಳು

ಯೆಮೆನ್ ಜೈಲಿನಲ್ಲಿರುವ ನಿಮಿಷಾ ಪ್ರಿಯಾ ಪ್ರಕರಣದಲ್ಲಿ ಕೆ.ಎ. ಪಾಲ್ ಕ್ಷಮೆ ಕೇಳಿದ್ದಾರೆ. ತಲಾಲ್ ಕುಟುಂಬದ ಷರತ್ತುಗಳನ್ನು ಪೂರೈಸಲು ಸಿದ್ಧ ಎಂದಿದ್ದಾರೆ. ನಿಮಿಷಾ ಪ್ರಿಯಾಳ ಮಗಳು ಭಾವುಕ ಮನವಿ ಮಾಡಿದ್ದಾಳೆ.
Read Full Story

08:10 PM (IST) Jul 31

ಫೋನ್‌ಪೇ ಮೂಲಕ ಹಣ ಕಳಿಸಿದ್ದಕ್ಕೆ ಮಗಳನ್ನೇ ಕಳೆದುಕೊಂಡ ಅಪ್ಪನ ಗೋಳು, ನೀವೊಮ್ಮೆ ಕೇಳಿ!

ಫೊನ್ ಪೇ, ಗೂಗಲ್ ಪೇ ಮೂಲಕ ಹೆಣ್ಣು ಮಕ್ಕಳಿಗೆ ಹಣ ಹಾಕಿಸೋ ಮುನ್ನ ಎಚ್ಚರ. ಮಗಳ ಮೊಬೈಲ್ ನಂಬರ್ ಕೊಟ್ಟು ಹಣ ಹಾಕಿಸಿದ ತಪ್ಪಿಗೆ, ಇದೀಗ ಅಪ್ಪ ಮಗಳನ್ನು ಶಾಶ್ವತವಾಗಿ ಕಳೆದುಕೊಂಡು ಕಣ್ಣೀರು ಹಾಕುತ್ತಿದ್ದಾರೆ.

Read Full Story

08:01 PM (IST) Jul 31

ಹುಬ್ಬಳ್ಳಿಯಲ್ಲಿ ಆಧಾರ್ ಸೇವಾ ಕೇಂದ್ರವನ್ನು ಮೇಲ್ದರ್ಜೆಗೇರಿಸಿ - ಪ್ರಲ್ಹಾದ್ ಜೋಶಿ ಮನವಿ

ಕೇಂದ್ರ ಸಚಿವ ಜೋಶಿ ಅವರು ಹುಬ್ಬಳ್ಳಿಯಲ್ಲಿ ಈಗಿರುವ ʼಆಧಾರ್ ಸೇವಾ ಕೇಂದ್ರʼವನ್ನು ಮೇಲ್ದರ್ಜೆಗೇರಿಸಬೇಕು. ಆರ್‌ಎಫ್‌ಪಿ (ರಿಕ್ವೆಸ್ಟ್‌ ಫಾರ್‌ ಪ್ರೊಪಸಲ್‌) ಕೇಂದ್ರವಾಗಬೇಕು ಎಂದು ಕೋರಿದರು.

Read Full Story

07:52 PM (IST) Jul 31

ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ ಪ್ರಕರಣ - ಅಮಾನತ್ತಾದ ಐಪಿಎಸ್ ಅಧಿಕಾರಿಗಳಿಗೆ ಮತ್ತೆ ಹೊಸ ಹುದ್ದೆ ನಿಯೋಜನೆ

ಆರ್‌ಸಿಬಿ ವಿಜಯೋತ್ಸವ ಕಾರ್ಯಕ್ರಮದ ಕಾಲ್ತುಳಿತ ಪ್ರಕರಣದಲ್ಲಿ ಅಮಾನತುಗೊಂಡಿದ್ದ ಐಪಿಎಸ್ ಅಧಿಕಾರಿಗಳ ಅಮಾನತು ರದ್ದಾಗಿ ಹೊಸ ಹುದ್ದೆಗಳಿಗೆ ನಿಯೋಜನೆಗೊಂಡಿದ್ದಾರೆ. ಈ ಕ್ರಮವು ಪೊಲೀಸ್ ಇಲಾಖೆಯಲ್ಲಿ ಚರ್ಚೆಗೆ ಗ್ರಾಸವಾಗಿದೆ.
Read Full Story

07:48 PM (IST) Jul 31

ಪಾಕಿಸ್ತಾನವನ್ನು ಧ್ವಂಸ ಮಾಡಿದ್ದ ಇಸ್ರೇಲ್‌ ನಿರ್ಮಿತ LoRa, Sea Breaker, Rampage ಕ್ಷಿಪಣಿ ಇನ್ನು ಭಾರತದಲ್ಲೇ ಉತ್ಪಾದನೆ!

ಭಾರತೀಯ ವಾಯುಪಡೆ ಇಸ್ರೇಲ್‌ನಿಂದ ಏರ್ ಲೋರಾ ಮತ್ತು ಸೀ ಬ್ರೇಕರ್ ಕ್ಷಿಪಣಿಗಳನ್ನು ಖರೀದಿಸುವ ಮಾತುಕತೆಗಳನ್ನು ಪೂರ್ಣಗೊಳಿಸಿದೆ. ರಾಂಪೇಜ್ ಕ್ಷಿಪಣಿಯ ಯಶಸ್ಸಿನ ನಂತರ ಈ ಖರೀದಿ ಪ್ರಕ್ರಿಯೆ ಆರಂಭವಾಗಿದೆ. ಇಸ್ರೇಲ್ ಈ ಕ್ಷಿಪಣಿ ತಂತ್ರಜ್ಞಾನವನ್ನು ಭಾರತಕ್ಕೆ ವರ್ಗಾಯಿಸಲು ಸಿದ್ಧವಾಗಿದೆ.
Read Full Story

07:26 PM (IST) Jul 31

ಮೋದಿ, ಅಮಿತ್ ಶಾ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ - ಸಚಿವ ದಿನೇಶ್‌ ಗುಂಡೂರಾವ್

ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್ ಹೇಳಿದರು.

Read Full Story

07:23 PM (IST) Jul 31

ಸಾರ್ವಜನಿಕರ ಗಮನಕ್ಕೆ; ಈ ಎರಡು ದಿನ ಅಂಚೆ ಕಚೇರಿ ಸೇವೆ ಇರಲ್ಲ, ಇಲ್ಲಿದೆ ಮಾಹಿತಿ

Post Office Service: ಹೊಸ ಡಿಜಿಟಲ್ ಸಾಫ್ಟ್‌ವೇರ್ ಬಿಡುಗಡೆಗೆ ಅಂಚೆ ಇಲಾಖೆ ಸಜ್ಜಾಗುತ್ತಿರುವುದರಿಂದ, ಆಯ್ದ ಸ್ಥಳಗಳಲ್ಲಿನ ಅಂಚೆ ಕಚೇರಿಗಳು ಗ್ರಾಹಕ ವ್ಯವಹಾರಗಳಿಗೆ ಮುಚ್ಚಲ್ಪಡುತ್ತವೆ.

Read Full Story

07:14 PM (IST) Jul 31

ಕೆಂಪೇಗೌಡರು ನಿರ್ಮಿಸಿದ ಬೆಂಗಳೂರು ವಿಶ್ವಕ್ಕೆ ಮಾದರಿ - ಸಚಿವ ಕೆ.ವೆಂಕಟೇಶ್

ನಾಡಪ್ರಭು ಕೆಂಪೇಗೌಡರು ನಿರ್ಮಿಸಿದ ಬೆಂಗಳೂರು ವಿಶ್ವಕ್ಕೆ ಮಾದರಿಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಹೇಳಿದರು.

Read Full Story

07:02 PM (IST) Jul 31

ಅಮೆರಿಕವನ್ನ ಖುಷಿಪಡಿಸಲು, 70 ಕೋಟಿ ರೈತರನ್ನ ಉಪವಾಸ ಇಡೋಕೆ ಆಗಲ್ಲ - ಕಾಂಗ್ರೆಸ್‌ ಸಂಸದ ಶಶಿ ತರೂರ್‌

ಭಾರತದ ಮೇಲೆ ಶೇ. 25ರಷ್ಟು ತೆರಿಗೆ ಹಾಕಿರುವ ಕ್ರಮವನ್ನು ಟೀಕಿಸಿರುವ ಕಾಂಗ್ರೆಸ್‌ ಸಂಸದ ಶಶಿ ತರೂರ್‌, ಅಮೆರಿಕವನ್ನ ಖುಷಿಪಡಿಸಲು 70 ಕೋಟಿ ರೈತರನ್ನ ಉಪವಾಸ ಇಡೋಕೆ ಆಗಲ್ಲ ಎಂದಿದ್ದಾರೆ.

 

Read Full Story

06:54 PM (IST) Jul 31

ಮೆಟ್ರೋ ನಿಲ್ದಾಣಗಳಲ್ಲಿ ನಂದಿನಿ ಕೇಂದ್ರಗಳು - ಬಮುಲ್ ಅಧ್ಯಕ್ಷ ಡಿ.ಕೆ.ಸುರೇಶ್

ಮೆಟ್ರೋ ನಿಲ್ದಾಣಗಳಲ್ಲಿ ನಂದಿನ ಕೇಂದ್ರ ತೆರೆಯುವ ವಿಚಾರವಾಗಿ ಸ್ಥಳ ಪರೀಶಿಲನೆ ನಡೆಸಲಾಗುತ್ತಿದ್ದು, ಇದಾದ ನಂತರ ಬಿಎಂಆರ್‌ಸಿಎಲ್ ಜೊತೆ ಒಪ್ಪಂದ ಮಾಡಿಕೊಳ್ಳಲಾಗುವುದು ಎಂದು ಬಮುಲ್ ಅಧ್ಯಕ್ಷರಾದ ಡಿ.ಕೆ.ಸುರೇಶ್ ತಿಳಿಸಿದರು.

Read Full Story

06:36 PM (IST) Jul 31

11 ವರ್ಷಗಳ ಪ್ರೀತಿ, ಮದುವೆಗೂ ಮುನ್ನ ಗರ್ಭಿಣಿ - ದಿವ್ಯಾ ಸಾವಿಗೆ ಕಾರಣವಾಯ್ತಾ ಗರ್ಭ ನಿರೋಧಕ ಮಾತ್ರೆ!

ಹುಬ್ಬಳ್ಳಿಯಲ್ಲಿ 11 ವರ್ಷಗಳ ಪ್ರೇಮ ಸಂಬಂಧ ದುರಂತ ಅಂತ್ಯ ಕಂಡಿದೆ. ಮದುವೆಗೆ ಮುನ್ನ ಗರ್ಭಿಣಿಯಾಗಿದ್ದ ಯುವತಿ ದಿವ್ಯಾ ಸಲವಾದಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಅಬಾರ್ಷನ್ ಮಾತ್ರೆ ನೀಡಿದ್ದೇ ಸಾವಿಗೆ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

Read Full Story

06:31 PM (IST) Jul 31

ಮಿನಿಮಮ್‌ ಬ್ಯಾಲೆನ್ಸ್‌ ಇರಿಸಿಕೊಳ್ಳದ ಕಾರಣಕ್ಕೆ ಕಳೆದ 5 ವರ್ಷದಲ್ಲಿ ಗ್ರಾಹಕರಿಂದ 9 ಸಾವಿರ ಕೋಟಿ ವಸೂಲಿ!

ಕಳೆದ ಐದು ವರ್ಷಗಳಲ್ಲಿ 11 ಸರ್ಕಾರಿ ಬ್ಯಾಂಕುಗಳು ಕನಿಷ್ಠ ಬ್ಯಾಲೆನ್ಸ್ ಕಾಯ್ದುಕೊಳ್ಳದ ಗ್ರಾಹಕರಿಂದ ಸುಮಾರು 9,000 ಕೋಟಿ ರೂ. ದಂಡ ವಸೂಲಿ ಮಾಡಿವೆ. ಜನ ಧನ ಖಾತೆ, ಮೂಲ ಉಳಿತಾಯ ಖಾತೆ ಮತ್ತು ಸಂಬಳ ಖಾತೆಗಳಿಗೆ ವಿನಾಯಿತಿ ನೀಡಲಾಗಿದೆ.
Read Full Story

05:56 PM (IST) Jul 31

ಆರ್.ಅಶೋಕ್‌ಗೆ ರೈತರ ಬಗ್ಗೆ ಏನು ಗೊತ್ತಿಲ್ಲ, ಸುಮ್ಮನೆ ಮಾತನಾಡ್ತಾರೆ - ಸಚಿವ ಚಲುವರಾಯಸ್ವಾಮಿ

ರಾಜ್ಯದಲ್ಲಿ ರಸಗೊಬ್ಬರ ಕೊರತೆ ವಿಚಾರದಲ್ಲಿ ಜಟಾಪಟಿ ಶುರುವಾಗಿದ್ದು, ಬಿಜೆಪಿ‌ ವಿರುದ್ಧ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

Read Full Story

05:51 PM (IST) Jul 31

ನಿಮ್ಮ ಅಕೌಂಟ್‌ಗೆ ಈ ದಿನ ಬೀಳಲಿದೆ 20ನೇ ಕಂತಿನ ಪಿಎಂ ಕಿಸಾನ್‌ ಸಮ್ಮಾನ್‌ ನಿಧಿ!

ಆಗಸ್ಟ್ 2 ರಂದು ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 20ನೇ ಕಂತು ಬಿಡುಗಡೆಯಾಗಲಿದೆ. 9.7 ಕೋಟಿಗೂ ಹೆಚ್ಚು ರೈತರಿಗೆ ತಲಾ 2,000 ರೂ.ಗಳನ್ನು ನೇರವಾಗಿ ಖಾತೆಗೆ ವರ್ಗಾಯಿಸಲಾಗುವುದು. ಒಟ್ಟು 20,500 ಕೋಟಿ ರೂ.ಗಳನ್ನು ವಿತರಿಸಲಾಗುತ್ತಿದೆ.
Read Full Story

05:41 PM (IST) Jul 31

ಸರ್ಕಾರದ ಗೋಮಾಳ ಭೂಮಿ ಹೆಂಡತಿ ಹೆಸರಿಗೆ ಮಾಡಿಕೊಂಡ ಶಾಸಕ ಬಾಲಕೃಷ್ಣ; ಲೋಕಾಯುಕ್ತಗೆ ಎನ್.ಆರ್. ರಮೇಶ್ ದೂರು!

ಮಾಗಡಿ ಶಾಸಕ ಎಚ್.ಸಿ. ಬಾಲಕೃಷ್ಣ ಅವರು 26 ಎಕರೆ ಸರ್ಕಾರಿ ಗೋಮಾಳ ಭೂಮಿಯನ್ನು ಕಬಳಿಸಿ ಪತ್ನಿ ಹೆಸರಿಗೆ ನೋಂದಣಿ ಮಾಡಿಸಿಕೊಂಡಿದ್ದಾರೆ ಎಂದು ಬಿಜೆಪಿ ಮುಖಂಡ ಎನ್.ಆರ್. ರಮೇಶ್ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ. ಒಟ್ಟು 108 ಎಕರೆ ಸರ್ಕಾರಿ ಗೋಮಾಳ ಭೂಮಿ ಕಬಳಿಕೆಯಾಗಿರುವ ಬಗ್ಗೆ ದೂರಿನಲ್ಲಿ ಉಲ್ಲೇಖವಿದೆ.

Read Full Story

05:27 PM (IST) Jul 31

ರಮ್ಯಾ ಮೆಸೇಜ್ ತಪ್ಪು, ಪ್ರಥಮ್‌ಗೆ ಮಾತಿನ ಹಿಡಿತವಿಲ್ಲ - ದರ್ಶನ್ ಸರ್ ಪರ ನಿಲ್ಲುತ್ತೇನೆ ಎಂದ ಧ್ರುವ ಸರ್ಜಾ

ಪ್ರಥಮ್‌ ಮತ್ತು ದರ್ಶನ್‌ ಫ್ಯಾನ್ಸ್‌ ಮಧ್ಯೆ ವರ್ಷಗಳ ಕಾಲದಿಂದಲೂ ಈ ವಾಗ್ಯುದ್ಧ, ಸೋಷಿಯಲ್‌ ಮೀಡಿಯಾ ವಾರ್‌ ನಡೆಯುತ್ತಲೇ ಇದೆ. ಇದೀಗ ಈ ವಿಷಯಕ್ಕೆ ನಟ ಧ್ರುವ ಸರ್ಜಾ ಎಂಟ್ರಿ ಕೊಟ್ಟಿದ್ದಾರೆ.

Read Full Story

05:24 PM (IST) Jul 31

ಹೌದು ಟ್ರಂಪ್‌ ಹೇಳಿದ್ದು ನಿಜ, ಭಾರತದ ಆರ್ಥಿಕತೆ ಸತ್ತಿದೆ ಎಂದ ರಾಹುಲ್‌ ಗಾಂಧಿ!

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಆರ್ಥಿಕತೆಯನ್ನು 'ಸತ್ತ ಆರ್ಥಿಕತೆ' ಎಂದು ಕರೆದ ಹೇಳಿಕೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬೆಂಬಲ ವ್ಯಕ್ತಪಡಿಸಿದ್ದಾರೆ. ಮೋದಿ ಸರ್ಕಾರದ ನೀತಿಗಳಿಂದಾಗಿ ದೇಶದ ಆರ್ಥಿಕತೆ ಹದಗೆಟ್ಟಿದೆ  ಎಂದಿದ್ದಾರೆ.

Read Full Story

05:04 PM (IST) Jul 31

ನಟ ಪ್ರಥಮ್‌ಗೆ ಡ್ರ್ಯಾಗರ್ ಇಟ್ಟು ಬೆದರಿಕೆ ಪ್ರಕರಣ - ಯಶಸ್ವಿನಿ, ಬೇಕರಿ ರಘುಗೆ ಷರತ್ತುಬದ್ಧ ಜಾಮೀನು

ನಟ ಪ್ರಥಮ್‌ಗೆ ಬೆದರಿಕೆ ಹಾಕಿದ ಆರೋಪದ ಮೇಲೆ ರೌಡಿಶೀಟರ್ ಯಶಸ್ವಿನಿ ಮತ್ತು ಬೇಕರಿ ರಘು ಬಂಧನಕ್ಕೊಳಗಾಗಿದ್ದರು. ದೊಡ್ಡಬಳ್ಳಾಪುರ ನ್ಯಾಯಾಲಯ ಇಬ್ಬರಿಗೂ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಯಶಸ್ವಿನಿ ಆರೋಪಗಳನ್ನು ನಿರಾಕರಿಸಿದ್ದಾರೆ.
Read Full Story

05:04 PM (IST) Jul 31

ಉಡಾವಣೆಯಾದ 14 ಸೆಕೆಂಡುಗಳಲ್ಲಿ ಪತನಗೊಂಡ ಆಸ್ಟ್ರೇಲಿಯಾದ ಮೊದಲ ದೇಶೀಯ ನಿರ್ಮಿತ ರಾಕೆಟ್

ಆಸ್ಟ್ರೇಲಿಯಾದ ಮೊದಲ ದೇಶೀಯ ನಿರ್ಮಿತ ರಾಕೆಟ್, ಎರಿಸ್, ಉಡಾವಣೆಯಾದ ಕೆಲವೇ ಕ್ಷಣಗಳಲ್ಲಿ ಪತನಗೊಂಡಿದೆ. ಸಣ್ಣ ಉಪಗ್ರಹಗಳನ್ನು ಕಕ್ಷೆಗೆ ಕೊಂಡೊಯ್ಯುವ ಉದ್ದೇಶದಿಂದ ಈ ರಾಕೆಟ್ ಅನ್ನು ಅಭಿವೃದ್ಧಿಪಡಿಸಲಾಗಿತ್ತು. ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Read Full Story

05:00 PM (IST) Jul 31

ನಾಡು ಕಂಡ ಅಪರೂಪದ ಸಮಾಜ ಸುಧಾರಕಿ, ತೆರೆಮೆರೆ ಸಾಧಕಿ ಪ್ರಮಿಳಾ ತಾಯಿ ಮೇಧೆ ನಿಧನ - ದೇಹ ದಾನ

ಜೀವನದ ಉದ್ದಕ್ಕೂ ಸಮಾಜದ ಉದ್ಧಾರಕ್ಕಾಗಿ, ಮಹಿಳಾ ಸಬಲೀಕರಣಕ್ಕಾಗಿ ಶ್ರಮಿಸಿ ತೆರೆಮರೆಯಲ್ಲಿಯೇ ಉಳಿದ ರಾಷ್ಟ್ರ ಸೇವಿಕಾ ಸಮಿತಿಯ ಮಾಜಿ ಪ್ರಮುಖ ಸಂಚಾಲಿಕಾ ಪ್ರಮಿಳಾ ತಾಯಿ ಮೇಧೆ ನಿಧನರಾಗಿದ್ದಾರೆ. ಅವರ ಬಗ್ಗೆ ಒಂದಿಷ್ಟು ಮಾಹಿತಿ...

 

Read Full Story

04:44 PM (IST) Jul 31

ತಜ್ಞ ವೈದ್ಯರಿಗೆ ಶೀಘ್ರದಲ್ಲಿ ಸ್ಥಳ ನಿಯುಕ್ತಿ - ಸಚಿವ ದಿನೇಶ್ ಗುಂಡೂರಾವ್

ರಾಜ್ಯದಲ್ಲಿ ಖಾಲಿ ಇರುವ ತಜ್ಞ ವೈದ್ಯರ ನೇಮಕಾತಿಯ ಪ್ರಕ್ರಿಯೆ ಈಗಾಗಲೇ ಮುಕ್ತಾಯಗೊಂಡಿದ್ದು, ಅವರಿಗೆ ಶೀಘ್ರದಲ್ಲಿ ಕೌನ್ಸೆಲಿಂಗ್ ಆರಂಭವಾಗಲಿದೆ.

Read Full Story

04:28 PM (IST) Jul 31

ತಿಂಗಳಿಗೆ 35,000 ರೂ. ಸಂಬಳ, ಕೆಲಸಕ್ಕೆ ಬಂದ 2 ನಿಮಿಷದಲ್ಲಿಯೇ ಏನು ಮಾಡದೇ ಹೋಗುವುದು

Government Employee and Job: ಓರ್ವ ಸರ್ಕಾರಿ ಉದ್ಯೋಗಿ ಕೇವಲ ಎರಡು ನಿಮಿಷ ಕೆಲಸಕ್ಕೆ ಹಾಜರಾಗಿ ತಿಂಗಳಿಗೆ 35,000 ರೂ. ಸಂಬಳ ಪಡೆಯುತ್ತಿದ್ದ. ಎರಡು ವರ್ಷಗಳ ಕಾಲ ಈ ವಂಚನೆ ನಡೆದಿದ್ದು, ಸಿಸಿಟಿವಿ ದೃಶ್ಯಾವಳಿಗಳಿಂದ ಬಯಲಾಗಿದೆ.

Read Full Story

04:25 PM (IST) Jul 31

ಹಿಟ್‌ & ರನ್‌ ಕೇಸ್‌, ವಿದ್ಯಾರ್ಥಿಯ ಸಾವಿನ ಬೆನ್ನಲ್ಲೇ ಪ್ರಖ್ಯಾತ ನಟಿ ನಂದಿನಿ ಕಶ್ಯಪ್‌ ಅರೆಸ್ಟ್‌!

ಗುವಾಹಟಿಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಯುವಕ ಸಾವನ್ನಪ್ಪಿದ ಪ್ರಕರಣದಲ್ಲಿ ಅಸ್ಸಾಮಿ ನಟಿ ನಂದಿನಿ ಕಶ್ಯಪ್‌ರನ್ನು ಬಂಧಿಸಲಾಗಿದೆ. ಅತಿವೇಗದ ಚಾಲನೆ ಮತ್ತು ಡಿಕ್ಕಿಯ ನಂತರ ಪರಾರಿಯಾಗಲು ಯತ್ನಿಸಿದ ಆರೋಪ ಅವರ ಮೇಲಿದೆ. 

Read Full Story

04:15 PM (IST) Jul 31

ಭೂಕಂಪಕ್ಕೆ ಆಪರೇಷನ್ ಥಿಯೇಟರ್ರೇ ನಡುಗುತ್ತಿದ್ದರೂ ಸರ್ಜರಿ ಮುಂದುವರೆಸಿದ ವೈದ್ಯರು - ವೀಡಿಯೋ ವೈರಲ್

ರಷ್ಯಾದಲ್ಲಿ ಸಂಭವಿಸಿದ ಭೂಕಂಪನದನಡುವೆ ಆಸ್ಪತ್ರೆಯೊಂದರಲ್ಲಿ ವೈದ್ಯರು ಶಾಂತವಾಗಿ ಶಸ್ತ್ರಚಿಕಿತ್ಸೆ ಮುಂದುವರೆಸಿದ ವೀಡಿಯೋವೊಂದು ಈಗ ವೈರಲ್ ಆಗಿದೆ. 

Read Full Story

03:46 PM (IST) Jul 31

2024ರ ಮೈಸೂರು-ದರ್ಭಂಗಾ ಭಾಗಮತಿ ಎಕ್ಸ್‌ಪ್ರೆಸ್‌ ರೈಲು ದುರಂತ ವಿಧ್ವಂಸಕ ಕೃತ್ಯ ಎಂದ ತನಿಖೆ!

ಕಳೆದ ವರ್ಷದ ಅಕ್ಟೋಬ್‌ 11 ರಂದು ಮೈಸೂರು-ದರ್ಭಂಗಾ ಭಾಗಮತಿ ಎಕ್ಸ್‌ಪ್ರೆಸ್‌ ತಮಿಳುನಾಡಿನಲ್ಲಿ ದುರಂತಕ್ಕೆ ಈಡಾಗಿತ್ತು. ಇದರ ತನಿಖೆ ನಡೆಸಿದ ರೈಲ್ವೆ ಇಲಾಖೆ ಇದು ವಿಧ್ವಂಸಕ ಕೃತ್ಯ ಎಂದು ತಿಳಿಸಿದೆ.

 

Read Full Story

03:20 PM (IST) Jul 31

AIನಿಂದ ಆತಂಕದಲ್ಲಿರುವ 40 ಉದ್ಯೋಗ - ಮೈಕ್ರೋಸಾಫ್ಟ್ ವರದಿಯಲ್ಲಿ ಶಾಕಿಂಗ್ ಮಾಹಿತಿ ಬಹಿರಂಗ

ಮೈಕ್ರೋಸಾಫ್ಟ್‌ನ ಅಧ್ಯಯನ ವರದಿಯು AI ನಿಂದ ಅಪಾಯದಲ್ಲಿರುವ 40 ಉದ್ಯೋಗಗಳನ್ನು ಪಟ್ಟಿ ಮಾಡಿದೆ. AI ವಿರೋಧಿಸುವ ಬದಲು ಅದರೊಂದಿಗೆ ಹೇಗೆ ಕೆಲಸ ಮಾಡಬೇಕೆಂದು ಕಲಿಯುವಂತೆ ವರದಿ ಸಲಹೆ ನೀಡಿದೆ.

Read Full Story

03:14 PM (IST) Jul 31

'ಭಾರತದ ಆರ್ಥಿಕತೆ ಸತ್ತು ಹೋಗಿದೆ..' ಎಂದ ಟ್ರಂಪ್; ರಷ್ಯಾದೊಂದಿಗೆ ವ್ಯಾಪಾರ ಒಪ್ಪಂದಿಂದ ಯುಎಸ್‌ಗೆ ಉರಿ?

ರಷ್ಯಾ ಜೊತೆಗಿನ ಭಾರತದ ವ್ಯಾಪಾರ ಒಪ್ಪಂದಗಳು ಮತ್ತು ವ್ಯವಹಾರಗಳು ಟ್ರಂಪ್‌ಗೆ ಸಿಟ್ಟು ತರಿಸಿವೆ.

Read Full Story

02:55 PM (IST) Jul 31

ಓದೋಕು ಬರಲ್ಲ, ಬರೆಯೋಕು ಗೊತ್ತಿಲ್ಲ - ಸರ್ಕಾರಿ ಶಾಲೆಯ ಇಂಗ್ಲೀಷ್ ಶಿಕ್ಷಕನ ವೀಡಿಯೋ ಭಾರಿ ವೈರಲ್

ಛತ್ತೀಸ್‌ಗಢದ ಸರ್ಕಾರಿ ಶಾಲೆಯೊಂದರ ಶಿಕ್ಷಕರೊಬ್ಬರುಇಂಗ್ಲಿಷ್‌ನಲ್ಲಿ 11 ಮತ್ತು 19 ಬರೆಯಲು ಮತ್ತು ಉಚ್ಚರಿಸಲು ಪರದಾಡುತ್ತಿರುವ ಘಟನೆಯ ವೀಡಿಯೋವೊಂದು ವೈರಲ್ ಆಗಿದ್ದು, ಶಿಕ್ಷಣ ವ್ಯವಸ್ಥೆಯ ಬಗ್ಗೆ ಕಳವಳ ಮೂಡಿಸಿದೆ.

Read Full Story

02:13 PM (IST) Jul 31

ಪತ್ನಿ, ಅತ್ತೆಯನ್ನು ಮನೆ ಹಿಂದೆಯೇ ಹೂತು ಹಾಕಿ ಪೊಲೀಸರಿಗೆ ಮಿಸ್ಸಿಂಗ್ ಕಂಪ್ಲೇಂಟ್ ಕೊಟ್ಟ ಅಳಿಯ

ಮಯೂರ್‌ಭಂಜ್‌ನಲ್ಲಿ ಪತ್ನಿ ಹಾಗೂ ಅತ್ತೆಯನ್ನು ಕೊಲೆಗೈದ ವ್ಯಕ್ತಿಯೊಬ್ಬ ತೋಟದಲ್ಲಿ ಶವ ಹೂತುಹಾಕಿ ಬಾಳೆಗಿಡ ನೆಟ್ಟ ಘಟನೆ ಬೆಳಕಿಗೆ ಬಂದಿದೆ. ಕೌಟುಂಬಿಕ ಕಲಹ ಹತ್ಯೆಗೆ ಕಾರಣ ಎನ್ನಲಾಗಿದೆ.
Read Full Story

01:53 PM (IST) Jul 31

2008 Malegaon blast case - ಎಲ್ಲಾ ಆರೋಪಿಗಳು ಖುಲಾಸೆ, 'ಕೇಸರಿ ಭಯೋತ್ಪಾದನೆ' ಎಂಬ ಕಾಂಗ್ರೆಸ್‌ನ ದುಷ್ಟ ಪ್ರಯತ್ನ ವಿಫಲ

ಮಾಲೆಗಾಂವ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಎಲ್ಲಾ ಏಳು ಆರೋಪಿಗಳನ್ನು ಖುಲಾಸೆಗೊಳಿಸಿದ್ದಕ್ಕೆ ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಪ್ರತಿಕ್ರಿಯಿಸಿದ್ದಾರೆ. ಕೇಸರಿ ಭಯೋತ್ಪಾದನೆಯನ್ನು ಸೃಷ್ಟಿಸುವ ಕಾಂಗ್ರೆಸ್‌ನ ದುಷ್ಟ ಪ್ರಯತ್ನ ವಿಫಲವಾಗಿದೆ ಎಂದು ಅವರು ಹೇಳಿದ್ದಾರೆ. 

Read Full Story

01:04 PM (IST) Jul 31

US-Pakistan Oil Deal - ಯಾರಿಗೊತ್ತು ಭವಿಷ್ಯದಲ್ಲಿ ಪಾಕಿಸ್ತಾನವೇ ಭಾರತಕ್ಕೆ ತೈಲ ಮಾರಾಟ ಮಾಡಬಹುದು - ಟ್ರಂಪ್ ಹೀಗೆ ಹೇಳಿದ್ದು ಏಕೆ?

ಅಮೆರಿಕಾ ಅಧ್ಯಕ್ಷ ಟ್ರಂಪ್ ಪಾಕಿಸ್ತಾನದ ತೈಲ ನಿಕ್ಷೇಪ ಅಭಿವೃದ್ಧಿಗೆ ಸಹಕಾರ ನೀಡುವುದಾಗಿ ಘೋಷಿಸಿದ್ದಾರೆ. ಭಾರತಕ್ಕೆ ತೈಲ ಮಾರಾಟದ ಸುಳಿವು ನೀಡಿದ್ದಾರೆ. ಈ ಘೋಷಣೆ ಭಾರತ-ಪಾಕ್ ಸಂಬಂಧ ಮತ್ತು ಯುಎಸ್ ನ Geopolitical game ಬಗ್ಗೆ ಚರ್ಚೆ ಹುಟ್ಟುಹಾಕಿದೆ.
Read Full Story

More Trending News