Published : May 30, 2026, 07:07 AM ISTUpdated : May 30, 2026, 08:32 PM IST

India Latest News Live: ಸಂಸದ ಅಭಿಷೇಕ್ ಬ್ಯಾನರ್ಜಿ ಮೇಲೆ ಸ್ಥಳೀಯರ ದಾಳಿಗೆ ಮಮತಾ ಕೆಂಡ, ಕೋಲಾಹಲ ಸೃಷ್ಟಿಸಿದ ವಿಡಿಯೋ

ಸಾರಾಂಶ

ನವದೆಹಲಿ: ಇಂಧನ ಬೆಲೆ ಏರಿಕೆ ಮತ್ತು ಪ್ರಯಾಣಿಕರ ಬೇಡಿಕೆ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ದೇಶದ 2 ದೊಡ್ಡ ವಿಮಾನಯಾನ ಕಂಪನಿಗಳಾದ ಇಂಡಿಗೋ ಮತ್ತು ಏರ್‌ ಇಂಡಿಯಾ ಜೂನ್‌ನಿಂದ ಸುಮಾರು 250 ದೇಶೀಯ ವಿಮಾನಗಳನ್ನು ಕಡಿತಗೊಳಿಸಲು ನಿರ್ಧರಿಸಿವೆ. ಬೆಂಗಳೂರು, ಮುಂಬೈ ಮತ್ತು ದೆಹಲಿ ಮಾರ್ಗಗಳಲ್ಲಿ ವಿಮಾನಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಲಿದೆ. ದೈನಂದಿನ ಸುಮಾರು 2,200 ವಿಮಾನಗಳನ್ನು ನಡೆಸುವ ಇಂಡಿಗೋ, ಶೇ.5-7ರಷ್ಟು ಅಂದರೆ ಸುಮಾರು 110 ವಿಮಾನಗಳ ದೇಶೀಯ ಸಂಚಾರವನ್ನು ಕಡಿತಗೊಳಿಸುತ್ತಿದೆ. ಏರ್ ಇಂಡಿಯಾ ನಿತ್ಯ ಸುಮಾರು 500 ದೇಶೀಯ ವಿಮಾನಗಳನ್ನು ನಡೆಸುತ್ತದೆ. ಇದು ಜೂನ್‌-ಜುಲೈ ಅವಧಿಯಲ್ಲಿ ಶೇ.22ರಷ್ಟು ಅಂದರೆ 110 ವಿಮಾನಗಳನ್ನು ಕಡಿತಗೊಳಿಸಲಿದೆ.

abhishek banerjee at sonarpur

08:32 PM (IST) May 30

ಸಂಸದ ಅಭಿಷೇಕ್ ಬ್ಯಾನರ್ಜಿ ಮೇಲೆ ಸ್ಥಳೀಯರ ದಾಳಿಗೆ ಮಮತಾ ಕೆಂಡ, ಕೋಲಾಹಲ ಸೃಷ್ಟಿಸಿದ ವಿಡಿಯೋ

ಮಮತಾ ಬ್ಯಾನರ್ಜಿ ಆಪ್ತ ಸಂಬಂಧಿ, ಸಂಸದ ಅಭಿಷೇಕ್ ಬ್ಯಾನರ್ಜಿ ಮೇಲೆ ಸ್ಥಳೀಯರು ಮೊಟ್ಟೆ, ಕಲ್ಲು ಎಸೆದು, ಚಪ್ಪಲಿಯಿಂದ ಹಲ್ಲೆ ಮಾಡಿದ್ದಾರೆ, ಕಾಲಿನಿಂದ ಒದ್ದಿದ್ದಾರೆ. ಇದೀಗ ಈ ದಾಳಿಗೆ ಮಮತಾ ಬ್ಯಾನರ್ಜಿ ಕೆರಳಿದ್ದಾರೆ.

 

Read Full Story

06:23 PM (IST) May 30

ಮಮತಾ ಬ್ಯಾನರ್ಜಿ ಆಪ್ತ ಅಭಿಷೇಕ್ ಬ್ಯಾನರ್ಜಿ ಮೇಲೆ ಹಲ್ಲೆ, ಆಕ್ರೋಶದಿಂದ ಮೊಟ್ಟೆ ಎಸೆದ ಜನ

ಮಮತಾ ಬ್ಯಾನರ್ಜಿ ಆಪ್ತ ಹಾಗೂ ಸಂಸದ ಅಭಿಷೇಕ್ ಬ್ಯಾನರ್ಜಿ ಮೇಲೆ ಹಲ್ಲೆಯಾಗಿದೆ. ಹಲವರು ಮೊಟ್ಟೆ, ಕಲ್ಲು ಎಸೆತಿದ್ದಾರೆ. ಕೆಲವರು ಕಾಲಿನಿಂದ ಒದ್ದೆರೆ, ಮತ್ತೆ ಕೆಲವರು ಕಪಾಳಮೋಕ್ಷ ಮಾಡಲು ಯತ್ನಿಸಿದ ಘಟನೆ ನಡೆದಿದೆ.

Read Full Story

05:37 PM (IST) May 30

ಹುಬ್ಬಳ್ಳಿ, ದಾವಣಗೆರೆ ಸೇರಿ 10 ದಿನ ಈ ಎಲ್ಲಾ ಮಾರ್ಗದಲ್ಲಿ ರೈಲು ಸಂಚಾರ ವ್ಯತ್ಯಯ - ಡಿಟೇಲ್ಸ್​ ಇಲ್ಲಿದೆ

ದಾವಣಗೆರೆ ರೈಲ್ವೆ ನಿಲ್ದಾಣದಲ್ಲಿ ಪಾದಚಾರಿ ಮೇಲ್ಸೇತುವೆ ಕಾಮಗಾರಿ ಹಿನ್ನೆಲೆಯಲ್ಲಿ, ಮೇ 30 ರಿಂದ 10 ದಿನಗಳ ಕಾಲ ರೈಲು ಸಂಚಾರದಲ್ಲಿ ವ್ಯತ್ಯಯವಾಗಲಿದೆ. ಸಿದ್ದಗಂಗಾ, ವಾಸ್ಕೋ, ಒಡೆಯರ್ ಎಕ್ಸ್‌ಪ್ರೆಸ್‌ ಸೇರಿದಂತೆ ಹಲವು ರೈಲುಗಳ ಸಂಚಾರ ವಿಳಂಬ,  ಮತ್ತು ಮಾರ್ಗ ಬದಲಾವಣೆಯಾಗಲಿದೆ ಎಂದು ರೈಲ್ವೆ ತಿಳಿಸಿದೆ.

Read Full Story

04:23 PM (IST) May 30

ಭಾರತಕ್ಕೆ ಮುಂಗಾರು ಆಘಾತ, ಕಳೆದ 11 ವರ್ಷದಲ್ಲೇ ಅತ್ಯಂತ ಕಳಪೆ ಮಾನ್ಸೂನ್ ಜೊತೆಗೆ ಎಲ್ ನಿನೋ

ಒಂದೆಡೆ ತೀವ್ರ ಬಿಸಿಗಾಳಿಯಿಂದ ಬಹುತೇಕ ರಾಜ್ಯಗಳು ತತ್ತರಿಸಿದೆ. ಇದರ ನಡುವೆ ಅಲ್ಲೊಂದು ಇಲ್ಲೊಂದು ಮಳೆ, ಆಲಿಕಲ್ಲು ಮಳೆ, ಬಿರುಗಾಳಿಗೆ ಅವಾಂತರಗಳು ಸೃಷ್ಟಿಯಾಗಿದೆ. ಇದರ ನಡುವೆ ಮತ್ತೊಂದು ಆಘಾತ ಎದುರಾಗಿದೆ.

 

Read Full Story

04:14 PM (IST) May 30

ಭಾರತೀಯ ರೈಲ್ವೆಯ ಮಹತ್ವಾಕಾಂಕ್ಷಿ ಯೋಜನೆ, ರೈಲು ಉತ್ಪಾದನಾ ಘಟಕ - 5ವರ್ಷದಲ್ಲಿ 200ಹೈಟೆಕ್ ಇಂಟರ್‌ಸಿಟಿ ರೈಲು ನಿರ್ಮಾಣ!

ತೆಲಂಗಾಣದ ಕಾಜಿಪೇಟೆಯಲ್ಲಿ ನಿರ್ಮಾಣವಾಗುತ್ತಿರುವ ನೂತನ ರೈಲು ಉತ್ಪಾದನಾ ಘಟಕ ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ. ಈ ಘಟಕವು ಮುಂದಿನ 5 ವರ್ಷಗಳಲ್ಲಿ 200 ಅತ್ಯಾಧುನಿಕ ಇಂಟರ್‌ಸಿಟಿ ರೈಲುಗಳನ್ನು ತಯಾರಿಸಲಿದ್ದು, ಇವು ನಗರ ಮತ್ತು ಪಟ್ಟಣಗಳ ನಡುವೆ ಸಂಚರಿಸಿ ವಿದ್ಯಾರ್ಥಿಗಳಿಗೆ ಮತ್ತು ಉದ್ಯೋಗಿಗಳಿಗೆ ಅನುಕೂಲ ಮಾಡಿಕೊಡಲಿವೆ. ಈ ರೈಲುಗಳು ಹೈಟೆಕ್ ಸೌಲಭ್ಯಗಳೊಂದಿಗೆ ಗಂಟೆಗೆ 130 ಕಿ.ಮೀ ವೇಗದಲ್ಲಿ ಚಲಿಸಲಿವೆ.
Read Full Story

04:00 PM (IST) May 30

ಟಿಕೆಟ್ ಇದ್ದರೂ ಸೀಟು ಸಿಗದೆ ನಿಂತುಕೊಂಡು ಪ್ರಯಾಣಿಸಿದ ಪ್ರಯಾಣಿಕನಿಗೆ 20,000 ರೂ ಪರಿಹಾರ

ಕನ್‌ಫರ್ಮ್ ಟಿಕೆಟ್ ಇದ್ದರೂ ರೈಲು ಹತ್ತಿ ನೋಡಿದರೆ ತನ್ನ ಸೀಟಿನಲ್ಲಿ ಹಲವರು ಕುಳಿತಿದ್ದಾರೆ. ಎಬ್ಬಿಸಿದರೂ ಏಳಲಿಲ್ಲ. ಬೇರೆ ದಾರಿಯಿಲ್ಲದೆ ನಿಂತುಕೊಡೆ ಪ್ರಯಾಣಿಸಿದ ಪ್ರಯಾಣಿಕನಿಗೆ ಇದೀಗ ಭಾರತೀಯ ರೈಲ್ವೇ 20 ಸಾವಿರ ರೂಪಾಯಿ ಪರಿಹಾರ ನೀಡಲು ಆದೇಶಿಸಿದೆ.

Read Full Story

03:35 PM (IST) May 30

ಬಾಂಗ್ಲಾದೇಶಕ್ಕೆ ಭಾರತೀಯ ರೈಲ್ವೆಯ ಕೊಡುಗೆ - ಮುಂದಿನ 2ತಿಂಗಳಲ್ಲಿ ರವಾನೆಯಾಗಲಿದೆ 20 ಆಧುನಿಕ ರೈಲು ಬೋಗಿಗಳ ಮೊದಲ ರೇಕ್!

ಭಾರತೀಯ ರೈಲ್ವೆಯ 'ರೈಟ್ಸ್ ಲಿಮಿಟೆಡ್' ಸಂಸ್ಥೆಯು, ಬಾಂಗ್ಲಾದೇಶ ರೈಲ್ವೆಗೆ 20 ಪ್ಯಾಸೆಂಜರ್ ಕೋಚ್‌ಗಳ ಮೊದಲ ರೇಕ್ ಅನ್ನು ಮುಂದಿನ ಎರಡು ತಿಂಗಳಲ್ಲಿ ತಲುಪಿಸಲು ಸಜ್ಜಾಗಿದೆ. ಇದು 200 ಬ್ರಾಡ್ ಗೇಜ್ ಬೋಗಿಗಳನ್ನು ಪೂರೈಸುವ ಬೃಹತ್ ಒಪ್ಪಂದದ ಭಾಗವಾಗಿದೆ.

Read Full Story

03:02 PM (IST) May 30

ಅಣ್ಣಾ, ಬೆಲ್ ಮಾಡ್ಬೇಡ, ಕಾಲ್ ಮಾಡಿ; ರಾತ್ರಿ ಹುಡುಗಿಯರು ರಹಸ್ಯವಾಗಿ ಆರ್ಡರ್ ಮಾಡೋದೇನು?

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋವೊಂದರಲ್ಲಿ, ಜೆಪ್ಟೋ ಡೆಲಿವರಿ ಯುವಕನೊಬ್ಬ ಮಧ್ಯರಾತ್ರಿ ಮಹಿಳೆಯರು ರಹಸ್ಯವಾಗಿ ಏನು ಆರ್ಡರ್ ಮಾಡುವ ಬಗ್ಗೆ ಮಾತನಾಡಿದ್ದಾನೆ. ಈ ವಿಡಿಯೋಗೆ ನೆಟ್ಟಿಗರಿಂದ ಪರ-ವಿರೋಧದ ಚರ್ಚೆಗಳು ವ್ಯಕ್ತವಾಗಿವೆ.

Read Full Story

01:10 PM (IST) May 30

ಈ ವಯಸ್ಸಲ್ಲಿ ಚಿನ್ನಿ ದಾಂಡು ಕೂಡ ಸರಿಯಾಗಿ ಆಡೋಕೆ ಬರ್ತಿರಲಿಲ್ಲ - ವೈಭವ್‌ ಸೂರ್ಯವಂಶಿ ಆಟಕ್ಕೆ ಬಿಗ್‌ಬಿ ಸಲಾಂ

ಐಪಿಎಲ್ 2026ರಲ್ಲಿ ರಾಜಸ್ಥಾನ ರಾಯಲ್ಸ್ ಪರ 96 ರನ್ ಸಿಡಿಸಿ ಅಬ್ಬರಿಸಿದ 15ರ ಯುವ ಆಟಗಾರ ವೈಭವ್ ಸೂರ್ಯವಂಶಿ, ತಂಡ ಸೋತಾಗ ಕಣ್ಣೀರು ಹಾಕಿದ್ದರು. ಈ ಬಾಲಕನ ಅದ್ಭುತ ಆಟ ಮತ್ತು ಭಾವುಕ ಕ್ಷಣಕ್ಕೆ ಮನಸೋತ ಬಾಲಿವುಡ್ ನಟ ಅಮಿತಾಭ್ ಬಚ್ಚನ್, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿ ಬೆಂಬಲ ಸೂಚಿಸಿದ್ದಾರೆ.
Read Full Story

12:39 PM (IST) May 30

ರೇಷನ್​ ಕಳ್ಳರಿಗೆ ಬಿಗ್​ ಶಾಕ್​ - ಅನರ್ಹ ಫಲಾನುಭವಿಗಳು, ಅಕ್ರಮ ದಾಸ್ತಾನುದಾರರ ಆಟ ಇನ್ಮುಂದೆ ನಡೆಯಲ್ಲ

ಬಡವರಿಗಾಗಿ ಇರುವ ಪಡಿತರ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಶ್ರೀಮಂತರು ಮತ್ತು ಅಕ್ರಮ ದಾಸ್ತಾನುದಾರರಿಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ 'ಸಾರ್ಥಕ್ ಸಾರ್ವಜನಿಕ ವಿತರಣಾ ವ್ಯವಸ್ಥೆ' ಯೋಜನೆ ಜಾರಿಗೆ ತಂದಿದೆ. ಈ ಯೋಜನೆಯು ಬಯೋಮೆಟ್ರಿಕ್ ದೃಢೀಕರಣ ಮತ್ತು ಡಿಜಿಟಲೀಕರಣವನ್ನು ಒಳಗೊಂಡಿದೆ.

Read Full Story

12:36 PM (IST) May 30

ಸಂಚಲನ ಸೃಷ್ಟಿಸಿದ ಮಾಧುರಿ ದೀಕ್ಷಿತ್ 12 ಸೆಕೆಂಡ್ ವಿಡಿಯೋ ಕ್ಲಿಪ್; ಯಾಕಿಂಗೆ ಮಾಡ್ತಾರೆ?

ನಟಿ ಮಾಧುರಿ ದೀಕ್ಷಿತ್ (Actress Madhuri Dixit) ಅವರ ಡೀಪ್‌ಫೇಕ್ ವಿಡಿಯೋವೊಂದು ವೈರಲ್ ಆಗಿದ್ದು, ಅವರನ್ನು ಬೋಲ್ಡ್ ಆಗಿ ಚಿತ್ರಿಸಲಾಗಿದೆ. ಎಐ ತಂತ್ರಜ್ಞಾನ ಬಳಸಿ ಎಡಿಟ್ ಮಾಡಲಾದ ಈ ವಿಡಿಯೋ ಸುಳ್ಳು ಎಂದು ಫ್ಯಾಕ್ಟ್ ಚೆಕ್‌ನಿಂದ ದೃಢಪಟ್ಟಿದ್ದು, ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Read Full Story

12:08 PM (IST) May 30

ಚಿನ್ನ-ಬೆಳ್ಳಿ ದರದಲ್ಲಿ ಅನಿರೀಕ್ಷಿತ ಕುಸಿತ - ಒಂದು ವಾರದಲ್ಲಿ ಕಡಿಮೆಯಾಗಿದೆಷ್ಟು? ಇವತ್ತು ಇಳಿಕೆ

ಈ ವಾರದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಇಳಿಕೆ ಕಂಡುಬಂದಿದೆ. 24 ಮತ್ತು 22 ಕ್ಯಾರಟ್ ಚಿನ್ನದ ಇಂದಿನ ದರ, ಎಷ್ಟು ಇಳಿಕೆಯಾಗಿದೆ ಹಾಗೂ ಜಾಗತಿಕ ಮಾರುಕಟ್ಟೆಯ ಪ್ರಭಾವದ ಬಗ್ಗೆ ಈ ಲೇಖನದಲ್ಲಿ ಮಾಹಿತಿ ನೀಡಲಾಗಿದೆ.
Read Full Story

11:33 AM (IST) May 30

ಪೇಸ್ಟ್ ಹಚ್ಚೋಕೂ ಮುನ್ನ ರೇಟ್ ಚೆಕ್ ಮಾಡಿ, ಟೂತ್‌ಪೇಸ್ಟ್‌ ಬೆಲೆ ಭಾರಿ ಏರಿಕೆ ಮಾಡಿದ ಕೋಲ್ಗೇಟ್‌

ಕಚ್ಚಾ ವಸ್ತುಗಳ ಮತ್ತು ಪ್ಯಾಕೇಜಿಂಗ್ ವೆಚ್ಚ ಹೆಚ್ಚಳದಿಂದಾಗಿ, ಕೋಲ್ಗೇಟ್-ಪಾಮೋಲಿವ್ ಇಂಡಿಯಾ ತನ್ನ ಪ್ರಮುಖ ಟೂತ್‌ಪೇಸ್ಟ್‌ಗಳ ಬೆಲೆಯನ್ನು ಶೇ. 4 ರಿಂದ 5 ರಷ್ಟು ಹೆಚ್ಚಿಸಿದೆ. ಕೋಲ್ಗೇಟ್ ಡೆಂಟಲ್ ಕ್ರೀಮ್, ಮ್ಯಾಕ್ಸ್ ಫ್ರೆಶ್ ಮತ್ತು ವಿಸಿಬಲ್ ವೈಟ್‌ನಂತಹ ಜನಪ್ರಿಯ ಉತ್ಪನ್ನಗಳ ದರ ಪರಿಷ್ಕರಣೆಯಾಗಿದೆ.

Read Full Story

11:12 AM (IST) May 30

ನಟ ಅಜಿತ್‌ ಕುಮಾರ್‌ಗೆ ಮಾತೃವಿಯೋಗ, ಮೂರೇ ವರ್ಷದ ಅಂತರದಲ್ಲಿನ ತಂದೆ-ತಾಯಿ ಇಬ್ಬರನ್ನೂ ಕಳೆದುಕೊಂಡ ಸೂಪರ್‌ಸ್ಟಾರ್‌

ಖ್ಯಾತ ತಮಿಳು ನಟ ಅಜಿತ್ ಕುಮಾರ್ ಅವರ ತಾಯಿ ಮೋಹಿನಿ ಮಣಿ ಅವರು 84ನೇ ವಯಸ್ಸಿನಲ್ಲಿ ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ. ಮೂರು ವರ್ಷಗಳ ಹಿಂದೆ ತಂದೆಯನ್ನು ಕಳೆದುಕೊಂಡಿದ್ದ ಅಜಿತ್ ಕುಟುಂಬಕ್ಕೆ ಇದೀಗ ತಾಯಿಯ ಅಗಲಿಕೆ ಮತ್ತಷ್ಟು ದುಃಖ ತಂದಿದೆ.
Read Full Story

10:13 AM (IST) May 30

ಕರ್ನಾಟಕದಿಂದ ರಾಜ್ಯಸಭೆಗೆ ವೈಎಸ್‌ಆರ್‌ ಪುತ್ರಿ ಶರ್ಮಿಳಾ ರೆಡ್ಡಿ?

ಆಂಧ್ರಪ್ರದೇಶ ಕಾಂಗ್ರೆಸ್ ಅಧ್ಯಕ್ಷೆ ವೈ.ಎಸ್. ಶರ್ಮಿಳಾ ಅವರು ದೆಹಲಿಯಲ್ಲಿ ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿದ್ದಾರೆ. ಅವರನ್ನು ಕರ್ನಾಟಕದಿಂದ ರಾಜ್ಯಸಭೆಗೆ ನಾಮನಿರ್ದೇಶನ ಮಾಡುವ ಬಗ್ಗೆ ಎಐಸಿಸಿ ನಾಯಕತ್ವ ಪರಿಗಣಿಸುತ್ತಿದೆ ಎಂದು ವರದಿಯಾಗಿದೆ.

Read Full Story

09:51 AM (IST) May 30

ಕೂದಲಿಲ್ಲದೇ ಇದ್ರೆ ಅಟೆಂಡೆನ್ಸ್‌ ಕೂಡ ಇಲ್ಲ..ಫೇಸ್‌ ಸ್ಕ್ಯಾನ್‌ಗೆ ಮಹಾ ಉಪಾಯ ಮಾಡಿದ ನರೇಗಾ ಕಾರ್ಮಿಕ

ತೆಲಂಗಾಣದಲ್ಲಿ ದೇವರಿಗೆ ಹರಕೆ ತೀರಿಸಲು ತಲೆ ಬೋಳಿಸಿಕೊಂಡ ನರೇಗಾ ಕಾರ್ಮಿಕನೊಬ್ಬನ ಮುಖವನ್ನು ಡಿಜಿಟಲ್ ಹಾಜರಾತಿ ಆ್ಯಪ್ ಗುರುತಿಸಲು ವಿಫಲವಾಗಿದೆ. ಹಾಜರಾತಿಗಾಗಿ, ಸಹೋದ್ಯೋಗಿ ಮಹಿಳೆಯೊಬ್ಬರ ಕೂದಲನ್ನು ತನ್ನ ತಲೆಯ ಮೇಲೆ ಇಟ್ಟುಕೊಂಡು ಫೋಟೋ ತೆಗೆಸಿಕೊಂಡ ನಂತರವೇ ಆ್ಯಪ್ ಆತನನ್ನು ಗುರುತಿಸಿದೆ. 

Read Full Story

08:06 AM (IST) May 30

ಐಪಿಎಲ್‌ - ಪವರ್‌-ಪ್ಲೇನಲ್ಲೇ ವೈಭವ್‌ ಸೂರ್ಯವಂಶಿ 500+ ರನ್‌! ಬರೀ ಬೌಂಡರಿ-ಸಿಕ್ಸರ್‌ನಿಂದಲೇ ಗಳಿಸಿದ ರನ್ ಎಷ್ಟು ಗೊತ್ತಾ?

ಐಪಿಎಲ್‌ನಲ್ಲಿ ವೈಭವ್ ಸೂರ್ಯವಂಶಿ 776 ರನ್‌ಗಳೊಂದಿಗೆ ಅಬ್ಬರಿಸಿದ್ದಾರೆ. ಪವರ್-ಪ್ಲೇನಲ್ಲಿ 500ಕ್ಕೂ ಹೆಚ್ಚು ರನ್, ಅತಿವೇಗದ 1000 ರನ್ ಮತ್ತು ಒಂದೇ ಆವೃತ್ತಿಯಲ್ಲಿ ಅತಿ ಹೆಚ್ಚು ಬೌಂಡರಿಗಳಂತಹ ವಿಶ್ವದಾಖಲೆಗಳನ್ನು ಅವರು ನಿರ್ಮಿಸಿದ್ದಾರೆ.
Read Full Story

07:28 AM (IST) May 30

IPL 2026 - ನಿನ್ನೆ ನಡೆದ ಗುಜರಾತ್ ಟೈಟಾನ್ಸ್ - ರಾಜಸ್ಥಾನ ರಾಯಲ್ಸ್ ನಡುವಿನ ಕ್ವಾಲಿಫೈಯರ್-2 ಮ್ಯಾಚ್ ಗೆದ್ದಿದ್ದು ಯಾರು?

2026ರ ಐಪಿಎಲ್ ಕ್ವಾಲಿಫೈಯರ್‌-2 ಪಂದ್ಯದಲ್ಲಿ, ಶುಭ್‌ಮನ್‌ ಗಿಲ್ ಅವರ ಅಮೋಘ ಶತಕದ ನೆರವಿನಿಂದ ಗುಜರಾತ್ ಟೈಟಾನ್ಸ್ ತಂಡವು ರಾಜಸ್ಥಾನ ರಾಯಲ್ಸ್ ವಿರುದ್ಧ 8 ವಿಕೆಟ್‌ಗಳ ಜಯ ಸಾಧಿಸಿತು. ಈ ಮೂಲಕ ಫೈನಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸಲಿದೆ. ವೈಭವ್ ಸೂರ್ಯವಂಶಿ ಅವರ 96 ರನ್‌ಗಳ ಹೋರಾಟ ವ್ಯರ್ಥವಾಯಿತು.
Read Full Story

More Trending News